ಎರಡನೇ ಬಾರಿ ಕೋವಿಡ್ ಸೋಂಕು ತಗುಲಿದರೆ ಅಪಾಯ ಹೆಚ್ಚು!

By Suvarna NewsFirst Published Jul 1, 2022, 8:39 AM IST
Highlights

ಸತತ ಎರಡು ವರ್ಷಗಳ ಕಾಲ ಜನಜೀವನವನ್ನು ಕಂಗೆಡಿಸಿದ್ದ ಕೊರೋನಾ (Corona) ಸೋಂಕಿನ ಪ್ರಮಾಣ ಮತ್ತೆ ಹೆಚ್ಚಾಗ್ತಿವೆ.  ಈ ಮಧ್ಯೆ ಕೋವಿಡ್ ಸಾಂಕ್ರಾಮಿಕ (Pandemic) ಮುಗಿದಿಲ್ಲ, 110  ರಾಷ್ಟ್ರದಲ್ಲಿ (Countries) ಸೋಂಕು ಹೆಚ್ಚುತ್ತಿದೆ ಎಂದು WHO ವಾರ್ನಿಂಗ್‌ ನೀಡಿದೆ.ಎರಡನೇ ಬಾರಿ ಕೋವಿಡ್ ಸೋಂಕಿಗೆ ತುತ್ತಾದ್ರೆ ಅಪಾಯನಾ, ಇಲ್ಲ ಲಸಿಕೆಯ (Vaccine) ಕಾರಣದಿಂದ ಬೇಗನೇ ಗುಣವಾಗಬಹುದಾ?

ಚೀನಾ (China)ದ ವುಹಾನ್‌ನಲ್ಲಿ ಕಾಣಿಸಿಕೊಂಡ ಕಣ್ಣಿಗೆ ಕಾಣದ ವೈರಸ್‌ (Virus)ವೊಂದು ಜಗತ್ತಿನ ಎಲ್ಲಾ ರಾಷ್ಟ್ರಗಳನ್ನು ಅಕ್ಷರಶಃ ನಡುಗಿಸಿತ್ತು. ವ್ಯಕ್ತಿಯಿಂದ ವ್ಯಕ್ತಿಗೆ ಸೆಕೆಂಡುಗಳಲ್ಲಿ ಹಬ್ಬುವ ಸೋಂಕಿನಿಂದ ಕೋಟ್ಯಾಂತರ ಮಂದಿ ಆಸ್ಪತ್ರೆ ಪಾಲಾದರು, ಮೃತಪಟ್ಟರು. ಇವತ್ತಿಗೂ ಅದೆಷ್ಟೋ ಮಂದಿ ಕೊರೋನಾ (Corona) ಕಾರಣದಿಂದಲೇ ಹಲವು ಆರೋಗ್ಯ ಸಮಸ್ಯೆ (Health problem)ಗಳನ್ನು ಎದುರಿಸುತ್ತಿದ್ದಾರೆ. ಕೊರೋನಾ ಹರಡಲು ಆರಂಭವಾದಾಗಿನಿಂದ ಜನಜೀವನವೇ ಸಂಪೂರ್ಣ ಬದಲಾಯಿತು. ಉದ್ಯೋಗ, ವಿದ್ಯಾಭ್ಯಾಸ, ವ್ಯಾಪಾರ, ಆರ್ಥಿಕತೆ ಎಲ್ಲದರ ಮೇಲೂ ಹೊಡೆತ ಬಿತ್ತು. ಕ್ರಮೇಣ ಕೊರೋನಾ ಕಡಿಮಯಾದ ಹಾಗೆಯೇ ಜನಜೀವನ ಸಂಪೂರ್ಣ ಸಹಜಸ್ಥಿತಿಗೆ ಮರಳುತ್ತಿದೆ ಎಂದುಕೊಳ್ಳುವಾಗಲೇ ಮತ್ತೆ ಕೊರೋನಾ ಕಾಟ ಶುರುವಾಗಿದೆ.

