ಚಿಕಿತ್ಸೆಗಾಗಿ ಬಾಲಕಿ ಮೆದುಳಿನ ಒಂದು ಭಾಗ ಸ್ವಿಚ್ ಆಫ್ ಮಾಡಿದ ವೈದ್ಯರು!

By Suvarna News  |  First Published Oct 12, 2023, 12:59 PM IST

ಜನರನ್ನು ಚಿತ್ರವಿಚಿತ್ರ ಖಾಯಿಲೆಗಳು ಕಾಡ್ತಿವೆ. ಆದ್ರೆ ವೈದ್ಯಕೀಯ ಲೋಕ ಅದನ್ನು ಪತ್ತೆ ಮಾಡೋದ್ರಲ್ಲಿ ಹಿಂದೆ ಬಿದ್ದಿಲ್ಲ. ಕೆಲ ಅಪರೂಪದ ಕಾಯಿಲೆಗಳಿಗೂ ವೈದ್ಯರು ಚಿಕಿತ್ಸೆ ಪತ್ತೆ ಮಾಡಿದ್ದಾರೆ. 6 ವರ್ಷದ ಬಾಲಕಿಗೆ 10 ಗಂಟೆ ಆಪರೇಷನ್ ನಡೆಸಿ ಯಶಸ್ವಿಯಾಗಿದ್ದಾರೆ.
 


ಉರಿಯೂತ ಉಂಟುಮಾಡುವ ಅಪರೂಪದ ಕಾಯಿಲೆಗೆ ಚಿಕಿತ್ಸೆ ನೀಡಲು ಯುಎಸ್ ವೈದ್ಯರು ಆರು ವರ್ಷದ ಬಾಲಕಿಯ ಮೆದುಳಿನ ಭಾಗವನ್ನು ಬಂದ್ ಮಾಡಿದ್ದಾರೆ. ವೈದ್ಯರ ಪ್ರಕಾರ, ಬ್ರಿಯಾನಾ ಬೋಡ್ಲಿ,  ರಾಸ್ಮುಸ್ಸೆನ್ ಎನ್ಸೆಫಾಲಿಟಿಸ್ನಿಂದ ಬಳಲುತ್ತಿದ್ದಳು. ರಾಸ್ಮುಸ್ಸೆನ್ ಎನ್ಸೆಫಾಲಿಟಿಸ್ ಒಂದು ಉರಿಯೂತದ ನರವೈಜ್ಞಾನಿಕ ಕಾಯಿಲೆ.   

ಬ್ರಿಯಾನಾಗೆ ಕಳೆದ ವರ್ಷರೋಗದ ಲಕ್ಷಣ ಕಾಣಿಸಿಕೊಳ್ಳಲು ಶುರುವಾಗಿತ್ತು. ಬ್ರಿಯಾನ್ ಗೆ ಕಲಿಕೆಯಲ್ಲಿ ತೊಂದರೆ ಕಾಣಿಸಿಕೊಳ್ಳಲು ಶುರುವಾಯಿತು. ಅಲ್ಲದೆ ಪಾರ್ಶ್ವವಾಯು (Paralysis) ವಿಗೆ ಬ್ರಿಯಾನಾ ಗುರಿಯಾದಳು.  ಬ್ರಿಯಾನಾ  ಕಾಲು ಎಲ್ಲಾ ಸಮಯದಲ್ಲೂ ಬಾಗುತ್ತಿತ್ತು. ಅವಳು ನಡೆಯಲು ಸಮಸ್ಯೆ ಎದುರಿಸುತ್ತಿದ್ದಳು ಎಂದು ಬ್ರಿಯಾನಾ ತಾಯಿ ಹೇಳಿದ್ದಾಳೆ. 

