Covid Omicron BF.7 variant: ಧಾರವಾಡ ಜಿಲ್ಲಾಡಳಿತ ಹೈ ಅಲರ್ಟ್!

By Kannadaprabha News  |  First Published Dec 30, 2022, 10:06 AM IST

ಕಳೆದ ಎರಡ್ಮೂರು ವರ್ಷಗಳಲ್ಲಿ ಕೋವಿಡ್‌ನ ವಿವಿಧ ಅಲೆಗಳ ಹೊಡೆತಕ್ಕೆ ಸಾವಿರಾರು ಜನರು ತೀವ್ರ ಬಾಧಿತರಾಗಿ ಪ್ರಾಣ ಕಳೆದುಕೊಂಡಿದ್ದಾರೆ. ಹೀಗಾಗಿ ಕೋವಿಡ್‌ ಎಂದರೆ ಈಗಲ್ಲ, ಕೋವಿಡ್‌ ಸಮಯದಲ್ಲಿದ್ದವರಿಗೆ ಯಾವತ್ತೂ ಭಯವೇ! ಈಗ ಕೋವಿಡ್‌ ರೂಪಾಂತರಿ ತಳಿ ಬಿಎಫ್‌.7 ಸೋಂಕಿನ ಹಿನ್ನೆಲೆ ಜನರು ಮತ್ತೆ ಕೋವಿಡ್‌ ಬಗ್ಗೆ ಕನವರಿಸುವಂತಾಗಿದೆ.


ಬಸವರಾಜ ಹಿರೇಮಠ

ಧಾರವಾಡ (ಡಿ.30) : ಕಳೆದ ಎರಡ್ಮೂರು ವರ್ಷಗಳಲ್ಲಿ ಕೋವಿಡ್‌ನ ವಿವಿಧ ಅಲೆಗಳ ಹೊಡೆತಕ್ಕೆ ಸಾವಿರಾರು ಜನರು ತೀವ್ರ ಬಾಧಿತರಾಗಿ ಪ್ರಾಣ ಕಳೆದುಕೊಂಡಿದ್ದಾರೆ. ಹೀಗಾಗಿ ಕೋವಿಡ್‌ ಎಂದರೆ ಈಗಲ್ಲ, ಕೋವಿಡ್‌ ಸಮಯದಲ್ಲಿದ್ದವರಿಗೆ ಯಾವತ್ತೂ ಭಯವೇ! ಈಗ ಕೋವಿಡ್‌ ರೂಪಾಂತರಿ ತಳಿ ಬಿಎಫ್‌.7 ಸೋಂಕಿನ ಹಿನ್ನೆಲೆ ಜನರು ಮತ್ತೆ ಕೋವಿಡ್‌ ಬಗ್ಗೆ ಕನವರಿಸುವಂತಾಗಿದೆ.

