Latest Videos

ಯುವಕರು ಹಾರ್ಟ್ ಅಟ್ಯಾಕ್ ಸತ್ರೆ ಕ್ರ್ಯಾಶ್ ಡಯಟ್ ಎಫೆಕ್ಟ್ ಅಂತಾರಲ್ಲ, ಏನದು?

By Suvarna NewsFirst Published Nov 2, 2023, 12:55 PM IST
Highlights

ತೂಕ ಇಳಿಸಿಕೊಳ್ಳುವ ಭರದಲ್ಲಿ ಹದಿಹರೆಯದ ಮಕ್ಕಳು ಆಪತ್ತು ತಂದುಕೊಳ್ತಿದ್ದಾರೆ. ಕ್ರ್ಯಾಶ್ ಡಯಟ್ ಪಾಲಿಸಿ ಅನಾರೋಗ್ಯಕ್ಕೆ ಒಳಗಾಗ್ತಿದ್ದಾರೆ. ಈ  ಕ್ರ್ಯಾಶ್  ಡಯಟ್ ಎಷ್ಟು ಅಪಾಯಕಾರಿ ಎನ್ನುವ ವಿವರ ಇಲ್ಲಿದೆ.

ಡಯಟ್ ಈಗ ಫ್ಯಾಷನ್ ಆಗಿದೆ. ವಯಸ್ಕರು ತಮ್ಮ ತೂಕ ಇಳಿಸಿಕೊಳ್ಳಲು, ಆರೋಗ್ಯ ಕಾಪಾಡಿಕೊಳ್ಳಲು ಡಯಟ್ ಪಾಲನೆ ಮಾಡ್ತಾರೆ. ಇವರ ಜೊತೆ ಹದಿಹರೆಯದ ಮಕ್ಕಳೂ ಡಯಟ್ ಹುಚ್ಚಿಗೆ ಬಿದ್ದಿದ್ದಾರೆ. ತಮ್ಮ ಫಿಗರ್ ಮೆಂಟೇನ್ , ತೂಕ ಹೆಚ್ಚಾಗದಂತೆ ನೋಡಿಕೊಳ್ಳುವ ಚಿಂತೆ ಅವರಿಗೆ ಹದಿಹರೆಯದಲ್ಲೇ ಶುರುವಾಗುತ್ತಿದೆ. ಮಕ್ಕಳು ಝೀರೋ ಫಿಗರ್ ಸೇರಿದಂತೆ ಒಳ್ಳೆ ದೇಹದ ಆಕಾರ ಕಾಪಾಡಿಕೊಳ್ಳಲು ಪ್ಲಾನ್ ಮಾಡ್ತಿದ್ದಾರೆ. ಅನೇಕ ಹದಿಹರೆಯದ ಮಕ್ಕಳು ಡಯಟ್ ನಲ್ಲಿರೋದನ್ನು ನೀವು ನೋಡ್ಬಹುದು. ಕಳೆದ ಕೆಲವು ವರ್ಷಗಳಿಂದ ಫಿಟ್ನೆಸ್ ಮೆಂಟೇನ್ ಮಾಡಲು ಕ್ರ್ಯಾಶ್ ಡಯಟ್ ಎಂಬ ಪದ ಬಳಕೆಯಾಗ್ತಿದೆ. 

ಈ ಕ್ರ್ಯಾಶ್ (Crash) ಡಯಟ್ ಗೆ ಭಾರಿ ಬೇಡಿಕೆ ಇದೆ. ಮಾರುಕಟ್ಟೆಯಲ್ಲಿ ಹಲವಾರು ರೀತಿಯ ಕ್ರ್ಯಾಶ್ ಡಯಟ್‌ (Diet) ಗಳು ಲಭ್ಯವಿದೆ. ತ್ವರಿತವಾಗಿ ತೂಕ ಇಳಿಕೆಗೆ ಇದು ಸಹಕಾರಿಯೂ ಹೌದು. ತೂಕವನ್ನು ವೇಗವಾಗಿ ಇಳಿಸುವ ಈ ಡಯಟ್ ಆರೋಗ್ಯ (Health) ಕ್ಕೆ ಬಹಳ ಹಾನಿಕರ. ಹದಿಹರೆಯದ ಮಕ್ಕಳು ಇದನ್ನು ಪಾಲಿಸ್ಬಾರದು ಎಂದು ತಜ್ಞರು ಸಲಹೆ ನೀಡ್ತಾರೆ. ಕ್ರ್ಯಾಶ್ ಡಯಟ್ ಅಂದ್ರೇನು, ಅದ್ರ ನಷ್ಟವೇನು ಎಂಬ ಮಾಹಿತಿ ಇಲ್ಲಿದೆ.

