ಪತಿಯದ್ದಲ್ಲ, ಅಪರಿಚಿತ ವ್ಯಕ್ತಿಯ ವೀರ್ಯ ಬಳಸಿ ಮಹಿಳೆಗೆ ಐವಿಎಫ್‌, ಆಸ್ಪತ್ರೆಗೆ 1.5 ಕೋಟಿ ರೂ. ದಂಡ!

By Vinutha Perla  |  First Published Jun 30, 2023, 9:04 AM IST

ಐವಿಎಫ್‌ ವೇಳೆ ವೀರ್ಯ ಬದಲು ಮಾಡಿದ ದೆಹಲಿ ಆಸ್ಪತ್ರೆಗೆ 1.5 ಕೋಟಿ ರೂ. ದಂಡ ವಿಧಿಸಲಾಗಿದೆ. ಪಶ್ಚಿಮ ದೆಹಲಿಯ ಆಸ್ಪತ್ರೆಯೊಂದು ನಿರ್ಲಕ್ಷ್ಯದ ಬಗ್ಗೆ ತಿಳಿದ ನಂತರ ಮಹಿಳೆಯ ಪತಿ ರಾಷ್ಟ್ರೀಯ ಗ್ರಾಹಕ ವ್ಯಾಜ್ಯಗಳ ಪರಿಹಾರ ಆಯೋಗವನ್ನು ಸಂಪರ್ಕಿಸಿದ್ದರು. ಅದರ ನಂತರ ಪರಿಹಾರ ನೀಡಲಾಗಿದೆ. ಆ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ.


ದೆಹಲಿಯಲ್ಲಿ ಆಸ್ಪತ್ರೆಯೊಂದು ಪತಿಗೆ ಸೇರದ ವೀರ್ಯವನ್ನು ಬಳಸಿ ಮಹಿಳೆಯ ಮೇಲೆ ಇನ್‌ ವಿಟ್ರೊ ಫರ್ಟಿಲೈಸೇಶನ್ ಪ್ರಕ್ರಿಯೆ ನಡೆಸಿ ನಿರ್ಲಕ್ಷ್ಯವೆಸಗಿದೆ. 15 ವರ್ಷಗಳ ಹಿಂದಿನ ಪ್ರಕರಣದಲ್ಲಿ ನಡೆದ ತಪ್ಪಿಗಾಗಿ ಸದ್ಯ 1.5 ಕೋಟಿ ತೆರಬೇಕಾಗಿ ಬಂದಿದೆ. ಪಶ್ಚಿಮ ದೆಹಲಿಯ ಆಸ್ಪತ್ರೆಯೊಂದು  ನಿರ್ಲಕ್ಷ್ಯದ ಬಗ್ಗೆ ತಿಳಿದ ನಂತರ ಮಹಿಳೆಯ ಪತಿ ರಾಷ್ಟ್ರೀಯ ಗ್ರಾಹಕ ವ್ಯಾಜ್ಯಗಳ ಪರಿಹಾರ ಆಯೋಗವನ್ನು ಸಂಪರ್ಕಿಸಿದ್ದರು. ಪೋಷಕರ ಮನವಿಯನ್ನು ಆಲಿಸಿದ ನ್ಯಾಯಾಲಯ, ಭಾಟಿಯಾ ಗ್ಲೋಬಲ್ ಆಸ್ಪತ್ರೆ ಮತ್ತು ಎಂಡೋಸರ್ಜರಿ ಸಂಸ್ಥೆ  ಅದರ ಅಧ್ಯಕ್ಷರು ಮತ್ತು ನಿರ್ದೇಶಕರು ಒಟ್ಟಾಗಿ ಕುಟುಂಬಕ್ಕೆ 1 ಕೋಟಿ ರೂ. ನೀಡುವಂತೆ ಸೂಚಿಸಿದೆ. 

