
ಬೆಳ್ಳುಳ್ಳಿ ಆರೋಗ್ಯಕ್ಕೆ ತುಂಬಾನೇ ಒಳ್ಳೆಯದು. ಭಾರತದ ಅಡುಗೆಯಲ್ಲಿ ಬೆಳ್ಳುಳ್ಳಿಗೆ ಅಗ್ರಸ್ಥಾನ. ಬೆಳ್ಳುಳ್ಳಿ ಇಲ್ಲದೇ ಕೆಲವು ಅಡುಗೆಗಳು ಅಪೂರ್ಣವಾಗುತ್ತವೆ. ಹಾಗೆ ಒಂದಿಷ್ಟು ವರ್ಗದವರು ಬೆಳ್ಳುಳ್ಳಿಯನ್ನು ಸೇವಿಸಲ್ಲ. ಅಪಾರ ಔಷಧೀಯ ಗುಣಗಳನ್ನು ಹೊಂದಿರುವ ಬೆಳ್ಳುಳ್ಳಿ ಹಲವು ರೋಗಗಳಿಗೆ ರಾಮಬಾಣ. ಕೆಮ್ಮು ಬಂದ್ರೆ ಮನೆಗಳಲ್ಲಿ ಹಸಿಯಾಗಿ ಬೆಳ್ಳುಳ್ಳಿ ತಿನ್ನಲು ಸಲಹೆ ನೀಡಲಾಗುತ್ತದೆ. ಸಾಂಪ್ರದಾಯಿಕ ಮತ್ತು ಆಧುನಿಕ ಆಹಾರ ಶೈಲಿಯಲ್ಲಿ ಬೆಳ್ಳುಳ್ಳಿ ಬಳಕೆ ಮಾಡಲಾಗುತ್ತದೆ. ಜೀರ್ಣಕ್ರಿಯೆಯನ್ನು ಸುಧಾರಿಸುವ ಗುಣ ಹೊಂದಿರುವ ಬೆಳ್ಳುಳ್ಳಿ ಎಲ್ಲಾ ವಯೋಮಾನದವರಿಗೂ ಔಷಧಿಯಾಗಿ ಕೆಲಸ ಮಾಡುತ್ತದೆ.
ಮಾಂಸಾಹಾರ ಅಡುಗೆಯಲ್ಲಿ ಬೆಳ್ಳುಳ್ಳಿಗೆ ಅಗ್ರಸ್ಥಾನವಾಗಿದೆ. ಮಾಂಸಾಹಾರದ ರುಚಿಯನ್ನು ಬೆಳ್ಳುಳ್ಳಿ ಹೆಚ್ಚಿಸುತ್ತದೆ. ಬೆಳ್ಳುಳ್ಳಿ ಸೇವನೆಯಿಂದ ರಕ್ತದೊತ್ತಡ, ದೇಹದಲ್ಲಿನ ಕೊಲೆಸ್ಟ್ರಾಲ್ ಕಡಿಮೆಯಾಗುತ್ತದೆ. ಬೆಳ್ಳುಳ್ಳಿಯಲ್ಲಿ ವಿವಿಧ ಪೋಷಕಾಂಶಗಳು ರಕ್ತನಾಳಗಳು ಸಡಿಲಗೊಳ್ಳುವುದನ್ನು ತಡೆಯುವ ಸಾಮಾರ್ಥ್ಯವನ್ನು ಹೊಂದಿದೆ. ಹಾಗೆಯೇ ದೇಹದಲ್ಲಿನ ಕೆಟ್ಟ ಕೊಬ್ಬು ಕರಗಿಸುವಲ್ಲಿಯೂ ಬೆಳ್ಳುಳ್ಳಿ ಕೆಲಸ ಮಾಡುತ್ತದೆ. ತುಪ್ಪದಲ್ಲಿ ಹುರಿದ ಬೆಳ್ಳುಳ್ಳಿ ತಿಂದ 24 ಗಂಟೆ ನಂತರ ಯುವತಿಯರ ದೇಹದಲ್ಲಾಗುವ ಸೂಕ್ಷ್ಮ ಬದಲಾವಣೆಗಳು ಏನು ಎಂಬುದನ್ನು ಈ ಲೇಖನದಲ್ಲಿ ನೋಡೋಣ.
