ಆರೋಗ್ಯ ವೃದ್ಧಿಗಾಗಿ ನಾವು ಆಹಾರ ಸೇವನೆ ಮಾಡ್ತೆವೆ. ಆದ್ರೆ ನಾವು ಮಾಡುವ ಕೆಲ ತಪ್ಪಿನಿಂದಾಗಿ ಆಹಾರ ಜೀರ್ಣವಾಗೋದಿಲ್ಲ. ಅನೇಕ ಸಮಸ್ಯೆ ನಮ್ಮನ್ನು ಕಾಡುತ್ತದೆ. ಅದ್ರಲ್ಲಿ ಕುಳಿತುಕೊಳ್ಳೋದು ಕೂಡ ಸೇರಿದೆ.
ಊಟ ನಮ್ಮ ಆರೋಗ್ಯಕ್ಕೆ ಅತ್ಯಗತ್ಯ. ದಿನದಲ್ಲಿ ಮೂರು ಹೊತ್ತು ನಾವು ಆಹಾರ ಸೇವನೆ ಮಾಡ್ತೆವೆ. ಬೆಳಿಗ್ಗೆ ಉಪಹಾರದ ನಂತ್ರ ಹಾಗೆ ಮಧ್ಯಾಹ್ನ ಊಟದ ನಂತ್ರ ಮತ್ತು ರಾತ್ರಿ ಊಟದ ನಂತ್ರ ಕೆಲವೊಂದು ಕೆಲಸವನ್ನು ಮಾಡಬಾರದು ಎನ್ನಲಾಗುತ್ತದೆ. ಊಟದ ಮುಂಚೆ ಮತ್ತು ನಂತರ ಯಾವ ಕೆಲಸಗಳನ್ನು ಮಾಡಬೇಕು ಎನ್ನುವ ಬಗ್ಗೆ ಸಾಕಷ್ಟು ಸಲಹೆ ನೀಡಲಾಗುತ್ತದೆ. ಊಟಕ್ಕೆ ಮುಂಚೆ ಮತ್ತು ನಂತರ ನಾವು ಅನೇಕ ತಪ್ಪುಗಳನ್ನು ಮಾಡುತ್ತೇವೆ. ಅದು ನಮ್ಮ ಆರೋಗ್ಯಕ್ಕೆ ಬಹಳಷ್ಟು ಹಾನಿಯುಂಟು ಮಾಡುತ್ತದೆ. ಊಟವಾದ ತಕ್ಷಣ ಎದ್ದು ನಿಲ್ಲುವುದು, ನಡೆಯುವುದು, ಧೂಮಪಾನ ಮಾಡುವುದು, ಹಣ್ಣುಗಳನ್ನು ತಿನ್ನುವುದು, ಊಟವಾದ ನಂತರ ಮಲಗುವುದು, ನಿದ್ದೆ ಮಾಡುವುದು ಇತ್ಯಾದಿ ಕೆಲಸವನ್ನು ಮಾಡಬಾರದು ಎನ್ನಲಾಗುತ್ತದೆ. ಊಟದ ತಕ್ಷಣ ನೀರು ಸೇವನೆ ಮಾಡಬಾರದು ಎಂದು ತಜ್ಞರು ಸಲಹೆ ನೀಡ್ತಾರೆ.
ಊಟ (Lunch) ವಾದ ನಂತರ ಕುಳಿತುಕೊಳ್ಳಬೇಕೇ ಬೇಡ್ವೆ ಎನ್ನುವ ಪ್ರಶ್ನೆ ಅನೇಕರನ್ನು ಕಾಡುತ್ತದೆ. ಆಹಾರ (Food) ಸೇವಿಸಿದ ನಂತರ ಕುಳಿತುಕೊಳ್ಳಬಾರದು ಎಂದು ಅನೇಕರು ಹೇಳ್ತಾರೆ. ಆದರೆ ಕೆಲವರು ಆಹಾರ ಸೇವಿಸಿದ ತಕ್ಷಣ ವಾಕಿಂಗ್ ಮಾಡಬಾರದು ಎನ್ನುತ್ತಾರೆ. ಹಾಗಾಗಿ ಊಟದ ನಂತ್ರ ಕುಳಿತುಕೊಳ್ಳುವುದು ಸರಿಯೇ ತಪ್ಪೇ ಎನ್ನುವ ಪ್ರಶ್ನೆಗೆ ನಾವಿಂದು ಉತ್ತರ ನೀಡ್ತೆವೆ.
ಊಟದ ನಂತ್ರ ಕುಳಿತುಕೊಳ್ಳೋದು ಎಷ್ಟು ಸರಿ?: ಊಟದ ನಂತರ ಕುಳಿತುಕೊಳ್ಳುವುದು ಅಥವಾ ಮಲಗುವುದು ಕೆಟ್ಟದ್ದೇನಲ್ಲ. ಇದ್ರ ಬಗ್ಗೆ ನೀವು ಹೆಚ್ಚು ಆತಂಕಪಡಬೇಕಾಗಿಲ್ಲ. ಊಟದ ನಂತರ 15-30 ನಿಮಿಷಗಳ ಕಾಲ ಕುಳಿತುಕೊಳ್ಳಬಹುದು. ಹಾಗೆ 15 ನಿಮಿಷ ನೀವು ಮಲಗಿದರೆ ಆರೋಗ್ಯ (Health) ಕ್ಕೆ ಯಾವುದೇ ಹಾನಿ ಇಲ್ಲ. ಆದರೆ ದೀರ್ಘಕಾಲ ಕುಳಿತುಕೊಳ್ಳಬಾರದು. ಹೆಚ್ಚು ಸಮಯ ಒಂದೇ ಕಡೆ ಕುಳಿತುಕೊಂಡ್ರೆ ನಿಮ್ಮ ಆರೋಗ್ಯದಲ್ಲಿ ಏರುಪೇರಾಗುತ್ತದೆ. ಜೀರ್ಣಕ್ರಿಯೆ ಸರಿಯಾಗಿ ಆಗುವುದಿಲ್ಲ. ಹಾಗೆಯೇ ನೀವು ಊಟವಾದ ತಕ್ಷಣ ತುಂಬಾ ಸಮಯ ಮಲಗುವುದು ಕೂಡ ಒಳ್ಳೆಯದಲ್ಲ.
