ಕೊರೊನಾದಿಂದ ಲಕ್ಷಾಂತರ ಮಂದಿ ಸಾವನ್ನಪ್ಪಿದ್ದಾರೆ. ಈಗ್ಲೂ ಕೊರೊನಾ ಜನರನ್ನು ಇಂಚಿಂಚಾಗಿ ಸಾಯಿಸ್ತಿದೆ. ಅದ್ರ ಅಡ್ಡಪರಿಣಾಮಗಳು ಜನರನ್ನು ಬೆನ್ನುಹತ್ತಿವೆ. ಕೊರೊನಾ ನಂತ್ರ ಸುಸ್ತು, ಹೃದಯ ಸಂಬಂಧಿ ಸಮಸ್ಯೆ ಮಾತ್ರವಲ್ಲ ಈಗ ಮತ್ತೊಂದು ಖಾಯಿಲೆ ಬಗ್ಗೆ ಮಾಹಿತಿ ಹೊರಬಿದ್ದಿದೆ.
ಕೊರೊನಾ ವೈರಸ್ ಮಾಡಿರುವ ಅನಾಹುತ ಒಂದೆರಡಲ್ಲ. ಕಳೆದ ಮೂರ್ನಾಲ್ಕು ವರ್ಷಗಳಿಂದ ಕೊರೊನಾ ಜನರನ್ನು ಹೈರಾಣ ಮಾಡಿದೆ. ಈಗ ಮತ್ತೆ ಕೊರೊನಾ ಹಾವಳಿ ಹೆಚ್ಚಾಗ್ತಿದೆ. ಕೊರೊನಾದಿಂದ ರಕ್ಷಣೆ ಪಡೆಯುವಂತೆ ಆರೋಗ್ಯ ಸಚಿವಾಲಯ ಎಚ್ಚರಿಕೆ ನೀಡ್ತನೆ ಇದೆ.
ಒಂದು ಕಡೆ ಕೊರೊನಾ (Corona) ಕಾಟವಾದ್ರೆ ಇನ್ನೊಂದು ಕಡೆ ಈಗಾಗಲೇ ಕೊರೊನಾ ಗೆದ್ದು ಬಂದವರ ಗೋಳು. ಕೊರೊನಾದಿಂದ ಹೇಗೋ ಚೇತರಿಸಿಕೊಂಡಿದ್ದಾಗಿದೆ. ಆದ್ರೆ ಆರೋಗ್ಯ (Health) ಸಮಸ್ಯೆಗಳು ಮಾತ್ರ ಅವರ ಬೆನ್ನು ಬಿಡುತ್ತಿಲ್ಲ. ದೀರ್ಘಕಾಲದ ಕೋವಿಡ್ ನಿಂದ ಬಳಲಿದ ಜನರಿಗೆ ಆಯಾಸ, ಮೆದುಳಿಗೆ ಸಂಬಂಧಿಸಿದ ದೂರುಗಳು, ಉಸಿರಾಟದ ತೊಂದರೆ, ಬಿಪಿ ಮತ್ತು ಹೃದ್ರೋಗದ ದೂರುಗಳು ಕಾಡ್ತಿವೆ ಎಂಬ ವರದಿಯಾಗಿತ್ತು. ಆದ್ರೀಗ ಹೊಸ ಸಮಸ್ಯೆ ಕಾಣಿಸಿಕೊಂಡಿದೆ. ಹೊಸ ಅಧ್ಯಯನ ಒಂದರ ಪ್ರಕಾರ, ದೀರ್ಘಕಾಲ ಕೊರೊನಾ ಸೋಂಕಿಗೆ ಗುರಿಯಾದ ವ್ಯಕ್ತಿಗಳಿಗೆ ಫೇಸ್ (Face) ಬ್ಲೈಂಡ್ನೆಸ್ (Blindness) ಕಾಡ್ತಿದೆ. ಇದನ್ನು ಪ್ರೊಸೊಪಾಗ್ನೋಸಿಯಾ ಎಂದು ಕರೆಯಲಾಗುತ್ತದೆ. ಇದನ್ನು ಗಂಭೀರ ಸಮಸ್ಯೆ ಎನ್ನಬಹುದು. ಯಾಕೆಂದ್ರೆ ಈ ಸಮಸ್ಯೆಗೆ ಗುರಿಯಾದ ವ್ಯಕ್ತಿಗಳು ತಮ್ಮ ಕುಟುಂಬದ ಸದಸ್ಯರು ಮತ್ತು ನಿಕಟ ಪರಿಚಯಸ್ಥರನ್ನು ಗುರುತಿಸಲು ಕಷ್ಟಪಡುತ್ತಾರೆ. ನಾವಿಂದು ಫೇಸ್ ಬ್ಲೈಂಡ್ನೆಸ್ ಎಂದರೇನು ಎನ್ನುವುದನ್ನು ನಿಮಗೆ ಹೇಳ್ತೇವೆ.
