ಎರಡೂವರೆ ವರ್ಷದ ಮಗುವಿಗೆ ಏಕಕಾಲಕ್ಕೆ ಎರಡೂ ಕಿವಿಗಳಿಗೆ Cochlear implant ಚಿಕಿತ್ಸೆ!

By Kannadaprabha News  |  First Published Mar 15, 2023, 2:58 PM IST

ಹತ್ತು ಹಲವು ವಿಶೇಷಗಳಿಗೆ ಸಾಕ್ಷಿಯಾಗಿರುವ ಧಾರವಾಡ ಜಿಲ್ಲೆ ಇದೀಗ ವೈದ್ಯಕೀಯ ಕ್ಷೇತ್ರದಲ್ಲೂ ಗಣನೀಯ ಸಾಧನೆ ಮಾಡುತ್ತಿದೆ. ಶ್ರವಣ ದೋಷವುಳ್ಳ ಎರಡೂವರೆ ವರ್ಷದ ಹೆಣ್ಣು ಮಗುವಿಗೆ ಏಕಕಾಲಕ್ಕೆ ಎರಡೂ ಕಿವಿಗಳಿಗೆ ಕೋಕ್ಲಿಯರ್‌ ಇಂಪ್ಲಾಂಟ್‌ ಮಾಡುವಲ್ಲಿ ಇಲ್ಲಿನ ಯುನಿಟಿ ಸೂಪರ್‌ ಸ್ಪೆಷಾಲಿಟಿ ಆಸ್ಪತ್ರೆ()ಯ ವೈದ್ಯರ ತಂಡ ಯಶಸ್ವಿಯಾಗಿದೆ. ಸತತ ಐದು ಗಂಟೆ ಈ ಶಸ್ತ್ರಚಿಕಿತ್ಸೆ ನಡೆದಿದೆ.


ಧಾರವಾಡ (ಮಾ.15) : ಹತ್ತು ಹಲವು ವಿಶೇಷಗಳಿಗೆ ಸಾಕ್ಷಿಯಾಗಿರುವ ಧಾರವಾಡ ಜಿಲ್ಲೆ ಇದೀಗ ವೈದ್ಯಕೀಯ ಕ್ಷೇತ್ರದಲ್ಲೂ ಗಣನೀಯ ಸಾಧನೆ ಮಾಡುತ್ತಿದೆ. ಶ್ರವಣ ದೋಷವುಳ್ಳ ಎರಡೂವರೆ ವರ್ಷದ ಹೆಣ್ಣು ಮಗುವಿಗೆ ಏಕಕಾಲಕ್ಕೆ ಎರಡೂ ಕಿವಿಗಳಿಗೆ ಕೋಕ್ಲಿಯರ್‌ ಇಂಪ್ಲಾಂಟ್‌ (Cochlear implant)ಮಾಡುವಲ್ಲಿ ಇಲ್ಲಿನ ಯುನಿಟಿ ಸೂಪರ್‌ ಸ್ಪೆಷಾಲಿಟಿ ಆಸ್ಪತ್ರೆ(Unity Super Specialty Hospital)ಯ ವೈದ್ಯರ ತಂಡ ಯಶಸ್ವಿಯಾಗಿದೆ. ಸತತ ಐದು ಗಂಟೆ ಈ ಶಸ್ತ್ರಚಿಕಿತ್ಸೆ ನಡೆದಿದೆ.

