Covid Cases: ಒಂದೇ ದಿನ 6155 ಕೋವಿಡ್‌ ಕೇಸ್‌: ಪಾಸಿಟಿವಿಟಿ ಶೇ.5.63ಕ್ಕೆ ಏರಿಕೆ

By Vinutha Perla  |  First Published Apr 9, 2023, 8:23 AM IST

ಭಾರತದಲ್ಲಿ ಕೋವಿಡ್ ಪ್ರಕರಣ ದಿನದಿಂದ ದಿನಕ್ಕೆ ಗಣನೀಯವಾಗಿ ಏರಿಕೆಯಾಗುತ್ತಿದೆ. ಶನಿವಾರ ಬೆಳಗ್ಗೆ ಅಂತ್ಯವಾದ 24 ಗಂಟೆ ಅವಧಿಯಲ್ಲಿ 6155 ಹೊಸ ಪ್ರಕರಣಗಳು ದಾಖಲಾಗಿವೆ. ದೈನಂದಿನ ಪಾಸಿಟಿವಿಟಿ ಪ್ರಮಾಣವು ಶೇ.5.63ಕ್ಕೆ ಏರಿಕೆಯಾಗಿದೆ.


ನವದೆಹಲಿ: ಭಾರತದಲ್ಲಿ ದಿನೇದಿನೇ ಕೋವಿಡ್‌ ಸೋಂಕು ಹೆಚ್ಚುತ್ತಿದ್ದು, ಶನಿವಾರ ಬೆಳಗ್ಗೆ ಅಂತ್ಯವಾದ 24 ಗಂಟೆ ಅವಧಿಯಲ್ಲಿ 6155 ಹೊಸ ಪ್ರಕರಣಗಳು ದಾಖಲಾಗಿವೆ. ದೈನಂದಿನ ಪಾಸಿಟಿವಿಟಿ ಪ್ರಮಾಣವು ಶೇ.5.63ಕ್ಕೆ ಏರಿಕೆಯಾಗಿದೆ. ಸೋಂಕಿಗೆ ದೇಶದಲ್ಲಿ ಒಟ್ಟು 11 ಮಂದಿ ಸಾವನ್ನಪ್ಪಿದ್ದು, ಮೃತರ ಪ್ರಮಾಣವು ಸೋಂಕಿತರ ಶೇ.1.19ರಷ್ಟಿದೆ. ದೇಶದಲ್ಲಿ ಹೊಸ ಪ್ರಕರಣಗಳ ದಾಖಲಾತಿ ಹೆಚ್ಚಿರುವುದರಿಂದ ಸಕ್ರಿಯ ಪ್ರಕರಣಗಳು 31,194ಕ್ಕೆ ಏರಿಕೆಯಾಗಿದೆ. ಗುಣಮುಖರ ಪ್ರಮಾಣವು ಶೇ.98.74ಕ್ಕೆ ಕುಸಿದಿದೆ.

ದೇಶದಲ್ಲಿ ಈವರೆಗೂ 4.47 ಕೋಟಿ ಮಂದಿ ಸೋಂಕಿಗೆ ಗುರಿಯಾಗಿದ್ದು,ಅದರಲ್ಲಿ 4.41 ಕೋಟಿ ಮಂದಿ ಗುಣಮುಖರಾಗಿದ್ದಾರೆ ಹಾಗೂ 5.30 ಲಕ್ಷ ಜನ ಸಾವನ್ನಪ್ಪಿದ್ದಾರೆ. ಇದುವರೆಗೂ 220.66 ಕೋಟಿ ಕೋವಿಡ್‌ ಲಸಿಕೆ (Vaccine) ನೀಡಲಾಗಿದೆ ಎಂದು ಕೇಂದ್ರ ಆರೋಗ್ಯ ಇಲಾಖೆ (Health ministry) ತಿಳಿಸಿದೆ.

