ಮೂತ್ರ ವಿಸರ್ಜಿಸಿದ ನಂತರವೂ ರಿಲ್ಯಾಕ್ಸ್ ಫೀಲ್ ಆಗ್ತಿಲ್ವಾ? ಏನಿರಬಹುದು ರೀಸನ್?

By Suvarna News  |  First Published Apr 15, 2024, 12:49 PM IST

ಈಗಷ್ಟೇ ಮೂತ್ರ ವಿಸರ್ಜನೆ ಮಾಡಿ ಬಂದಿದ್ದೇನೆ, ಮತ್ತೆ ಬರ್ತಿದೆ. ಅಷ್ಟಾಗಿ ನೀರು ಕುಡಿದಿಲ್ಲ. ಇದ್ರ ನಿಯಂತ್ರಣ ಕಷ್ಟವಾಗಿ ಹೊರಗಿನ ಓಡಾಟ ಕಡಿಮೆ ಮಾಡಿದ್ದೇನೆ ಎನ್ನುವವರಿಗೆ ಪರಿಹಾರ ಇಲ್ಲಿದೆ.  


ನಮ್ಮ ದೇಹದಲ್ಲಿ ಏನೇ ಸಮಸ್ಯೆ ಇದ್ರೂ ಅದು ಒಂದಲ್ಲ ಒಂದು ರೀತಿಯಲ್ಲಿ ನಮಗೆ ಕಾಣಿಸಿಕೊಳ್ಳುತ್ತದೆ. ಬಹುತೇಕ ಬಾರಿ ನಾವದನ್ನು ನಿರ್ಲಕ್ಷ್ಯ ಮಾಡಿರ್ತೇವೆ. ಯಾವುದೋ ಸಮಸ್ಯೆಗೆ ಇನ್ನಾವುದೋ ಕಾರಣವನ್ನು ಹೇಳಿ ಸಮಾಧಾನಪಟ್ಟುಕೊಂಡಿರ್ತೇವೆ. ಇದ್ರಲ್ಲಿ ಮೂತ್ರ ವಿಸರ್ಜನೆ ವಿಷ್ಯ ಕೂಡ ಸೇರಿದೆ. ಮೂತ್ರ ವಿಸರ್ಜನೆ ಮಾಡಿದ ನಂತ್ರವೂ  ಕೆಲವರಿಗೆ ನೆಮ್ಮದಿ ಇರೋದಿಲ್ಲ. ಮತ್ತೆ ಮೂತ್ರಕೋಶ ತುಂಬಿದ ಅನುಭವವಾಗುತ್ತದೆ. ಇದೇ ಕಾರಣಕ್ಕೆ ಆಗಾಗ ಮೂತ್ರ ವಿಸರ್ಜನೆಗೆ ಹೋಗುವವರಿದ್ದಾರೆ. ನೀರು ಅಥವಾ ದ್ರವ ಆಹಾರ ಸೇವನೆ ಹೆಚ್ಚಾಗಿರುವ ಕಾರಣ ಪದೇ ಪದೇ ಮೂತ್ರ ವಿಸರ್ಜನೆಗೆ ಹೋಗ್ಬೇಕಾಗ್ತಿದೆ ಎಂದು ಅವರು ಭಾವಿಸ್ತಾರೆಯೇ ವಿನಃ ಅದಕ್ಕೆ ಕಾರಣವೇನು ಎಂಬುದನ್ನು ಪತ್ತೆ ಮಾಡಲು ಹೋಗೋದಿಲ್ಲ. ನಾವಿಂದು ನಿಮ್ಮನ್ನು ಕಾಡುವ ಅತಿಯಾದ ಮೂತ್ರವಿಸರ್ಜನೆ ಸಮಸ್ಯೆಗೆ ಕಾರಣವೇನು ಎಂಬುದನ್ನು ಹೇಳ್ತೇವೆ.