ಪಾಲಕ್ ಪನ್ನೀರ್ ಕಾಂಬಿನೇಷನ್ ನಿಮ್ಮ ಫೇವರೇಟಾ? ತಿನ್ನೋ ಮುನ್ನ ಇದನ್ನೋದಿ
ದೀರ್ಘಕಾಲ ಕುಳಿತ್ರೆ ಕಾಡುತ್ತೆ ಈ ಸಮಸ್ಯೆ: ಊಟವಾದ ತಕ್ಷಣ ದೀರ್ಘಕಾಲದವರೆಗೆ ಕುಳಿತು ಯಾವುದೇ ದೈಹಿಕ (Physical) ಚಟುವಟಿಕೆಯನ್ನು ಮಾಡದಿದ್ದರೆ ಅದು ನಿಮ್ಮ ಆರೋಗ್ಯಕ್ಕೆ ದೊಡ್ಡ ಹಾನಿಯನ್ನುಂಟುಮಾಡುತ್ತದೆ. ಇದರಿಂದ ತಿಂದ ಆಹಾರ ಸರಿಯಾಗಿ ಜೀರ್ಣ (Digestion) ವಾಗುವುದಿಲ್ಲ. ಆಹಾರ ಜೀರ್ಣವಾಗದೆ ಹೋದ್ರೆ ಇದ್ರಿಂದ ಕೊಬ್ಬು (Fat) ಹೆಚ್ಚಾಗುತ್ತದೆ. ಕೊಬ್ಬು ಹೆಚ್ಚಾಗುವ ಕಾರಣ ಅನೇಕ ಗಂಭೀರ ಕಾಯಿಲೆಗಳು ನಮ್ಮನ್ನು ಕಾಡುತ್ತವೆ.
ಊಟದ ನಂತ್ರ ವಾಕಿಂಗ್ ಎಷ್ಟು ಸರಿ?: ಊಟವಾದ ತಕ್ಷಣ ಎದ್ದೇಳಬಾರದು. ಹಾಗೆ ವಾಕಿಂಗ್ (Walking) ಕೂಡ ಮಾಡಬಾರದು. ಊಟವಾದ ನಂತ್ರ 5 ರಿಂದ 10 ನಿಮಿಷ ಬಿಟ್ಟು ನಂತರ ವಾಕ್ ಮಾಡಬೇಕು. ವಾಕಿಂಗ್ ಮಾಡುವುದು ಬಹಳ ಒಳ್ಳೆಯದು. ಆದ್ರೆ ಊಟವಾದ ತಕ್ಷಣ ಮಾಡಬಾರದು. ಊಟವಾಗಿ 10 ನಿಮಿಷದ ನಂತ್ರ ಆಹಾರವು ಉತ್ತಮವಾಗಿ ಜೀರ್ಣವಾಗುತ್ತದೆ. ವಾಕಿಂಗ್ ನಿಂದ ದೇಹವು ಸಂಪೂರ್ಣ ಪ್ರಯೋಜನವನ್ನು ಪಡೆಯುತ್ತದೆ.
Rainbow Diet: ಈ ಸ್ಪೆಷಲ್ ಡಯೆಟ್ ಮಾಡಿದ್ರೆ ಕಾಯಿಲೆಗಳಿಂದ ದೂರವಿರ್ಬೋದು
ಊಟದ ನಂತ್ರ ಎಷ್ಟು ಹೆಜ್ಜೆ ನಡೆಯಬೇಕು? : ಊಟದ ನಂತರ ವಾಕಿಂಗ್ ಬಹಳ ಅವಶ್ಯಕ. ರಾತ್ರಿ ಊಟದ ನಂತ್ರ ವಾಕಿಂಗ್ ಮಾಡಿದ್ರೆ ನಿದ್ರೆ ಕೂಡ ಚೆನ್ನಾಗಿ ಬರುತ್ತದೆ. ತಜ್ಞರ ಪ್ರಕಾರ, ಊಟದ ನಂತ್ರ 1000 ಹೆಜ್ಜೆ ನಡೆಯಲು ಪ್ರಯತ್ನಿಸಿ. ಇದರಿಂದ ಆರೋಗ್ಯಕ್ಕೆ ಅನೇಕ ಲಾಭಗಳು ಸಿಗುತ್ತವೆ. ತಡರಾತ್ರಿ ಊಟ ಮಾಡುವ ಅಭ್ಯಾಸವಿದ್ದರೆ ಊಟವಾದ ನಂತ್ರ ವಾಕಿಂಗ್ ಮಾಡದೆ ಮಲಗಬೇಡಿ. ತಡರಾತ್ರಿ ಊಟ ಮಾಡುವವರು ವಾಕಿಂಗ್ ಮಾಡಿದ ನಂತ್ರ ಮಲಗಿದ್ರೆ ಆರೋಗ್ಯ ವೃದ್ಧಿಸುತ್ತದೆ.