Tap to resize

Latest Videos

COVID-19 : ಆಪ್ತರನ್ನು ಗುರುತಿಸೋದೂ ಕಷ್ಟ! ಕೊರೊನಾದಿಂದ ಕಾಡ್ತಿದೆ ಮತ್ತೊಂದು ಸಮಸ್ಯೆ

ಕೋವಿಡ್ ಹೆಚ್ಚಳದಿಂದ ಭಾರತದಲ್ಲಿ ಮಾರ್ಗಸೂಚಿ ಜಾರಿ, ಮತ್ತೆ ಬಂತು ಮಾಸ್ಕ್!
ವಿಶ್ವದ ಹಲವು ರಾಷ್ಟ್ರಗಳಲ್ಲಿ ಕೋವಿಡ್ ಪ್ರಕರಣಗಳ ಸಂಖ್ಯೆ ಗಣನೀಯವಾಗಿ ಏರಿಕೆಯಾಗುತ್ತಿದೆ. ಇತ್ತ ಭಾರತದಲ್ಲೂ ಕೊರೋನಾ ಮತ್ತೆ ಕಾಣಿಸಿಕೊಂಡಿದೆ. ಪ್ರತಿ ದಿನ ಸರಾಸರಿ 3,000 ಪ್ರಕರಣ ದಾಖಲಾಗುತ್ತಿದೆ. ಸಕ್ರೀಯ ಕೋವಿಡ್ ಪ್ರಕರಣ ಸಂಖ್ಯೆ ಏರಿಕೆಯಾಗಿದೆ. ಇದರ ಬೆನ್ನಲ್ಲೇ ಕೇಂದ್ರ ಸರ್ಕಾರ ಕೆಲ ಮಾರ್ಗಸೂಚಿ (Guidelines) ಬಿಡುಗಡೆ ಮಾಡಿದೆ. ವಿದೇಶಿ ಪ್ರಯಾಣಿಕರು, ಹಾಗೂ ವಿಮಾನ ಪ್ರಯಾಣಿಕರನ್ನು ಗಮನದಲ್ಲಿಟ್ಟುಕೊಂಡು ಕೇಂದ್ರ ಸರ್ಕಾರ ಮಾರ್ಗಸೂಚಿ ಪ್ರಕಟಿಸಿದೆ. ವಿಮಾನ ಪ್ರಯಾಣಿಕರು (Passnegers) ಮಾಸ್ಕ್ ಧರಿಸುವಂತೆ ಸೂಚಿಸಿದೆ. 

ವಿದೇಶಿ ಪ್ರಯಾಣಿಕರು ಮೇಲೆ ನಿಗಾ ಇಡಲಾಗುತ್ತಿದೆ. ವಿಮಾನ ಪ್ರಯಾಣಿಕರು (Passengers) ಮಾಸ್ಕ್ ಧರಿಸುವಂತೆ ಸೂಚಿಸಲಾಗಿದೆ. ಆದರೆ ಕಡ್ಡಾಯ ಮಾಡಿಲ್ಲ. ಸದ್ಯ ಸರಾಸರಿ 3,000 ಕೋವಿಡ್ ಪ್ರಕರಣ ದಾಖಲಾಗುತ್ತಿದೆ. ಆದರೆ ಭಾರತದಲ್ಲಿ ಕೋವಿಡ್ ಪರಿಸ್ಥಿತಿ ಸಂಪೂರ್ಣ ನಿಯಂತ್ರಣದಲ್ಲಿದೆ. ಹೀಗಾಗಿ ಜನರನ್ನು ಜಾಗೃತಗೊಳಿಸುವ ಕೆಲಸ ಮಾಡಲಾಗುತ್ತಿದೆ. ಕೋವಿಡ್ ವೈರಸ್ ಅಂಟಿಕೊಳ್ಳದಂತೆ ದೂರವಿರಲಿ ತಜ್ಞರು ಸೂಚಿಸಿದ ಸಲಹೆಗಳನ್ನೂ ಸೂಚಿಸಲಾಗಿದೆ ಎಂದು ರಾಜ್ಯಸಭೆಯಲ್ಲಿ ವಿಮಾನಯಾನ ರಾಜ್ಯ ಸಚಿವ ನಿವೃತ್ತ ಜನರಲ್ ವಿಕೆ ಸಿಂಗ್ ಹೇಳಿದ್ದಾರೆ.

