National Doctor's Day: ಇತಿಹಾಸ, ಪ್ರಾಮುಖ್ಯತೆ ಹೀಗಿದೆ..

By Suvarna NewsFirst Published Jun 30, 2022, 5:21 PM IST
Highlights

ರಾಷ್ಟ್ರೀಯ ವೈದ್ಯರ ದಿನ 2022: ಲಕ್ಷಾಂತರ ಜೀವಗಳನ್ನು ಉಳಿಸಲು ಹಗಲು ಇರುಳು ಎನ್ನದೇ ದುಡಿಯುವ ವೈದ್ಯಕೀಯ ಸಿಬ್ಬಂದಿ ಶ್ರಮವನ್ನು ಗುರುತಿಸಲು ಭಾರತದಲ್ಲಿ ಈ ದಿನವನ್ನು ಆಚರಿಸಲಾಗುತ್ತದೆ.

"ವೈದ್ಯೋ ನಾರಾಯಣೋ ಹರಿಃ " ಅನ್ನುವ ಮಾತಿದೆ. ಇದರಂತೆ ವೈದ್ಯರನ್ನು ದೇವರು ಎಂದು ಭಾವಿಸುವ ನಾಡು ನಮ್ಮದು. ವೈದ್ಯರ (Doctors) ಕಠಿಣ ಪರಿಶ್ರಮ ಮತ್ತು ದೃಢಸಂಕಲ್ಪವನ್ನು ಮೆಚ್ಚಿ ಭಾರತೀಯ ವೈದ್ಯಕೀಯ ಸಂಘ (ಐಎಂಎ) ಪ್ರತಿ ವರ್ಷ ಜುಲೈ 1 ರಂದು ವೈದ್ಯರ ದಿನವನ್ನು ಆಚರಿಸುತ್ತದೆ. ಲಕ್ಷಾಂತರ ಜೀವಗಳನ್ನು ಉಳಿಸಲು ದಣಿವರಿಯಿಲ್ಲದೆ ದುಡಿಯುವ ವೈದ್ಯಕೀಯ ಸಿಬ್ಬಂದಿಯ ಶ್ರಮವನ್ನು ಗುರುತಿಸಲು ಭಾರತವು ಈ ದಿನವನ್ನು ಆಚರಿಸುತ್ತದೆ. ಕೋವಿಡ್-19 ಸಾಂಕ್ರಾಮಿಕ ರೋಗದ ಈ ಸಮಯದಲ್ಲಿಯೂ ಸಹ, ಅವರು ಇತರರ ಯೋಗಕ್ಷೇಮವನ್ನು ಖಚಿತಪಡಿಸಿಕೊಳ್ಳಲು 24x7 ಕೆಲಸ ಮಾಡಿದರು. ಇದು ಮಾತ್ರವಲ್ಲದೆ ಯಾವಾಗಲೂ ಜನರು ಆರೋಗ್ಯವಾಗಿ (Healthy) ಇರುವಂತೆ ನೋಡಿಕೊಳ್ಳುವುದು ವೈದ್ಯರಿಗೆ ಈ ದಿನ ಮೀಸಲು..

