ಉಪವಾಸ ಅಥವಾ ಹಬ್ಬ ಬಂದಾಗಲೆಲ್ಲಾ ಕೆಲವರು ಬೆಳ್ಳುಳ್ಳಿ, ಈರುಳ್ಳಿ ತಿನ್ನಬೇಡಿ ಎಂದು ಸಲಹೆ ನೀಡುತ್ತಾರೆ. ಅವರು ಅವುಗಳನ್ನು ತಾಮಸಿಕ ಆಹಾರ ಎಂದು ವರ್ಗೀಕರಿಸುತ್ತಾರೆ. ಇವು ಲೈಂಗಿಕ ಬಯಕೆಯನ್ನು ಹೆಚ್ಚಿಸುತ್ತದೆ ಎಂದು ಅನೇಕರು ನಂಬಿದ್ದಾರೆ. ಅದು ಎಷ್ಟು ಸರಿ ಎಂಬ ಪ್ರಶ್ನೆಗೆ ಉತ್ತರ ಇಲ್ಲಿದೆ.
ಸದ್ಯ ಎಲ್ಲರ ಬಾಯಲ್ಲಿ ಬೆಳ್ಳುಳ್ಳಿ ಕಬಾಬ್ ಕೇಳಿ ಬರ್ತಿದೆ. ಈರುಳ್ಳಿ ಹಾಗೂ ಬೆಳ್ಳುಳ್ಳಿ ಇಲ್ಲ ಅಂದ್ರೆ ಸಂಬಾರ್, ಸಲಾಡ್, ಪಲ್ಯ ಸೇರಿದಂತೆ ಮಸಾಲೆ ಆಹಾರ ತಯಾರಿಸೋದೇ ಕಷ್ಟ ಎನ್ನುವವರಿದ್ದಾರೆ. ಮನೆಯಲ್ಲಿ ಏನಿಲ್ಲ ಅಂದ್ರೂ ಈ ಎರಡು ಇದ್ದೇ ಇರುತ್ತೆ. ಎಲ್ಲ ಪದಾರ್ಥದ ರುಚಿ ಹೆಚ್ಚಿಸುವ ಈರುಳ್ಳಿ – ಬೆಳ್ಳುಳ್ಳಿಯನ್ನು ತಾಮಸ ಆಹಾರ ಎಂದು ಕರೆಯಲಾಗುತ್ತದೆ. ಹಾಗಂತ ಇವು ಕೆಟ್ಟ ಆಹಾರವಲ್ಲ. ಔಷಧಿ ರೀತಿಯಲ್ಲಿ ಕೆಲಸ ಮಾಡುತ್ತದೆ. ಆಹಾರದ ರುಚಿ ಹೆಚ್ಚಿಸಲು, ಸೌಂದರ್ಯ ಹೆಚ್ಚಿಸಿಕೊಳ್ಳಲು ಜನರು ಇವುಗಳ ಬಳಕೆ ಮಾಡ್ತಾರೆ. ಇಷ್ಟೇ ಅಲ್ಲ ಬೆಳ್ಳುಳ್ಳಿ ಹಾಗೂ ಈರುಳ್ಳಿ ಲೈಂಗಿಕ ಆರೋಗ್ಯಕ್ಕೂ ಒಳ್ಳೆಯದು. ಬೆಳ್ಳುಳ್ಳಿ ಮತ್ತು ಈರುಳ್ಳಿ ಲೈಂಗಿಕ ಕಾರ್ಯಕ್ಷಮತೆಯನ್ನು ಸುಧಾರಿಸುತ್ತದೆ. ಬೆಳ್ಳುಳ್ಳಿ ಅಲಿಸಿನ್‌ನಲ್ಲಿ ಸಮೃದ್ಧವಾಗಿದೆ. ಇದು ರಕ್ತದ ಹರಿವನ್ನು ಹೆಚ್ಚಿಸುತ್ತದೆ. ಆರೋಗ್ಯಕರ ವೀರ್ಯ ಸಂಖ್ಯೆ ಹೆಚ್ಚಿಸುವ ಮೂಲಕ ಪುರುಷರಲ್ಲಿ ಫಲವತ್ತತೆಯನ್ನು ಹೆಚ್ಚಿಸುವ ಕೆಲಸ ಮಾಡುತ್ತದೆ.
