ಸುಸ್ತಾಗಿ ಬಂದಾಗ ಕುರ್ಚಿ, ಸೋಫಾಗಿಂತ ನೆಲ ಹಿತವೆನ್ನಿಸುತ್ತದೆ. ಬೇಸಿಗೆ ಕಾಲದಲ್ಲಂತೂ ಎಷ್ಟೇ ದಣಿವಾಗಿದ್ರೂ ನೀವು ನೆಲದ ಮೇಲೆ ಕುಳಿತ್ರೆ ನೋವು ಮಂಗಮಾಯ. ನೆಲದ ಮೇಲೆ ಕುಳಿತುಕೊಳ್ಳೋದ್ರಿಂದ ಏನೆಲ್ಲ ಲಾಭವಿದೆ ನಿಮಗೆ ಗೊತ್ತಾ?
ನೀವು ನೆಲದ ಮೇಲೆ ಕುಳಿತು ಎಷ್ಟು ವರ್ಷವಾಯ್ತು ಲೆಕ್ಕ ಮಾಡಿ. ಯಾಕೆಂದ್ರೆ ಇದು ಐಷಾರಾಮಿ ಕಾಲ. ಈಗಿನ ದಿನಗಳಲ್ಲಿ ಎಲ್ಲರ ಮನೆಯಲ್ಲೂ ಕುರ್ಚಿ, ಸೋಫಾಗಳು ಜಾಗ ಪಡೆದಿವೆ. ಜನರು ಟಿವಿ ನೋಡೋದ್ರಿಂದ ಹಿಡಿದು ಊಟ ಮಾಡುವವರೆಗೂ ಎಲ್ಲ ಕಡೆ ಕುರ್ಚಿಯನ್ನು ಬಳಸ್ತಾರೆ. ನೆಲದ ಮೇಲೆ ಕುಳಿತು ಊಟ ಮಾಡೋದಿರಲಿ, ಸುಮ್ಮನೆ ಸ್ವಲ್ಪ ಸಮಯ ಕೂಡ ನೆಲದ ಮೇಲೆ ಕುಳಿತುಕೊಳ್ಳದ ಅನೇಕರಿದ್ದಾರೆ. ನೆಲದ ಮೇಲೆ ಕುಳಿತುಕೊಳ್ಳೋದು ನನಗೆ ಇಷ್ಟವಿಲ್ಲ ಎನ್ನುವವರು ನೀವಾಗಿದ್ದರೆ ಇಂದಿನಿಂದ್ಲೇ ನಿಮ್ಮ ಮನಸ್ಥಿತಿಯನ್ನು ಬದಲಿಸಿಕೊಳ್ಳಿ. ದಿನದಲ್ಲಿ ಕೆಲ ಸಮಯ ನೆಲದ ಮೇಲೆ ಕುಳಿತುಕೊಳ್ಳುವ ಅಭ್ಯಾಸ ಮಾಡಿಕೊಳ್ಳಿ.
ಪ್ರತಿ ದಿನ ನೀವು 15 ನಿಮಿಷ ನೆಲೆ (Floor) ದ ಮೇಲೆ ಕುಳಿತ್ರೂ ಸಾಕು. ಇದು ನಿಮಗೆ ವಿಶ್ರಾಂತಿ (Rest) ನೀಡುವುದು ಮಾತ್ರವಲ್ಲದೆ ನಿಮ್ಮ ದೇಹ (Body) ದ ಭಂಗಿಯನ್ನು ಸುಧಾರಿಸುತ್ತದೆ. ನೆಲದ ಮೇಲೆ ಕುಳಿತುಕೊಳ್ಳುವುದು ನಿಮ್ಮ ಆರೋಗ್ಯವನ್ನು ವೃದ್ಧಿಸುವ ಕೆಲಸ ಮಾಡುತ್ತದೆ. ನಾವಿಂದು ಪ್ರತಿ ದಿನ 15 ನಿಮಿಷ ನೆಲದ ಮೇಲೆ ಕುಳಿತ್ರೆ ಏನೆಲ್ಲ ಪ್ರಯೋಜನವಿದೆ ಎಂಬುದನ್ನು ನಿಮಗೆ ಹೇಳ್ತೇವೆ.
