ಬಿಸಿ ನೀರು ಆರೋಗ್ಯಕ್ಕೆ ಒಳ್ಳೆಯದು ಎನ್ನುವ ಕಾರಣಕ್ಕೆ ಅನೇಕರು ಪ್ರತಿ ದಿನ ಇದರ ಸೇವನೆ ಮಾಡ್ತಾರೆ. ಬಿಸಿ ನೀರು ಆರೋಗ್ಯಕ್ಕೆ ಎಷ್ಟು ಒಳ್ಳೆಯದೋ ಅಷ್ಟೇ ಅಪಾಯಕಾರಿ ಕೂಡ ಹೌದು.
ಬಿಸಿ ನೀರು (hot water) ಆರೋಗ್ಯಕ್ಕೆ ಒಳ್ಳೆಯದು ಅಂತ ನಂಬಲಾಗಿದೆ. ಇದು ಜೀರ್ಣಕ್ರಿಯೆ (digestion) ಸುಧಾರಿಸಿ, ತೂಕ ಇಳಿಕೆಗೆ ನೆರವಾಗುತ್ತದೆ ಎಂದು ಜನರು ನಂಬಿದ್ದಾರೆ. ಆದ್ರೆ ಅತಿಯಾದ ಬಿಸಿ ನೀರು ಸೇವನೆ ಒಳ್ಳೆಯದಲ್ಲ. ಅದು ನಿಮ್ಮ ಪ್ರಾಣವನ್ನು ತೆಗೆಯುತ್ತದೆ. ಕೇರಳದಲ್ಲಿ ನಡೆದ ಘಟನೆ ನಂತ್ರ ಬಿಸಿ ನೀರಿನ ದುಷ್ಪರಿಣಾಮಗಳ ಬಗ್ಗೆ ಚರ್ಚೆ ನಡೆಯುತ್ತಿದೆ. ಕೇರಳದ 18 ವರ್ಷದ ಹುಡುಗಿ, ಡಯಟ್ ಹೆಸರಿನಲ್ಲಿ ಬಿಸಿ ನೀರು ಸೇವನೆ ಮಾಡಿ ಪ್ರಾಣ ಬಿಟ್ಟಿದ್ದಾಳೆ. ಇದಕ್ಕೆ ಬಿಸಿ ನೀರು ಮಾತ್ರ ಕಾರಣವಲ್ಲ. ಆಕೆ ಘನ ಆಹಾರ ಸೇವನೆ ಮಾಡದೆ, ಬರೀ ದ್ರವ ಆಹಾರ ಸೇವನೆ ಮಾಡುತ್ತಿದ್ದಳು. ದೇಹದಲ್ಲಿ ಸೋಡಿಯಂ ಮತ್ತು ಸಕ್ಕರೆ ಪ್ರಮಾಣ ಕಡಿಮೆಯಾಗಿ ಆಕೆ ಸಾವನ್ನಪ್ಪಿದ್ದಾಳೆಯಾದ್ರೂ ಅತಿ ಹೆಚ್ಚು ಬಿಸಿ ನೀರು ಒಳ್ಳೆಯದಲ್ಲ. ಬೆಳಿಗ್ಗೆ ಎದ್ದ ತಕ್ಷಣ ಬಿಸಿ ಬಿಸಿ ನೀರಿನಿಂದ ಶುರುವಾಗುವ ದಿನಚರಿ, ರಾತ್ರಿ ಮಲಗುವವರೆಗೂ ಮುಂದುವರೆದ್ರೆ ಏನೆಲ್ಲ ಸಮಸ್ಯೆ ಕಾಡುತ್ತದೆ ಎಂಬ ಮಾಹಿತಿ ಇಲ್ಲಿದೆ.
ಬಿಸಿ ನೀರು ಸೇವನೆಯಿಂದ ಆಗುವ ಅನಾನುಕೂಲಗಳು : ನಿದ್ರಾಹೀನತೆ (Insomnia) : ಅತಿಯಾಗಿ ಬಿಸಿ ನೀರು ಕುಡಿಯುವುದು ನಿಮ್ಮ ನಿದ್ರೆಯ ಮೇಲೆ ಪರಿಣಾಮ ಬೀರುತ್ತದೆ. ಇಡೀ ದಿನ ಬಿಸಿ ನೀರು ಸೇವನೆ ಮಾಡುವವರು ನಿದ್ರಾಹೀನತೆಯಿಂದ ಬಳಲುತ್ತಾರೆ.
ಗರ್ಭಿಣಿಯರು ಮಿಕ್ಸರ್ ಗ್ರೈಂಡರ್ ಬಳಸೋದು ಎಷ್ಟು ಸೇಫ್?
ಜೀರ್ಣಕ್ರಿಯೆ ಸಮಸ್ಯೆ : ಬಿಸಿ ನೀರು ನಿಮ್ಮ ಜೀರ್ಣಕ್ರಿಯೆ ಮೇಲೂ ಪರಿಣಾಮ ಬೀರುತ್ತದೆ. ಬಿಸಿ ನೀರು ನಿಮ್ಮ ಜೀರ್ಣಾಂಗ ವ್ಯವಸ್ಥೆಯನ್ನು ದುರ್ಬಲಗೊಳಿಸುತ್ತದೆ. ಹೊಟ್ಟೆಗೆ ಸಂಬಂಧಿಸಿದ ಸಮಸ್ಯೆ ನಿಮ್ಮನ್ನು ಕಾಡುತ್ತದೆ.
