ನಿತ್ಯ ಹೊಟ್ಟೆಗೆ ಬೇಕು ಎನ್ನುವ ಕಾರಣಕ್ಕೆ ಅಡುಗೆ ಮಾಡುವ ಬದಲು ಮಾಡುವ ಕೆಲಸವನ್ನು ನಾಲ್ಕು ದಿನ ಎಂಜಾಯ್ ಮಾಡಿ ನೋಡಿ. ನೀವು ಮಾಡುವ ಅಡುಗೆ ಕೆಲಸ ಬರೀ ಹೊಟ್ಟೆಗಾಗಿ ಮಾಡುವಂತಹದ್ದಲ್ಲ. ಇಡೀ ಕುಟುಂಬದವರ ಆರೋಗ್ಯ ಕಾಪಾಡುವ ಜೊತೆಗೆ ನಿಮ್ಮ ಆತ್ಮವಿಶ್ವಾಸ ಹೆಚ್ಚಿಸುತ್ತದೆ.
ಮಾನಸಿಕ ಆರೋಗ್ಯ ಎಂಬ ವಿಷ್ಯ ಬಹಳ ಗಂಭೀರವಾಗಿದ್ದರೂ ಜನರು ಅದನ್ನು ಗಂಭೀರವಾಗಿ ಪರಿಗಣಿಸೋದಿಲ್ಲ. ಕೆಲವೊಮ್ಮೆ ಸಮಸ್ಯೆ ಮಿತಿಮೀರಿದೆ ಎಂದಾಗ ಅದ್ರ ಪರಿಹಾರಕ್ಕೆ ಮುಂದಾಗ್ತಾರೆ. ಧ್ಯಾನ ಮಾಡಿದ್ರೆ, ಯೋಗ ಮಾಡಿದ್ರೆ, ಇಷ್ಟದ ಹಾಡು ಕೇಳಿದ್ರೆ, ಒಳ್ಳೆಯ ಪುಸ್ತಕ ಓದಿದ್ರೆ ನಿಮ್ಮ ಮನಸ್ಸು ಶಾಂತವಾಗುತ್ತದೆ. ಇದ್ರಿಂದ ಮಾನಸಿಕ ಆರೋಗ್ಯವನ್ನು ವೃದ್ಧಿಸಿಕೊಳ್ಳಬಹುದು ಅಂತಾ ಬಹುತೇಕರು ನಿಮಗೆ ಸಲಹೆ ನೀಡ್ತಾರೆ. ಧ್ಯಾನ, ಪುಸ್ತಕ, ನಿಮ್ಮಿಷ್ಟದ ಹವ್ಯಾಸ ನಿಮ್ಮ ಮನಸ್ಸಿಗೆ ನೆಮ್ಮದಿ ನೀಡುವುದು ನೂರಕ್ಕೆ ನೂರು ಸತ್ಯ. ಆದ್ರೆ ಇದ್ರಲ್ಲಿ ಇನ್ನೊಂದನ್ನು ನೀವು ಸೇರಿಸಬಹುದು.
ಸಾಮಾನ್ಯವಾಗಿ ಅಡುಗೆ (Cooking) ಅಂದ್ರೆ ಮೂಗು ಮುರಿಯೋರೆ ಹೆಚ್ಚು. ಅಡುಗೆ ಎನ್ನುವುದನ್ನು ಮಹಿಳೆಯರಿಗೆ ಸೀಮಿತ ಮಾಡಿದವರಿದ್ದಾರೆ. ಈಗಿನ ದಿನಗಳಲ್ಲಿ ಕೆಲಸ (Work) ದ ಒತ್ತಡದ ಮಧ್ಯೆ ಅಡುಗೆ ಮನೆಗೆ ಹೋಗೋರೇ ಅಪರೂಪ. ಮನೆಯ ಎಲ್ಲ ಕೆಲಸ ಮಾಡ್ತೇನೆ, ಅಡುಗೆ ಅಂದ್ರೆ ಯಾಕೋ ಕಷ್ಟ ಎನ್ನುವವರು ಅನೇಕರಿದ್ದಾರೆ. ವೀಕ್ ಡೇಸ್ ನಲ್ಲಿ ಕಚೇರಿಯಲ್ಲಿ ಊಟ ಮಾಡಿ, ವೀಕೆಂಡ್ (Weekend) ನಲ್ಲಿ ಹೊಟೇಲ್ ಗೆ ಹೋಗೋರನ್ನು ನೀವು ನೋಡಬಹುದು. ಕೆಲವರಿಗೆ ಅಡುಗೆ ತಯಾರಿಸೋದು, ಬಗೆ ಬಗೆ ಖಾದ್ಯಗಳನ್ನು ಸಿದ್ಧಪಡಿಸೋದು ಇಷ್ಟ. ಖುಷಿ ಖುಷಿಯಾಗಿ ಅಡುಗೆ ಮಾಡೋರು ನೀವಾಗಿದ್ದರೆ ನಿಮಗೊಂದು ಸಂತೋಷದ ವಿಷ್ಯವಿದೆ. ಮನೆಯಲ್ಲಿ ಅಡುಗೆ ತಯಾರಿಸೋದ್ರಿಂದ ನಿಮ್ಮ ಹಣ ಉಳಿಯೋದು ಮಾತ್ರವಲ್ಲ ಮಾನಸಿಕ ಆರೋಗ್ಯ ಕಾಪಾಡಿಕೊಳ್ಳಲು ಅತ್ಯುತ್ತಮ ಮಾರ್ಗವೆಂದು ಅಡುಗೆಯನ್ನು ಪರಿಗಣಿಸಲಾಗಿದೆ. ಇಷ್ಟಕ್ಕೂ ಅಡುಗೆಗೂ ಮಾನಸಿಕ ಆರೋಗ್ಯಕ್ಕೂ ಸಂಬಂಧವಿದ್ಯಾ ಅಂತಾ ನೀವು ಅಚ್ಚರಿಗೊಳ್ಳಬಹುದು. ಅಡುಗೆ ಮನೆಯ ಕಾರ್ಯಗಳು ನಿಮ್ಮ ಮನಸ್ಸನ್ನು ಹೇಗೆ ತೀಕ್ಷ್ಣಗೊಳಿಸುತ್ತವೆ, ಒಂದು ಕಡೆ ಮನಸ್ಸು ಕೇಂದ್ರೀಕರಿಸಲು ಹೇಗೆ ಸಹಾಯವಾಗುತ್ತವೆ ಎಂಬುದನ್ನು ನೋಡೋಣ.