24 ಗಂಟೆಯಲ್ಲಿ ಯುವತಿಯರ ದೇಹದಲ್ಲಾಗುವ ಬದಲಾವಣೆಗಳು
ತುಪ್ಪದಲ್ಲಿ ಹುರಿದ ಬೆಳ್ಳುಳ್ಳಿಯನ್ನು ತಿಂದ 24 ಗಂಟೆಯಲ್ಲಿ ಯುವತಿಯರ ದೇಹದಲ್ಲಿ ಹಲವು ಬದಲಾವಣೆಗಳು ಆಗುತ್ತವೆ. ದೇಹದಲ್ಲಿನ ಕೆಟ್ಟ ಕೊಬ್ಬು ನಿಯಂತ್ರಣಕ್ಕೆ ಬರೋದು, ಜೀರ್ಣಕ್ರಿಯೆ ಸುಧಾರಣೆ ಸೇರಿದಂತೆ ಹಲವು ಆರೋಗ್ಯಕರ ಲಾಭಗಳನ್ನು ಬೆಳ್ಳುಳ್ಳಿ ನೀಡುತ್ತದೆ. ಇದರ ಹೊರತಾಗಿಯೂ ವಿಶೇಷವಾಗಿ ಯುವತಿಯರ ದೇಹದಲ್ಲಿ ಕೆಲವೊಂದು ಬದಲಾವಣೆಗಳು ಆಗುತ್ತವೆ.
ಬೆಳ್ಳುಳ್ಳಿ ತಿಂದ 2-4 ಗಂಟೆಗಳಲ್ಲಿ ದೇಹದಲ್ಲಿರುವ ಸ್ವತಂತ್ರ ರಾಡಿಕಲ್‌ಗಳ ವಿರುದ್ಧ ಹೋರಾಟ ನಡೆಸುತ್ತದೆ. ಬೆಳ್ಳುಳ್ಳಿಯಲ್ಲಿರುವ ವಿಶೇಷ ಅಂಶಗಳು ದೇಹದಲ್ಲಿರುವ ಕ್ಯಾನ್ಸರ್ ಅಂಶಗಳನನ್ನು ನಾಶಪಡಿಸುವ ಕೆಲಸ ಮಾಡುತ್ತದೆ.
ಬೆಳ್ಳುಳ್ಳಿ ತಿಂದ 4-6 ಗಂಟೆಗಳಲ್ಲಿ ಚಯಾಪಚಯ ಕ್ರಿಯೆ ಉತ್ತೇಜಿಸಲ್ಪಡುತ್ತದೆ. ದೇಹದಲ್ಲಿರುವ ಹೆಚ್ಚುವರಿ ದ್ರವವನ್ನು ಹೊರಹಾಕುವ ಮೂಲಕ ಕೊಬ್ಬು ಕರಗಲು ಸಹಾಯ ಮಾಡುತ್ತದೆ.
ಬೆಳ್ಳುಳ್ಳಿ ತಿಂದ 6-7 ಗಂಟೆಗಳಲ್ಲಿ, ರಕ್ತದಲ್ಲಿರುವ ಬ್ಯಾಕ್ಟಿರಿಯಾಗಳ ನಾಶ ಮಾಡುವ ಕೆಲಸ ಮಾಡುತ್ತದೆ. ಬೆಳ್ಳುಳ್ಳಿಯಲ್ಲಿರುವ ಬ್ಯಾಕ್ಟಿರಿಯಾ ವಿರೋಧಿ ಗುಣಲಕ್ಷಣಗಳಿಂದ ಇದು ಸಾಧ್ಯವಾಗುತ್ತದೆ.