ರಾಷ್ಟ್ರೀಯ ವೈದ್ಯರ ದಿನ 2022ರ ಇತಿಹಾಸ
ಬಂಗಾಳದ ಮಾಜಿ ಮುಖ್ಯಮಂತ್ರಿಯಾಗಿದ್ದ ಡಾ. ಬಿಧನ್ ಚಂದ್ರ ರಾಯ್ ಅವರ ಶ್ರಮ ಮತ್ತು ಕೊಡುಗೆಗಾಗಿ ಕೃತಜ್ಞತೆ ಸಲ್ಲಿಸಲು 1991 ರಲ್ಲಿ ರಾಷ್ಟ್ರೀಯ ವೈದ್ಯರ ದಿನವನ್ನು ಮೊದಲ ಬಾರಿಗೆ ಆಚರಿಸಲಾಯಿತು. ಅವರು ಜುಲೈ 1, 1882 ರಂದು ಅವರು ಜನಿಸಿದರು (Born) ಮತ್ತು ಜುಲೈ 1 ರಂದು 1962 ರಲ್ಲಿ ನಿಧನರಾದರು. ಅವರ ಅಧಿಕಾರಾವಧಿಯಲ್ಲಿ ವೈದ್ಯಕೀಯ ಭ್ರಾತೃತ್ವಕ್ಕೆ ಅವರು ನೀಡಿದ ಕೊಡುಗೆಗಳು ಅಪಾರ ಅದನ್ನು ನೆನಪಿಸಿಕೊಳ್ಳುವ ಸಲುವಾಗಿ ಜೊತೆಗೆ ಅವರನ್ನು ಗೌರವಿಸಲು ಜುಲೈ 1 ಅನ್ನು ರಾಷ್ಟ್ರೀಯ ವೈದ್ಯರ ದಿನವಾಗಿ ಆಚರಿಸಲಾಗುತ್ತದೆ.

ಕೋವಿಡ್ ಸಾಂಕ್ರಾಮಿಕ ಮುಗಿದಿಲ್ಲ, 110 ರಾಷ್ಟ್ರದಲ್ಲಿ ಸೋಂಕು ಹೆಚ್ಚುತ್ತಿದೆ; WHO ವಾರ್ನಿಂಗ್‌

Latest Videos

ಇವರು ಭಾರತ ರತ್ನ ಪ್ರಶಸ್ತಿ ಪುರಸ್ಕೃತರು ಎಂಬುದು ಕೂಡ ಹೆಮ್ಮೆಯ ವಿಚಾರ. ಇದರ ಜೊತೆಗೆ, ಜಾದವ್‌ಪುರ ಟಿಬಿ ಆಸ್ಪತ್ರೆ, ಚಿತ್ತರಂಜನ್ ಸೇವಾ ಸದನ್, ಕಮಲಾ ನೆಹರು ಸ್ಮಾರಕ ಆಸ್ಪತ್ರೆ, ವಿಕ್ಟೋರಿಯಾ ಸಂಸ್ಥೆ ಚಿತ್ತರಂಜನ್ ಕ್ಯಾನ್ಸರ್ ಆಸ್ಪತ್ರೆ ಮತ್ತು ಮಹಿಳೆಯರು (Women) ಮತ್ತು ಮಕ್ಕಳಿಗಾಗಿ ಚಿತ್ತರಂಜನ್ ಸೇವಾ ಸದನ್‌ನಂತಹ ವೈದ್ಯಕೀಯ ಸಂಸ್ಥೆಗಳನ್ನು ಸ್ಥಾಪಿಸುವಲ್ಲಿ ಮಹತ್ತರ ಪಾತ್ರ ವಹಿಸಿದ್ದಾರೆ.

ರಾಷ್ಟ್ರೀಯ ವೈದ್ಯರ ದಿನ 2022 ಥೀಮ್
ಈ ವರ್ಷದ ರಾಷ್ಟ್ರೀಯ ವೈದ್ಯರ ದಿನದ ಥೀಮ್ ' ಮೊದಲ ಸಾಲಿನಲ್ಲಿ ಕುಟುಂಬ ವೈದ್ಯರು ('Family Doctor on the Front Line') ಎಂಬುದಾಗಿದೆ. ಕೋವಿಡ್ 19 ರ ಸಾಂಕ್ರಾಮಿಕ ರೋಗದಂತಹ ಕಷ್ಟದ ಸಮಯದಲ್ಲಿ ವೈದ್ಯರ ಕಠಿಣ ಪರಿಶ್ರಮವನ್ನು ಈ ಥೀಮ್ ಸೂಚಿಸುತ್ತದೆ.

