Chitradurga Hospital: ತಿಂಗಳಾದ್ರು ಇನ್ನೂ ಬಗೆಹರಿಯದ MRI ಸ್ಕ್ಯಾನಿಂಗ್ ಸೆಂಟರ್ ಸಮಸ್ಯೆ.

By Ravi NayakFirst Published Jul 24, 2022, 4:11 PM IST
Highlights

 ಖಾಸಗಿ ಆಸ್ಪತ್ರೆಗಳ ಜೊತೆ ಶಾಮೀಲಾಗಿ ರೋಗಿಗಳಿಗೆ ತೊಂದರೆ ಕೊಡ್ತಿದ್ದಾರಾ ಸರ್ಕಾರಿ ಆಸ್ಪತ್ರೆ ವೈದ್ಯರು? ಚಿತ್ರದುರ್ಗ ಜಿಲ್ಲಾಸ್ಪತ್ರೆಯಲ್ಲಿ ರೋಗಿಗಳ ಗೋಳು ಕೇಳೋರಿಲ್ಲ!

ವರದಿ: ಕಿರಣ್ಎಲ್ ತೊಡರನಾಳ್ ಏಷ್ಯಾನೆಟ್ ಸುವರ್ಣ ನ್ಯೂಸ್

ಚಿತ್ರದುರ್ಗ (ಜು.24): ಕೋಟೆನಾಡು ಚಿತ್ರದುರ್ಗ ನಗರದಲ್ಲಿರುವ ಸರ್ಕಾರಿ ಜಿಲ್ಲಾ ಆಸ್ಪತ್ರೆ ಒಂದಲ್ಲ ಒಂದು ವಿಷಯದಲ್ಲಿ ಸುದ್ದಿ ಆಗ್ತಾನೇ ಇರುತ್ತದೆ. MRI ಸ್ಕ್ಯಾನಿಂಗ್ ಸೆಂಟರ್ ಸಮಸ್ಯೆ ಕುರಿತು ಅನೇಕ ಹೋರಾಟಗಾರರು ಪ್ರತಿಭಟನೆ ನಡೆಸಿದ್ರು, ರೋಗಿಗಳಿಗೆ ಆಗ್ತಿರೋ ಸಮಸ್ಯೆ ಮಾತ್ರ ಯಾರೂ ಕೇಳೋರಿಲ್ಲ ಯಾವೊಬ್ಬ ಅಧಿಕಾರಿಗಳು ಕಿವಿಗೆ ಹಾಕೊಳ್ತಿಲ್ಲ. ಇಂತಹ ನಿರ್ಲಕ್ಷ್ಯ ಅಧಿಕಾರಿಗಳ ವಿರುದ್ದ ಸಾರ್ವಜನಿರು ಹಿಡಿಶಾಪ ಹಾಕ್ತಿದ್ದಾರೆ. ಈ ಕುರಿತು ಒಂದು ವರದಿ ಇಲ್ಲಿದೆ.

ಹೌದು. ಹೀಗೆ ಆಸ್ಪತ್ರೆ(Hospital)ಯ ಹಿಂಭಾಗ ವಿರುವ ಸ್ಕ್ಯಾನಿಂಗ್ ಸೆಂಟರ್(MRI Scanning centre ) ಬಳಿ ಕಾದು ಕುಳಿತಿರುವ ರೋಗಿಗಳು(Patients). ಈ ದೃಶ್ಯಗಳು ಕಂಡು ಬಂದಿದ್ದು, ಚಿತ್ರದುರ್ಗ ಜಿಲ್ಲಾಸ್ಪತ್ರೆ(Chitradurga district Hospital)ಯ MRI ಸ್ಕ್ಯಾನಿಂಗ್ ಸೆಂಟರ್ ಬಳಿ. ಕಳೆದ ಒಂದು ತಿಂಗಳಿಂದಲೂ ಸ್ಕ್ಯಾನಿಂಗ್ ಸೆಂಟರ್ ಸಮಸ್ಯೆ ಇದ್ದು, ಈ ಕುರಿತು ಜಿಲ್ಲೆಯ ಅನೇಕ ಹೋರಾಟಗಾರರು ಧ್ವನಿ ಎತ್ತಿದ್ರು ಏನೂ ಯೂಸ್ ಆಗಿಲ್ಲ. 

