Covid and Health: ಕೊರೋನಾ ಬಂದಿದ್ದೇ ಬಂದಿದ್ದು, ದೀರ್ಘಕಾಲದ ಆರೋಗ್ಯ ಸಮಸ್ಯೆಗಳಲ್ಲಿ ವಿಪರೀತ ಏರಿಕೆ

By Suvarna News  |  First Published Apr 7, 2023, 4:59 PM IST

“ಒಂದು ಜ್ವರ ಬಂದರೆ ಚೇತರಿಸಿಕೊಳ್ಳಲು ಕನಿಷ್ಠ 15 ದಿನ ಬೇಕುʼ ಎಂದು ಅಲವತ್ತುಕೊಳ್ಳುವ ದಿನಗಳಲ್ಲಿ ನಾವಿದ್ದೇವೆ. ಇದು ಕೊರೋನಾ ಮಹಿಮೆ ಎನ್ನುವವರಿದ್ದಾರೆ. ಪ್ರತಿಯೊಬ್ಬರನ್ನೂ ಒಂದಿಲ್ಲೊಂದು ರೀತಿಯಲ್ಲಿ ಕಾಡಿದ ಕೊರೋನಾ ವೈರಸ್‌ ದೇಹದ ರೋಗ ನಿರೋಧಕ ಶಕ್ತಿಯನ್ನು ಕುಗ್ಗಿಸಿದೆ. ಪರಿಣಾಮವಾಗಿ, ಹಲವು ರೀತಿಯ ಆರೋಗ್ಯ ಸಮಸ್ಯೆಗಳಲ್ಲಿ ಹೆಚ್ಚಳ ಕಂಡುಬಂದಿದೆ. 


ಪ್ರತಿವರ್ಷ ಏಪ್ರಿಲ್‌ 7ರಂದು ವಿಶ್ವ ಆರೋಗ್ಯ ದಿನವೆಂದು ಆಚರಿಸಲಾಗುತ್ತದೆ. ವಿಶ್ವ ಆರೋಗ್ಯ ಸಂಸ್ಥೆಯ ನೇತೃತ್ವದಲ್ಲಿ ಪ್ರತಿ ವರ್ಷ ಆಚರಿಸುವ ಈ ದಿನದ ಉದ್ದೇಶವೆಂದರೆ, ವೈದ್ಯಕೀಯ ಕ್ಷೇತ್ರದಲ್ಲಿ ನಡೆಯುತ್ತಿರುವ ಹೊಸ ಹೊಸ ವಿದ್ಯಮಾನ, ಅನ್ವೇಷಣೆ, ಪ್ರಗತಿಯ ಬಗ್ಗೆ ವಿಶ್ವದೆಲ್ಲೆಡೆಯ ಜನರಿಗೆ ತಿಳಿಯಪಡಿಸುವುದಾಗಿದೆ. ಈ ಬಾರಿಯ ಆರೋಗ್ಯ ದಿನವನ್ನು “ಎಲ್ಲರಿಗೂ ಆರೋಗ್ಯʼ ಎನ್ನುವ ಥೀಮ್‌ ಅಡಿಯಲ್ಲಿ ಆಚರಿಸಲಾಗುತ್ತಿದೆ. ನಿಮಗೆ ತಿಳಿದೇ ಇದೆ, ಕಳೆದ ಎರಡು ವರ್ಷಗಳಿಂದ ಇಡೀ ವಿಶ್ವ ಕೊರೋನಾ ಸೋಂಕಿನಿಂದ ನಲುಗಿದೆ. ಇದರಿಂದ ಯಾವುದೇ ದೇಶ ಪಾರಾಗಿಲ್ಲ. ಮುಂದುವರಿದ ರಾಷ್ಟ್ರಗಳೇ ಈ ಸೋಂಕಿನ ಅಬ್ಬರದ ಮುಂದೆ ಸೋತು ಹೋದವು. ಭಾರತದಲ್ಲೂ ಇದರಿಂದಾದ ಅನಾಹುತ ಅಷ್ಟಿಷ್ಟಲ್ಲ. ಈಗಲೂ ಮತ್ತೆ ಕೊರೋನಾ ಪ್ರಕರಣಗಳು ದಿನದಿಂದ ದಿನಕ್ಕೆ ಏರಿಕೆಯಾಗುತ್ತಿರುವುದು ಕಂಡುಬರುತ್ತಿದೆ. ಕೊರೋನಾ ವೈರಸ್‌ ಒಮ್ಮೆ ಬಂತು, ಹೋಯಿತು ಎನ್ನುವಂತಿಲ್ಲ. ಏಕೆಂದರೆ, ಇದರಿಂದಾದ ಪರಿಣಾಮಗಳು ವಿಪರೀತ. ದೀರ್ಘಕಾಲದವರೆಗೂ ಇದರ ಪರಿಣಾಮಗಳು ಇರುತ್ತವೆ. ಕೊರೋನಾ ಸಾಂಕ್ರಾಮಿಕದ ಬಳಿಕ ಹಲವು ರೀತಿಯ ಆರೋಗ್ಯ ಸಮಸ್ಯೆಗಳಲ್ಲಿ ಹೆಚ್ಚಳ ಕಂಡುಬಂದಿದೆ. ದೈಹಿಕ ಆರೋಗ್ಯವಷ್ಟೇ ಅಲ್ಲ, ಮಾನಸಿಕ ಸಮಸ್ಯೆಗಳೂ ಹೆಚ್ಚಾಗಿವೆ. ಹಲವು ಅಧ್ಯಯನಗಳ ಪ್ರಕಾರ, ಕೊರೋನಾ ವೈರಸ್‌ ನಿಂದ ಹೃದಯ, ಶ್ವಾಸಕೋಶ, ಗಂಟಲು, ಹೊಟ್ಟೆ ಸೇರಿದಂತೆ ಹಲವು ಇತರ ಅಂಗಗಳ ಮೇಲೆ ತೀವ್ರವಾದ ಪ್ರಭಾವ ಉಂಟಾಗಿದೆ. ಇದಕ್ಕೆ ಸಾಕ್ಷಿ ಎಂಬಂತೆ ಹಲವು ರೋಗಗಳಲ್ಲಿ ಹೆಚ್ಚಳ ಕಂಡುಬರುತ್ತಿದೆ.

