ಹೆಲ್ತ್ ಚೆನ್ನಾಗಿರ್ಲಿ ಅಂತ ಬೇಕಾಬಿಟ್ಟಿ ಹಾಲು ಕುಡಿದ್ರೆ ಆರೋಗ್ಯ ಕೆಡುತ್ತೆ ಅಷ್ಟೆ

By Suvarna News  |  First Published Dec 30, 2022, 11:06 AM IST

ಹಾಲನ್ನು ಅಮೃತ ಎಂದೇ ಪರಿಗಣಿಸಲಾಗುತ್ತದೆ. ಪ್ರತಿ ದಿನ ಹಾಲು ಕುಡಿಯುವುದು ಆರೋಗ್ಯಕ್ಕೆ ಒಳ್ಳೆಯದು ಎಂದು ಸಣ್ಣ ವಯಸ್ಸಿನಿಂದಲೇ ಹಿರಿಯರು ಹೇಳಿಕೊಂಡು ಬರುತ್ತಾರೆ. ಆದರೆ ಇತ್ತೀಚಿನ ಅಧ್ಯಯನದ ಪ್ರಕಾರ ಅತಿಯಾಗಿ ಹಾಲು ಸೇವಿಸಿದರೆ ಆರೋಗ್ಯಕ್ಕೆ ಒಳ್ಳೆಯದಲ್ಲ ಎಂದು ತಿಳಿದುಬಂದಿದೆ. ಈ ಬಗ್ಗೆ ಇಲ್ಲಿದೆ ಮಾಹಿತಿ


ಹಾಲಿನಲ್ಲಿ ಕ್ಯಾಲ್ಸಿಯಂ(Calcium) ಪ್ರಮಾಣ ಹೇರಳವಾಗಿದೆ. ಹಾಗಾಗಿ ಹಾಲು ಸೇರಿದಂತೆ ಇತರೆ ಹಾಲಿನ ಉತ್ಪನ್ನಗಳನ್ನು(Dairy Product) ಪ್ರತೀ ದಿನ ಸೇವಿಸುತ್ತೇವೆ. ಪ್ರತೀ ದಿನ ಹಾಲು ಕುಡಿಯುವುದರಿಂದ ನಮ್ಮ ಹಲ್ಲುಗಳು(Teeth) ಮತ್ತು ಮೂಳೆಗಳು(Bones) ಗಟ್ಟಿಯಾಗುತ್ತದಲ್ಲದೆ ಪೌಷ್ಟಿಕಾಂಶದ(Nutrition) ಅಂಶಗಳಿಂದದ ಕೂಡಿದೆ. ಹಾಲು ಕುಡಿಯುವುದರಿಂದ ಆರೋಗ್ಯಕ್ಕೆ ಬಹಳಷ್ಟು ಪ್ರಯೋಜನಗಳಿವೆ. ಆದರೆ ದಿನನಿತ್ಯ ಹಾಲು ಕುಡಿದರೆ ಆರೋಗ್ಯ ಹದಗೆಡೋದು ಗ್ಯಾರಂಟಿ.