ವಿದೇಶದಲ್ಲಿ ಗಣನೀಯವಾಗಿ ಕೋವಿಡ್ ಏರಿಕೆಯಾಗುತ್ತಿದೆ. ಇದರ ಆತಂಕ ಭಾರತದಲ್ಲೂ ಇದೆ. ಆದರೆ ಭಾರತದಲ್ಲಿನ ಕೋವಿಡ್ ಪ್ರಕರಣಗಳ ಸಂಖ್ಯೆ ಏರಿಕೆಯಾದರೂ ಆತಂಕಪಡವು ಅಗತ್ಯವಿಲ್ಲ. ದೇಶದಲ್ಲಿನ ಕೋವಿಡ್ ಪ್ರಕರಣ ಹಾಗೂ ತೆಗೆದುಕೊಳ್ಳಬೇಕಾದ ಕ್ರಮಗಳ ಕುರಿತು ನಿಗಾವಹಿಸಲಾಗಿದೆ. ಈಗಾಗಲೇ ಪ್ರಧಾನಿ ನರೇಂದ್ರ ಮೋದಿ ಉನ್ನತ ಮಟ್ಟದ ಸಭೆ ನಡೆಸಿ ಅಧಿಕಾರಿಗಳಿಗೆ ಮಹ್ವದ ಸೂಚನೆ ನೀಡಿದ್ದಾರೆ ಎಂದು ವಿಕೆ ಸಿಂಗ್ ರಾಜ್ಯಸಭೆಯಲ್ಲಿ ಹೇಳಿದ್ದಾರೆ.

ಕೋವಿಡ್ ಏರಿಕೆ: ತಮಿಳುನಾಡಿನ ಆಸ್ಪತ್ರೆಗಳಲ್ಲಿ ಮಾಸ್ಕ್‌ ಕಡ್ಡಾಯ

Covid Case ಹೆಚ್ಚಳ, ಮತ್ತೊಮ್ಮೆ ಬೂಸ್ಟರ್‌ ಡೋಸ್‌ ನೀಡಲು ಡಬ್ಲ್ಯುಎಚ್‌ಒ ಸಲಹೆ
ಪೂರ್ವರೋಗಗಳಿಂದ ಬಳಲುತ್ತಿರುವವರಿಗೆ, ಆರೋಗ್ಯ ಕಾರ್ಯಕರ್ತರಿಗೆ 6 ಅಥವಾ 12 ತಿಂಗಳ ಬಳಿಕ ಮತ್ತೊಂದು ಬೂಸ್ಟರ್‌ ಡೋಸ್‌ ನೀಡುವಂತೆ ವಿಶ್ವ ಆರೋಗ್ಯ ಸಂಸ್ಥೆಯ ‘ಲಸಿಕಾಕರಣ ತಜ್ಞರ ಸಮಿತಿ’ ಸಲಹೆ ನೀಡಿದೆ.ಭಾರತದಲ್ಲಿ ಇತ್ತೀಚಿನ ದಿನಗಳಲ್ಲಿ ಕೋವಿಡ್‌ ಹೆಚ್ಚುತ್ತಿರುವ ನಡುವೆಯೇ ಈ ಸಲಹೆ ಬಂದಿದೆ. ನಿರ್ದಿಷ್ಟಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿರುವ ಯುವಕರು, ಮುಂಚೂಣಿ ಕಾರ್ಯಕರ್ತರು, ಆರೋಗ್ಯ ಕಾರ್ಯಕರ್ತರಿಗೆ ಮತ್ತೊಂದು ಬೂಸ್ಟರ್‌ ಡೋಸ್‌ ನೀಡಬೇಕು. ಒಂದು ವೇಳೆ ಇವರು ಕೋವಿಡ್‌ಗೆ ತುತ್ತಾದರೆ ಹೆಚ್ಚಿನ ತೊಂದರೆಗೆ ತುತ್ತಾಗಲಿದ್ದಾರೆ ಎಂದು ಸಮಿತಿ ಹೇಳಿದೆ.

ಅಲ್ಲದೇ ಯಾವುದೇ ಆರೋಗ್ಯ ಸಮಸ್ಯೆಗಳಿಲ್ಲದ ಯುವಕರಿಗೆ ಈಗಾಗಲೇ ನೀಡಿರುವ ಬೂಸ್ಟರ್‌ ಡೋಸ್‌ ಸಾಕು ಎಂಬ ಅಭಿಪ್ರಾಯವನ್ನು ವ್ಯಕ್ತಪಡಿಸಿದೆ. ಹಾಗೆಯೇ 6 ತಿಂಗಳಿನಿಂದ 17 ವರ್ಷದೊಳಗಿನವರನ್ನು ಲಸಿಕೆ (Vaccine) ನೀಡಲು ಕೊನೆಯಲ್ಲಿ ಪರಿಗಣಿಸಹುದು ಎಂದು ಸಮಿತಿ ಹೇಳಿದೆ.

click me!