ನಿರ್ಜಲೀಕರಣ (Dehydration) : ನೀರು ನಿಮ್ಮ ದೇಹವನ್ನು ಹೈಡ್ರೇಟ್ ಮಾಡುತ್ತದೆ. ಆದ್ರೆ ದಿನವಿಡೀ ಹೆಚ್ಚಿನ ಪ್ರಮಾಣದಲ್ಲಿ ಬಿಸಿ ನೀರು ಕುಡಿದ್ರೆ ಖನಿಜಗಳ ಕೊರತೆಯಾಗುತ್ತದೆ. ತುಂಬಾ ಬಿಸಿನೀರು ಕುಡಿಯುವುದರಿಂದ ದೇಹದ ಉಷ್ಣತೆ ಹೆಚ್ಚಾಗುತ್ತದೆ. ಇದರಿಂದ ಹೆಚ್ಚು ಬೆವರು ಕಾಣಿಸಿಕೊಳ್ಳುತ್ತದೆ. ಬೆವರು ನಿರ್ಜಲೀಕರಣ ಸಮಸ್ಯೆಗೆ ಕಾರಣವಾಗುತ್ತದೆ.
ಯಕ್ತೃತ್ತು – ಮೂತ್ರಪಿಂಡಕ್ಕೆ ಹಾನಿ : ಹೆಚ್ಚು ಬಿಸಿನೀರು ಕುಡಿಯುವುದರಿಂದ ಮೂತ್ರಪಿಂಡ, ಯಕೃತ್ತು ಮುಂತಾದ ಪ್ರಮುಖ ಅಂಗಗಳಿಗೆ ಹಾನಿಯಾಗುತ್ತದೆ.
ರುಚಿಯಾದ, ಹಣ್ಣಾಗಿರುವ ಪ್ರೆಶ್ ಕಲ್ಲಂಗಡಿ ಆರಿಸೋದು ಹೇಗೆ? ಇಲ್ಲಿವೆ ಸಿಂಪಲ್ ಟಿಪ್ಸ್
ರಕ್ತದೊತ್ತಡ (blood pressure) ಏರುಪೇರು : ಹೆಚ್ಚು ಬಿಸಿನೀರು ಕುಡಿಯುವುದರಿಂದ ರಕ್ತದೊತ್ತಡದ ಅಸಮತೋಲನವುಂಟಾಗುತ್ತದೆ. ಇದು ದೇಹದಲ್ಲಿನ ಸೋಡಿಯಂ ಮತ್ತು ಎಲೆಕ್ಟ್ರೋಲೈಟ್ ಮಟ್ಟದ ಮೇಲೆ ಪರಿಣಾಮ ಬೀರುತ್ತದೆ. ಇದ್ರಿಂದ ಆಯಾಸ, ಸುಸ್ತು, ತಲೆ ತಿರುಗುವಿಕೆ ಕಾಣಿಸಿಕೊಳ್ಳುತ್ತದೆ.
ಗಂಟಲು – ಬಾಯಿಗೆ ಹಾನಿ : ಬಿಸಿಯಾದ ನೀರು ಗಂಟಲು ಮತ್ತು ಬಾಯಿಯ ಸೂಕ್ಷ್ಮ ಚರ್ಮವನ್ನು ಸುಡುತ್ತದೆ. ಇದು ಗುಳ್ಳೆ, ಗಂಟಲಿನಲ್ಲಿ ಊತ ಮತ್ತು ನೋವಿನಂತಹ ಸಮಸ್ಯೆಗಳಿಗೆ ಕಾರಣವಾಗುತ್ತದೆ.
ಎಷ್ಟು ಬಿಸಿ ನೀರು ಸೇವನೆ ಒಳ್ಳೆಯದು? : ನೀವು ಬಾಯಿ ಸುಡುವಷ್ಟು ಬಿಸಿ ನೀರನ್ನು ಎಂದಿಗೂ ಸೇವನೆ ಮಾಡಬೇಡಿ. ಉಗುರು ಬೆಚ್ಚಗಿನ ನೀರನ್ನು ಕುಡಿಯಿರಿ. ಖಾಲಿ ಹೊಟ್ಟೆಯಲ್ಲಿ ಹಾಗೂ ರಾತ್ರಿ ಮಲಗುವ ಮೊದಲು ಅತಿಯಾದ ಬಿಸಿ ನೀರು ಸೇವನೆ ಮಾಡಬೇಡಿ. ದಿನಕ್ಕೆ 8 -10 ಗ್ಲಾಸ್ ನೀರನ್ನು ಸೇವನೆ ಮಾಡಿ. ಬಿಸಿ ನೀರನ್ನು ಅತಿ ಕಡಿಮೆ ಪ್ರಮಾಣದಲ್ಲಿ ಕುಡಿದ್ರೆ ಒಳ್ಳೆಯದು. ನೀರನ್ನು ಬಿಸಿ ಮಾಡಿ, ಪಾತ್ರೆಯಲ್ಲಿ ಆರಿಸಿ ನಂತ್ರ ಕುಡಿಯುವುದನ್ನು ರೂಢಿಸಿಕೊಳ್ಳಿ. ಅತಿಯಾದ ಬೆವರು, ಆಮ್ಲೀಯತೆ, ಸುಸ್ತು, ತಲೆ ತಿರುಗಿದ ಅನುಭವ, ಸದಾ ಆಯಾಸ ನಿಮಗೆ ಕಾಣಿಸಿಕೊಳ್ತಿದ್ದರೆ ತಕ್ಷಣ ನೀವು ಬಿಸಿ ನೀರಿನ ಸೇವನೆಯನ್ನು ನಿಲ್ಲಿಸುವುದು ಒಳ್ಳೆಯದು.