•    ಮಾನಸಿಕ ಸಮಸ್ಯೆ (Mental Problem)
ಅಚ್ಚರಿಯಾಗಬಹುದು. ಕೊರೋನಾ ಬಳಿಕ, ಮಾನಸಿಕ ಸಮಸ್ಯೆಗಳಲ್ಲಿ ಭಾರೀ ಹೆಚ್ಚಳವುಂಟಾಗಿದೆ. ಚಿಂತೆ, ಆತಂಕ, ಸ್ಮರಣೆ ಶಕ್ತಿ, ಖಿನ್ನತೆ ಸೇರಿದಂತೆ ಹಲವು ಸಮಸ್ಯೆಗಳು ಕೊರೋನಾ ಬಳಿಕ ಹೆಚ್ಚಿರುವುದು ಕೆಲವು ವೈದ್ಯ ಸಂಸ್ಥೆಗಳ ದಾಖಲೆಗಳಿಂದ (Documents) ದೃಢಪಟ್ಟಿದೆ.  ಇದರಿಂದಾಗಿ, ಗುಣಮಟ್ಟದ ಜೀವನಕ್ಕೆ (Quality Life) ಧಕ್ಕೆಯಾಗಿದೆ. ಆರ್ಥಿಕ ಸಂಕಷ್ಟದಿಂದಾಗಿಯೂ ಮಾನಸಿಕ ಸಮಸ್ಯೆ ಉಂಟಾಗಿದೆ.

Latest Videos

undefined

Mental Health : ನಿಮ್ಮ ಮನಸ್ಸಿಗೆ ಈ ಸಂದರ್ಭದಲ್ಲಿ ಬೇಕು ವಿಶ್ರಾಂತಿ

•    ಕ್ಯಾನ್ಸರ್‌ (Cancer)
ಖಾಸಗಿ ಆಸ್ಪತ್ರೆಯೊಂದರ ತಜ್ಞರ (Experts) ಪ್ರಕಾರ, ಕೊರೋನಾ (Corona) ಬಳಿಕ ಕ್ಯಾನ್ಸರ್‌ ಪ್ರಕರಣಗಳು ಹೆಚ್ಚಾಗಿವೆ. ಕೊರೋನಾ ವೈರಸ್‌ ಹಲವು ರೀತಿಯ ಪ್ರೊಟೀನ್‌ ಗಳ ಮಟ್ಟ ಹೆಚ್ಚಿಸುತ್ತದೆ. ಇದರಿಂದಾಗಿ, ಕ್ಯಾನ್ಸರ್‌ ಪ್ರಕರಣ ಏರಿಕೆಯಾಗುವುದು ಸಹಜ. ಕೋವಿಡ್‌ -19 (Covid19 Virus) ವೈರಸ್‌ ಪಿ53 ಎನ್ನುವ ಜೀನ್‌ ಹಾಗೂ ಇದಕ್ಕೆ ಸಂಬಂಧಿಸಿದ ಅಂಶದೊಂದಿಗೆ ಸಂವಾದಿಸುತ್ತದೆ. ಇದರಿಂದಾಗಿ, ಕ್ಯಾನ್ಸರ್‌ ವಿರುದ್ಧ ಹೋರಾಡುವ ಶಕ್ತಿ ಕುಂದುತ್ತದೆ. 