ಈ ರೆಸ್ಟೋರೆಂಟ್ ನಲ್ಲಿ ಆಹಾರ ತಿನ್ನೋ ಗ್ರಾಹಕರು ಮೊಬೈಲ್ ಮುಟ್ಟೋ ಹಾಗಿಲ್ಲ!
ಅಡುಗೆ ಮತ್ತು ಮಾನಸಿಕ ಆರೋಗ್ಯದ ನಡುವೆ ಇದೆ ಸಂಪರ್ಕ : ಅಡುಗೆ ಮಾಡುವಾಗ ನಮ್ಮ ಇಂದ್ರಿಯಗಳು ಸಕ್ರಿಯವಾಗುತ್ತವೆ. ಯಾಕೆಂದ್ರೆ ಅಡುಗೆ ಮಾಡುವಾಗ ನಮ್ಮ ಮನಸ್ಸು ಸಂಪೂರ್ಣ ಅಡುಗೆ ಮೇಲಿರಬೇಕು. ಯಾಕೆಂದ್ರೆ ಆಹಾರ ಎಷ್ಟು ಬೇಯಿಸಬೇಕು, ಎಷ್ಟು ಪ್ರಮಾಣದಲ್ಲಿ ಉಪ್ಪು ಹಾಕ್ಬೇಕು, ಎಷ್ಟು ಎಣ್ಣೆ ಬಳಸ್ಬೇಕು, ಯಾವೆಲ್ಲ ಮಸಾಲೆ ಹಾಕ್ಬೇಕು ಅಂತಾ ನಾವು ಆಲೋಚನೆ ಮಾಡ್ತಿರುತ್ತೇವೆ. ಇದ್ರಿಂದ ನಮ್ಮ ಮನಸ್ಸು ತೀಕ್ಷ್ಣವಾಗುತ್ತದೆ. ನಮ್ಮ ಸಂಪೂರ್ಣ ಗಮನ ಅದ್ರ ಮೇಲೆ ಇರೋದ್ರಿಂದ ಮೆದುಳಿಗೆ ಉತ್ತಮ ವ್ಯಾಯಾಮವೂ ಸಿಗುತ್ತದೆ. ಅಡುಗೆ ಮಾಡುವುದರಿಂದ ಯೋಚಿಸುವ ಮತ್ತು ಅರ್ಥಮಾಡಿಕೊಳ್ಳುವ ಸಾಮರ್ಥ್ಯ ಕೂಡ ಹೆಚ್ಚಾಗುತ್ತದೆ. ಅಡುಗೆ ನಮ್ಮ ಮೋಟರ್ ಸ್ಕಿಲ್ (Motar Skill) ಹೆಚ್ಚಿಸುತ್ತದೆ. ಅಂದ್ರೆ ನೀವು ಅಡುಗೆ ಮಾಡುವಾಗ ಎಲ್ಲವನ್ನೂ ಗಮನಿಸಬೇಕು. ಚಾಕು ಎಷ್ಟು ಮೊನಚಾಗಿದ್ರೆ ಬೇಗ ತರಕಾರಿ ಕಟ್ ಆಗುತ್ತೆ, ಯಾವ ತರಕಾರಿಯನ್ನು ಹೇಗೆ ಕತ್ತರಿಸಬೇಕು, ತರಕಾರಿ ಖರೀದಿ ವೇಳೆ ಯಾವುದನ್ನು ಖರೀದಿ ಮಾಡಿದ್ರೆ ಬೇಗ ಬೇಯಿಸಬಹುದು ಎಂಬೆಲ್ಲದರ ಬಗ್ಗೆ ನಮ್ಮ ಗಮನ ಹರಿಯುತ್ತದೆ. ಇದು ನಮ್ಮ ಗಮನ ಶಕ್ತಿಯನ್ನು ಹೆಚ್ಚಿಸುತ್ತದೆ.
