Health Tips: ಗಾಯದ ರಕ್ತಸ್ರಾವ ತಡೆಯುತ್ತೆ ಮನೆಯಲ್ಲಿರುವ ಈ ವಸ್ತು

By Suvarna News  |  First Published Nov 30, 2022, 5:49 PM IST

ಮನೆಯಲ್ಲಿ ಕೆಲಸ ಮಾಡುವಾಗ ಗಾಯಗಳಾಗುತ್ತವೆ. ಒಂದೇ ಸಮನೆ ರಕ್ತ ಸುರಿಯುತ್ತಿರುತ್ತದೆ. ನೋವು, ರಕ್ತ ನಮ್ಮ ಟೆನ್ಷನ್ ಹೆಚ್ಚು ಮಾಡುತ್ತೆ. ಮನೆಯಲ್ಲಿರುವ ಕೆಲ ವಸ್ತು ಬಳಸಿ ನೀವು ರಕ್ತಸ್ರಾವ ನಿಲ್ಲಿಸಬಹುದು.
 


ಪ್ರತಿಯೊಬ್ಬರೂ ಮನೆಯಲ್ಲಿ ಪ್ರಥಮ ಚಿಕಿತ್ಸೆಗೆ ಅಗತ್ಯವಾದ ಬಾಕ್ಸ್ ಇರಲೇಬೇಕು. ತೀವ್ರವಾದ ನೋವನ್ನು ಕಡಿಮೆ ಮಾಡುವ ಕೆಲವು ಔಷಧಿಗಳನ್ನು ಕೂಡ ನೀವು ಈ ಬಾಕ್ಸ್ ನಲ್ಲಿ ಇಡಬೇಕು. ಗಾಯಕ್ಕೆ ಅನ್ವಯಿಸಬಹುದಾದ ಕೆಲವು ಮುಲಾಮುಗಳನ್ನು ಕೂಡ ಇಟ್ಟುಕೊಳ್ಳಬೇಕು. ಮಕ್ಕಳಿರುವ ಮನೆಯಲ್ಲಿ ಗಾಯ ಸಾಮಾನ್ಯ. ಗಾಯವಾದಾಗ ನಾವು ಪ್ರಥಮ ಚಿಕಿತ್ಸೆ ಬಾಕ್ಸ್ ಹುಡುಕ್ತೆವೆ. ಆದ್ರೆ ಪ್ರಥಮ ಚಿಕಿತ್ಸೆ ಬಾಕ್ಸ್ ಎಲ್ಲರ ಮನೆಯಲ್ಲೂ ಇರೋದಿಲ್ಲ. ಕೆಲವೊಮ್ಮೆ ಅದ್ರಲ್ಲೂ ರಕ್ತಸ್ರಾವ ಸುಲಭವಾಗಿ ನಿಲ್ಲುವ ಔಷಧಿ ಇರೋದಿಲ್ಲ. ವೈದ್ಯರ ಬಳಿಗೆ ಹೋಗುವಷ್ಟರಲ್ಲಿ ಬ್ಲೀಡಿಂಗ್ ಹೆಚ್ಚಾಗಿ, ಹೆಚ್ಚಿನ ಸಮಸ್ಯೆಯಾಗುತ್ತದೆ. 

ನಿಮಗೆ ಗಾಯ (Injury) ವಾದಾಗ ಅಥವಾ ಮಕ್ಕಳಿ (Children) ಗೆ ಗಾಯವಾದಾಗ  ರಕ್ತಸ್ರಾವ (Bleeding) ವಾಗ್ತಿದ್ದರೆ ಮನೆಯಲ್ಲೇ ನೀವು ಕೆಲ ಚಿಕಿತ್ಸೆ ಮಾಡಬೇಕು. ಇದಕ್ಕೆ ಭಯ (Fear) ಪಡಬೇಕಾಗಿಲ್ಲ.  ಮನೆಯಲ್ಲಿ ಇರುವ ಕೆಲವು ವಸ್ತುಗಳನ್ನು ಬಳಸಿ ಗಾಯಗೊಂಡ ಜಾಗಕ್ಕೆ ಹಾಕಿದ್ರೆ ರಕ್ತದ ಹರಿವು ನಿಲ್ಲುತ್ತದೆ.