Tap to resize

Latest Videos

ಮತ್ತೆ ಮಾಸ್ಕ್(Mask) ಧರಿಸುವುದು, ಸ್ಯಾನಿಟೈಸರ್‌(Sanitizer) ಬಳಕೆ ಸೇರಿದಂತೆ ಹತ್ತು ಹಲವು ಕೋವಿಡ್‌ ನಿಯಮಾ(Covid mandatory)ವಳಿಗಳ ಬಗ್ಗೆ ಸರ್ಕಾರ ಎಚ್ಚರ ನೀಡುತ್ತಿದ್ದು, ಜನರು ಒಲ್ಲದ ಮನಸ್ಸಿನಿಂದ ಸ್ವೀಕರಿಸುತ್ತಿದ್ದಾರೆ. ಇದೇ ಸಮಯದಲ್ಲಿ ಹೊಸ ವರ್ಷಾಚರಣೆ, ರಾಷ್ಟ್ರೀಯ ಯುವ ಸಮ್ಮೇಳನ(National Youth Conference) ಹಾಗೂ ಹಾವೇರಿ ಸಾಹಿತ್ಯ ಸಮ್ಮೇಳನ(Haveri kannada sahitya sammelana) ಹತ್ತಿರದಲ್ಲಿದ್ದರೂ ಉನ್ನತೀಕರಿಸಿದ ಆರೋಗ್ಯ ವ್ಯವಸ್ಥೆ ಹಾಗೂ ಲಸಿಕಾರಣದಿಂದ ಜನರೂ ಮೊದಲಿಗಿಂತ ಈಗ ಎಚ್ಚರಿಕೆ ಕ್ರಮ ಅನುಸರಿಸುತ್ತಿದ್ದಾರೆಯೇ ಹೊರತು ಕೋವಿಡ್‌ ಕಾರಣದಿಂದ ನಿತ್ಯದ ಜೀವನ, ಸಭೆ-ಸಮಾರಂಭಗಳಿಗೆ ನಿಯಂತ್ರಣ ಹೇರಿಕೊಳ್ಳುತ್ತಿಲ್ಲsk ಎಂಬುದು ಸಮಾಧಾನದ ಸಂಗತಿ.

ಜನವರಿ, ಫೆಬ್ರವರಿ ತಿಂಗಳಲ್ಲಿ ಕೊರೊನಾ ಹೆಚ್ಚಾಗಲಿದೆ: ಡಾ. ಸಿ ಎನ್ ಮಂಜುನಾಥ್

ಬಿಎಫ್‌.7(BF7) ಸೋಂಕಿನ ಮಾಹಿತಿ ಬರುತ್ತಿದ್ದಂತೆ ಈಗಾಗಲೇ ಧಾರವಾಡದಲ್ಲೂ ಜಿಲ್ಲಾಡಳಿತ, ಆರೋಗ್ಯ ಇಲಾಖೆ ಮೈಕೊಡವಿ ಎದ್ದಿದೆ. ಅಣಕು ಪರಿಶೀಲನೆ ಮೂಲಕ ಚಿಕಿತ್ಸೆಗೆ ಅಗತ್ಯವಿರುವ ಆಕ್ಸಿಜನ್‌, ಕಾನ್ಸ್‌ಲೆಟರ್‌, ಬೆಡ್‌, ಐಸಿಯು ಬೆಡ್‌, ವೆಂಟಿಲೇಟರ್‌, ಆ್ಯಂಬುಲೆನ್ಸ್‌ ಮತ್ತು ವೈದ್ಯಕೀಯ ಸಿಬ್ಬಂದಿ ಲೆಕ್ಕ ಹಾಕಲಾಗಿದೆ. ಸ್ವತಃ ಆರೋಗ್ಯ ಸಚಿವ ಡಾ. ಕೆ. ಸುಧಾಕರ, ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಜಿಲ್ಲಾಸ್ಪತ್ರೆ, ಹುಬ್ಬಳ್ಳಿ ಕಿಮ್ಸ್‌ಗೆ ಭೇಟಿ ನೀಡಿ ಸಿದ್ಧತೆ ಪರಿಶೀಲಿಸಿದ್ದಾರೆ. ಯಾವುದೇ ಕ್ಷಣದಲ್ಲಿ ಸೋಂಕು ಹಬ್ಬಿದರೆ ಎದುರಿಸಲು ಸಿದ್ಧರಿರಬೇಕು ಎಂಬ ಸೂಚನೆ ಸಹ ನೀಡಿದ್ದಾರೆ.