ವೈದ್ಯರ ದಿನಾಚರಣೆ 2022 ರ ಪ್ರಾಮುಖ್ಯತೆ
ನಮ್ಮ ಯೋಗಕ್ಷೇಮವನ್ನು (Welfare) ನೋಡಿಕೊಳ್ಳುವ ಸಲುವಾಗಿ ಅವರು ಹಗಲಿರುಳು ದಣಿವರಿಯಿಲ್ಲದೆ ಕೆಲಸ ಮಾಡುವುದರಿಂದ ವೈದ್ಯರು ಮತ್ತು ಅವರ ಕೆಲಸವನ್ನು ಆಚರಿಸುವುದು ಬಹಳ ಮುಖ್ಯ. ಈ ನಿರ್ಣಾಯಕ ಸಾಂಕ್ರಾಮಿಕ ಪರಿಸ್ಥಿತಿಯಲ್ಲಿ, ನಮ್ಮ ಜೀವಗಳನ್ನು ಉಳಿಸಿದ್ದಕ್ಕಾಗಿ 24X7 ಕೆಲಸ ಮಾಡಿದ್ದಕ್ಕಾಗಿ ಅವರಿಗೆ ಧನ್ಯವಾದ ಹೇಳುವುದು ಇನ್ನೂ ಹೆಚ್ಚು ಅವಶ್ಯಕವಾಗಿದೆ. ಈ ದಿನ ಜನರು ವೈದ್ಯರ ಕೆಲಸವನ್ನು ಅಂಗೀಕರಿಸಲು ಮತ್ತು ಅವರಿಗೆ ಸರಿಯಾಗಿ ಧನ್ಯವಾದ ಹೇಳೋಣ.

ರಾಷ್ಟ್ರೀಯ ವೈದ್ಯರ ದಿನದ ಕುರಿತಾಗಿ ಮೂಡುವ ಕೆಲವು ಸಾಮಾನ್ಯ ಪ್ರಶ್ನೆಗೆ ಉತ್ತರಗಳು ಹೀಗಿವೆ...

ಭಾರತದಲ್ಲಿ ರಾಷ್ಟ್ರೀಯ ವೈದ್ಯರ ದಿನವನ್ನು ಯಾವಾಗ ಆಚರಿಸಲಾಗುತ್ತದೆ?
ಪ್ರತಿ ವರ್ಷ, ಜುಲೈ 1 ಅನ್ನು ಭಾರತದಲ್ಲಿ ರಾಷ್ಟ್ರೀಯ ವೈದ್ಯರ ದಿನವನ್ನಾಗಿ ಆಚರಿಸಲಾಗುತ್ತದೆ.

ಮನೆ ಮದ್ದು ಅರಿಶಿಣ, ಸರ್ವಕಾಲದ ಚರ್ಮ ರೋಗಕ್ಕೂ ಮದ್ದು

ಭಾರತವು ಜುಲೈ 1 ರಂದು ರಾಷ್ಟ್ರೀಯ ವೈದ್ಯರ ದಿನವನ್ನು ಏಕೆ ಆಚರಿಸುತ್ತದೆ?
ಜುಲೈ 1 ರಂದು ರಾಷ್ಟ್ರೀಯ ವೈದ್ಯರ ದಿನವು ಬಂಗಾಳದ ಮಾಜಿ ಮುಖ್ಯಮಂತ್ರಿ ಡಾ ಬಿ ಸಿ ರಾಯ್ ಅವರ ಕೊಡುಗೆಯನ್ನು ಗುರುತಿಸುತ್ತದೆ. ಜುಲೈ 1 ಅವರ ಜನ್ಮ ಮತ್ತು ಮರಣ (Death) ವಾರ್ಷಿಕೋತ್ಸವ.

ವಿಶ್ವ ವೈದ್ಯರ ದಿನವನ್ನು ಯಾವಾಗ ಆಚರಿಸಲಾಗುತ್ತದೆ?
ವಿಶ್ವಾದ್ಯಂತ ಮಾರ್ಚ್ 30 ರಂದು ವೈದ್ಯರ ದಿನವನ್ನು ಆಚರಿಸಲಾಗುತ್ತದೆ.

click me!