ದ್ರವ (Liquid) ಆಹಾರವನ್ನು ಹೆಚ್ಚಿನ ಪ್ರಮಾಣದಲ್ಲಿ ಸೇವನೆ ಮಾಡ್ತಿದ್ದರೆ ಆಗಾಗ ಮೂತ್ರ (Urine) ವಿಸರ್ಜನೆಗೆ ಹೋಗ್ಬೇಕಾಗುತ್ತದೆ. ದಿನಪೂರ್ತಿ ಹೆಚ್ಚು ಉಪ್ಪು ಸೇವನೆ ಮಾಡುವುದ್ರಿಂದ ಕೂಡ ಆಗಾಗ ಮೂತ್ರ ಬರುವುದಿದೆ. ಹಾಗಂತ ಎಲ್ಲ ಸಮಯದಲ್ಲಿ ಇವೇ ಕಾರಣವಲ್ಲ. ದೀರ್ಘಕಾಲದಿಂದ ನೀವು ಈ ಸಮಸ್ಯೆಗೆ ಒಳಗಾಗಿದ್ದರೆ ಅದಕ್ಕೆ ಆಂತರಿಕ ಕಾರಣವಿದೆ. 

Latest Videos

undefined

ಕಿವಿಯಲ್ಲಿ ಕೇಳ್ತಿತ್ತು ತಮಾಷೆಯ ಸದ್ದು; ಪರೀಕ್ಷಿಸಿದಾಗ ಮೆದುಳಲ್ಲಿತ್ತು ಗಡ್ಡೆ!

ಪುರುಷರಲ್ಲಿ ಹೆಚ್ಚಿದ ಪ್ರಾಸ್ಟೇಟ್ ಮಟ್ಟ : ಪುರುಷರಲ್ಲಿ ಪ್ರಾಸ್ಟೇಟ್ ಹಾರ್ಮೋನ್ ಮಟ್ಟದಲ್ಲಿನ ಹೆಚ್ಚಳವು ಮೂತ್ರದ ಹರಿವನ್ನು ನಿಲ್ಲಿಸುವುದು ಮಾತ್ರವಲ್ಲದೆ ಕೆಲವೊಬ್ಬರಲ್ಲಿ ಇದು ಮೂತ್ರ ವಿಸರ್ಜನೆ ಹರಿವನ್ನು ಹೆಚ್ಚು ಮಾಡುತ್ತದೆ. 

ಯುಟಿಐ ಸಮಸ್ಯೆ (Urinary Track Infection): ಮೂತ್ರನಾಳದ ಸೋಂಕು (UTI) ಸಹ ಗಾಳಿಗುಳ್ಳೆಯ ಕಿರಿಕಿರಿ ಮತ್ತು ಊತವನ್ನು ಉಂಟುಮಾಡಬಹುದು. ಇದರಿಂದಾಗಿ ಆಗಾಗ್ಗೆ ಮೂತ್ರ ವಿಸರ್ಜನೆ ಮಾಡುವ ಅನಿವಾರ್ಯತೆ ಎದುರಾಗುತ್ತದೆ. 

ಬ್ಲಾಡರ್ ಓವರ್ ಆಕ್ಟಿವ್ (Bladder Over Active) : ಓವರ್ ಆಕ್ಟಿವ್ ಬ್ಲಾಡರ್ ನಲ್ಲಿ ಕೂಡ ನಿಮಗೆ ಮೂತ್ರವಿಸರ್ಜನೆ ಹೆಚ್ಚಾಗುತ್ತದೆ. ಮೂತ್ರಕೋಶದ ಸ್ನಾಯುಗಳು ಸಂಕುಚಿತಗೊಳ್ಳುತ್ತವೆ. ಒಮ್ಮೆ ಮೂತ್ರ ವಿಸರ್ಜನೆ ಮಾಡಿದ್ರೂ ಮತ್ತೆ ಮತ್ತೆ ಹೋಗಬೇಕೆಂದು ನಿಮಗನ್ನಿಸಲು ಇದು ಕಾರಣವಾಗುತ್ತದೆ.

ಆತಂಕ – ಒತ್ತಡ (Stress and Pressure) : ಇವು ನಮ್ಮ ಮಾನಸಿಕ ಹಾಗೂ ದೈಹಿಕ ಆರೋಗ್ಯದ ಮೇಲೆ ಪರಿಣಾಮ ಬೀರುತ್ತವೆ. ಒತ್ತಡದಿಂದ ದೇಹದ ಚಡಪಡಿಕೆ ಹೆಚ್ಚಾಗುತ್ತದೆ. ಇದ್ರಿಂದ ದೈಹಿಕ ಕಾರ್ಯ ವೇಗ ಪಡೆಯುತ್ತದೆ. ಪದೇ ಪದೇ ಮೂತ್ರ ವಿಸರ್ಜನೆಗೆ ತೆರಳಬೇಕಾಗುತ್ತದೆ. 