ಬಡರೋಗಿಗಳ ರಕ್ತಹೀರುವ ಕೇಂದ್ರವಾದ ಚಿತ್ರದುರ್ಗ ಜಿಲ್ಲಾಸ್ಪತ್ರೆ!

ಗ್ರಾಮೀಣ ಭಾಗದಿಂದ ಬರುವ ಅನೇಕ ರೋಗಿಗಳಿಗೆ ಸೂಕ್ತ ಸ್ಕ್ಯಾನಿಂಗ್ ವ್ಯವಸ್ಥೆ ಇಲದೇ,‌ ಖಾಸಗಿ ಆಸ್ಪತ್ರೆಗೆ ತೆರಳಿ ಸ್ಕ್ಯಾನಿಂಗ್ ಮಾಡಿಸಿಕೊಂಡು ಬನ್ನಿ ಎಂದು ವೈದ್ಯರು ಸೂಚಿಸುತ್ತಿದ್ದಾರೆ.  ಆದ್ರೆ ಹೊರಗಡೆ‌‌ ಹೋದ್ರೆ ಬರಿ ಸ್ಕ್ಯಾನಿಂಗ್ ಮಾಡಿಸೋಕೆ ಸಾವಿರಗಟ್ಟಲೇ ಹಣ ಪೀಕುತ್ತಿದ್ದಾರೆ.  ಬಡವರ ಪಾಲಿಗೆ ಸರ್ಕಾರಿ ಆಸ್ಪತ್ರೆ ದೇವಾಲಯ ಇದ್ದಂಗೆ ಎಂದು ನಂಬಿ ಎಷ್ಟೋ ಮಂದಿ ಇಲ್ಲಿಗೆ ಬರ್ತಾರೆ. ಆದ್ರೆ ಇಲ್ಲಿನ ಅಧಿಕಾರಿಗಳು ಹಾಗೂ ವೈದ್ಯರ ನಿರ್ಲಕ್ಷ್ಯಕ್ಕೆ ಬಡ ರೋಗಿಗಳು ಸಂಕಷ್ಟಕ್ಕೆ ಸಿಲುಕುವ ಸ್ಥಿತಿ ನಿರ್ಮಾಣವಾಗಿದೆ. ಇದನ್ನೆಲ್ಲಾ ನೋಡಿದ್ರೆ ಖಾಸಗಿ ಲ್ಯಾಬ್ ಹಾಗೂ ಆಸ್ಪತ್ರೆಗಳ ಜೊತೆ ಸರ್ಕಾರಿ ವೈದ್ಯರು ಹಾಗು ಅಧಿಕಾರಿಗಳು ಶಾಮೀಲಾಗಿದ್ದಾರೆ‌ ಎಂಬ ಅನುಮಾನ ವ್ಯಕ್ತವಾಗ್ತಿದೆ. ಆದ್ದರಿಂದ ಕೂಡಲೇ ಅಧಿಕಾರಿಗಳು ಸಮಸ್ಯೆಗೆ ಸಿಲುಕಿರುವ ಸ್ಕ್ಯಾನಿಂಗ್ ಸೆಂಟರ್ ಅನ್ನು ಸರಿಪಡಿಸಿ ಬಡ ರೋಗಿಗಳಿಗೆ ಅನುಕೂಲ ಮಾಡಿಕೊಡಬೇಕು ಎಂದು ಸ್ಥಳೀಯರು ಆಗ್ರಹಿಸಿದರು.