ಈರುಳ್ಳಿ (Onion) ಮತ್ತು ಬೆಳ್ಳುಳ್ಳಿ (Garlic) ಸೇವನೆಯ ಲೈಂಗಿಕ ಪ್ರಯೋಜನ :
ಶಕ್ತಿ ಹೆಚ್ಚಳ : ನಿಮ್ಮ ರೋಗ ನಿರೋಧಕ (Immunity) ಶಕ್ತಿ ಕಡಿಮೆ ಇದ್ದಾಗ ದೇಹ ಶಕ್ತಿ ಕಳೆದುಕೊಳ್ಳುತ್ತದೆ. ಇದರಿಂದಾಗಿ ಲೈಂಗಿಕ ಕಾರ್ಯಕ್ಷಮತೆ ಕಡಿಮೆ ಆಗುತ್ತದೆ. ನೀವು ಸೇವನೆ ಮಾಡುವ ಈರುಳ್ಳಿ ಮತ್ತು ಬೆಳ್ಳುಳ್ಳಿ ನಿಮ್ಮ ದೇಹದ ಶಕ್ತಿಯನ್ನು ಹೆಚ್ಚಿಸುತ್ತದೆ. ಬೆಳ್ಳುಳ್ಳಿ ಮತ್ತು ಈರುಳ್ಳಿಯಲ್ಲಿರುವ ಫೈಟೊಕೆಮಿಕಲ್‌ಗಳು ಮತ್ತು ವಿಟಮಿನ್ ಸಿ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಇದ್ರಿಂದ ದೇಹ ಶಕ್ತಿ ಪಡೆಯುತ್ತದೆ. ಸಂಭೋಗದ ವೇಳೆ ನೀವು ಬೇಗ ದಣಿಯುವುದಿಲ್ಲ.
ಸಂಬಂಧದಲ್ಲಿ ಹಳೆಯ ಸೆಳೆತವೇ ಮಾಯವಾಗಿದ್ಯಾ? ಈ ರೀತಿ ಕೊಂಚ ಮಸಾಲೆ ಸೇರಿಸಿ
ರಕ್ತ ಪರಿಚಲನೆ ಹೆಚ್ಚಳ (Increase of Blood Circulation): ಈರುಳ್ಳಿ ಮತ್ತು ಬೆಳ್ಳುಳ್ಳಿಯಲ್ಲಿ ಸಲ್ಫೈಡ್ ಕಂಡುಬರುತ್ತದೆ. ಕೊಲೆಸ್ಟ್ರಾಲ್ ಮತ್ತು ರಕ್ತದೊತ್ತಡದ ಮಟ್ಟವನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ. ಇದರಿಂದ ರಕ್ತ ಪರಿಚಲನೆ ಸರಿಯಾಗಿ ಆಗುವುದಲ್ಲದೆ ಹೃದಯದ ಆರೋಗ್ಯ ಉತ್ತಮಗೊಳ್ಳುತ್ತದೆ. ಜನನಾಂಗ ಭಾಗಕ್ಕೆ ರಕ್ತ ಸಂಚಾರ ಸುಗಮಗೊಳ್ಳುತ್ತದೆ.
ವೀರ್ಯದ ಸಂಖ್ಯೆಯಲ್ಲಿ ಏರಿಕೆ (Increase in Sperm Count) : ಆಂಟಿಆಕ್ಸಿಡೆಂಟ್‌ಗಳು ಈರುಳ್ಳಿ ಮತ್ತು ಬೆಳ್ಳುಳ್ಳಿಯಲ್ಲಿ ಕಂಡುಬರುತ್ತವೆ. ಇವು ಪುರುಷರಲ್ಲಿ ವೀರ್ಯ ಸಂಖ್ಯೆಯನ್ನು ಹೆಚ್ಚಿಸುತ್ತದೆ. ಮಹಿಳೆಯರು ಸುಲಭವಾಗಿ ಗರ್ಭ ಧರಿಸಲು ಆರೋಗ್ಯಕರ ವೀರ್ಯ ಮುಖ್ಯವಾಗುತ್ತದೆ. ಮಹಿಳೆಯರ ಆರೋಗ್ಯಕರ ಲೈಂಗಿಕ ಜೀವನದಲ್ಲಿ ಪುರುಷರ ಲೈಂಗಿಕ ಜೀವನ ದೊಡ್ಡ ಪಾತ್ರವಹಿಸುತ್ತದೆ.
