ನಲವತ್ತು ವರ್ಷದ ಆಸುಪಾಸಿನವರಿಗೆ ಸಮೀಪ ದೃಷ್ಟಿದೋಷ ಉಂಟಾಗಿ ಓದಲು ತೊಂದರೆಯಾದಾಗ ಅದಕ್ಕೆ ಕನ್ನಡಕದ ಬದಲು ಬಳಸಬಹುದು ಎನ್ನಲಾಗಿದ್ದ ಐ ಡ್ರಾಪ್ಸ್‌ಗೆ ಕೇಂದ್ರ ಸರ್ಕಾರ ಪರವಾನಗಿಯನ್ನು ಅಮಾನತುಗೊಳಿಸಿದೆ.
ನವದೆಹಲಿ (ಸೆ.12) : ನಲವತ್ತು ವರ್ಷದ ಆಸುಪಾಸಿನವರಿಗೆ ಸಮೀಪ ದೃಷ್ಟಿದೋಷ ಉಂಟಾಗಿ ಓದಲು ತೊಂದರೆಯಾದಾಗ ಅದಕ್ಕೆ ಕನ್ನಡಕದ ಬದಲು ಬಳಸಬಹುದು ಎನ್ನಲಾಗಿದ್ದ ಐ ಡ್ರಾಪ್ಸ್‌ಗೆ ಕೇಂದ್ರ ಸರ್ಕಾರ ಪರವಾನಗಿಯನ್ನು ಅಮಾನತುಗೊಳಿಸಿದೆ.
ಮುಂಬೈ ಮೂಲದ ಎಂಟೋಡ್ ಫಾರ್ಮಾಸ್ಯುಟಿಕಲ್ಸ್ ಕಂಪನಿ(Entode Pharmaceuticals Company) ತಾನು ‘ಪಿಲೋಕ್ಯಾರ್ಪೀನ್ ಹೈಡ್ರೋಕ್ಲೋರೈಡ್ ಆಪ್ತಾಲ್ಮಿಕ್ ಸೊಲ್ಯುಷನ್’(Pilocarpine Hydrochloride Ophthalmic Solution) ಎಂಬ ಐ ಡ್ರಾಪ್ಸ್ ತಯಾರಿಸಿದ್ದು, ಅದನ್ನು ಕಣ್ಣಿಗೆ ಹಾಕಿಕೊಂಡರೆ ರೀಡಿಂಗ್ ಗ್ಲಾಸ್‌ನ ನೆರವಿಲ್ಲದೆ ಓದಬಹುದು ಎಂದು ಇತ್ತೀಚೆಗೆ ಹೇಳಿಕೆ ಬಿಡುಗಡೆ ಮಾಡಿತ್ತು.
undefined
ಕಣ್ಣಿಗೆ ಲೆನ್ಸ್ ಧರಿಸುವವರೇ ಎಚ್ಚರ, ಕಾರ್ನಿಯಾ ಗಾಯದಿಂದ ಶಸ್ತ್ರಚಿಕಿತ್ಸೆಗೆ ಒಳಗಾದ ನಟಿ!
ಅದಕ್ಕೆ ಆಕ್ಷೇಪ ವ್ಯಕ್ತಪಡಿಸಿರುವ ಭಾರತೀಯ ಔಷಧ ನಿಯಂತ್ರಣ ನಿರ್ದೇಶನಾಲಯ (ಡಿಸಿಜಿಐ), ‘ನಿಮಗೆ ಈ ಔಷಧ ತಯಾರಿಸಿ, ಅದನ್ನು ದೃಷ್ಟಿದೋಷವಿರುವವರ ಚಿಕಿತ್ಸೆಗೆ ಬಳಸುವುದಕ್ಕಷ್ಟೇ ಅನುಮತಿ ನೀಡಲಾಗಿತ್ತು. ಆದರೆ ನೀವು ಈ ಔಷಧ ರೀಡಿಂಗ್ ಗ್ಲಾಸ್‌ಗೆ ಪರ್ಯಾಯ ಎಂದು ಪ್ರಚಾರ ಮಾಡಿದ್ದೀರಿ. ಹೀಗೆ ಪ್ರಚಾರ ಮಾಡುವುದಕ್ಕೆ ನಿಮಗೆ ಅನುಮತಿ ನೀಡಿರಲಿಲ್ಲ. ಇದರಿಂದ ಜನರಿಗೆ ತಪ್ಪು ಮಾಹಿತಿ ರವಾನೆಯಾಗಿದೆ. ಹೀಗಾಗಿ ಮುಂದಿನ ಆದೇಶದವರೆಗೆ ಈ ಔಷಧದ ಉತ್ಪಾದನೆ ಮತ್ತು ಮಾರಾಟಕ್ಕೆ ನೀಡಿರುವ ಪರವಾನಗಿಯನ್ನು ಅಮಾನತಿನಲ್ಲಿಡಲಾಗಿದೆ’ ಎಂದು ಆದೇಶಿಸಿದೆ.