ಜೀರೋ ಪಾಸಿಟಿವಿಟಿ:

ಕಳೆದ ಏಳು ದಿನಗಳಲ್ಲಿ ಕೋವಿಡ್‌-19 ಪಾಸಿಟಿವಿಟಿ ದರ ಜಿಲ್ಲೆಯಲ್ಲಿ ಜೀರೋ ಆಗಿದ್ದು ಇದೇ ಅವಧಿಯಲ್ಲಿ 854 ಸ್ಯಾಂಪಲ್‌ ಪರೀಕ್ಷೆ ಮಾಡಲಾಗಿದೆ. ಯಾವುದೇ ಪಾಸಿಟಿವ್‌ ಪ್ರಕರಣ ಕಂಡು ಬಂದಿಲ್ಲ ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ. ಶಶಿ ಪಾಟೀಲ ‘ಕನ್ನಡಪ್ರಭ’ಕ್ಕೆ ಮಾಹಿತಿ ನೀಡಿದರು. ಅಲ್ಲದೇ, ಜಿಲ್ಲೆಯ ಕಿಮ್ಸ್‌, ಡಿಮ್ಹಾನ್ಸ್‌ ಹಾಗೂ ಎಸ್‌ಡಿಎಂ ಆಸ್ಪತ್ರೆಯಲ್ಲಿ ಕೋವಿಡ್‌-19 ಪರೀಕ್ಷಾ ಪ್ರಯೋಗಾಲಯಗಳನ್ನು ಈಗಾಗಲೇ ಸ್ಥಾಪಿಸಲಾಗಿದೆ. ಈ ಆಸ್ಪತ್ರೆಗಳಲ್ಲಿ ಸಾರ್ವಜನಿಕರು ಆರ್‌ಟಿಪಿಸಿಆರ್‌ ಪರೀಕ್ಷೆ ಮಾಡಿಸಬಹುದು ಎಂದು ಡಾ. ಶಶಿ ತಿಳಿಸಿದರು.

ಈ ಹಿಂದೇನಾಗಿತ್ತು?:

ಆರೋಗ್ಯ ಇಲಾಖೆ ಅಂಕಿ-ಅಂಶಗಳ ಪ್ರಕಾರ, 2020 ಮಾಚ್‌ರ್‍ನಿಂದ 2021ರ ಫೆಬ್ರುವರಿ ವರೆಗೆ ಒಂದು ವರ್ಷದಲ್ಲಿ ಕೋವಿಡ್‌-19ನ ಮೊದಲ ಅಲೆಯಲ್ಲಿ ಧಾರವಾಡದಲ್ಲಿ ಒಟ್ಟು 22,339 ಪ್ರಕರಣ ದಾಖಲಾಗಿದ್ದವು. ಇದರಲ್ಲಿ ಚಿಕಿತ್ಸೆ ಪಡೆದು ಆಸ್ಪತ್ರೆಯಿಂದ 21,678 ಜನ ಬಿಡುಗಡೆ ಹೊಂದಿದ್ದಾರೆ. ಈ ಪೈಕಿ 615 ಮರಣ ಹೊಂದಿದರು. ಇನ್ನು 2ನೇ ಅಲೆಯ 2021ರ ಮಾಚ್‌ರ್‍ನಿಂದ ಡಿ. 31ರ ವರೆಗೆ ಜಿಲ್ಲೆಯಲ್ಲಿ 39,178 ಪ್ರಕರಣ ದಾಖಲಾಗಿದ್ದು, ಈ ಪೈಕಿ ಚಿಕಿತ್ಸೆ ಪಡೆದು ಆಸ್ಪತ್ರೆಯಿಂದ 38,475 ಜನ ಬಿಡುಗಡೆ ಹೊಂದಿದರು. ಇನ್ನು, 706 ಜನ ಮರಣ ಹೊಂದಿದರು. ಹಾಗೆಯೇ, 3ನೇ ಅಲೆಯ 2022 ಜನವರಿಯಿಂದ ಡಿಸೆಂಬರ್‌ 25ರ ವರೆಗೆ ಜಿಲ್ಲೆಯಲ್ಲಿ 24,874 ಪ್ರಕರಣ ದಾಖಲಾಗಿದ್ದು, ಈ ಪೈಕಿ 24,824 ಸೋಂಕಿತರು ಚಿಕಿತ್ಸೆ ಪಡೆದು ಗುಣಮಖರಾದರು. ಈ ಅಲೆಯಲ್ಲಿ ಬರೀ 89 ಜನ ಮಾತ್ರ ಮರಣ ಹೊಂದಿದರು. ಮೂರು ಅಲೆಗಳಲ್ಲಿ ಒಟ್ಟು 86,391 ಪ್ರಕರಣ ದಾಖಲಾಗಿದ್ದು ಈ ಪೈಕಿ 84,977 ಸೋಂಕಿತರು ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದಾರೆ. ಇನ್ನು, 1,410 ಜನ ಮರಣ ಹೊಂದಿರುವುದನ್ನು ಈಗ ಸ್ಮರಿಸಬಹುದು.

