'ನನಗೊಂದು ಮುತ್ತು ಸಹ ಸಿಗೋಲ್ಲ' 180 ಮಕ್ಕಳ ತಂದೆಯಾದ್ರೂ ಒಂಟಿತನ ತಪ್ಪಿಲ್ಲ ಎಂದ ಯುಕೆಯ ವಿಕ್ಕಿ ಡೋನರ್!

By Suvarna NewsFirst Published Apr 15, 2024, 11:20 AM IST
Highlights

ಈತ ಯುಕೆಯ ವಿಕ್ಕಿ ಡೋನರ್. ಈಗಾಗಲೇ ಈತನ ವೀರ್ಯದ ಸಂತಾನಗಳು 180 ಸಂಖ್ಯೆ ತಲುಪಿವೆ! ಸಾಕಷ್ಟು ಮಹಿಳೆಯರಿಗೆ ತಾವು ಸಹಜ ಗರ್ಭಧಾರಣೆಗೇ ನೆರವಾಗಿದ್ದರೂ ತಮಗೆ ಒಂದು ಮುತ್ತು, ಚೂರು ಮುದ್ದೂ ಸಿಗೋಲ್ಲ ಎಂಬುದು ಈತನ ಅಳಲು. 

ಬಾಲಿವುಡ್ ಚಿತ್ರ 'ವಿಕ್ಕಿ ಡೋನರ್' ಗೊತ್ತಿರಲೇಬೇಕು. ಇದರಲ್ಲಿ ಪುರುಷನು(ಆಯುಷ್ಮಾನ್ ಖುರ್ಹಾನಾ ನಟಿಸಿದ ಪಾತ್ರ) ತನ್ನ ವೀರ್ಯವನ್ನು ಅಂಡೋತ್ಪತ್ತಿ ಮಾಡುವ ಮಹಿಳೆಗೆ ದಾನ ಮಾಡುತ್ತಾನೆ, ಇದರಿಂದ ಅವರು ಗರ್ಭ ಧರಿಸುತ್ತಾರೆ. ಈ ರೀತಿ ವೀರ್ಯ ದಾನ ಮಾಡುವುದು ಕೂಡಾ ಈಗ ಬೇಡಿಕೆಯ ಕೆಲಸವಾಗಿದೆ. 

ಹೀಗೆ ವೀರ್ಯ ದಾನ ಮಾಡುವುದನ್ನೇ ಉದ್ಯೋಗವಾಗಿಸಿಕೊಂಡು 13 ವರ್ಷಗಳಲ್ಲಿ 180 ಮಕ್ಕಳಿಗೆ ತಂದೆಯಾಗಿದ್ದಾರೆ ಯುಕೆಯ ಜೋ ಡೋನರ್. 

52 ವರ್ಷ ವಯಸ್ಸಿನ ಈ ವೀರ್ಯ ದಾನಿಯು ದಾನಕ್ಕಾಗಿ ನೈಸರ್ಗಿಕ ಗರ್ಭಧಾರಣೆ, ಭಾಗಶಃ ಗರ್ಭಧಾರಣೆ ಮತ್ತು ಕೃತಕ ಗರ್ಭಧಾರಣೆ ವಿಧಾನಗಳನ್ನು ಬಳಸಿದ್ದಾರೆ. ಇವರ ಕೆಲಸವನ್ನು ಹಲವರು ರೋಮಾಂಚನಕಾರಿ ಎಂದು ಭಾವಿಸುತ್ತಾರೆ. ಮತ್ತೆ ಕೆಲವರು ಈತ ಲೈಂಗಿಕ ತೃಪ್ತಿಗಾಗಿ ಹೀಗೆ ಮಾಡುತ್ತಾನೆ ಎಂದು ಕಾಮೆಂಟ್ ಮಾಡುತ್ತಾರಂತೆ. ಇದರಿಂದ ತನಗೆ ನೋವಾಗುತ್ತದೆ ಎಂದಿರುವ ಜೋ, ವಾಸ್ತವ ಬೇರೆಯದೇ ಇದೆ ಎಂದಿದ್ದಾನೆ.


