Eye Facts: ಕಣ್ಣು ಕಣ್ಣು ಬೆರೆತಾಗ... ನಿಮ್ಮ ಕಣ್ಣುಗಳ ಬಗ್ಗೆ ನಿಮಗೆ ತಿಳಿದಿಲ್ಲದ ಅಚ್ಚರಿಯ ಸಂಗತಿಗಳಿವು

Published : Jul 15, 2025, 07:51 AM ISTUpdated : Jul 15, 2025, 10:05 AM IST
human eye

ಸಾರಾಂಶ

 ಕಣ್ಣು ನಮ್ಮ ದೇಹದ ಪ್ರಮುಖ ಅಂಗವಾಗಿದ್ದು, ಅದರ ಆರೈಕೆ ಬಹಳ ಮುಖ್ಯ. ಕಣ್ಣುಗಳ ಕೆಲವು ಅಚ್ಚರಿಯ ವಿಚಾರಗಳನ್ನು ಇಲ್ಲಿ ನೋಡೋಣ..

ಕಣ್ಣು ನಮ್ಮ ದೇಹದ ಪ್ರಮುಖ ಅಂಗ. ಕಣ್ಣಿಲ್ಲದೇ ಬದುಕಿಲ್ಲ, ವಯಸ್ಸು ಯಾವುದೇ ಆದರೂ ಕಣ್ಣಿನ ಆರೈಕೆ ಬಹಳ ಮುಖ್ಯ. ಇಲ್ಲದಿದ್ದರೆ ದೃಷ್ಟಿ ದೋಷಗಳು ಉಂಟಾಗುತ್ತವೆ. ದೃಷ್ಟಿ ದೋಷದಿಂದಾಗಿ ಅನೇಕ ಜನರು ಕನ್ನಡಕ ಮತ್ತು ಕಾಂಟ್ಯಾಕ್ಟ್ ಲೆನ್ಸ್‌ಗಳನ್ನು ಧರಿಸುತ್ತಾರೆ. ಕೆಲವರು ಶಸ್ತ್ರಚಿಕಿತ್ಸೆಗೆ ಒಳಗಾಗುತ್ತಾರೆ. ಆದರೆ ನಮ್ಮ ಕಣ್ಣುಗಳ ನಮಗೆ ತಿಳಿದಿಲ್ಲದ ನಂಬಲೂ ಸಾಧ್ಯವಾಗದ ಕೆಲ ವಿಚಾರಗಳ ಬಗ್ಗೆ ಈಗ ನೋಡೋಣ. ಕಣ್ಣುಗಳ ಈ ವಿಶಿಷ್ಟ ವಿಚಾರಗಳ ಬಗ್ಗೆ ತಿಳಿದರೆ ನಿಮ್ಮ ಕಣ್ಣುಗಳು ಅದೆಷ್ಟು ಅದ್ಭುತ ಎಂಬುದು ನಿಮಗೆ ತಿಳಿಯುತ್ತದೆ.

ಹಾಗಿದ್ದರೆ ಆ ಅಚ್ಚರಿಯ ಸಂಗತಿಗಳು ಏನು ಎಂಬುದನ್ನು ನೋಡೋಣ...

1. ನಮ್ಮ ಕಣ್ಣು ಸುಮಾರು ಒಂದು ಔನ್ಸ್ ತೂಕವಿದೆ.

2. ವಿಶ್ವದಲ್ಲಿ 7 0ರಿಂದ 79% ರಷ್ಟು ಜನರು ಕಂದು/ಕಪ್ಪು ಕಣ್ಣುಗಳನ್ನು, 8 ರಿಂದ 10% ಜನರು ನೀಲಿ ಕಣ್ಣುಗಳನ್ನು ಮತ್ತು 2% ಜನರು ಹಸಿರು ಕಣ್ಣುಗಳನ್ನು ಹೊಂದಿದ್ದಾರೆಂದು ಅಂದಾಜಿಸಲಾಗಿದೆ.

3. ನೀಲಿ ಬಣ್ಣದ ಕಣ್ಣುಗಳು ಇತರ ಬಣ್ಣದ ಕಣ್ಣುಗಳಿಗಿಂತ ಬೆಳಕಿಗೆ ಹೆಚ್ಚು ಸೂಕ್ಷ್ಮವಾಗಿರುತ್ತವೆ.