ಟೆಸ್ಟೋಸ್ಟೆರಾನ್ ಮಟ್ಟವನ್ನು ಹೆಚ್ಚಿಸಿ (Testosterone Level): ಲೈಂಗಿಕ ಜೀವನದಲ್ಲಿ ಟೆಸ್ಟೋಸ್ಟೆರಾನ್ ಕೂಡ ಪ್ರಮುಖ ಪಾತ್ರವಹಿಸುತ್ತದೆ. ಬೆಳ್ಳುಳ್ಳಿ – ಈರುಳ್ಳಿ ಸೇವನೆ ಮಾಡುವುದ್ರಿಂದ ಟೆಸ್ಟೋಸ್ಟೆರಾನ್ ಮಟ್ಟ ಹೆಚ್ಚಾಗುತ್ತದೆ. ಟೆಸ್ಟೋಸ್ಟೆರಾನ್ ಕಾಮಾಸಕ್ತಿಯನ್ನು ಉತ್ತೇಜಿಸುತ್ತದೆ. ಇದು ಸಂತಾನೋತ್ಪತ್ತಿಗೆ ಸಹಾಯ ಮಾಡುವುದಲ್ಲದೆ ದಂಪತಿ ಮಧ್ಯೆ ಸಂಭೋಗ ಸುಖವನ್ನು ಹೆಚ್ಚಿಸುತ್ತದೆ.
ಬೆಳ್ಳುಳ್ಳಿಯು ಹೆಚ್ಚಿನ ಪ್ರಮಾಣದ ಈಸ್ಟ್ರೊಜೆನ್ (Estrogen) ಹೊಂದಿರುತ್ತದೆ. ಅದರ ಸೇವನೆಯು ಮಹಿಳೆಯರ ಲೈಂಗಿಕ ಬಯಕೆಯನ್ನು ಹೆಚ್ಚಿಸುತ್ತದೆ. ಈರುಳ್ಳಿ ಟೆಸ್ಟೋಸ್ಟೆರಾನ್ ಉತ್ಪಾದನೆ ಮತ್ತು ಲೈಂಗಿಕ ಬಯಕೆಯನ್ನು ಹೆಚ್ಚಿಸುತ್ತದೆ. ಬೆಳ್ಳುಳ್ಳಿ ಮತ್ತು ಈರುಳ್ಳಿಯನ್ನು ನಿಯಮಿತವಾಗಿ ಸೇರಿಸುವುದು ಪ್ರಚೋದನೆಯನ್ನು ಹೆಚ್ಚಿಸುತ್ತದೆ.
'ನನಗೊಂದು ಮುತ್ತು ಸಹ ಸಿಗೋಲ್ಲ' 180 ಮಕ್ಕಳ ತಂದೆಯಾದ್ರೂ ಒಂಟಿತನ ತಪ್ಪಿಲ್ಲ ಎಂದ ಯುಕೆಯ ವಿಕ್ಕಿ ಡೋನರ್!
ಬೆಳ್ಳುಳ್ಳಿ – ಈರುಳ್ಳಿ ಸೇವನೆ ಹೇಗೆ?: ಇದ್ರ ಬಗ್ಗೆ ಹೆಚ್ಚಾಗಿ ಹೇಳುವ ಅಗತ್ಯವಿಲ್ಲ. ಬಹುತೇಕ ಎಲ್ಲರೂ ಆಹಾರದಲ್ಲಿ ಬೆಳ್ಳುಳ್ಳಿ ಈರುಳ್ಳಿ ಬಳಸುತ್ತಾರೆ. ಪರಿಣಾಮ ಹೆಚ್ಚಾಗಬೇಕೆಂದ್ರೆ ನೀವು ಬೆಳ್ಳುಳ್ಳಿ ಹಾಗೂ ಈರುಳ್ಳಿಯನ್ನು ನಿಯಮಿತವಾಗಿ ಬಳಸಿ. ಹಸಿ ಬೆಳ್ಳುಳ್ಳಿ – ಈರುಳ್ಳಿಯನ್ನು ಸಲಾಡ್ ರೂಪದಲ್ಲಿ ಸೇವಿಸಿ. ಇವುಗಳನ್ನು ಚಟ್ನಿ ರೂಪದಲ್ಲಿ ಸೇವನೆ ಮಾಡಬಹುದು. ಸೂಪ್ ಗೆ ಅಗತ್ಯವಾಗಿ ಈರುಳ್ಳಿ – ಬೆಳ್ಳುಳ್ಳಿ ಬಳಸಿ. ಬೆಳ್ಳುಳ್ಳಿ ಟೀ ಅಥವಾ ಈರುಳ್ಳಿ ನೀರನ್ನು ಕೂಡ ನೀವು ನೇರವಾಗಿ ಸೇವಿಸಬಹುದು.