ಬದಲಾಗ್ತಿರೋ ಹವಾಮಾನಕ್ಕೆ ಬೆಟ್ಟದ ನೆಲ್ಲಿ: ಆರೋಗ್ಯಕರ ಪೇಯ ಹೇಳಿಕೊಟ್ಟ ಡಾ.ಪದ್ಮಿನಿ ಪ್ರಸಾದ್​

Published : Feb 25, 2025, 11:03 PM ISTUpdated : Feb 26, 2025, 08:22 AM IST
ಬದಲಾಗ್ತಿರೋ ಹವಾಮಾನಕ್ಕೆ ಬೆಟ್ಟದ ನೆಲ್ಲಿ: ಆರೋಗ್ಯಕರ ಪೇಯ ಹೇಳಿಕೊಟ್ಟ ಡಾ.ಪದ್ಮಿನಿ ಪ್ರಸಾದ್​

ಸಾರಾಂಶ

ಬದಲಾಗುವ ಹವಾಮಾನದಿಂದ ಅನಾರೋಗ್ಯ ಹೆಚ್ಚಾಗಿದ್ದು, ಬೆಟ್ಟದ ನೆಲ್ಲಿಕಾಯಿ ಸೇವನೆಯು ಪರಿಹಾರ ನೀಡುತ್ತದೆ ಎಂದು ಡಾ.ಪದ್ಮಿನಿ ಪ್ರಸಾದ್ ತಿಳಿಸಿದ್ದಾರೆ. ಸವಿರುಚಿ ಕಾರ್ಯಕ್ರಮದಲ್ಲಿ ನೆಲ್ಲಿಕಾಯಿ ಜ್ಯೂಸ್ ಮಾಡುವ ವಿಧಾನವನ್ನು ವಿವರಿಸಿದ್ದಾರೆ. ನೆಲ್ಲಿಕಾಯಿ, ಶುಂಠಿ, ಕರಿಬೇವು, ಮೆಣಸಿನಕಾಯಿ ಸೇರಿಸಿ ಜ್ಯೂಸ್ ಮಾಡಿ ಖಾಲಿ ಹೊಟ್ಟೆಯಲ್ಲಿ ಕುಡಿಯುವುದು ಉತ್ತಮ. ಇದು ಜೀರ್ಣಶಕ್ತಿ ಹೆಚ್ಚಿಸಿ, ಮಧುಮೇಹ, ರಕ್ತದೊತ್ತಡ ಕಡಿಮೆ ಮಾಡುತ್ತದೆ. ವಿಟಮಿನ್ ಸಿ ಸಮೃದ್ಧವಾಗಿದ್ದು, ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ.

ಕೆಲವೊಮ್ಮೆ ಚಳಿ, ಮರುಕ್ಷಣ ಉರಿ ಬಿಸಿಲು... ವಿಪರೀತ ಗಾಳಿ, ಧೂಳೋ ಧೂಳು... ಬದಲಾಗ್ತಿರೋ ಹವಾಮಾನದಿಂದಾಗಿ ಅನಾರೋಗ್ಯ ಸಮಸ್ಯೆಗಳು ಹೆಚ್ಚುತ್ತಲೇ ಸಾಗಿವೆ. ಶೀತ, ಕೆಮ್ಮು, ಜ್ವರ, ನೆಗಡಿ, ಬಾಯಿ ಹುಣ್ಣು ಇವೆಲ್ಲವೂ ಈಗ ಸಾಮಾನ್ಯ. ಇದರ ಕುಳಿತಲ್ಲೇ ಕೆಲಸ ಮಾಡುತ್ತಿದ್ದರೆ ಅಜೀರ್ಣ ಸಮಸ್ಯೆಗಳೂ ಉಂಟಾಗಬಹುದು. ಇವುಗಳಿಂದ ತಕ್ಕಮಟ್ಟಿಗೆ ಪರಿಹಾರ ಕಂಡುಕೊಳ್ಳಬಹುದಾದ ಎಂದರೆ ಅದು ಬೆಟ್ಟದ ನೆಲ್ಲಿ. ಬೆಟ್ಟದ ನೆಲ್ಲಿಯ ಪೇಯ ಅಂದರೆ ಜ್ಯೂಸ್​ ಅನ್ನು ದಿನನಿತ್ಯವೂ ಕುಡಿಯುವುದರಿಂದ ಹಲವು ರೀತಿಯಲ್ಲಿ ಪ್ರಯೋಜನಗಳು ಸಿಗಲಿವೆ. ಇದರ ಬಗ್ಗೆ ಖ್ಯಾತ ಸ್ತ್ರೀರೋಗ ವೈದ್ಯೆಯಾಗಿರುವ ಡಾ.ಪದ್ಮಿನಿ ಪ್ರಸಾದ್​ ಅವರು ತಿಳಿಸಿಕೊಟ್ಟಿದ್ದು, ಅದರ ಮಾಹಿತಿ ಇಲ್ಲಿ ನೀಡಲಾಗಿದೆ.
 