ಬೂಸ್ಟರ್‌ಗೆ ನಿರಾಸಕ್ತಿ

ಕೋವಿಡ್‌ 3ನೇ ಅಲೆ ಅಷ್ಟೊಂದು ಪರಿಣಾಮ ಬೀರದ ಹಿನ್ನೆಲೆಯಲ್ಲಿ ಎರಡು ಡೋಸ್‌ ಪಡೆದ ಬಹುತೇಕರು ಬೂಸ್ಟರ್‌ ಡೋಸ್‌ ಪಡೆಯಲು ನಿರಾಸಕ್ತಿ ತೋರಿದ್ದಾರೆ. ಜಿಲ್ಲೆಯಾದ್ಯಂತ 14,70,994 ಜನರಿಗೆ ಮುಂಜಾಗ್ರತಾ ಕ್ರಮವಾಗಿ ಲಸಿಕೆ ನೀಡುವ ಗುರಿ ಹೊಂದಲಾಗಿತ್ತು. ಈ ಪೈಕಿ ಬರೀ 3,01,432 ಜನರು ಮಾತ್ರ ಪಡೆದಿದ್ದು ಶೇ. 20.49ರಷÜು್ಟಗುರಿ ಸಾಧಿ​ಸಲಾಗಿದೆ. ಅದರಲ್ಲೂ ಸಾರ್ವಜನಿಕರಿಗಿಂತ ವೈದ್ಯಕೀಯ ಸಿಬ್ಬಂದಿಯೇ ಹೆಚ್ಚು.

ಲಸಿಕಾ ಸಾಧನೆ

ಜಿಲ್ಲೆಯಾದ್ಯಂತ ಒಟ್ಟು 14,44,000 ಲಸಿಕೆ ನೀಡುವ ಗುರಿ ಹೊಂದಲಾಗಿತ್ತು. ಇದರಲ್ಲಿ ಒಟ್ಟು 15,10,465 ಜನರಿಗೆ ಮೊದಲ ಡೋಸ್‌ ನೀಡಿ ಶೇ. 104.60ರಷ್ಟುಗುರಿ ಸಾ​ಧಿಸಲಾಗಿದೆ. ಎರಡನೇ ಡೋಸ್‌ ಆಗಿ 15,30,193 ಜನರಿಗೆ ಲಸಿಕೆ ನೀಡಿ ಶೇ. 105.97 ರಷÜು್ಟಗುರಿ ಸಾ​ಧಿಸಲಾಗಿದೆ. ಹಾಗೆಯೇ, ಜಿಲ್ಲೆಯಾದ್ಯಂತ 60,020 ಮಕ್ಕಳಿಗೆ ಲಸಿಕೆ ನೀಡುವ ಗುರಿ ಹೊಂದಲಾಗಿತ್ತು. ಮೊದಲ ಡೋಸ್‌ ಆಗಿ 74,375 ಮಕ್ಕಳಿಗೆ ಲಸಿಕೆ ನೀಡಿ ಶೇ. 123.92ರಷ್ಟುಗುರಿ ಸಾ​ಧಿಸಲಾಗಿದೆ. ಎರಡನೇ ಡೋಸ್‌ ಆಗಿ 64,792 ಮಕ್ಕಳಿಗೆ ಲಸಿಕೆಯನ್ನು ನೀಡಿ ಶೇ. 107.95 ರಷ್ಟುಗುರಿ ಸಾ​ಧಿಸಲಾಗಿದೆ.