Tap to resize

Latest Videos

ಗಾಯದಿಂದ ರಕ್ತಸ್ರಾವವಾಗ್ತಿದ್ದರೆ ಈ ಮನೆ ಮದ್ದು ಬಳಸಿ: ಗಾಯಕ್ಕೆ ಯಾವುದೇ ಔಷಧಿ ಹಚ್ಚುವ ಮೊದಲು ನೀವು ಆ ಜಾಗವನ್ನು  ಸ್ವಲ್ಪ ಕ್ಲೀನ್ ಮಾಡಬೇಕು. ನಂತ್ರ ಆ ಜಾಗಕ್ಕೆ ಸ್ವಲ್ಪ ಒತ್ತಡದಿಂದ ಪ್ರೆಸ್ ಮಾಡ್ಬೇಕು. ಸಾಧ್ಯವಾದಷ್ಟು ಕಾಲ ಆ ಜಾಗವನ್ನು ಸ್ವಲ್ಪ ಎತ್ತರದಲ್ಲಿ ಇಡಬೇಕು. ಇದರಿಂದ ರಕ್ತದ ಹರಿವು ಕಡಿಮೆಯಾಗುತ್ತದೆ. ಇದರ ನಂತರ  ಮನೆಯಲ್ಲಿ ಇರಿಸಲಾಗಿರುವ ಕೆಲವು ವಸ್ತುಗಳನ್ನು ಬಳಸಿ ನೀವು ರಕ್ತಸ್ರಾವವನ್ನು ನಿಲ್ಲಿಸಬಹುದು.

ಅಲರ್ಜಿಯಿಂದ ಮೂಗಿನಲ್ಲಿ ತುರಿಕೆ ಆಗ್ತಿದ್ಯಾ? ಈ ಮನೆಮದ್ದುಗಳನ್ನು ಟ್ರೈ ಮಾಡಿ

ಗಾಯಕ್ಕೆ ಐಸ್  ಹಚ್ಚಿದ್ರೆ ಕಡಿಮೆಯಾಗುತ್ತೆ ರಕ್ತಸ್ರಾವ : ಗಾಯದ ನಂತರ ಹೆಚ್ಚು ರಕ್ತಸ್ರಾವವಾಗಿದ್ದರೆ ಅದಕ್ಕೆ ಐಸ್ ಹಚ್ಚಿ. ಗಾಯದ ಮೇಲೆ ನೇರವಾಗಿ ಐಸ್ ಇಡಬಾರದು. ಒಂದು ಬಟ್ಟೆಯಲ್ಲಿ ಐಸ್ ಕ್ಯೂಬ್ ಸುತ್ತಿ, ಅದನ್ನು ಗಾಯದ ಮೇಲೆ ಇಡಬೇಕು. ಐಸ್ ಚರ್ಮವನ್ನು ಕುಗ್ಗಿಸುತ್ತದೆ. ರಕ್ತದ ಹರಿವನ್ನು ನಿಧಾನಗೊಳಿಸುತ್ತದೆ.    

ಮೌತ್ವಾಶ್ ಬಳಸಿ : ಗಾಯಕ್ಕೆ ಮೌತ್ವಾಶ್ ಬಹಳ ಪ್ರಯೋಜನಕಾರಿ. ಗಾಯದ ಮೇಲೆ ಮೌತ್ವಾಶ್  ಹಚ್ಚುವುದ್ರಿಂದ ರಕ್ತ ಹೆಪ್ಪುಗಟ್ಟಲು ಪ್ರಾರಂಭಿಸುತ್ತದೆ. ಇದರಿಂದಾಗಿ ರಕ್ತಸ್ರಾವ ನಿಲ್ಲುತ್ತದೆ. ರಕ್ತಸ್ರಾವ ತಡೆಯಲು ನೀವು ನೇರವಾಗಿ ಗಾಯಕ್ಕೆ ಮೌತ್ ವಾಶ್ ಹಚ್ಚಬಹುದು. 