undefined
COVID AND HEALTH: ಕೊರೋನಾ ಬಂದಿದ್ದೇ ಬಂದಿದ್ದು, ದೀರ್ಘಕಾಲದ ಆರೋಗ್ಯ ಸಮಸ್ಯೆಗಳಲ್ಲಿ ವಿಪರೀತ ಏರಿಕೆ
ನೆಲದ ಮೇಲೆ ಕುಳಿತು ಆರೋಗ್ಯ ಕಾಪಾಡಿಕೊಳ್ಳಿ :
ದೇಹಕ್ಕೆ ಸಿಗುತ್ತೆ ಶಕ್ತಿ : ನೆಲದ ಮೇಲೆ ಕೆಲ ಸಮಯ ಕುಳಿತುಕೊಳ್ಳೋದ್ರಿಂದ ನಿಮ್ಮ ದೇಹಕ್ಕೆ ಶಕ್ತಿ ಸಿಗುತ್ತದೆ ಎನ್ನುತ್ತಾರೆ ತಜ್ಞರು. ಇದು ನಿಮ್ಮ ದೇಹದ ಮೂಲವನ್ನು ಬಲಪಡಿಸುತ್ತದೆ.
ದೇಹದ ಭಂಗಿಯಲ್ಲಿ ಸುಧಾರಣೆ : ನೆಲದ ಮೇಲೆ ಕುಳಿತುಕೊಳ್ಳುವುದರಿಂದ ನಮ್ಮ ದೇಹದ ಕೆಳಗಿನ ಭಾಗದ ಸ್ನಾಯುಗಳು ತುಂಬಾ ಸಕ್ರಿಯವಾಗುತ್ತವೆ. ದೇಹದ ಭಂಗಿ ಸುಧಾರಿಸುತ್ತದೆ. ನಿಮ್ಮ ಪರ್ಸನಾಲಿಟಿ ಡೆವಲಪ್ ಆಗಲು ಇದು ಸಹಾಯ ಮಾಡುತ್ತದೆ.
Mental Health : ನಿಮ್ಮ ಮನಸ್ಸಿಗೆ ಈ ಸಂದರ್ಭದಲ್ಲಿ ಬೇಕು ವಿಶ್ರಾಂತಿ
ಬೆನ್ನುಮೂಳೆಗಳ ಆರೋಗ್ಯಕ್ಕೆ ಒಳ್ಳೆಯದು : ನೆಲದ ಮೇಲೆ ಕುಳಿತಾಗ ನಾವು ಯಾವುದರ ಬೆಂಬಲವಿಲ್ಲದೆ ಏಳ್ತೇವೆ. ಇದು ನಮ್ಮ ಆಯಸ್ಸನ್ನು ವೃದ್ಧಿ ಮಾಡುತ್ತದೆ ಅಂದ್ರೆ ತಪ್ಪಾಗಲಾರದು. ನೆಲದ ಮೇಲೆ ಕುಳಿತುಕೊಳ್ಳೋದ್ರಿಂದ ನಮ್ಮ ಬೆನ್ನು ಮೂಳೆ ಬಲಪಡೆಯುತ್ತದೆ. ಅನೇಕರಿಗೆ ಇದು ತಿಳಿದಿಲ್ಲ, ವಾಸ್ತವವಾಗಿ ನಮ್ಮ ಬೆನ್ನುಮೂಳೆಯು ನೇರವಾಗಿರುವುದಿಲ್ಲ. ಇದು ನಮ್ಮ ಕುತ್ತಿ, ಎದೆಗೂಡು ಮತ್ತು ಸೊಂಟದ ಪ್ರದೇಶಗಳಲ್ಲಿ ಮೂರು ನೈಸರ್ಗಿಕ ವಕ್ರಾಕೃತಿಗಳನ್ನು ಹೊಂದಿರುವ 'S' ಆಕಾರದ ರಚನೆಯಾಗಿದೆ. ಸಾಮಾನ್ಯವಾಗಿ ಜನರು ಬೆನ್ನುಮೂಳೆಯಲ್ಲಿ ನೋವಿನ ಸಮಸ್ಯೆಯನ್ನು ಹೊಂದಿರುತ್ತಾರೆ. ಬೆನ್ನುಮೂಳೆಯ ಆರೋಗ್ಯ ಬಯಸಿದ್ರೆ ನೆಲದ ಮೇಲೆ ಕುಳಿತುಕೊಳ್ಳುವ ಅಭ್ಯಾಸ ಮಾಡ್ಬೇಕು. ಕುಳಿತುಕೊಳ್ಳುವಾಗ ಮತ್ತು ನಡೆಯುವಾಗ ಕಳಪೆ ಭಂಗಿ ಬೆನ್ನುಮೂಳೆಯ ಮೇಲೆ ಒತ್ತಡವನ್ನು ಉಂಟುಮಾಡುತ್ತದೆ.