4. ಸಾಮಾನ್ಯವಾಗಿ ಹೆಚ್ಚಿನ ನವಜಾತ ಶಿಶುಗಳು ಅಳುವುದನ್ನು ನೀವು ನೋಡಿತ್ತೀರಿ ಆದರೆ ಅವರಿಗೆ ಕಣ್ಣೀರು ಬರುವುದಿಲ್ಲ. 6-8 ವಾರಗಳವರೆಗೆ ಅವರಿಗೆ ಕಣ್ಣೀರು ಬರುವುದಿಲ್ಲ. ಏಕೆಂದರೆ ಜನನದ ನಂತರವೂ ಅವರ ಕಣ್ಣೀರಿನ ನಾಳವು ಬೆಳೆಯುತ್ತಲೇ ಇರುತ್ತದೆ.

5. ಜೀನ್‌ಗಳ ಕಾರಣದಿಂದಾಗಿ ಕೆಲವು ಮಹಿಳೆಯರು ಹತ್ತು ಲಕ್ಷ ಬಣ್ಣಗಳನ್ನು ನೋಡಬಲ್ಲರು.

6. ಕಣ್ಣು ತೆರೆದು ಸೀನುವುದು ಅಸಾಧ್ಯ. ಬೇಕಿದ್ರೆ ಪ್ರಯತ್ನಿಸಿ ನೋಡಿ.

7. ಮನುಷ್ಯರು ಮತ್ತು ನಾಯಿಗಳು ಮಾತ್ರ ಕಣ್ಣುಗಳನ್ನು ನೋಡುವ ಮೂಲಕ ಒಂದು ವಿಷಯವನ್ನು ತಿಳಿದುಕೊಳ್ಳಬಲ್ಲವು. ಅದರಲ್ಲೂ ನಾಯಿಗಳು ಮನುಷ್ಯರ ಕಣ್ಣುಗಳನ್ನು ನೋಡುವ ಮೂಲಕ ಒಂದು ವಿಷಯವನ್ನು ಸುಲಭವಾಗಿ ತಿಳಿದುಕೊಳ್ಳಬಲ್ಲವು.

8. 20ನೇ ಶತಮಾನದಲ್ಲಿ ಅಮೆರಿಕದಲ್ಲಿ ಅರ್ಧದಷ್ಟು ಜನರು ನೀಲಿ ಕಣ್ಣುಗಳನ್ನು ಹೊಂದಿದ್ದರು. ಆದರೆ ಈಗ ಆರರಲ್ಲಿ ಒಬ್ಬರಿಗೆ ಮಾತ್ರ ನೀಲಿ ಕಣ್ಣುಗಳಿವೆ.

9. ಪ್ರತಿ 10 ಸೆಕೆಂಡಿಗೆ ಒಮ್ಮೆ ಮನುಷ್ಯ ಕಣ್ಣು ಮಿಟುಕಿಸುತ್ತಾನೆ.

10. ಮನುಷ್ಯನ ಕಣ್ಣುಗಳು ದೇಹದ ಇತರ ಅಂಗಗಳಿಗಿಂತ ವೇಗವಾಗಿ ಗುಣವಾಗುತ್ತವೆ (48 ಗಂಟೆಗಳ ಒಳಗೆ). ಆದರೆ ಸರಿಯಾದ ಆರೈಕೆ ಇದ್ದರೆ ಮಾತ್ರ ಸಾಧ್ಯ.

11. ನಮ್ಮತ್ತ ಯಾವುದೇ ಅಪಾಯಕಾರಿ ವಸ್ತು ವೇಗವಾಗಿ ಬಂದಾಗ ನಮ್ಮ ಮೆದುಳು ಪತ್ತೆ ಮಾಡಿ ಅವುಗಳಿಂದ ನಮ್ಮನ್ನು ರಕ್ಷಿಸಿಕೊಳ್ಳಲು ನಾವು ಸ್ವಯಂಚಾಲಿತವಾಗಿ ಕಣ್ಣು ಮುಚ್ಚಿಕೊಳ್ಳುತ್ತೇವೆ.