 ಡಾ.ಪದ್ಮಿನಿ ಪ್ರಸಾದ್​ ಅವರು, ಬೆಟ್ಟದ ನೆಲ್ಲಿಕಾಯಿಯಿಂದ ಜ್ಯೂಸ್​ ಮಾಡುವುದು ಹೇಗೆ ಎನ್ನುವುದನ್ನು ತಿಳಿಸಿಕೊಟ್ಟಿದ್ದಾರೆ. ಕಲರ್ಸ್​ ಕನ್ನಡ ಚಾನೆಲ್​ನಲ್ಲಿ ಪ್ರಸಾರ ಆಗ್ತಿರೋ ಸವಿರುಚಿ ಕಾರ್ಯಕ್ರಮದಲ್ಲಿ ಅವರು ಇದನ್ನು ಹೇಳಿದ್ದಾರೆ. ಸರಿಯಾದ ವಿಧಾನ ಹೇಗೆ ಎನ್ನುವುದನ್ನು ಅವರು ತಿಳಿಸಿದ್ದಾರೆ. ನಲ್ಲಿಕಾಯಿಯನ್ನು ಹಾಗೆಯೇ ತಿನ್ನುವುದು ಕಷ್ಟ. ಅಂದರೆ ಒಂದೋ-ಎರಡು ತಿನ್ನಬಹುದು ಅಷ್ಟೇ. ಇದೇ ಕಾರಣಕ್ಕೆ ಜ್ಯೂಸ್​ ಮಾಡಿಕೊಂಡು ಕುಡಿದರೆ ಒಳ್ಳೆಯದು ಎನ್ನುವುದು ಅವರ ಅಭಿಮತ. ವೈದ್ಯೆಯ ಪ್ರಕಾರ, ಐದಾರು ನೆಲ್ಲಿಕಾಯಿ ಪೀಸ್​ ಮಾಡಿ, ಒಂದು-ಎರಡು ಮೆಣಸಿನ ಕಾಯಿ, ಸ್ವಲ್ಪ ಶುಂಠಿ ಹಾಗೂ ಸ್ವಲ್ಪ ಕರಿಬೇವು ಹಾಕಿಕೊಂಡು ಮಿಕ್ಸಿ ಮಾಡಬೇಕು. ನೀರು ಹಾಕಿ ಸೋಸಿಕೊಳ್ಳಬೇಕು. ಖಾಲಿ ಹೊಟ್ಟೆಯಲ್ಲಿ ಬೆಳಿಗ್ಗೆ ಸೇವಿಸಿದರೆ ಒಳ್ಳೆಯದಾಗುತ್ತದೆ. ಮಕ್ಕಳಿಗೆ, ದೊಡ್ಡವರು ಯಾರು ಬೇಕಾದರೂ ತೆಗೆದುಕೊಳ್ಳಬೇಕು. ಗರ್ಭಿಣಿಯರೂ ಕೂಡ  ಇದನ್ನು ಸೇವಿಸಬಹುದು ಎಂದಿದ್ದಾರೆ ಡಾ.ಪದ್ಮಿನಿ ಪ್ರಸಾದ್​. 

ವಾಸಿಯಾಗದ ಕೆಮ್ಮು- ಸ್ಕ್ಯಾನ್​ನಲ್ಲಿ ಕಂಡದ್ದು ಗಡ್ಡೆ, ಆಪರೇಷನ್​ ವೇಳೆ ಸಿಕ್ಕಿದ್ದೇ ಬೇರೆ: ವೈದ್ಯರೇ ಕಂಗಾಲು!

ಇನ್ನು ನೆಲ್ಲಿಯ ಪ್ರಯೋಜನದ ಕುರಿತು ಹೇಳುವುದಾದರೆ, ವಿಟಮಿನ್​ ಸಿ ಹೇರಳವಾಗಿರುವ ಬೆಟ್ಟದ ನೆಲ್ಲಿಕಾಯಿಯಲ್ಲಿ ಅದ್ಭುತ ಆರೋಗ್ಯಕರ ಅಂಶಗಳು ಇವೆ. ಕೊರೋನಾ ಸಮಯದಲ್ಲಂತೂ ಇದಕ್ಕೆ ಡಿಮ್ಯಾಂಡೋ ಡಿಮಾಂಡು.  ದೇಹದ ಜೀರ್ಣ ಶಕ್ತಿಯನ್ನು ಹೆಚ್ಚು ಮಾಡುವುದರಿಂದ ಹಿಡಿದು ಮಧುಮೇಹ ರಕ್ತದ ಒತ್ತಡದಂತಹ ಸಮಸ್ಯೆಗಳನ್ನು ದೂರ ಮಾಡುವಲ್ಲಿ ಬೆಟ್ಟದ ನೆಲ್ಲಿಕಾಯಿ ಉಪಯೋಗಕ್ಕೆ ಬರುತ್ತದೆ. ಇದೇ ಕಾರಣಕ್ಕೆ ಇದಕ್ಕೆ  ಪೂಜೆಗಳಲ್ಲಿಯೂ ವಿಶೇಷ ಸ್ಥಾನಮಾನ ಕಲ್ಪಿಸಲಾಗಿದೆ. ವಿಶೇಷವಾಗಿ ತುಳಸಿ ಹಬ್ಬದಂದು ಬೆಟ್ಟದ ನೆಲ್ಲಿಕಾಯಿಂದ ದೀಪ ತಯಾರಿಸಿ ಬೆಳಗಲಾಗುತ್ತದೆ. ಬೆಟ್ಟದ ನೆಲ್ಲಿಕಾಯಿಯಲ್ಲಿ, ಖನಿಜಗಳು ಮತ್ತು ವಿಟಮಿನ್ ಸಮೃದ್ಧವಾಗಿದೆ. ಇವು ವಿವಿಧ ರೋಗಗಳಿಂದ ನಮ್ಮನ್ನು ರಕ್ಷಿಸುತ್ತವೆ. ವಿಶೇಷವಾಗಿ ಇದರಲ್ಲಿ ವಿಟಮಿನ್ ಸಿ ಹೇರಳವಾಗಿದ್ದು ಬೆಟ್ಟದ ನೆಲ್ಲಿಕಾಯಿ ರಸ ಸೇವಿಸುವುದರಿಂದ ನಮ್ಮ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ.