•    ಉಸಿರಾಟದ ಸಮಸ್ಯೆ (Breathing)
ಕೊರೋನಾ ವೈರಸ್‌ ನಿಂದಾಗಿ ದೀರ್ಘಕಾಲದವರೆಗೆ ಕೆಮ್ಮು (Cough), ಉಸಿರಾಟದ ಸಮಸ್ಯೆಗಳು ಬಾಧಿಸುತ್ತಿವೆ. ಈ ಸ್ಥಿತಿಯಿಂದಾಗಿ ಅಸ್ತಮಾ (Asthma) ಹಾಗೂ ಕ್ರಾನಿಕ್‌ ಆಬ್‌ಸ್ಟ್ರಕ್ಟಿವ್‌ ಪಲ್ಮನರಿ ಡಿಸೀಸ್‌ ನಂತಹ ಮೊದನಿಂದಲೂ ಇದ್ದ ಸಮಸ್ಯೆಗಳು ಹೆಚ್ಚಾಗಿವೆ. ಕೋವಿಡ್-‌19 ಸೋಂಕು ಶ್ವಾಸನಾಳಗಳ ಮೇಲೆ ಹಾನಿ ಮಾಡುವಂಥದ್ದಾಗಿದ್ದು, ಈ ಅಂಗದ ಸಮಸ್ಯೆಗಳನ್ನು ಸಹ ಹೆಚ್ಚಿಸಿದೆ. 

•    ರಕ್ತದೊತ್ತಡ (High Blood Pressure)
ಹಲವು ವೈದ್ಯಕೀಯ ಅನುಭವ ಹಾಗೂ ಅಧ್ಯಯನಗಳ ಪ್ರಕಾರ, ಜನರಲ್ಲಿ ರಕ್ತದೊತ್ತಡದ ಸಮಸ್ಯೆ ತೀವ್ರವಾಗಿ ಏರಿಕೆಯಾಗಿದೆ. ಇದು ಎಷ್ಟರಮಟ್ಟಿಗೆ ಹೆಚ್ಚಿದೆ ಎಂದರೆ, ಸಾಂಕ್ರಾಮಿಕದ ಮಾದರಿಯಲ್ಲಿ ಏರಿಕೆಯಾಗಿರುವುದು ಪರಿಸ್ಥಿತಿಯ ಗಂಭೀರತೆಯನ್ನು ಸೂಚಿಸುತ್ತದೆ. ಜರ್ನಲ್‌ ಸರ್ಕ್ಯುಲೇಷನ್‌ ನಲ್ಲಿ ಪ್ರಕಟವಾದ ಒಂದು ಸಂಶೋಧನಾ ವರದಿ ಪ್ರಕಾರ, ಕೋವಿಡ್‌ ನಂತರ ಎಲ್ಲ ವರ್ಗದ ಜನರಲ್ಲಿ ರಕ್ತದೊತ್ತಡದ ಸಮಸ್ಯೆ ಚಿಂತಾಜನಕವಾಗಿ ಏರಿದೆ.

World Health Day : ಭಾರತದ ಮಹಿಳೆಯರಲ್ಲಿ ಹೆಚ್ಚಾಗ್ತಿದೆ ಈ ಸಮಸ್ಯೆ

•    ಮಧುಮೇಹ (Diabetes) 
ಕೋವಿಡ್‌ ನಂತರದ ದಿನಗಳಲ್ಲಿ ಮಧುಮೇಹ ಅತಿಯಾಗಿ ಹೆಚ್ಚಿರುವುದು ಸಾಬೀತಾಗಿದೆ. ವೈದ್ಯರ ಪ್ರಕಾರ, ಕೋವಿಡ್‌ ಸಮಯದಲ್ಲಿ ನೀಡಿದ ಹಲವು ಚಿಕಿತ್ಸೆ (Treatment) ಹಾಗೂ ಮಾತ್ರೆಗಳ (Medicines) ಪರಿಣಾಮವಾಗಿ ಮಧುಮೇಹಿಗಳ ಸಂಖ್ಯೆ ಏರಿಕೆಯಾಗಿದ್ದು, ಜತೆಗೇ ಹಲವರಲ್ಲಿ ವಿವಿಧ ರೀತಿಯ ಆರೋಗ್ಯ (Health) ಸಮಸ್ಯೆಗಳಿಗೆ ಕಾರಣವಾಗಿದೆ.

•    ಹೃದ್ರೋಗ (Heart Problem)
ಹೃದಯಕ್ಕೆ ಸಂಬಂಧಿಸಿದ ಸಮಸ್ಯೆ, ಪಾರ್ಶ್ವವಾಯು, ಅನಿಯಮಿತ ಹೃದಯ ಬಡಿತ, ಹಾರ್ಟ್‌ ಫೆಲ್ಯೂರ್‌, ರಕ್ತ ಹೆಪ್ಪುಗಟ್ಟುವ (Blood Clot) ಸಮಸ್ಯೆಗಳು ಹೆಚ್ಚಿವೆ. 

click me!