Healthy Sleep: ರಾತ್ರಿ ಒಂದೇ ಬೆಡ್ ಶೇರ್ ಮಾಡ್ತೀರಾ? ಹುಷಾರು!

By Suvarna News  |  First Published Jun 12, 2023, 4:19 PM IST

ನನ್ನ ಹಾಸಿಗೆಯಲ್ಲಿ ಇನ್ನೊಬ್ಬರು ಬಂದು ಮಲಗಿದೆ ನಿದ್ರೆ ಬರಲ್ಲ ಅಂತಾ ಕೆಲವರು ಹೇಳ್ತಾರೆ. ತಜ್ಞರು ಕೂಡ ಇದಕ್ಕೆ ಧ್ವನಿಗೂಡಿಸಿದ್ದಾರೆ. ಒಂದೇ ಹಾಸಿಗೆಯನ್ನು ನೀವು ಇಬ್ಬರು ಅಥವಾ ಮೂರ್ನಾಲ್ಕು ಮಂದಿ ಹಂಚಿಕೊಂಡ್ರೆ ಏನಾಗುತ್ತೆ ಎಂಬುದನ್ನು ಅವರು ತಿಳಿಸಿದ್ದಾರೆ. 
 


ಉತ್ತಮ ಆಹಾರ, ಉತ್ತಮ ಆರೋಗ್ಯದಂತೆ ಉತ್ತಮ ನಿದ್ರೆ ಬಹಳ ಮುಖ್ಯ. ದೇಹ ನೀರು, ಆಹಾರ ಬಯಸಿದಂತೆ ನಿದ್ರೆಯನ್ನು ಬೇಡುತ್ತದೆ. ದಿನಕ್ಕೆ ಕನಿಷ್ಠ 6 ಗಂಟೆ ನಿದ್ರೆ ಮಾಡಿದ್ರೆ ಮನುಷ್ಯ ಆರೋಗ್ಯವಾಗಿರ್ತಾನೆ. ನಾನು ನಿತ್ಯ 7 ಗಂಟೆ ನಿದ್ರೆ ಮಾಡ್ತೇನೆ ಅಂದ್ರೆ ಸಾಲೋದಿಲ್ಲ. ನೀವು 7 ಗಂಟೆ ಹೇಗೆ ನಿದ್ರೆ ಮಾಡುತ್ತೀರಿ ಎಂಬುದು ಇಲ್ಲಿ ಮುಖ್ಯವಾಗುತ್ತದೆ. ಕೆಲವರಿಗೆ ಏನೇ ಮಾಡಿದ್ರೂ ಆಳವಾಗಿ ನಿದ್ರೆ ಮಾಡಲು ಸಾಧ್ಯವಾಗೋದಿಲ್ಲ. ಅನೇಕ ಡಿಸ್ಟರ್ಬ್ ಅವರ ನಿದ್ರೆ ಹಾಳು ಮಾಡುತ್ತದೆ. 