ಹಲವು ರಾಜ್ಯಗಳಲ್ಲಿ ಕೋವಿಡ್ ಪ್ರಮಾಣಗಳಲ್ಲಿ ಏರಿಕೆಯಾಗಿದೆ. ಮಾಸ್ಕ್ (Mask), ಸಾಮಾಜಿಕ ಅಂತರ (Social Distance)ವನ್ನು ಕಡ್ಡಾಯಗೊಳಿಸಲಾಗಿದೆ. ಈ ಮಧ್ಯೆ ಕೋವಿಡ್ ಸಾಂಕ್ರಾಮಿಕ ಮುಗಿದಿಲ್ಲ, 110 ರಾಷ್ಟ್ರದಲ್ಲಿ ಸೋಂಕು ಹೆಚ್ಚುತ್ತಿದೆ ಎಂದು WHO ವಾರ್ನಿಂಗ್‌ ನೀಡಿದೆ. ನಾಲ್ಕನೇ ಅಲೆ ಭೀತಿಯ ಮಧ್ಯೆಯೇ ಕೋವಿಡ್ ಮರುಸೋಂಕಿನ ಬಗ್ಗೆ ಜನರಲ್ಲಿ ಹಲವು ಗೊಂದಲಗಳು ಎದುರಾಗಿವೆ. 

ಕೋವಿಡ್ ಸಾಂಕ್ರಾಮಿಕ ಮುಗಿದಿಲ್ಲ, 110 ರಾಷ್ಟ್ರದಲ್ಲಿ ಸೋಂಕು ಹೆಚ್ಚುತ್ತಿದೆ; WHO ವಾರ್ನಿಂಗ್‌

ಕೋವಿಡ್ ಮರು ಸೋಂಕು ಅಪಾಯಕಾರಿಯೇ ?
ಕೊರೋನಾ ಸೋಂಕು ಶೀಘ್ರವಾಗಿ ಹರಡುತ್ತಿದ್ದ ಸಮಯದಲ್ಲಿ ಬಹಳಷ್ಟು ಮಂದಿ ಮೊದಲನೇ ಅಲೆಯಲ್ಲಿ ವೈರಸ್ ದಾಳಿಗೆ ತುತ್ತಾಗಿದ್ದರು. ಮೆನೆಯಿಂದ ಹೊರಗೆ ಹೋಗದೆ ಜಾಗರೂಕರಾಗಿದ್ದವರೂ ಎರಡನೇ ಅಲೆಯಲ್ಲಿ ಸೋಂಕಿಗೆ ಒಳಪಟ್ಟರು. ಒಟ್ಟಿನಲ್ಲಿ ಸೋಂಕು ತಗುಲಿದವರು ಯಾರೂ ಇಲ್ಲವೆಂದೇ ಹೇಳಬಹುದು. ನಮ್ಮಲ್ಲಿ ಅನೇಕರು ಈಗಾಗಲೇ ಕೋವಿಡ್ ಅನ್ನು ಹೊಂದಿರುವುದರಿಂದ, ಎರಡನೇ ಅಥವಾ ಮೂರನೇ ಬಾರಿಗೆ ವೈರಸ್ ದಾಳಿಗೆ ತುತ್ತಾಗಿದ್ದಾರೆ. ಈಗ ಹೊಸ ಅಲೆಯ ಭೀತಿಯೂ ಎದುರಾಗಿರುವ ಕಾರಣ ಇನ್ನಷ್ಟು ಮಂದಿಗೆ ಸೋಂಕು ತಗುಲುವ ಸಾಧ್ಯತೆಯಿದೆ. ಹೀಗಿರುವಾಗ ಮತ್ತೆ ಕೋವಿಡ್ ಸೋಂಕು ತಗುಲುವುದು ಅಪಾಯಕಾರಿಯೇ ಎಂಬುದನ್ನು ತಿಳಿದುಕೊಳ್ಳಬೇಕು. 