ಔಷಧಿ (Medicines) : ನೀವು ದೀರ್ಘಕಾದಿಂದ ಔಷಧಿ ತೆಗೆದುಕೊಳ್ತಿದ್ದರೆ ಅದ್ರ ಅಡ್ಡಪರಿಣಾಮದಲ್ಲಿ ಇದೂ ಒಂದು. ಔಷಧಿಯಿಂದ ಮೂತ್ರಕೋಶ, ಮೂತ್ರ ನಿಯಂತ್ರಣ ಸಾಮರ್ಥ್ಯ ಕಳೆದುಕೊಳ್ಳುತ್ತದೆ. ಮೂತ್ರಕೋಶ ದುರ್ಬಲವಾಗಿದ್ದರೆ ಈ ಸಮಸ್ಯೆ ಸಾಮಾನ್ಯ. 

ಮೂತ್ರಕೋಶದ ಆರೋಗ್ಯ ಕಾಪಾಡಿಕೊಳ್ಳೋದು ಹೇಗೆ? : ಮೂತ್ರಕೋಶ ಆರೋಗ್ಯಕರವಾಗಿದ್ದರೆ ಈ ಸಮಸ್ಯೆಯಿಂದ ಮುಕ್ತಿ ಪಡೆಯಬಹುದು. ಮೂತ್ರಕೋಶದ ಆರೋಗ್ಯ ಕಾಪಾಡಿಕೊಳ್ಳಲು ನೀವು ಕೆಲ ವಿಧಾನಗಳನ್ನು ಪಾಲಿಸಬೇಕು. 

ಮೂತ್ರಕೋಶ ನಿಯಂತ್ರಣ ಕಳೆದುಕೊಳ್ಳಲು ಧೂಮಪಾನ ಒಂದು ಕಾರಣ. ನೀವು ಧೂಮಪಾನದಿಂದ ದೂರವಿದ್ದಲ್ಲಿ ಈ ಸಮಸ್ಯೆಯನ್ನು ಬಹುಮಟ್ಟಿಗೆ ಕಡಿಮೆ ಮಾಡಬಹುದು.

ಫೇರ್‌ನೆಸ್ ಕ್ರೀಂ ಅತಿಯಾಗಿ ಬಳಸ್ತೀರಾ? ಕಿಡ್ನಿ ಸಮಸ್ಯೆ ಬರಬಹುದು ಎಚ್ಚರ!

ಕಾರಣದಲ್ಲಿ ಹೇಳಿರುವಂತೆ ಒತ್ತಡದಿಂದ ಬಳಲುತ್ತಿರುವ ವ್ಯಕ್ತಿ ಪದೇ ಪದೇ ಶೌಚಾಲಯಕ್ಕೆ ತೆರಳುತ್ತಾನೆ. ನೀವು ಮೊದಲು ಒತ್ತಡದಿಂದ ಹೊರಗೆ ಬಂದ್ರೆ ನಿಮ್ಮ ಈ ಸಮಸ್ಯೆ ತಾನಾಗಿಯೇ ಕಡಿಮೆ ಆಗುತ್ತದೆ. ದಿನಚರಿಯಲ್ಲಿ ಬದಲಾವಣೆ ಬಹಳ ಮುಖ್ಯವಾಗುತ್ತದೆ. ನಿತ್ಯ ವ್ಯಾಯಾಮ ಮಾಡಬೇಕು. ಈ ಸಮಸ್ಯೆ ಇರುವವರು ಪೆಲ್ವಿಕ್ ಗೆ ಸಂಬಂಧಿಸಿದ ಯೋಗ, ವ್ಯಾಯಾಮ ಮಾಡಬೇಕು. ಆಹಾರದಲ್ಲಿ ನಿಯಂತ್ರಣ ಅಗತ್ಯ. ಉಪ್ಪಿನ ಸೇವನೆ ಕಡಿಮೆ ಮಾಡಬೇಕು. ಸಕ್ಕರೆಯಿಂದ ದೂರ ಇರಬೇಕು. ಟೀ – ಕಾಫಿಯಂತಹ ಕೆಫೀನ್ ಆಹಾರ ಕೂಡ ಸೇವನೆ ಮಾಡಬೇಡಿ. ಪರಿಸ್ಥಿತಿ ಹದಗೆಡುತ್ತಿದ್ದೆ ಎನ್ನಿಸಿದಲ್ಲಿ ನೀವು ವೈದ್ಯರನ್ನು ಭೇಟಿಯಾಗಿ.  

click me!