ಗಾಯಕ್ಕೆ ಹಚ್ಚಿ ಪೆಟ್ರೋಲಿಯಂ ಜೆಲ್ಲಿ : ಪೆಟ್ರೋಲಿಯಂ ಜೆಲ್ಲಿಯಲ್ಲಿ ಎರಡು ಮುಖ್ಯ ಅಂಶಗಳಿವೆ. ಒಂದು ಎಣ್ಣೆ ಮತ್ತು ಇನ್ನೊಂದು ಮೇಣ. ಇವೆರಡರ ಸಂಯೋಜನೆಯು ರಕ್ತದ ಹರಿವನ್ನು ನಿಧಾನಗೊಳಿಸುತ್ತದೆ.  ಗಾಯಕ್ಕೆ ಪೆಟ್ರೋಲಿಯಂ ಜೆಲ್ಲಿ ಹಚ್ಚುವುದ್ರಿಂದ ರಕ್ತಸ್ರಾವವಾಗುವುದು ನಿಲ್ಲುತ್ತದೆ. ಆದ್ರೆ ಅಧಿಕ ರಕ್ತಸ್ರಾವವನ್ನು ತ್ವರಿತವಾಗಿ ನಿಯಂತ್ರಿಸಲು ಇದು ಸಾಧ್ಯವಾಗುವುದಿಲ್ಲ. ಪೆಟ್ರೋಲಿಯಂ ಜೆಲ್ಲಿ ಸಣ್ಣ ಗಾಯ ಹಾಗೂ ಸಣ್ಣ ರಕ್ತಸ್ರಾವ ನಿಲ್ಲಲು ನೆರವಾಗುತ್ತದೆ. 

Parenting Tips: ಮಕ್ಕಳಲ್ಲಿ ಹೆಚ್ಚುತ್ತಿರುವ ಮಧುಮೇಹಕ್ಕೆ ಪೋಷಕರು ಮಾಡಬೇಕಾದ ಕೆಲಸಗಳಿವು

ಟೀ ಬ್ಯಾಗ್ : ಟೀ ಪುಡಿಯಲ್ಲಿರುವ ಟ್ಯಾನಿನ್‌ಗಳು ಹೆಮೋಸ್ಟಾಟಿಕ್ ಗುಣಗಳನ್ನು ಹೊಂದಿವೆ. ಇದು ರಕ್ತ ಹೆಪ್ಪುಗಟ್ಟುವಿಕೆಗೆ ಸಹಾಯ ಮಾಡುತ್ತದೆ. ಗಾಯವಾದಾಗ ಗಾಯದ ಮೇಲೆ ಟೀ ಬ್ಯಾಗ್ ಇಡಬೇಕು. ಟೀ ಬ್ಯಾಗ್  ರಕ್ತಸ್ರಾವವನ್ನು ನಿಲ್ಲಿಸಲು ನೆರವಾಗುತ್ತದೆ. ಗ್ರೀನ್ ಟೀ ಬದಲಿಗೆ ನೀವು ಬ್ಲ್ಯಾಕ್ ಟೀ ಬ್ಯಾಗ್ ಬಳಸುಬಹುದು.

ಯಾವಾಗ ವೈದ್ಯರ ಬಳಿಗೆ ಹೋಗಬೇಕು ? :  ಗಾಯ ಆಳವಾಗಿದ್ದಾಗ ಅಥವಾ ಅಂಚಿನಲ್ಲಿರುವ ಚರ್ಮ ತೆರೆಯುತ್ತಿದ್ದಾಗ ನೀವು ವೈದ್ಯರ ಬಳಿ ಹೋಗಬೇಕು. ವ್ಯಕ್ತಿಯ ಮುಖದ ಮೇಲೆ ಗಾಯವಾದಾಗ, ಆದ ಗಾಯದಲ್ಲಿ  ಕೊಳಕು ಅಥವಾ ಬೇರೆ ವಸ್ತು ಸೇರಿಕೊಂಡಾಗ ನೀವು ಅಗತ್ಯವಾಗಿ ವೈದ್ಯರ ಬಳಿ ಹೋಗ್ಬೇಕು. ಗಾಯದಲ್ಲಿ ಸೋಂಕಿನ ಲಕ್ಷಣವಿದ್ದರೆ, ಮರಗಟ್ಟುವಿಕೆ ಅನುಭವವಾದ್ರೆ, ಪ್ರಾಣಿ ಅಥವಾ ಮನುಷ್ಯ ಕಚ್ಚಿ ಗಾಯಗೊಂಡಿದ್ದರೆ ಜನರು ವೈದ್ಯರ ಬಳಿ ಹೋಗಬೇಕಾಗುತ್ತದೆ. 

click me!