ಫೇಸ್ ಬ್ಲೈಂಡ್ನೆಸ್ ಎಂದರೇನು? : ಪ್ರೊಸೊಪಾಗ್ನೋಸಿಯಾ (Prosopagnosia) ನರಕ್ಕೆ ಸಂಬಂಧಿಸಿದ ಖಾಯಿಲೆಯಾಗಿದೆ. ಇದರಲ್ಲಿ ಮುಖಗಳನ್ನು ಗುರುತಿಸುವ ಮತ್ತು ಪ್ರತ್ಯೇಕಿಸುವ ಸಾಮರ್ಥ್ಯ ದುರ್ಬಲಗೊಳ್ಳುತ್ತದೆ. ಇದಕ್ಕೆ ತುತ್ತಾದ ಜನರು ತಮ್ಮ ಆಪ್ತರನ್ನು, ಕುಟುಂಬಸ್ಥರು, ಸ್ನೇಹಿತರನ್ನು ಗುರುತಿಸಲು ಕಷ್ಟಪಡ್ತಾರೆ. ಅವರಿಗೆ ಪರಿಚಿತ ಹಾಗೂ ಅಪರಿಚಿತ ವ್ಯಕ್ತಿಗಳ ಮುಖದ ವ್ಯತ್ಯಾಸ ಗುರುತಿಸಲು ಕಷ್ಟವಾಗುತ್ತದೆ. ತಂದೆ ಧ್ವನಿ ಯಾವುದೋ ಅಪರಿಚಿತ ವ್ಯಕ್ತಿಯ ಮುಖದಿಂದ ಹೊರ ಬರ್ತಿದೆ ಎಂದು ಅವರು ಭಾವಿಸಲು ಶುರು ಮಾಡ್ತಾರೆ.
Health Tips : ಬೇಸಿಗೆಯಲ್ಲಿ ನೀವು ಟಾಲ್ಕಂ ಪೌಡರ್ ಬಳಸುತ್ತೀರಾ? ಜೋಕೆ
ಧ್ವನಿ ಜೊತೆ ಮುಖ ಹೊಂದಿಸಲು ಸಮಸ್ಯೆ : ಕಾರ್ಟೆಕ್ಸ್ ಜರ್ನಲ್‌ನಲ್ಲಿ ಪ್ರಕಟವಾದ ಇತ್ತೀಚಿನ ಅಧ್ಯಯನದ ಪ್ರಕಾರ, ಅನ್ನಿ ಎಂಬ 28 ವರ್ಷದ ಮಹಿಳೆ 2020 ರಲ್ಲಿ ಕೊರೊನಾದಿಂದ ಬಳಲಿದ್ದಾಳೆ. ಈಗ ಆಕೆಗೆ ಫೇಸ್ ಬ್ಲೈಂಡ್ನೆಸ್ ಕಾಡಿದೆ. ಕೋವಿಡ್ ಗಿಂತ ಮೊದಲು ಅನ್ನಿಗೆ ಇತರಹದ ಯಾವುದೇ ಸಮಸ್ಯೆ ಇರಲಿಲ್ಲ. ಸೋಂಕು ತಗಲಿದ ಎರಡು ತಿಂಗಳ ನಂತ್ರ ಆಕೆ ತನ್ನ ಕುಟುಂಬಸ್ಥರನ್ನೇ ಸರಿಯಾಗಿ ಗುರುತಿಸುತ್ತಿರಲಿಲ್ಲವಂತೆ. ರೆಸ್ಟೋರೆಂಟ್‌ನಲ್ಲಿ ತಂದೆ ಧ್ವನಿ ಗುರುತಿಸಿದ ಆಕೆ ಮುಖವನ್ನು ಗುರುತಿಸಲು ವಿಫಲವಾದಳಂತೆ. ಕೊರೊನಾ ನಂತ್ರ ನ್ಯಾವಿಗೇಷನಲ್ ಕೊರತೆ ಕಾಣಿಸಿಕೊಂಡಿದೆ.