ಅತಿಯಾದರೆ ಅಮೃತವೂ ವಿಷ(Toxic) ಎಂಬ ಮಾತಿದೆ. ಅದರಂತೆ ಹೆಚ್ಚು ಹಾಲು ಕುಡಿಯುವುದರಿಂದ ವಿಶೇಷವಾಗಿ ಹೊಟ್ಟೆಗೆ(Stomach) ಸಂಬಂಧಿಸಿದ ಅನೇಕ ಆರೋಗ್ಯ ಸಮಸ್ಯೆಗಳು ಉಂಟಾಗಬಹುದು. ಆರೋಗ್ಯವಂತ ವ್ಯಕ್ತಿಯು ದಿನಕ್ಕೆ ಎರಡು ಲೋಟಗಳಿಗಿಂತ(2 Glass) ಹೆಚ್ಚು ಹಾಲು ಕುಡಿಯಬಾರದು ಎಂದು ತಜ್ಞರು ಹೇಳುತ್ತಾರೆ. ಎರಡು ಲೋಟಕ್ಕಿಂತ ಹೆಚ್ಚು ಕುಡಿದರೆ ಆರೋಗ್ಯ ಸಮಸ್ಯೆಗಳು ಕಾಡಬಹುದು. 2014ರಲ್ಲಿ ನಡೆದ ಅಧ್ಯಯನದ ಪ್ರಕಾರ, ಪ್ರತೀ ದಿನ ಮೂರು ಅಥವಾ ಹೆಚ್ಚಿನ ಲೋಟ ಹಾಲು ಕುಡಿಯುವ ಮಹಿಳೆಯರಲ್ಲಿ(Woman) ಹೃದಯರಕ್ತನಾಳದ ಕಾಯಿಲೆಯ(Heart Blood Vessels) ಅಪಾಯವನ್ನು ದ್ವಿಗುಣವಾಗುತ್ತದೆ ಎಂದು ಕಂಡುಬಂದಿದೆ. ಅಷ್ಟೆ ಅಲ್ಲ ಇದು ಅವರಲ್ಲಿ ಕ್ಯಾನ್ಸರ್(Cancer) ಅಪಾಯ ಶೇ.44ರಷ್ಟು ಹೆಚ್ಚಿದೆ ಎನ್ನಲಾಗಿದೆ.

Tap to resize

Latest Videos

ಹಾಲು, ಬಾಳೆಹಣ್ಣು ಒಟ್ಟೊಟ್ಟಿಗೆ ಸೇವಿಸುತ್ತೀರಿ ಎಂದರೆ ಇಂದೇ ಬಿಟ್ಟುಬಿಡಿ

ಪ್ರತೀ ದಿನ ಎಷ್ಟು ಹಾಲು ಸೇವಿಸಬೇಕು?
ಒಂಬತ್ತು ವರ್ಷಕ್ಕಿಂತ ಮೇಲ್ಪಟ್ಟವರು ಪ್ರತಿದಿನ ಎರಡು ಲೋಟ ಹಾಲು ಕುಡಿಯಬೇಕು ಎಂದು ಸಂಶೋಧನೆ ಸೂಚಿಸುತ್ತದೆ. ಹಾಲು ಮತ್ತು ಇತರೆ ಡೈರಿ ಉತ್ಪನ್ನಗಳಲ್ಲಿ ಕ್ಯಾಲ್ಸಿಯಂ(Calcium), ಫಾಸ್ಫರಸ್‌ನ(Phosphorus) ಅತ್ಯುತ್ತಮ ಮೂಲಗಳಾಗಿವೆ ಎಂಬುದು ಇದಕ್ಕೆ ಕಾರಣ. ಅಲ್ಲದೆ Vitamin A, D, B12, ರಿಬೋಫ್ಲಾವಿನ್, ಪ್ರೋಟೀನ್(Protein), ಪೊಟ್ಯಾಸಿಯಮ್(Potassium), ಸತು, ಕೋಲೀನ್(Collin), ಮೆಗ್ನೀಸಿಯಮ್(Magnesium) ಮತ್ತು ಸೆಲೆನಿಯಮ್(Selenium) ಸಮೃದ್ಧವಾಗಿದೆ.

ಲ್ಯಾಕ್ಟೋಸ್ ಅಸಹಿಷ್ಣುತೆ(Lactose intolerance) ಇರುವವರು ಹಾಲು ಸೇವಿಸುವುದನ್ನು ಕಡಿಮೆಗೊಳಿಸಬೇಕು. ಏಕೆಂದರೆ ಲ್ಯಾಕ್ಟೋಸ್ ಅಸಹಿಷ್ಣುತೆ ದೇಹದಲ್ಲಿನ ಲ್ಯಾಕ್ಟೇಸ್(Lactase) ಎಂಬ ಕಿಣ್ವದ ಕೊರತೆಯಿಂದ ಉಂಟಾಗುತ್ತದೆ. ಇದು ಕ್ಯಾಲ್ಸಿಯಂನಲ್ಲಿನ ಲ್ಯಾಕ್ಟೋಸ್ ಅನ್ನು ಒಡೆಯುತ್ತದೆ ಮತ್ತು ಅದರ ಸಂಪೂರ್ಣ ಜೀರ್ಣಕ್ರಿಯೆಗೆ(Digestion) ಅವಶ್ಯಕವಾಗಿದೆ. ಹಾಗಾಗಿ ಈ ರೀತಿಯ ಜನರು ಹಾಲಿನಿಂದ ಸಂಪೂರ್ಣ ದೂರವಿರಬೇಕು. ಲ್ಯಾಕ್ಟೋಸ್ ಅಸಹಿಷ್ಣುತೆಯಿಂದ ಬಳಲುತ್ತಿರುವವರು ಕಿಬ್ಬೊಟ್ಟೆಯ ಸೆಳೆತ(Abdominal Cramps), ಉಬ್ಬುವುದು(Bloating), ಅತಿಸಾರದಿಂದ(Diarrhea) ಬಳಲುತ್ತಿರುತ್ತಾರೆ. 