ಪ್ರಿ ಪ್ರಿಂಟ್ ಪೇಪರ್‌ನಲ್ಲಿ ಕಸ್ತೂರ ಬಾ ಆಸ್ಪತ್ರೆ, ಇಂಟರ್‌ನ್ಯಾಷನಲ್ ಸೆಂಟರ್ ಫಾರ್ ಜೆನೆಟಿಕ್ ಎಂಜಿನಿಯರಿಂಗ್ ಆಂಡ್ ಬಯೋ ಟೆಕ್ನಾಲಜಿ ಹಾಗೂ ಸಿಎಸ್‌ಐಆರ್ -ಇನ್‌ಸ್ಟಿಟ್ಯೂಟ್ ಆಫ್ ಜೆನಾಮಿಕ್ಸ್ ಆಂಡ್ ಇಂಟೆಗ್ರೆಟೀವ್ ಬಯಾಲಜಿಯ ತಜ್ಞರು ಕೆಲವು ಮಾಹಿತಿಗಳನ್ನು ವಿವರಿಸಿದ್ದಾರೆ.

ಕೋವಿಡ್ ಮರು ಸೋಂಕುಗಳು ನಿಮ್ಮ ಆರೋಗ್ಯ ಸಮಸ್ಯೆಗಳ ಸಾಮಾನ್ಯ ಅಪಾಯವನ್ನು ಹೆಚ್ಚಿಸುತ್ತವೆ ಎಂಬುದು ಅಧ್ಯಯನದಿಂದ ತಿಳಿದುಬಂದಿದೆ. ಇತ್ತೀಚಿನ ಅಧ್ಯಯನವು COVIDನೊಂದಿಗೆ ಮರುಸೋಂಕಿನ ಲಕ್ಷಣಗಳು ಆರಂಭಿಕ ಸೋಂಕುಗಳಿಗಿಂತ ಕೆಟ್ಟದಾಗಿದೆ ಎಂದು ಸೂಚಿಸುತ್ತದೆ. ಆದರೆ ಇದರಲ್ಲಿ ಕಾಣಸಿಗುವ ನಿರ್ಧಿಷ್ಟ ರೋಗ ಲಕ್ಷಣಗಳ ಬಗ್ಗೆ ಏನನ್ನೂ ಹೇಳಲಾಗಿಲ್ಲ. ಸೋಂಕಿನ ನಂತರ ಆರು ತಿಂಗಳೊಳಗೆ ಆಸ್ಪತ್ರೆಗೆ ದಾಖಲು ಮತ್ತು ವಿವಿಧ ಆರೋಗ್ಯ ಸಮಸ್ಯೆಗಳ ಸಾಧ್ಯತೆಯೂ ಹೆಚ್ಚಿದೆ ಎಂದು ಹೇಳಲಾಗಿದೆ. ಮರುಸೋಂಕಿನ ನಂತರ ರೋಗ ಲಕ್ಷಣಗಳು ಕೆಟ್ಟದಾಗಿರಲಿವೆ ಎಂದು ಸಂಶೋಧಕರು ತೀರ್ಮಾನಿಸಿದ್ದಾರೆ.