ಮಾತ್ರವಲ್ಲ ಎನ್‌ಸಿಡಿಆರ್‌ಸಿಯ ಗ್ರಾಹಕ ಸಹಾಯ ನಿಧಿಗೆ ಹೆಚ್ಚುವರಿ 20 ಲಕ್ಷ ರೂ,ಗಳನ್ನು ಠೇವಣಿ (Deposit) ನೀಡುವಂತೆ ಮತ್ತು ಪ್ರಕರಣದಲ್ಲಿ ಭಾಗಿಯಾದ ಆಸ್ಪತ್ರೆಯ ವೈದ್ಯರು (Doctors) ಸೇರಿದಂತೆ ಮೂವರು ದೂರುದಾರರಿಗೆ ತಲಾ ಹತ್ತು ಲಕ್ಷ ರೂ. ನೀಡುವಂತೆ ಆದೇಶಿಸಿದೆ. ನ್ಯಾಯಾಲಯ ದಂಡ (Fine) ಪಾವತಿಸಲು ಆರು ವಾರಗಳ ಸಮಯಾವಕಾಶವನ್ನು ನೀಡಿದೆ.

Latest Videos

undefined

ಚೀನಾದಲ್ಲಿ ಜನಸಂಖ್ಯೆ ಹೆಚ್ಚಿಸಲು ಹೊಸ ಪ್ಲ್ಯಾನ್‌: ಅವಿವಾಹಿತ ಮಹಿಳೆಯರಿಗೂ ಮಕ್ಕಳು ಮಾಡಿಕೊಳ್ಳಲು ಅನುಮತಿ?

ಹೆಚ್ಚುವರಿಯಾಗಿ ಅವಳಿ ಮಕ್ಕಳಿಗಾಗಿ ಸುಮಾರು 1.5 ಕೋಟಿ ರೂಪಾಯಿಗಳ ಸ್ಥಿರ ಠೇವಣಿ ಮಾಡುವಂತೆ ನ್ಯಾಯಾಲಯವು ನಿರ್ದೇಶನ ನೀಡಿದೆ. ಪ್ರತಿ ಮಗುವಿಗೆ ಅರ್ಧದಷ್ಟು ಮೊತ್ತವನ್ನು ನೀಡಲಾಗುತ್ತದೆ. ಪಾವತಿಸಲು ಆರು ವಾರಗಳ ಕಾಲಾವಕಾಶವನ್ನು ನ್ಯಾಯಾಲಯವು ನೀಡಿದ್ದು, ದೂರುದಾರರು ಈ ಅವಧಿಯೊಳಗೆ ಮೊತ್ತವನ್ನು ಸ್ವೀಕರಿಸದಿದ್ದರೆ, ಶೇಕಡಾ 8 ರಷ್ಟು ವಾರ್ಷಿಕ ಬಡ್ಡಿಯನ್ನು ದಂಡವಾಗಿ ವಿಧಿಸಲಾಗುವುದು ಎಂದು ಹೇಳಿದರು.

2008-2009ರಲ್ಲಿ ಐವಿಎಫ್ ಕಾರ್ಯವಿಧಾನಕ್ಕೆ ಒಳಗಾದ ಮಹಿಳೆ (Women) ತನ್ನ ಡಿಎನ್‌ಎ ಪ್ರೊಫೈಲ್‌ನ್ನು ಪರೀಕ್ಷಿಸಿದಾಗ ಇನ್‌ ವಿಟ್ರೊ ಫರ್ಟಿಲೈಸೇಶನ್‌ನಲ್ಲಿ ತಪ್ಪಾಗಿರುವ ವಿಷಯ ಬೆಳಕಿಗೆ  ಬಂದಿತ್ತು. ಅವಳಿಗಳಲ್ಲಿ (Twins) ಒಂದು ಮಗುವಿಗೆ ಎಬಿ ಪಾಸಿಟಿವ್ ಬ್ಲಡ್ ಗ್ರೂಪ್ ಇದ್ದು, ಪೋಷಕರ ರಕ್ತದ ಗುಂಪುಗಳುಬಿ ಪಾಸಿಟಿವ್ ಮತ್ತು ಒ ನೆಗೆಟಿವ್ ಎಂದು ವರದಿ ಬಹಿರಂಗಪಡಿಸಿತ್ತು. ಐವಿಎಫ್‌ ಇಂಟ್ರಾಸೈಟೋಪ್ಲಾಸ್ಮಿಕ್ ಸ್ಮರ್ಮ್‌ ಇಂಕಜೆಕ್ಷನ್‌ನ್ನು ನಿರ್ಲಕ್ಷ್ಯದಿಂದ ನಡೆಸಲಾಗಿದೆ ಎಂಬುದು ವರದಿಯಲ್ಲಿ (Report) ಸಾಬೀತಾಗಿತ್ತು. 