ಅಡುಗೆ ತಯಾರಿಸೋದ್ರಿಂದ ನಿಮ್ಮ ಆತ್ಮವಿಶ್ವಾಸ ಹೆಚ್ಚುತ್ತದೆ. ನೀವು ರುಚಿಯಾಗಿ ಅಡುಗೆ ಮಾಡಿದ್ದು, ಒಂದಿಷ್ಟು ಹೊಗಳಿಕೆ ನಿಮಗೆ ಸಿಕ್ಕಿದ್ರೆ ಅದು ಮತ್ತಷ್ಟು ಆರೋಗ್ಯಕರ ಆಹಾರ ತಯಾರಿಸಲು ನಿಮ್ಮನ್ನು ಪ್ರೇರೇಪಿಸುತ್ತದೆ.
ಅಡುಗೆ ಮಾಡುವಾಗ ನಮ್ಮ ಗಮನ ಒಂದೇ ಕಡೆ ಇರೋದ್ರಿಂದ ನಮ್ಮ ಒತ್ತಡ ಕಡಿಮೆಯಾಗುತ್ತದೆ. ನಾವು ಅಡುಗೆ ಮೇಲೆ ಗಮನ ಕೇಂದ್ರೀಕರಿಸುವ ಕಾರಣ ನಮಗೆ ಬೇರೆ ಆಲೋಚನೆ ಮನಸ್ಸಿನಲ್ಲಿ ಬರೋದಿಲ್ಲ. ಇದು ಬರೀ ಅಡುಗೆಗೆ ಸೀಮಿತವಾಗೋದಿಲ್ಲ, ನಿತ್ಯದ ಜೀವನದಲ್ಲಿ ಕೂಡ ಸಣ್ಣ ಪುಟ್ಟ ಸಮಸ್ಯೆ ನಮ್ಮನ್ನು ವಿಚಲಿತವಾಗದಂತೆ ತಡೆಯುತ್ತದೆ. ಅಡುಗೆ ಮಾಡಲು ಕಲಿಯುವುದು ಆಹಾರದೊಂದಿಗಿನ ನಿಮ್ಮ ಸಂಬಂಧದ ಮೇಲೆ ಸಕಾರಾತ್ಮಕ ಪರಿಣಾಮ ಬೀರುತ್ತದೆ. ಅಮೇರಿಕನ್ ಡಯೆಟಿಕ್ ಅಸೋಸಿಯೇಷನ್ ಪ್ರಕಾರ, ಮಕ್ಕಳನ್ನು ಜೊತೆಗೆ ಸೇರಿಸಿಕೊಂಡು ಪೋಷಕರು ಅಡುಗೆ ಮಾಡಿದ್ರೆ ಆ ಮಕ್ಕಳು ಆರೋಗ್ಯಕರ ಆಹಾರದ ಬಗ್ಗೆ ಹೆಚ್ಚು ಧನಾತ್ಮಕವಾಗಿ ಯೋಚಿಸುತ್ತಾರಂತೆ.
ಪುರುಷರಿಗೇಕೆ ಬೇಗ ಬಾಲ್ಡ್ ಆಗುತ್ತೆ? ಏನಾದ್ರೂ ಪರಿಹಾರವಿದ್ಯಾ?
ಮನೆಯಲ್ಲಿ ಅಡುಗೆ ಮಾಡುವುದು ತಾಳ್ಮೆಯನ್ನು ಹೆಚ್ಚಿಸುತ್ತದೆ. ಬೆಳ್ಳುಳ್ಳಿ, ಈರುಳ್ಳಿ ಮತ್ತು ಟೊಮೆಟೊಗಳನ್ನು ಚೆನ್ನಾಗಿ ಹುರಿಯಲು ಸಮಯ ಬೇಕಾಗುತ್ತದೆ ಇಲ್ಲವೆ ಕೆಲವೊಂದು ಆಹಾರ ಸಂಪೂರ್ಣ ಆರಿದ ಮೇಲೆ ಅದಕ್ಕೆ ಮಸಾಲೆ ಬೆರೆಸಬೇಕಾಗುತ್ತದೆ. ಇಂಥ ಸಮಯದಲ್ಲಿ ಅಡುಗೆ ಮಾಡುವವರು ಕಾಯಬೇಕು. ಈ ಕಾಯುವಿಕೆ ತಾಳ್ಮೆ ಹೆಚ್ಚಿಸುತ್ತದೆ. ಜನರು ಅಡುಗೆಯಲ್ಲಿ ಹೊಸ ಹೊಸ ಪ್ರಯೋಗಗಳನ್ನು ಮಾಡಲು ಬಯಸ್ತಾರೆ. ಇದರಿಂದ ನಿಮ್ಮ ಕ್ರಿಯೆಟಿವಿಟಿ ಹೆಚ್ಚಾಗುತ್ತದೆ.