Covid 19: ಉಡುಪಿಯಲ್ಲಿ ವಿದೇಶಿ ಪ್ರಯಾಣಿಕನಿಗೆ ಕೊರೋನಾ

ಎಲ್ಲೆಲ್ಲಿ ಎಷ್ಟುಹಾಸಿಗೆ ಲಭ್ಯ?

ಹುಬ್ಬಳ್ಳಿಯ ಕಿಮ್ಸ್‌ನಲ್ಲಿ 1,115 ಹಾಸಿಗೆಗಳ ಪೈಕಿ 760 ಆಕ್ಸಿಜನ್‌, 240 ಐಸಿಯು ಹಾಗೂ 115 ವೆಂಟಿಲೇಟರ್‌ಗಳ ಸೌಲಭ್ಯದ ಹಾಸಿಗೆಗಳಿವೆ. ಜಿಲ್ಲಾಸ್ಪತ್ರೆಯಲ್ಲಿ 163 ಹಾಸಿಗೆಗಳಿದ್ದು 121 ಆಕ್ಸಿಜನ್‌, 21 ಐಸಿಯು ಹಾಗೂ 21 ವೆಂಟಿಲೇಟರ್‌ ಬೆಡ್‌ಗಳಿವೆ. ಹುಬ್ಬಳ್ಳಿ ರೈಲ್ವೆ ಆಸ್ಪತ್ರೆಯಲ್ಲಿ 52 ಹಾಸಿಗೆಗಳಿದ್ದು 34 ಆಕ್ಸಿಜನ್‌, 9 ಐಸಿಯು ಹಾಗೂ 9 ವೆಂಟಿಲೇಟರ್‌ಗಳ ಬೆಡ್‌ಗಳಿವೆ. ಕಲಘಟಗಿಯಲ್ಲಿ 50 ಹಾಸಿಗೆಗಳಿದ್ದು 40 ಆಕ್ಸಿಜನ್‌, 7 ಐಸಿಯು ಹಾಗೂ 3 ವೆಂಟಿಲೇಟರ್‌ ಬೆಡ್‌ಗಳಿವೆ. ಕುಂದಗೋಳದಲ್ಲಿ 50 ಹಾಸಿಗೆಗಳ ಪೈಕಿ 40 ಆಕ್ಸಿಜನ್‌, 7 ಐಸಿಯು ಹಾಗೂ ಮೂರು ವೆಂಟಿಲೇಟರ್‌ ಬೆಡ್‌ಗಳಿವೆ. ನವಲಗುಂದದಲ್ಲಿ 50 ಹಾಸಿಗೆಗಳಿದ್ದು, 40 ಆಕ್ಸಿಜನ್‌, 7 ಐಸಿಯು ಹಾಗೂ 3 ವೆಂಟಿಲೇಟರ್‌ ಬೆಡ್‌ಗಳಿವೆ. ಸರ್ಕಾರಿ, ಖಾಸಗಿ ಆಸ್ಪತ್ರೆಗಳು ಸೇರಿ ಜಿಲ್ಲೆಯಲ್ಲಿ ಒಟ್ಟು 2,309 ಹಾಸಿಗೆ, 1,731 ಆಕ್ಸಿಜನ್‌, 380 ಐಸಿಯು ಹಾಗೂ 198 ವೆಂಟಿಲೇಟರ್‌ ಬೆಡ್‌ಗಳು ಕೋವಿಡ್‌ ಚಿಕಿತ್ಸೆಗೆ ಲಭ್ಯ.

click me!