ಬೆಳ್ಳುಳ್ಳಿ ತಿಂದ 7-10 ಗಂಟೆಗಳಲ್ಲಿ ಇದರಲ್ಲಿರುವ ಪೋಷಕಾಂಶಗಳು ದೇಹದೊಳಗೆ ಹೀರಿಕೊಳ್ಳಲು ಆರಂಭಿಸುತ್ತವೆ. ಈ ಮೂಲಕ ದೇಹಕ್ಕೆ ಉತ್ತಮ ರಕ್ಷಣಾತ್ಮಕ ರಕ್ಷಣೆಯನ್ನು ನೀಡುವ ಕೆಲಸವನ್ನು ಬೆಳ್ಳುಳ್ಳಿ ಮಾಡುತ್ತದೆ.
ಇದನ್ನೂ ಓದಿ: ಒಂದೇ ಕಡೆ ಕುಳಿತು ಕೆಲಸ ಮಾಡ್ತೀರಾ? ಪಾದಗಳ ಊತ, ಕೀಲು ನೋವು? ಯಾವ ಮುಲಾಮು ಬೇಡ ಈ ಎಣ್ಣೆ ಹಚ್ಚಿ ಸಾಕು!
ಬೆಳ್ಳುಳ್ಳಿ ಸೇವಿಸಿದ ಒಂದು ಗಂಟೆಯ ನಂತರ ರಕ್ತದ ಶುದ್ಧೀಕರಣ ಮಾಡುವ ಕೆಲಸವನ್ನು ಮಾಡುತ್ತದೆ. ಈ ಸಮಯದಲ್ಲಿ ಕೊಲೆಸ್ಟ್ರಾಲ್ ಮಟ್ಟ ಸಾಮಾನ್ಯ ಸ್ಥಿತಿಗೆ ತರಲು ಪ್ರಯತ್ನಿಸುತ್ತದೆ. ಇದರಿಂದ ಹೃದಯದ ಆರೋಗ್ಯದಲ್ಲಿ ಸುಧಾರಣೆ ಆಗುತ್ತದೆ. ಹುರಿದ ಬೆಳ್ಳುಳ್ಳಿ ಸೇವನೆ ಅಪಧಮನಿಗಳ ಸ್ವಚ್ಛ ಮತ್ತು ರಕ್ತ ಹೆಪ್ಪುಗಟ್ಟುವುದನ್ನು ತಡೆಯುತ್ತದೆ. ಅಧಿಕ ರಕ್ತದೊತ್ತಡ ಹೊಂದಿರುವ ಮಹಿಳೆಯರು ತಮ್ಮ ಆಹಾರದಲ್ಲಿ ಬೆಳ್ಳುಳ್ಳಿ ಬಳಕೆಯನ್ನು ಹೆಚ್ಚಿಸಿಕೊಳ್ಳಬೇಕು ಎಂದು ಆರೋಗ್ಯ ತಜ್ಞರು ಸಲಹೆ ನೀಡುತ್ತಾರೆ.ರಾತ್ರಿ ಮಲಗುವ ಮುನ್ನ ಎರಡು ಎಸಳು ಬೆಳ್ಳುಳ್ಳಿ ತಿನ್ನೋದರಿಂದಲೂ ಕೊಬ್ಬು ಕಡಿಮೆಯಾಗುತ್ತದೆ ಮತ್ತು ಹೃದಯ ಆರೋಗ್ಯಕರ ಸ್ಥಿತಿಯಲ್ಲಿರುತ್ತದೆ. ರಾತ್ರಿ ಬೆಳ್ಳುಳ್ಳಿ ತಿಂದು ಮಲಗಿದ್ರೆ ದೇಹದಲ್ಲಿರುವ ವಿಷದ ಪ್ರಮಾಣ ಕಡಿಮೆಯಾಗುತ್ತದೆ.
ಇದನ್ನೂ ಓದಿ: ನಿಂಬು, ಬೆಳ್ಳುಳ್ಳಿ ಇದ್ರೆ ಸಾಕು... ಹೊಟ್ಟೆಯ ಬೊಜ್ಜು ಫಟಾಫಟ್ ಮಾಯ: ಡಯಟೀಷಿಯನ್ ಕುಸುಮಾ ಟಿಪ್ಸ್ ಕೇಳಿ..
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.