ಸಾಮಾನ್ಯವಾಗಿ ಜನರು ನಿದ್ರೆ (Sleep)  ಮಾಡುವಾಗ ಬೆಡ್ ಹಂಚಿಕೊಳ್ತಾರೆ. ದಂಪತಿ ಒಂದೇ ಬೆಡ್ (Bed) ನಲ್ಲಿ ಮಲಗೋದು ಸಾಮಾನ್ಯ. ದಂಪತಿ ಮಾತ್ರವಲ್ಲ ಮಕ್ಕಳು ಕೂಡ ಒಂದೇ ಬೆಡ್ ನಲ್ಲಿ ಮಲಗುವುದಿದೆ. ಸಣ್ಣ ಬೆಡ್ ನಲ್ಲಿ ಪತಿ – ಪತ್ನಿ ಜೊತೆ ಮಕ್ಕಳು ಮಲಗಿದ್ರೆ ದೇಹವನ್ನು ಸ್ವಲ್ಪ ಅಲುಗಾಡಿಸಲೂ ಜಾಗವಿರೋದಿಲ್ಲ. ಒಂದೇ ಭಂಗಿಯಲ್ಲಿ ರಾತ್ರಿಪೂರ್ತಿ ಎಲ್ಲರಿಗೂ ನಿದ್ರೆ ಮಾಡಲು ಸಾಧ್ಯವಿಲ್ಲ. ಇನ್ನು ಕೆಲ ಮಕ್ಕಳು ಆಗಾಗ ಏಳ್ತಿರುತ್ತಾರೆ. ಮೈ ಮೇಲೆ ಕಾಲು,ಕೈ ಬೀಳ್ತಿರುತ್ತದೆ. ಹೊದಿಕೆ ಸರಿಸಿಕೊಳ್ಳುವ ಕಾರಣ, ಪಾಲಕರು ಅವರಿಗೆ ಹೊದಿಕೆ ಹಾಕುವ ಮತ್ತೊಂದು ಜವಾಬ್ದಾರಿ ಹೊತ್ತುಕೊಂಡಿರುತ್ತಾರೆ. ಇದ್ರಿಂದಾಗಿ ರಾತ್ರಿ ಸರಿಯಾಗಿ ನಿದ್ರೆ ಮಾಡಲು ಸಾಧ್ಯವಾಗೋದಿಲ್ಲ. ನಿದ್ರೆ ಸರಿಗಾಗಿ ಬಂದಿಲ್ಲವೆಂದ್ರೆ ಮರುದಿನದ ಇಡೀ ಕೆಲಸ ಹಾಳಾಗಿರುತ್ತದೆ. ಮೂಡ್ ಕೆಟ್ಟಿರುತ್ತದೆ. ಕುಳಿತಲ್ಲಿ, ನಿಂತಲ್ಲಿ ನಿದ್ರೆ ಗುಂಗು ಜನರನ್ನು ಕಾಡುತ್ತದೆ. ನೀವೂ ಮನೆಯಲ್ಲಿ ಮಕ್ಕಳು (Children), ಸಂಗಾತಿ ಜೊತೆ ಬೆಡ್ ಹಂಚಿಕೊಳ್ತಿದ್ದರೆ ಇಂದೇ ಬಿಟ್ಬಿಡಿ. ಇದು ನಿದ್ರೆಯ ಮೇಲೆ ಕೆಟ್ಟ ಪರಿಣಾಮ ಬೀರುತ್ತೆ ಎನ್ನುತ್ತಾರೆ ತಜ್ಞರು (Experts). ಅದು ಹೇಗೆ ಎಂಬುದನ್ನು ನಾವಿಂದು ವಿವರಿಸ್ತೇವೆ.

Latest Videos

undefined

ಶಿಶುಗಳನ್ನು ಪಕ್ಕದಲ್ಲಿ ಮಲಗಿಸಿಕೊಳ್ಳದಿರಲು ಸಾಧ್ಯವಿಲ್ಲ. ಆದ್ರೆ ಸ್ವಲ್ಪ ದೊಡ್ಡವರಾದ ಮಕ್ಕಳಿಗೆ ಬೇರೆ ಬೆಡ್ ಸಿದ್ಧಮಾಡಿ. ನಿಮ್ಮ ಕೋಣೆಯಲ್ಲಾದ್ರೂ ಅವರನ್ನು ನಿಮ್ಮ ಬೆಡ್ ನಿಂದ ಪ್ರತ್ಯೇಕವಾಗಿಡಿ. ಇನ್ನು, ಸಂಗಾತಿ ರಾತ್ರಿ ನಿದ್ರೆಯಲ್ಲಿ ಗೊರಕೆ ಹೊಡೆಯುತ್ತಿದ್ದರೆ ಅಥವಾ ನಿದ್ರೆ ವೇಳೆ ಹಾಸಿಗೆಯಲ್ಲಿ ಹೊರಳಾಡಿದ್ರೆ, ಪದೇ ಪದೇ ಮಗ್ಗಲು ಬದಲಿಸಿದ್ರೆ ನೀವು ಅವರಿಂದ ದೂರ ಮಲಗುವುದು ಉತ್ತಮ. ಇದು ನಿದ್ರೆಗೆ ಭಂಗ ತರುವುದಲ್ಲದೆ ನಿಮ್ಮ ಆರೋಗ್ಯವನ್ನು ಹಾನಿಗೊಳಿಸುತ್ತದೆ. 

ನಿದ್ರೆಯಲ್ಲಿ ಮಾತನಾಡೋದಕ್ಕೂ ಆಧ್ಯಾತ್ಮಿಕತೆಗೂ ಏನು ಸಂಬಂಧ?