Tap to resize

Latest Videos

ರೋಗಗ್ರಸ್ತವಾಗುವಿಕೆ  ಮತ್ತು ಊತ  ಬ್ರಿಯಾನಾಳ ಮೆದುಳಿ (Brain) ನ ಒಂದು ಬದಿಯಲ್ಲಿ ಕುಗ್ಗುವಂತೆ ಮಾಡಿದೆ ಎಂದು ವೈದ್ಯರು ಹೇಳುತ್ತಾರೆ. ಈ ವರ್ಷದ ಆರಂಭದಿಂದಲೂ ಬ್ರಿಯಾನಾಗೆ ಚಿಕಿತ್ಸೆ ನೀಡಲಾಗ್ತಿದೆ. ಆಂಟಿ ಸೆಜರ್ ಔಷಧಿ (Medicine) ಮತ್ತು ಸ್ಟೀರಾಯ್ಡ್ ಗಳನ್ನು ಬ್ರಿಯಾನಾಗೆ ನೀಡಲಾಗ್ತಿದೆ.  ಮೆದುಳಿನ ಒಂದು ಭಾಗದ ಸಂಪರ್ಕವನ್ನು ಕಡಿತಗೊಳಿಸುವುದು ರೋಗವನ್ನು ಸಂಪೂರ್ಣವಾಗಿ ನಿಲ್ಲಿಸಲು ಮತ್ತು ಮೂಲಭೂತವಾಗಿ ಅದನ್ನು ಗುಣಪಡಿಸಲು ಸಹಾಯಕವಾಗುತ್ತದೆ ಎಂದು ಲೋಮಾ ಲಿಂಡಾ ವಿಶ್ವವಿದ್ಯಾಲಯದ  ಡಾ. ಆರನ್ ರಾಬಿಸನ್ ಹೇಳಿದ್ದಾರೆ. 

ತೂಕ ಇಳಿಯುತ್ತೆ, ಕೊಬ್ಬು ಕರಗುತ್ತೆ ಅಂತ ಏನೋನೇ ತಿನ್ನೋ ಮುನ್ನ ಚಾಣಕ್ಯ ಹೇಳೋದ ಕೇಳಿ!

ಸಿಲ್ವಿಯನ್ ಫಿಶರ್ ಎಂದು ಕರೆಯಲ್ಪಡುವ ಮೆದುಳಿನ ನೈಸರ್ಗಿಕ ತೆರೆಯುವಿಕೆಯ ಮೂಲಕ ಮೆದುಳಿನ ಕಾರ್ಯನಿರ್ವಹಿಸದ ಭಾಗವನ್ನು ಆಫ್ ಮಾಡಬಹುದು ಎಂದು ಡಾ. ರಾಬಿನ್ಸನ್ ಹೇಳಿದ್ದಾರೆ. ಇದು ಥಾಲಮಸ್ ಪ್ರದೇಶದಿಂದ ಬಿಳಿ ದ್ರವ್ಯವನ್ನು ಕತ್ತರಿಸಲು ಸಹಾಯ ಮಾಡುತ್ತದೆ. ಬ್ರಿಯಾನಾಗೆ 10 ಗಂಟೆಗಳ ಶಸ್ತ್ರಚಿಕಿತ್ಸೆ ನಡೆದಿದೆ. ಕೆಲವೊಂದು ಸಮಸ್ಯೆಗಳ ಹೊರತಾಗಿಯೂ ಬ್ರಿಯಾನಾ ಮತ್ತೆ ಮೊದಲ ಸ್ಥಿತಿಗೆ ಮರಳುತ್ತಾಳೆ ಎಂದು ವೈದ್ಯರು ಹೇಳಿದ್ದಾರೆ. 

ವೀಡಿಯೋ ವೈರಲ್ ಆಗ್ಬೇಕು ಅಂತ ಸೋಂಕಿರೋ ಮೀನು ತಿಂದವನ ಪಾಡು ಹೀಗಾಗಬೇಕಾ?

ರಾಸ್ಮುಸ್ಸೆನ್ ಎನ್ಸೆಫಾಲಿಟಿಸ್ ಅಂದ್ರೇನು? : ರಾಸ್ಮುಸ್ಸೆನ್ ಎನ್ಸೆಫಾಲಿಟಿಸ್ ಅತ್ಯಂತ ಅಪರೂಪದ ಖಾಯಿಲೆ. ಮೆದುಳಿನ ಅರ್ಧದಷ್ಟು ಭಾಗವನ್ನು ಹಾಳು ಮಾಡಬಲ್ಲ ಉರಿಯೂತವನ್ನು ಇದು ಒಳಗೊಂಡಿರುತ್ತದೆ. ಇದು ಪ್ರಗತಿಶೀಲ ಕಾಯಿಲೆಯಾಗಿದೆ ಮತ್ತು ಶಾಶ್ವತ ಹಾನಿಯನ್ನು ಉಂಟುಮಾಡುತ್ತದೆ. ಈ ರೋಗವು ಪೀಡಿತ ಮೆದುಳಿನ ಗೋಳಾರ್ಧದಲ್ಲಿ ಕಾರ್ಯವನ್ನು ಕಳೆದುಕೊಳ್ಳುತ್ತದೆ. ನಿಮ್ಮ ದೇಹದ ಒಂದು ಭಾಗದ ದೌರ್ಬಲ್ಯವನ್ನು ಹೆಚ್ಚಿಸುತ್ತದೆ ಮತ್ತು ಮಾನಸಿಕ ಕುಸಿತವನ್ನು ಉಂಟುಮಾಡುತ್ತದೆ.  ರಾಸ್ಮುಸ್ಸೆನ್ ಎನ್ಸೆಫಾಲಿಟಿಸ್ ಪ್ರತಿ 10 ಮಿಲಿಯನ್ ಜನರಲ್ಲಿ 2 ಜನರ ಮೇಲೆ ಪರಿಣಾಮ ಬೀರುತ್ತದೆ. ಸಾಮಾನ್ಯವಾಗಿ 2-10 ವರ್ಷ ವಯಸ್ಸಿನ ಮಕ್ಕಳಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತದೆ. ಹಾಗಂತ  ಹದಿಹರೆಯದವರು ಮತ್ತು ವಯಸ್ಕರನ್ನೂ ಅನೇಕ ಬಾರಿ ಕಾಡುವುದಿದೆ. 