ಹೀಗಾಗಿ ಮಹಿಳೆಯ ಪತಿ, ಆಸ್ಪತ್ರೆಯ ನಿರ್ಲಕ್ಷ್ಯದ ಬಗ್ಗೆ ರಾಷ್ಟ್ರೀಯ ಗ್ರಾಹಕ ವ್ಯಾಜ್ಯಗಳ ಪರಿಹಾರ ಆಯೋಗವನ್ನು ಸಂಪರ್ಕಿಸಿದ್ದರು. ತನಗೆ, ತನ್ನ ಮಕ್ಕಳಿಗೆ ಮತ್ತು ಕುಟುಂಬಕ್ಕೆ ಉಂಟಾದ ಮಾನಸಿಕ ಮತ್ತು ಅನುವಂಶಿಕ ದುಃಖವನ್ನು ಉಲ್ಲೇಖಿಸಿ ತಂದೆ ಆಸ್ಪತ್ರೆಯಿಂದ ಎರಡು ಕೋಟಿ ರೂ. ಪರಿಹಾರವನ್ನು ಕೇಳಿದ್ದರು.

ಮದುವೆಯಾಗಿ 54 ವರ್ಷದ ಬಳಿಕ ಮೊದಲ ಮಗು, 70 ಪ್ಲಸ್‌ ವಯಸ್ಸಿನ ತಂದೆ-ತಾಯಿಯ ಖುಷಿಗೆ ಪಾರವೇ ಇಲ್ಲ!

ಇಂಗ್ಲೆಂಡ್‌ನಲ್ಲಿ ಮೂರು ಜನರ ಡಿಎನ್‌ಎ ಹೊಂದಿದ ಮಗು ಜನನ
ಮಗು ಸಾಮಾನ್ಯವಾಗಿ ಇಬ್ಬರು ಪೋಷಕರು ಅಥವಾ ಇಬ್ಬರ ಡಿಎನ್‌ಎಯಿಂದ ಜನಿಸುತ್ತದೆ. ಆದರೆ, ಯುಕೆಯಲ್ಲಿ ಮೊದಲ ಬಾರಿಗೆ ಒಂದು ಅದ್ಭುತ ಸಾಧ್ಯವಾಗಿದೆ. ಮೂರು ಜನರ ಡಿಎನ್‌ಎಯೊಂದಿಗೆ ಮಗುವೊಂದು ಜನನವಾಗಿದೆ.  ವೈಜ್ಞಾನಿಕವಾಗಿ 3 ಜನರಿಂದ ಡಿಎನ್‌ಎಯೊಂದಿಗೆ ರಚಿಸಲಾದ ಮೊದಲ ಮಗು ಜನಿಸಿದೆ ಎಂದು ಬಿಬಿಸಿ ವರದಿ ಮಾಡಿದೆ. ಈ ಪ್ರಕ್ರಿಯೆಯಲ್ಲಿ 99.8% DNA ಇಬ್ಬರು ಪೋಷಕರಿಂದ ಬಂದಿದ್ದು, ಇನ್ನುಳಿದ ಡಿಎನ್‌ಎ ಡೋನರ್‌ ಮಹಿಳೆಯಿಂದ ಬಂದಿದೆ ಎಂದು ತಿಳಿದುಬಂದಿದೆ. ಈ ವಿಧಾನ ಮೈಟೋಕಾಂಡ್ರಿಯಾದ ಕಾಯಿಲೆಗಳೊಂದಿಗೆ ಜನಿಸುವುದನ್ನು ತಡೆಯುವ ಪ್ರಯತ್ನವಾಗಿದೆ ಎಂದು ತಿಳಿದುಬಂದಿದೆ. ಮೈಟೋಕಾಂಡ್ರಿಯಾದ ದೇಣಿಗೆ ಚಿಕಿತ್ಸೆ (MDT) ಎಂದು ಕರೆಯಲ್ಪಡುವ ಈ ತಂತ್ರವು ಆರೋಗ್ಯವಂತ ಡೋನರ್‌ ಮಹಿಳೆಯ ಮೊಟ್ಟೆಗಳಿಂದ ಅಂಗಾಂಶವನ್ನು ಬಳಸಿಕೊಳ್ಳುತ್ತದೆ. 

click me!