ಸೊಂಟಕ್ಕೆ ಬಲ : ನೆಲದ ಮೇಲೆ ಕುಳಿತುಕೊಳ್ಳುವುದರಿಂದ ಸೊಂಟದ ಸ್ನಾಯುಗಳು ಬಲಗೊಳ್ಳುತ್ತವೆ. ಸೊಂಟದ ಸ್ನಾಯುಗಳು ಕಾಲಿನ ಮೇಲಿನ ಭಾಗದೊಂದಿಗೆ ಅಂದರೆ ತೊಡೆ, ಕೆಳಗಿನ ಬೆನ್ನು ಮತ್ತು ಸೊಂಟದೊಂದಿಗೆ ಸಂಪರ್ಕ ಹೊಂದಿವೆ. ಹಿಪ್ ಸ್ನಾಯುಗಳು ದುರ್ಬಲವಾದಾಗ, ವಾಕಿಂಗ್ ಮಾಡೋದು ಕಷ್ಟವಾಗುತ್ತದೆ. ತುಂಬಾ ಸಮಯ ನಿಲ್ಲಲು ಸಾಧ್ಯವಾಗೋದಿಲ್ಲ. ಮಲಗುವುದು ಕೂಡ ಕಷ್ಟವಾಗುತ್ತದೆ. ಇದೆಲ್ಲ ಸಮಸ್ಯೆ ಬರಬಾರದು, ಸೊಂಟಕ್ಕೆ ಶಕ್ತಿ ಸದಾ ಇರಬೇಕೆಂದ್ರೆ ನೀವು ನೆಲದ ಮೇಲೆ ಕುಳಿತುಕೊಳ್ಳುವ ಅಭ್ಯಾಸ ಮಾಡಿ.
ನೆಲದ ಮೇಲೆ ಕುಳಿತುಕೊಳ್ಳುವ ಮೊದಲು ಈ ವಿಷಯಗಳನ್ನು ನೆನಪಿನಲ್ಲಿಡಿ :
ಪದ್ಮಾಸನ ಅಥವಾ ವಜ್ರಾಸನ ಅಥವಾ ಸುಖಾಸನದಲ್ಲಿ ನೀವು ಕುಳಿತುಕೊಳ್ಳಬಹುದು. ಕಾಲನ್ನು ಅಡ್ಡ, ಉದ್ದ ಚಾಚಿಯೂ ಕುಳಿತುಕೊಳ್ಳಬಹುದು. ಆದ್ರೆ ಬೆನ್ನು ನೇರವಾಗಿ ಇರುವಂತೆ ನೋಡಿಕೊಳ್ಳಿ.
ಬೆನ್ನುಮೂಳೆಗೆ ಒತ್ತಡವನ್ನು ಹಾಕಬೇಡಿ. ನಿಮ್ಮ ಸೊಂಟದ ಕೆಳಗೆ ಒಂದು ದಿಂಬು ಅಥವಾ ಟವೆಲ್ ಅನ್ನು ಇರಿಸಿ.
ನೀವು ನೆಲದ ಮೇಲೆ ಕುಳಿತು ಸಾಕಷ್ಟು ಸಮಯವನ್ನು ಕಳೆಯುತ್ತಿದ್ದರೆ, ನಿಮ್ಮ ಸ್ಥಾನವನ್ನು ಬದಲಾಯಿಸಲು ಪ್ರಯತ್ನಿಸಿ. ನಿಮ್ಮ ಕಾಲುಗಳ ಭಂಗಿಯನ್ನು ಬದಲಿಸಿ.