ಸಂಗಾತಿ ಜೊತೆ ಹಾಸಿಗೆ ಹಂಚಿಕೊಳ್ಳುವುದ್ರಿಂದ ಆಗುವ ನಷ್ಟ : 

ಆಳವಾದ ನಿದ್ರೆ ಬರಲು ಸಾಧ್ಯವಿಲ್ಲ : ಸಂಗಾತಿ ನಿದ್ರೆಯಲ್ಲಿ ಹೊರಳಾಡುತ್ತಿದ್ದರೆ ಅದು ನಿಮ್ಮ ಗಾಢ ನಿದ್ರೆಗೆ ಭಂಗ ತರುತ್ತದೆ. ರ್ಯಾಪಿಡ್ ಐ ಮೂಮೆಂಟ್ ಸ್ಲೀಪ್ ಗೆ ಹೋಗಲು ನಿಮಗೆ ಸಾಧ್ಯವಾಗೋದಿಲ್ಲ. ರ್ಯಾಪಿಡ್ ಐ ಮೂಮೆಂಟ್ ಸ್ಲೀಪ್ ಆಳವಾದ ನಿದ್ರೆಯ ಒಂದು ಭಾಗವಾಗಿದೆ. ಇದಕ್ಕೆ ಸಂಗಾತಿ ವರ್ತನೆ ಅಡ್ಡಿಯಾದ್ರೆ ನಿಮ್ಮ ಆರೋಗ್ಯದಲ್ಲಿ ಸಮಸ್ಯೆ ಕಾಣಿಸಿಕೊಳ್ಳಬಹುದು. ಪ್ರತಿಯೊಬ್ಬ ವ್ಯಕ್ತಿಯ ನಿದ್ರೆ ಸೈಕಲ್ ಬೇರೆಯಾಗಿರುತ್ತದೆ. ಆದ್ರೆ ಪ್ರತಿಯೊಬ್ಬರಿಗೂ ನಿದ್ರೆ ಅತ್ಯಗತ್ಯ ಎನ್ನುತ್ತಾರೆ ಸುಂದರ್‌ಲ್ಯಾಂಡ್ ವಿಶ್ವವಿದ್ಯಾನಿಲಯದ ಶಸ್ತ್ರಚಿಕಿತ್ಸಕ ಮತ್ತು ಉಪನ್ಯಾಸಕ ಡಾ.ಕರಣ್. 

ಊಟ ಮಾಡಿದ ನಂತರ ಈ ತಪ್ಪುಗಳನ್ನು ಮಾಡಲೇಬೇಡಿ!

ದೇಹದ ಉಷ್ಣತೆಯಲ್ಲಿ ಹೆಚ್ಚಳ : ಆರೋಗ್ಯಕ ನಿದ್ರೆಗೆ ನಿಮ್ಮ ದೇಹದ ತಾಪಮಾನ ಕೂಡ ಮುಖ್ಯವಾಗುತ್ತದೆ. ನಿಮ್ಮ ದೇಹದ ತಾಪಮಾನ ಸರಿಯಾಗಿದ್ದರೆ ಒಳ್ಳೆ ನಿದ್ರೆ ಬರಲು ಸಾಧ್ಯ. ಅದು ಹೆಚ್ಚಾಗಿದ್ದರೆ ಅಥವಾ ಕಡಿಮೆಯಾದ್ರೆ ತೊಂದರೆಯಾಗುತ್ತದೆ. ನೀವು ಇನ್ನೊಬ್ಬರ ಜೊತೆ ಹಾಸಿಗೆ ಹಂಚಿಕೊಂಡಾಗ ನಿಮ್ಮ ದೇಹದ ಉಷ್ಣತೆ ಹೆಚ್ಚಾಗುವ ಸಾಧ್ಯತೆಯಿರುತ್ತದೆ. ದೇಹದ ಉಷ್ಣತೆಯಿಂದ ಮೈ ಬಿಸಿಯಾಗುತ್ತದೆ. ಅಲ್ಲದೆ ಸಮಯಕ್ಕಿಂತ ಮೊದಲೇ ನಿಮಗೆ ಎಚ್ಚರವಾಗುತ್ತದೆ.
 

click me!