 

ವೀರ್ಯ ದಾನಿಯ ಅಳಲು
ರಕ್ತದಾನವನ್ನು ಪವಿತ್ರವೆಂದು ಭಾವಿಸುವವರು ವೀರ್ಯದಾನವನ್ನು ಹಾಗೇಕೆ ಭಾವಿಸುವುದಿಲ್ಲ ಎಂದು ಪ್ರಶ್ನಿಸುವ ಜೋ, ತಾನು ಈ ಕೆಲಸಕ್ಕಾಗಿ ಪ್ರೀತಿಯ ಜೀವನವನ್ನೂ ತ್ಯಾಗ ಮಾಡಿದ್ದಾಗಿ ಹೇಳಿದ್ದಾರೆ.

ಎಲ್ಲರೂ ಭಾವಿಸುವಂತೆ ಈ ಕೆಲಸದಲ್ಲಿ ತನಗೆ ಯಾವ ರೀತಿಯ 'ತೃಪ್ತಿ', 'ಸಂತೋಷ'ವೂ ಸಿಗುವುದಿಲ್ಲ. ಬದಲಿಗೆ ಇದೊಂದು ಉದ್ಯೋಗವಷ್ಟೇ ಎಂದಿದ್ದಾನೆ. 180 ಮಕ್ಕಳು ತನ್ನ ವೀರ್ಯದಿಂದ ಹುಟ್ಟಿದರೂ ಅವರು ತನ್ನ ಮಕ್ಕಳಲ್ಲ, ಸಹಜ ಗರ್ಭಧಾರಣೆ ಮಾಡಿದರೂ ಅವರು ತನಗೆ ಕನಿಷ್ಠ ಮುತ್ತನ್ನೂ ಕೊಡುವುದಿಲ್ಲ, ಮುದ್ದು ಮಾಡುವುದಂತೂ ದೂರದ ಮಾತೇ, ವಾಸ್ತವದಲ್ಲಿ ತಾನು ತುಂಬಾ ಏಕಾಂಗಿ ಎಂದಿದ್ದಾರೆ. 

ಪುರುಷರಿಗೆ ಲೈಂಗಿಕ ಶಕ್ತಿ ಹೆಚ್ಚಿಸುತ್ತೆ ಕಲ್ಲಂಗಡಿ..
 

ಇನ್ನು ತನ್ನ ಕೆಲಸದ ವಿಧಾನ ಹೇಳುತ್ತಾ, 'ಒಬ್ಬ ಮಹಿಳೆ ಇದ್ದಕ್ಕಿದ್ದಂತೆ ಅಂಡೋತ್ಪತ್ತಿ ಮಾಡಿದರೆ ನೀವು ಯಾವಾಗಲೂ ಸಿದ್ಧರಾಗಿರಬೇಕು - ಪ್ರಣಯಕ್ಕೆ ಸಮಯವಿರುವುದಿಲ್ಲ. ನಾನು ತಿಂಗಳಲ್ಲಿ ಹೆಚ್ಚೆಂದರೆ ಎರಡು ಬಾರಿ ಮಾತ್ರ ಮಹಿಳೆಯನ್ನು ಭೇಟಿಯಾಗುತ್ತೇನೆ. ನೀವು ನಿಜವಾಗಲೂ ಲೈಂಗಿಕ ತೃಪ್ತಿ ಬಯಸುವುದಾದರೆ ಪತ್ನಿ ಇಲ್ಲವೇ ಗರ್ಲ್‌ಫ್ರೆಂಡ್ ಇರಲೇಬೇಕು' ಎನ್ನುತ್ತಾರೆ ಜೋ. 

'ಬ್ರಿಟನ್‌ನ ಅತ್ಯಂತ ಸಮೃದ್ಧ ತಂದೆ' ಎಂಬ ಹೆಸರು ಪಡೆದಿರುವ ಜೋ, ತನ್ನ ಕೆಲಸದ ಬಗ್ಗೆ ಗೌರವಯುತವಾಗಿ ಕಾಮೆಂಟ್ ಮಾಡುವಂತೆ ವಿನಂತಿಸಿಕೊಂಡಿದ್ದಾನೆ.

click me!