ಇನ್ನೂ ಈ ಬಗ್ಗೆ ಜಿಲ್ಲಾ ಸರ್ಜನ್(district surgeon) ಅವರನ್ನೇ‌ ಕೇಳಿದ್ರೆ, ಸದ್ಯ ಆಸ್ಪತ್ರೆಯಲ್ಲಿ ಅಬ್ಡಮಲ್‌ ಸ್ಕ್ಯಾನಿಂಗ್ (Abdominal ultrasound Scaning)ಮಾಡೋದಕ್ಕೆ ಸಮಸ್ಯೆ ಆಗ್ತಿದೆ. ಈಗಾಗಲೇ‌ ಕಂಪನಿಯವರು ಮೇಲಾಧಿಕಾರಿಗಳ ಗಮನಕ್ಕೆ ತಂದಿದ್ದಾರೆ. ಆ ಮಿಷನ್ ಜರ್ಮನಿಯಿಂದ ಬರಬೇಕು ಅಲ್ಲಿಯೂ ಸಮಸ್ಯೆ ಆಗ್ತಿದೆಯಂತೆ, ಯಾರಾದ್ರು ಫ್ರೀ ಆಗಿ ಸ್ಕ್ಯಾನಿಂಗ್ ಮಾಡಿಸುವವರಿಗೆ ನಾವೇ ಖುದ್ದು, ತುಮಕೂರಿಗೆ ರೆಫರ್(Refer) ಮಾಡ್ತಿದ್ದೀವಿ ಎಂದು ಬೇಜವಾಬ್ದಾರಿ ಉತ್ತರ ಕೊಡ್ತಿದ್ದಾರೆ. ಅಲ್ಲ ಸ್ವಾಮಿ ಬರೀ ಸ್ಕ್ಯಾನಿಂಗ್ ಮಾಡಿಸಿಕೊಂಡು ಬರೋದಕ್ಕೆ ೧೫೦ ಕಿಲೋ ಮೀಟರ್ ಇರುವ ತುಮಕೂರಿಗೆ ಹೋಗಬೇಕು ಅಂತ ಹೇಳಿದ್ರೆ, ಆ ರೋಗಿಯ ಅವಸ್ಥೆ ಏನಾಗಬೇಕು? ಅದನ್ನೆಲ್ಲಾ ಹೇಳೋದ್ ಬದಲು ಅತಿ ಬೇಗನೇ ರಿಪೇರಿ ಮಾಡಿ ಇಲ್ಲೇ ವ್ಯವಸ್ಥೆ ಸಿಗುವ ಹಾಗೆ ಮಾಡಿ ಎನ್ನುವುದು ರೋಗಿಗಳ ಕೂಗು.

CCTVs in Sick: ಚಿತ್ರದುರ್ಗ ಜಿಲ್ಲಾಸ್ಪತ್ರೆ ಸಿಸಿಟಿವಿಗೆ ರೋಗ!

ಇತ್ತೀಚಿನ ದಿನಗಳಲ್ಲಿ ಸರ್ಕಾರಿ ಆಸ್ಪತ್ರೆ ಅಂದ್ರೆ ಮೂಗು ಮುರಿಯುವವರೇ ಹೆಚ್ಚಾಗಿದ್ದಾರೆ. ಯಾಕಂದ್ರೆ ಅಲ್ಲಿನ ಆಡಳಿತ ರೂಡ ವ್ಯವಸ್ಥೆ ಕೂಡ ಅಷ್ಟೇ ಜಡ್ಡು ಕಟ್ಟಿರುವುದೇ ಇದಕ್ಕೆಲ್ಲಾ ಸಾಕ್ಷಿ. ಅದನ್ನರಿತ ಇನ್ನಾದ್ರು ಅಧಿಕಾರಿಗಳು, ವೈದ್ಯರು ಅಪ್ಡೇಟ್ ಆಗಬೇಕಿದೆ. ರೋಗಿಗಳಿಗೆ ತೊಂದರೆ ಆಗದಂತೆ ನಮ್ಮಲ್ಲೇ ಸೂಕ್ತ ವ್ಯವಸ್ಥೆ ಕಲ್ಪಿಸಬೇಕಿದೆ.

click me!