ಇದು ಜ್ವರ (Fever) ಅಥವಾ ತಲೆನೋವಿನಂತಹ (Headache) ಸೌಮ್ಯವಾದ ಜ್ವರ ತರಹದ ಲಕ್ಷಣಗಳನ್ನು ಹೊಂದಿದೆ. ಯಾವುದೇ ರೋಗಲಕ್ಷಣಗಳಿಲ್ಲದೆ ಇದು ಕಾಡಬಹುದು. ಇಲ್ಲಿ ಜ್ವರ ತರಹದ ಲಕ್ಷಣಗಳು ಕೆಲವೊಮ್ಮೆ ಹೆಚ್ಚು ತೀವ್ರವಾಗಿರುತ್ತದೆ. ಗೊಂದಲ, ಸೆಳೆತ, ದೃಷ್ಟಿ ಅಥವಾ ಶ್ರವಣದಂತಹ ಇಂದ್ರಿಯಗಳ ಸಮಸ್ಯೆ, ಕುತ್ತಿಗೆ ನೋವು ಮತ್ತು  ಕೀಲುಗಳು ದೌರ್ಬಲ್ಯ, ಆಯಾಸ ಎನ್ಸೆಫಾಲಿಟಿಸ್ ಲಕ್ಷಣವಾಗಿದೆ.  ಶಿಶುವಿನಲ್ಲಿ ಹಾಗೂ ಅತಿ ಚಿಕ್ಕ ವಯಸ್ಸಿನ ಮಕ್ಕಳಲ್ಲಿ ನೆತ್ತಿಯ ಮೃದುವಾದ ಪ್ರದೇಶಗಳಲ್ಲಿ ಉಬ್ಬು ಕಾಣಿಸಿಕೊಳ್ಳುತ್ತದೆ. ವಾಂತಿ ಮತ್ತು ವಾಕರಿಕೆ ಅವರನ್ನು ಕಾಡುತ್ತದೆ.  

ಸ್ವಯಂ ನಿರೋಧಕ ಉರಿಯೂತ, ವೈರಲ್ (Viral) ಮತ್ತು ಬ್ಯಾಕ್ಟೀರಿಯಾದ ಸೋಂಕುಗಳು (Bacterial Infection) ಮತ್ತು ಸಾಂಕ್ರಾಮಿಕವಲ್ಲದ ಉರಿಯೂತದ ಪರಿಸ್ಥಿತಿಗಳಿಂದ ಎನ್ಸೆಫಾಲಿಟಿಸ್ ಉಂಟಾಗಬಹುದು. ಎನ್ಸೆಫಾಲಿಟಿಸ್ ಎರಡು ವಿಧಗಳಿವೆ. ಒಂದು ತೀವ್ರವಾಗಿದ್ದರೆ ಮತ್ತೊಂದು ದೀರ್ಘಕಾಲ ಕಾಡುತ್ತದೆ. ಎನ್ಸೆಫಾಲಿಟಿಸ್ ನ  ಗಂಭೀರ ರೋಗಲಕ್ಷಣಗಳಿಂದ ನೀವು ಬಳಲುತ್ತಿದ್ದರೆ ತಕ್ಷಣವೇ ವೈದ್ಯರನ್ನು ಭೇಟಿಯಾಗಿ. ತೀವ್ರವಾದ ತಲೆನೋವು, ಜ್ವರ, ಅಥವಾ ಪ್ರಜ್ಞೆಯಲ್ಲಿನ ಬದಲಾವಣೆ ಕಾಣಿಸಿಕೊಂಡಾಗ ತಕ್ಷಣ ಚಿಕಿತ್ಸೆಪಡೆಯುವುದು ಮುಖ್ಯ.
 

click me!