HEALTH TIPS: ಮಧುಮೇಹಿಗಳು ಪೈಲ್ಸ್‌ನಿಂದ ಬಚಾವ್ ಆಗೋದು ಹೇಗೆ?

ಕ್ರ್ಯಾಶ್ ಡಯಟ್ ಅಂದ್ರೇನು? :  ಡಯಟ್ ಪ್ಲಾನ್ ಪ್ರಕಾರ ಆಹಾರ (Food) ಸೇವನೆ ಮಾಡೋದನ್ನು ಕ್ರ್ಯಾಶ್ ಡಯಟ್ ಎಂದು ಕರೆಯಲಾಗುತ್ತದೆ. ಅಂದ್ರೆ ಇಲ್ಲಿ ಎಲ್ಲ ರೀತಿಯ ಆಹಾರವನ್ನು ಸೇವನೆ ಮಾಡೋದಿಲ್ಲ. ಕೆಲ ನಿರ್ದಿಷ್ಟ ಆಹಾರವನ್ನು ಬಿಟ್ರೆ ಕೆಲ ನಿರ್ದಿಷ್ಟ ಆಹಾರವನ್ನು ಸೇವನೆ ಮಾಡಲಾಗುತ್ತದೆ. ಈ ಡಯಟ್ ನಲ್ಲಿ ತೆಗೆದುಕೊಳ್ಳುವ ಕೆಲ ಆಹಾರಗಳು ಹೊಟ್ಟೆ ತುಂಬಿದ ಅನುಭವ ನೀಡುತ್ತದೆಯೇ ವಿನಃ ಯಾವುದೇ ಪ್ರಯೋಜನ ನೀಡೋದಿಲ್ಲ. 
ಒಬ್ಬ ವ್ಯಕ್ತಿ ತಿನ್ನುವ ಆಹಾರ ಹಾಗೂ ಅದ್ರ ಪ್ರಮಾಣವನ್ನು ಆಹಾರದ ಪದ ಸೂಚಿಸುತ್ತದೆ. ಆಹಾರವೆಂದ್ರೆ ಎಲ್ಲ ರೀತಿಯ ಪೋಷಕಾಂಶವನ್ನು ಒಳಗೊಂಡಿರಬೇಕು. ಆದ್ರೆ ಈಗಿನ ಡಯಟ್ ನಲ್ಲಿ ಎಲ್ಲ ರೀತಿಯ ಪೋಷಕಾಂಶ ದೇಹಕ್ಕೆ ಸಿಗೋದಿಲ್ಲ. ತೂಕ ನಷ್ಟಕ್ಕಾಗಿ ನಿರ್ದಿಷ್ಟ ಆಹಾರವನ್ನು ಮಾತ್ರ ಸೇವನೆ ಮಾಡುವ ಕಾರಣ ಅದ್ರಲ್ಲಿರುವ ಪೋಷಕಾಂಶ ಮಾತ್ರ ದೇಹ ಸೇರುತ್ತಿರುತ್ತದೆ. ಸೆಲೆಬ್ರಿಟಿಗಳು ಸಾಮಾನ್ಯವಾಗಿ ಕ್ರ್ಯಾಶ್ ಡಯಟ್ ಅನ್ನು ಪ್ರಚಾರ ಮಾಡುತ್ತಾರೆ. ಆದರೆ ಕ್ರ್ಯಾಶ್ ಡಯಟ್ ಅನ್ನು ಅನುಸರಿಸುವುದು ಅಪಾಯಕಾರಿ. ತೂಕವು ತಕ್ಷಣವೇ ಕಡಿಮೆಯಾಗಲು ಪ್ರಾರಂಭಿಸುತ್ತದೆ. ಆದರೆ ದೇಹವು ಅನಾರೋಗ್ಯಕರವಾಗಬಹುದು. ಒಳ್ಳೆಯದಕ್ಕಿಂತ ಹಾನಿಯೇ ಹೆಚ್ಚು ಎನ್ನುತ್ತಾರೆ ತಜ್ಞರು.