12. ನೈಸರ್ಗಿಕವಾಗಿ ಕೆಲವರಿಗೆ ಒಂದು ಕಣ್ಣು ಒಂದು ಬಣ್ಣ ಇನ್ನೊಂದು ಕಣ್ಣು ಬೇರೆ ಬಣ್ಣವಿರುತ್ತದೆ. ಇದು ಒಂದು ಕಾಯಿಲೆ. ಇದನ್ನು ಹೆಟೆರೋಕ್ರೋಮಿಯಾ (heterochromia) ಎಂದು ಕರೆಯುತ್ತಾರೆ.

13. ದೇಹದ ಇತರ ಸ್ನಾಯುಗಳಿಗಿಂತ ಕಣ್ಣಿನ ಸ್ನಾಯುಗಳು ಯಾವಾಗಲೂ ಸಕ್ರಿಯವಾಗಿರುತ್ತವೆ ಮತ್ತು ವೇಗವಾಗಿ ಚಲಿಸುತ್ತವೆ.

14. ನಾವು ಹುಟ್ಟಿದ ನಂತರ ಎಲ್ಲಾ ಅಂಗಗಳು ಬೆಳೆಯುತ್ತವೆ. ಆದರೆ ಕಣ್ಣುಗಳನ್ನು ಹೊರತುಪಡಿಸಿ. ಏಕೆಂದರೆ ಕಣ್ಣುಗಳು ನಾವು ಹುಟ್ಟಿದಾಗ ಯಾವ ಗಾತ್ರದಲ್ಲಿರುತ್ತವೆಯೋ ಅದೇ ಗಾತ್ರದಲ್ಲಿ ಯಾವಾಗಲೂ ಇರುತ್ತವೆ.

15. ಕಣ್ಣುಗಳು ಅನೇಕ ವಿಷಯಗಳನ್ನು ನೋಡಿದರೂ, ನಿಜವಾದ ವೀಕ್ಷಕ ಮೆದುಳು. ಏಕೆಂದರೆ ನಾವು ನೋಡುವುದನ್ನು ಅರ್ಥಮಾಡಿಕೊಳ್ಳಲು ಮತ್ತು ಕಾರ್ಯನಿರ್ವಹಿಸಲು ಅದು ನಮಗೆ ಸಹಾಯ ಮಾಡುತ್ತದೆ.

16. ಕಣ್ಣುಗಳು ಮೆದುಳಿನ ನಂತರದ ಅತ್ಯಂತ ಸಂಕೀರ್ಣ ಅಂಗವಾಗಿದೆ.

17. ಕಣ್ಣಿನ ರೆಪ್ಪೆಗಳಲ್ಲಿ ಕಣ್ಣುಗಳಿಗೆ ಹಾನಿಕಾರಕವಲ್ಲದ ಸೂಕ್ಷ್ಮಜೀವಿಗಳು ವಾಸಿಸುತ್ತವೆ.

18. ಧೂಮಪಾನವು ಕಣ್ಣುಗಳ ಮೇಲೆ ಪರಿಣಾಮ ಬೀರುತ್ತದೆ. ವಿಶೇಷವಾಗಿ ರಾತ್ರಿಯಲ್ಲಿ.

19. ಮನುಷ್ಯನ ಕಣ್ಣುಗಳು ಒಂದು ಆಸ್ಟ್ರಿಚ್‌ನ ಮೆದುಳಿಗಿಂತ ದೊಡ್ಡದಾಗಿರುತ್ತವೆ.

20. ವಿಶ್ವಾದ್ಯಂತ 80% ಕಣ್ಣಿನ ಕಾಯಿಲೆಗಳು ಗುಣಪಡಿಸಬಹುದಾದವು ಮತ್ತು ತ್ವರಿತವಾಗಿ ಪರಿಹಾರವನ್ನು ಪಡೆಯಬಹುದಾದವು.

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ರಾತ್ರಿ ಮಲಗುವ ಮುನ್ನ ನೀರು ಕುಡಿಯುತ್ತೀರಾ?, ಈ ವಿಷಯಗಳನ್ನು ನೀವು ತಿಳಿದಿರಲೇಬೇಕು
ಕೊಲೊನ್ ಕ್ಯಾನ್ಸರ್.. 30 ವರ್ಷದ ನಂತ್ರ ಈ ಲಕ್ಷಣ ಕಾಣಿಸಿಕೊಂಡರೆ ನಿರ್ಲಕ್ಷಿಸಬೇಡಿ