ಇನ್ನೂ ಈ Food Combinations ತಿಂದಿಲ್ಲ ಅಂದ್ರೆ ಈಗ್ಲೇ ಟ್ರೈ ಮಾಡಿ

1. ವಾಕರಿಕೆ ಕಾಣಿಸಬಹುದು(Cause Nausea)
ಹಾಲನ್ನು ಹೆಚ್ಚಿನ ಪ್ರಮಾಣದಲ್ಲಿ ಸೇವಿಸಿದಾಗ ವಾಕರಿಕೆಗೆ ಕಾರಣವಾಗಬಹುದು. ಅಮೇರಿಕನ್ ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಹೆಲ್ತ್(American National Institute of Health) ಪ್ರಕಾರ, ಶೇ.65ರಷ್ಟು ವಯಸ್ಕರು(Adults) ಕೆಲವು ರೀತಿಯ ಲ್ಯಾಕ್ಟೋಸ್ ಅಸಹಿಷ್ಣುತೆಯನ್ನು(Lactose Intolerance) ಹೊಂದಿದ್ದಾರೆ. ವಾಕರಿಕೆ ದೊಡ್ಡ ರೋಗಲಕ್ಷಣಗಳಲ್ಲಿ ಒಂದಾಗಿದ್ದು, ಕೆಲ ಸಮಯದಲ್ಲಿ ಹಾಲು, ಐಸ್ ಕ್ರೀಮ್(Ice Cream) ಮತ್ತು ಚೀಸ್(Cheese) ಸೇರಿದಂತೆ ಲ್ಯಾಕ್ಟೋಸ್ ಹೊಂದಿರುವ ಯಾವುದೇ ಡೈರಿಯನ್ನು ಸೇವಿಸಿದ ನಂತರ ವಾಂತಿ(Vomit) ಸಂಭವಿಸಬಹುದು.

2. ಉಬ್ಬುವುದು ಮತ್ತು ಜೀರ್ಣಕ್ರಿಯೆಗೆ ಸಮಸ್ಯೆ(Bloating And Digestive Problem)
ಲ್ಯಾಕ್ಟೋಸ್ ಅಸಹಿಷ್ಣುತೆ ಹೊಂದಿರುವವರು ಸೇರಿದಂತೆ  ಇತರೆ ಜನರಲ್ಲಿಯೂ ಉಬ್ಬುವುದು ಮತ್ತು ಜೀರ್ಣಕ್ರಿತೆ ಸಮಸ್ಯೆ ಲಕ್ಷಣಗಳು ಕಂಡುಬರುತ್ತದೆ. ಹೆಚ್ಚು ಹಾಲು ಕುಡಿಯುವುದರಿಂದ ಉಬ್ಬುವುದು, ಸೆಳೆತ(Cramp) ಮತ್ತು ಅತಿಸಾರದಂತಹ ಜೀರ್ಣಕಾರಿ ಸಮಸ್ಯೆಗಳು ಉಂಟಾಗಬಹುದು. ದೇಹವು ಲ್ಯಾಕ್ಟೋಸ್ ಅನ್ನು ಸರಿಯಾಗಿ ಒಡೆಯಲು ಸಾಧ್ಯವಾಗದಿದ್ದರೆ, ಅದು ಜೀರ್ಣಾಂಗ ವ್ಯವಸ್ಥೆಯ ಮೂಲಕ ಚಲಿಸುತ್ತದೆ ಮತ್ತು ಕರುಳಿನ ಬ್ಯಾಕ್ಟೀರಿಯಾದಿಂದ(Bacteria) ಒಡೆಯುತ್ತದೆ. ಈ ಕಾರಣದಿಂದ, ಗ್ಯಾಸ್ಟಿçಕ್(Gastric) ಮತ್ತು ಇತರೆ ಜೀರ್ಣಕಾರಿ ಸಮಸ್ಯೆಗಳು ಸಂಭವಿಸಬಹುದು.