WEIGHT LOSS: ತೂಕ ಇಳಿಸೋಕೆ ಸಹಾಯ ಮಾಡುತ್ತೆ ಬೆಳಗಿನ ಈ ಅಭ್ಯಾಸ!

ಹದಿಹರೆಯದವರಿಗೆ ಹೆಚ್ಚು ಅಪಾಯಕಾರಿ ಕ್ರ್ಯಾಶ್ ಡಯಟ್ : ಹದಿಹರೆಯದಲ್ಲಿ ದೇಹ ವೇಗವಾಗಿ ಬೆಳವಣಿಗೆ ಹೊಂದುತ್ತಿರುತ್ತದೆ. ಅದಕ್ಕೆ ಎಲ್ಲ ರೀತಿಯ ಪೋಷಕಾಂಶದ ಅಗತ್ಯವಿರುತ್ತದೆ. ಎಲ್ಲ ರೀತಿಯ ಆಹಾರ ತಿಂದು ಅದನ್ನು ಅರಗಿಸಿಕೊಳ್ಳುವ ಶಕ್ತಿ ಕೂಡ ಅವರಿಗಿರುತ್ತದೆ. ಆದ್ರೆ ಕ್ರ್ಯಾಶ್ ಡಯಟ್ ಪಾಲನೆ ಮಾಡೋದ್ರಿಂದ ಅವರ ದೇಹಕ್ಕೆ ಅಗತ್ಯವಿರುವ ಪೋಷಕಾಶ ಸಿಗೋದಿಲ್ಲ. ಇದ್ರಿಂದ ದೇಹದ ಬೆಳವಣಿಗೆಗೆ ಅಡ್ಡಿಯಾಗುತ್ತದೆ. ಕ್ರ್ಯಾಶ್ ಡಯಟ್ ಎಲ್ಲರಿಗಲ್ಲದೆ ಹೋದ್ರೂ ಹದಿಹರೆಯದವರಿಗೆ ಗಂಭೀರ ಆರೋಗ್ಯ ಸಮಸ್ಯೆಯುಂಟು ಮಾಡುತ್ತದೆ.

ಕ್ರ್ಯಾಶ್ ಡಯಟ್ ನಲ್ಲಿ ಆಹಾರವು ಸಾಕಷ್ಟು ಜೀವಸತ್ವಗಳು (Viramins) ಮತ್ತು ಖನಿಜಗಳನ್ನು (Minerals) ಹೊಂದಿರುವುದಿಲ್ಲ. ಹದಿಹರೆಯದವರು ಈ ಡಯಟ್ ಅನುಸರಿಸೋದ್ರಿಂದ ಅಪೌಷ್ಟಿಕತೆ (Malnutrious) ಉಂಟಾಗುತ್ತದೆ. ದೇಹದ ಬೆಳವಣಿಗೆ ವಿಶೇಷವಾಗಿ ಸ್ನಾಯುಗಳು ಮತ್ತು ಮೂಳೆಗಳ ಬೆಳವಣಿಗೆ ನಿಲ್ಲುತ್ತದೆ. ಮಲಬದ್ಧತೆ, ರೋಗ ನಿರೋಧಕ ಶಕ್ತಿಯಲ್ಲಿ (Immunity Power) ಇಳಿಕೆ, ನಿರ್ಜಲೀಕರಣ, ಏಕಾಗ್ರತೆ ಕೊರತೆ (Lack of Concentration), ಸುಸ್ತು ಸೇರಿದಂತೆ ಅನೇಕ ಸಮಸ್ಯೆಗಳಿಗೆ ಕಾರಣವಾಗುತ್ತದೆ. ಇದು ಮಾನಸಿಕ ಆರೋಗ್ಯದ ಮೇಲೂ ಕ್ರ್ಯಾಶ್ ಡಯಟ್ ಪರಿಣಾಮ ಬೀರಬಹುದು.
 

click me!