 ಇತ್ತೀಚಿನ ದಿನಗಳಲ್ಲಿ ಬಹುತೇಕ ಯುವ ಜನತೆ ಸೇರಿದಂತೆ ವಯಸ್ಸಾದವರು ಸಹ ತಾವು ಸೇವಿಸಿದ ಆಹಾರ ಹೊಟ್ಟೆಯಲ್ಲಿ ಸರಿಯಾಗಿ ಜೀರ್ಣವಾಗುತ್ತಿಲ್ಲ ಎಂಬ ದೂರನ್ನು ಹೇಳುತ್ತಾರೆ. ಹೊಟ್ಟೆಯಲ್ಲಿ ಆಮ್ಲೀಯತೆ ಸಮಸ್ಯೆ ಕೆಲವರಿಗೆ ಹೆಚ್ಚಾದರೆ ಇನ್ನು ಕೆಲವರಿಗೆ ಮಲಬದ್ಧತೆ ಸಮಸ್ಯೆ ಕಾಡುತ್ತದೆ. ಬೆಟ್ಟದ ನೆಲ್ಲಿಕಾಯಿಯ ನಿಯಮಿತವಾದ ಸೇವನೆಯಿಂದ ಇಂತಹ ಸಮಸ್ಯೆಗಳನ್ನು ಸುಲಭವಾಗಿ ಪಾರು ಮಾಡಿಕೊಳ್ಳಬಹುದು. ಖಾಲಿ ಹೊಟ್ಟೆಯಲ್ಲಿ ಬೆಟ್ಟದ ನೆಲ್ಲಿಕಾಯಿ ಜ್ಯೂಸ್ ಕುಡಿಯುವುದರಿಂದ ದೇಹದಿಂದ ಕಲ್ಮಷಗಳು ಹೊರಹೋಗುತ್ತವೆ. ಇದು ಮೂತ್ರ ವಿಸರ್ಜನೆಯನ್ನು ಉತ್ತೇಜಿಸುವುದರ ಜೊತೆಗೆ ಮೂತ್ರಪಿಂಡದ ಕಲ್ಲುಗಳನ್ನು ನಿವಾರಿಸುವ ಮೂಲಕ ದೇಹದಲ್ಲಿರುವ ಹಾನಿಕಾರಕ ವಿಷವನ್ನು ಹೊರ ಹಾಕಲು ಸಹಾಯ ಮಾಡುತ್ತದೆ. ಇದರಿಂದ ಮೂತ್ರನಾಳದ ಸೋಂಕು ಕೂಡಾ ಕಡಿಮೆಯಾಗುತ್ತದೆ ಎಂದು ವೈದ್ಯರು ಹೇಳುತ್ತಾರೆ.

ನಿಮ್ಮ ಕನಸಿನ ಮಗು ಹುಟ್ಟಿಸುವ ಹೊಸ ಆವಿಷ್ಕಾರವಿದು! ಮಕ್ಕಳಿಲ್ಲದವರಿಗೂ ಭರವಸೆ- ಏನಿದು ಸಂಶೋಧನೆ? ಮಾಹಿತಿ ಇಲ್ಲಿದೆ...

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಆರೋಗ್ಯಕರ ತುಳಸಿ ಅಗೆದು ತಿಂದ್ರೆ ಅಪಾಯ, ಧರ್ಮ- ಆಯುರ್ವೇದ ಹೇಳೋದೇನು?
ಅತಿಯಾದ್ರೆ ಅಮೃತವೂ ವಿಷ, ಇವನ್ನೆಲ್ಲಾ ಮಿತಿ ಮೀರಿ ತಿಂದ್ರೆ ಅಷ್ಟೇ..