ಲವಂಗ ಬೆರೆಸಿದ ಹಾಲು ಕುಡಿಯೋದ್ರಿಂದ ಪುರುಷರ ಗುಪ್ತ ರೋಗಗಳು ದೂರ

3. ಮೊಡವೆ ಕಾಣಿಸಬಹುದು(Acne)
ಇಂದು ಲಭ್ಯವಿರುವ ಹಾಲಿನಲ್ಲಿ ಬೆಳವಣಿಗೆ ಮತ್ತು ಹಾಲು ಉತ್ಪಾದನೆ ನಿಯಂತ್ರಿಸುವ ಹಾರ್ಮೋನ್‌ಗಳಿವೆ(Hormone) ಎಂದು ನಂಬಲಾಗಿದೆ. ಇದು ಇನ್ಸುಲಿನ್(Insulin) ತರಹದ ಬೆಳವಣಿಗೆಯ Factor-1 ಎಂದು ಕರೆಯಲಾಗುತ್ತದೆ. ಇದು ಇನ್ಸುಲಿನ್ ನಿಯಂತ್ರಣವನ್ನು ಅಡ್ಡಿಪಡಿಸುವ ಮೂಲಕ ಮೊಡವೆಗಳನ್ನು(Pimple) ಇನ್ನಷ್ಟು ಹದಗೆಡಿಸುತ್ತದೆ. ಗ್ರಹಿಕೆಗಿಂತ ಭಿನ್ನವಾಗಿ, ಕೆನೆರಹಿತ ಹಾಲು ನಿಮ್ಮ ಮೊಡವೆಗಳನ್ನು ಇನ್ನಷ್ಟು ಹದಗೆಡಿಸುತ್ತದೆ, ಅದಕ್ಕಾಗಿಯೇ ಪೂರ್ಣ ಕೊಬ್ಬಿನ ಹಸುವಿನ ಹಾಲು(Fat Cow Milk) ಕುಡಿಯುವುದು ಉತ್ತಮ. ಇದು ಸಾಮಾನ್ಯವಾಗಿ ಹಾರ್ಮೋನುಗಳಿಗೆ ಯಾವುದೇ ತೊಂದರೆ ಮಾಡುವುದಿಲ್ಲಿ.

4. ಕ್ಯಾನ್ಸರ್‌(Cancer)
ಅಧಿಕ ಹಾಲು ಕುಡಿಯುವುದರಿಂದ ಸ್ತನ ಕ್ಯಾನ್ಸರ್‌ನಂತಹ(Breast Cancer) ಕೆಲವು ರೀತಿಯ ಕ್ಯಾನ್ಸರ್‌ಗಳಿಗೆ ಕಾರಣವಾಗಬಹುದು ಎಂದು ಹೇಳಲಾಗುತ್ತದೆ. ಕಾಲಾನಂತರದಲ್ಲಿ ಜನರಲ್ಲಿ ಸೇವನೆ ಮತ್ತು ಅನಾರೋಗ್ಯದ ಪ್ರವೃತ್ತಿಯಿಂದ ಈ ರೀತಿ ಆಗಬಹುದು ಎನ್ನಲಾಗಿದೆ. ಹಾಗಾಗಿ ಮಹಿಳೆಯರು ಅತಿಯಾಗಿ ಹಾಲು ಸೇವಿಸುವುದು ಒಳ್ಳೆಯದಲ್ಲ. 

click me!