ಕೊರೋನಾ ಹಾವಳಿ ಮಧ್ಯೆ ಕೇರಳದಲ್ಲಿ ಅಂಥ್ರಾಕ್ಸ್‌ ಸ್ಫೋಟ: ತೀವ್ರ ಆತಂಕ

ಆರಂಭದಲ್ಲಿ, ಅಧ್ಯಯನ ಮಾಡಿದ ಗುಂಪು ಈಗಾಗಲೇ ಒಟ್ಟಾರೆ ಜನಸಂಖ್ಯೆಗೆ ಹೋಲಿಸಿದರೆ ಕೋವಿಡ್ ಮರುಸೋಂಕಿಗೆ ಒಳಗಾಗುವವರು ಹೆಚ್ಚು ಅಪಾಯದಲ್ಲಿದ್ದಾರೆ ಎಂಬುದನ್ನು ಸೂಚಿಸಿದೆ. ಸರಾಸರಿ ವಯಸ್ಸು 60, ಸುಮಾರು 20% ಧೂಮಪಾನಿಗಳು ಮತ್ತು COVID ಸೋಂಕಿಗೆ ಒಳಗಾದವರಲ್ಲಿ 80% ಕ್ಕಿಂತ ಹೆಚ್ಚು ಜನರು ಲಸಿಕೆ ಹಾಕಿಲ್ಲ, ಹೀಗಾಗಿ ಅಪಾಯದ ಸಾಧ್ಯತೆ ಇನ್ನಷ್ಟು ಹೆಚ್ಚು ಎಂದು ಸ್ಪಷ್ಟವಾಗಿ ಹೇಳಲಾಗಿದೆ. ಮರುಸೋಂಕಿಗೆ ಒಳಗಾದವರಲ್ಲಿ ಆರಂಭಿಕ COVID ರೋಗಲಕ್ಷಣಗಳು ತಲೆನೋವು, ಕೆಮ್ಮು, ಆಯಾಸವನ್ನು ಒಳಗೊಂಡಿರುತ್ತದೆ. ಉಸಿರಾಟದ ಸೋಂಕುಗಳು ಜಾಗತಿಕವಾಗಿ ಸಾವಿಗೆ ಪ್ರಮುಖ ಕಾರಣವಾಗಿದೆ, ಆದ್ದರಿಂದ ಯಾವುದೇ ಹೆಚ್ಚುವರಿ ಉಸಿರಾಟದ ಸೋಂಕುಗಳು ವ್ಯಕ್ತಿಯ ಆರೋಗ್ಯ ಸಮಸ್ಯೆಗಳ ಅಪಾಯವನ್ನು ಹೆಚ್ಚಿಸುವುದರಲ್ಲಿ ಆಶ್ಚರ್ಯವೇನಿಲ್ಲ.

ಮರುಸೋಂಕಿನ ರೋಗಲಕ್ಷಣ ಹೆಚ್ಚು ತೀವ್ರವಾಗಿಲ್ಲ
ಒಂದು ಬಾರಿ ಕೋವಿಡ್‌ ಸೋಂಕು ತಗುಲಿದವರಿಗೆ ಮತ್ತೊಮ್ಮೆ ಸೋಂಕು ತಗುಲಿದರೆ ಸುಲಭವಾಗಿ ಕಂಡು ಹಿಡಿಯಲಾಗುವುದಿಲ್ಲ. ಸೋಂಕು ಆರಂಭಿಕ ಸೋಂಕಿಗಿಂತ ಕಡಿಮೆ ತೀವ್ರತರವಾದ ರೋಗಲಕ್ಷಣಗಳನ್ನು ಉಂಟುಮಾಡುತ್ತದೆ, ಅಥವಾ ಕನಿಷ್ಠ ಸ್ವಲ್ಪ ಬದಲಾವಣೆಯನ್ನು ಉಂಟುಮಾಡುತ್ತದೆ ಎಂದು ತಿಳಿದುಬಂದಿದೆ. ಇಮ್ಯೂನ್ ಮೆಮೊರಿ ಎನ್ನುವುದು ಪ್ರತಿರಕ್ಷಣಾ ವ್ಯವಸ್ಥೆಯು ಹಿಂದಿನ ಸೋಂಕುಗಳನ್ನು ನೆನಪಿಸಿಕೊಳ್ಳುತ್ತದೆ ಮತ್ತು ಮರು ಸೋಂಕುಗಳಿಗೆ ಹೆಚ್ಚು ವೇಗವಾಗಿ ಮತ್ತು ಪರಿಣಾಮಕಾರಿಯಾಗಿ ಪ್ರತಿಕ್ರಿಯಿಸುವ ವಿದ್ಯಮಾನವಾಗಿದೆ, ಇದು ವೈರಸ್ ಮತ್ತು ಸಾಮಾನ್ಯ ರೋಗಲಕ್ಷಣಗಳ ಹರಡುವಿಕೆಯನ್ನು ಕಡಿಮೆ ಮಾಡುತ್ತದೆ. ಏಕೆಂದರೆ ಪ್ರತಿರಕ್ಷಣಾ ವ್ಯವಸ್ಥೆಯು ಪ್ರತಿಕಾಯಗಳನ್ನು ಮಾಡುತ್ತದೆ.

click me!