ಅಧ್ಯಯನದಿಂದ ಪತ್ತೆಯಾದ ವಿಷಯವೇನು? : ಬರೀ ಅನ್ನಿಗೆ ಮಾತ್ರ ಈ ಸಮಸ್ಯೆ ಕಾಣಿಸಿಕೊಂಡಿಲ್ಲ. ಕೊರೊನಾ ನಂತ್ರ ಅನೇಕರು ಫೇಸ್ ಬ್ಲೈಂಡ್ನೆಸ್ ಗೆ ತುತ್ತಾಗಿದ್ದಾರೆ. ಅಧ್ಯಯನದಲ್ಲಿ ಅನ್ನಿ ಸೇರಿ 54 ಮಂದಿಯ ಅಧ್ಯಯನ ನಡೆಸಲಾಗಿದೆ. ದೃಶ್ಯ ಗುರುತಿಸುವಿಕೆಯಲ್ಲಿ ಅವರು ಸಮಸ್ಯೆ ಎದುರಿಸಿದ್ದರು ಎಂದು ತಜ್ಞರು ಹೇಳಿದ್ದಾರೆ.
Womens Health: ಬೇಸಿಗೆಯಲ್ಲಿ ಗರ್ಭಿಣಿಯರಿಗೆ ಆರೋಗ್ಯದ ಬಗ್ಗೆಯಿರಲಿ ವಿಶೇಷ ಕಾಳಜಿ
ಎಷ್ಟು ಮಂದಿಗೆ ಕಾಡ್ತಿದೆ ಈ ಸಮಸ್ಯೆ : ದೀರ್ಘ ಕೊರೊನಾದಿಂದ ಬಳಲುವ ಎಲ್ಲರಿಗೂ ಈ ಸಮಸ್ಯೆ ಕಾಣಿಸಿಕೊಂಡಿದೆ ಎಂದಲ್ಲ. ಇಲ್ಲಿಯವರೆಗೆ ದೀರ್ಘಕಾಲ ಕೊರೊನಾ ಸೋಂಕಿಗೆ ತುತ್ತಾಗಿದ್ದ ಶೇಕಡಾ 2ರಿಂದ 3ರಷ್ಟು ಮಂದಿಗೆ ಮಾತ್ರ ಈ ಸಮಸ್ಯೆ ಕಾಣಿಸಿಕೊಂಡಿದೆ. ಆದ್ರೆ ಈ ಸ್ಥಿತಿಗೆ ನಿಖರವಾದ ಕಾರಣ ತಿಳಿದುಬಂದಿಲ್ಲ ಎನ್ನುತ್ತಾರೆ ತಜ್ಞರು. ಈ ಬಗ್ಗೆ ಹೆಚ್ಚಿನ ಅಧ್ಯಯನ ನಡೆಯುವ ಅಗತ್ಯವಿದೆ. ಆರಂಭಿಕ ಸಂಶೋಧನೆಯಲ್ಲಿ ಇದಕ್ಕೆ ಕೊರೊನಾ ಸೋಂಕೇ ಕಾರಣ ಎನ್ನಲಾಗ್ತಿದೆ. ಕೊರೊನಾ ಸೋಂಕು, ಮುಖವನ್ನು ಗುರುತಿಸಲು ಸಹಾಯ ಮಾಡುವ ಮೆದುಳಿನ ಭಾಗಕ್ಕೆ ಹಾನಿ ಮಾಡ್ತಿದೆ ಎಂದು ತಜ್ಞರು ಹೇಳ್ತಿದ್ದಾರೆ.