ಕೋಕ್ಲಿಯರ್‌ ಇಂಪ್ಲಾಂಟ್‌ನಲ್ಲಿ ಎಲೆಕ್ಟ್ರಾನಿಕ್‌ ಯಂತ್ರವನ್ನು ಕಿವಿಯೊಳಗೆ ಅಳವಡಿಸಲಾಗುತ್ತದೆ. ಇದರಿಂದ ಕಿವಿ ಸ್ಪಷ್ಟವಾಗಿ ಕೇಳುತ್ತದೆ. ಶ್ರವಣದೋಷ(Hearing impaired) ನಿವಾರಣೆಗೆ ಇದು ಅತ್ಯಂಕ ಉತ್ಕೃಷ್ಟಚಿಕಿತ್ಸಾ ಕ್ರಮವಾಗಿದೆ. ವೈದ್ಯ ಹಾಗೂ ಅಸೋಸಿಯೇಶನ್‌ ಆಫ್‌ ಒಟೋಲ್ಯಾರಿಂಗೊಲೋಜಿಸ್ಟ್‌ ಆಫ್‌ ಇಂಡಿಯಾದ ಚುನಾಯಿತ ಅಧ್ಯಕ್ಷ ಡಾ. ಶಂಕರ ಮಡಿಕೇರಿ ಮತ್ತು ನಗರದ ಯುನಿಟಿ ಸೂಪರ್‌ ಸ್ಪೆಷಾಲಿಟಿ ಆಸ್ಪತ್ರೆಯ ಕಿವಿ, ಮೂಗು, ಮತ್ತು ಗಂಟಲು ತಜ್ಞರಾದ ಡಾ. ಅನಿಕೇತ ಪಾಂಡುರಂಗಿ ಈ ಇಂಪ್ಲಾಂಟ್‌ನ್ನು ಯಶಸ್ವಿಯಾಗಿ ನೆರವೇರಿಸಿದ್ದಾರೆ. ಇದರಿಂದ ಮಕ್ಕಳಲ್ಲಿ ಶ್ರವಣ ಶಕ್ತಿ ವೃದ್ಧಿಯಾಗುವುದರ ಜೊತೆಗೆ ಕಾಲಕ್ರಮೇಣ ಸಾಮಾನ್ಯರಂತೆ ಕಿವಿ ಕೇಳಲು ಆರಂಭವಾಗುತ್ತದೆ.

Tap to resize

Latest Videos

 

ಹುಬ್ಬಳ್ಳಿ : ಜಿಲ್ಲೆಯಲ್ಲಿ ಅರವಳಿಕೆ ತಜ್ಞ ವೈದ್ಯರ ಕೊರತೆ ನೀಗುವುದು ಯಾವಾಗ?

ಸಾವಿರಕ್ಕೆ 4 ರಿಂದ 6 ಮಕ್ಕಳು ಈ ರೀತಿ ಹುಟ್ಟಿನಿಂದಲೇ ಶ್ರವಣ ದೋಷ ಹೊಂದಿರುತ್ತಾರೆ. ಇಂಥವರಿಗೆ ಕೋಕ್ಲಿಯರ್‌ ಇಂಪ್ಲಾಂಟ್‌ ಸೂಕ್ತ ಚಿಕಿತ್ಸಾಕ್ರಮ ಎನ್ನುತ್ತಾರೆ ಡಾ. ಮಡಿಕೇರಿ ಹಾಗೂ ಡಾ. ಅನಿಕೇತ ಪಾಂಡುರಂಗಿ. ಹುಟ್ಟಿದಾಗ ಯಾವುದೇ ಶಬ್ದವನ್ನೇ ಕೇಳದ ಈ ಮಗುವಿನ ಪಾಲಿಗೆ ಇದೊಂದು ದೊಡ್ಡ ವರದಾನವಿದ್ದಂತೆ. ಖಾಸಗಿ ಆಸ್ಪತ್ರೆಯಲ್ಲಿ ಈ ಮಾದರಿ ಕೋಕ್ಲಿಯರ್‌ ಇಂಪ್ಲಾಂಟ್‌ ಮಾಡಿರುವುದು ಇಡೀ ಉತ್ತರ ಕರ್ನಾಟಕದಲ್ಲೇ ಇದೇ ಮೊದಲು ಬಾರಿ ಎಂದು ಡಾ. ಅನಿಕೇತ ಪಾಂಡುರಂಗಿ ಹೆಮ್ಮೆಯಿಂದ ಹೇಳುತ್ತಾರೆ. ಮಾ. 12ರಂದು ನಡೆದ ಕೋಕ್ಲಿಯರ್‌ ಇಂಪ್ಲಾಂಟ್‌ ತಂಡದಲ್ಲಿ ಮಕ್ಕಳ ತಜ್ಞರು, ಮನೋವೈದ್ಯರು, ಆಡಿಯೋಲಾಜಿಸ್ಟ, ಅನಸ್ಥೀಷಿಯೋಲಾಜಿಸ್ಟ, ರೇಡಿಯಾಲಾಜಿಸ್ಟಗಳು, ಮತ್ತು ಸಹಕರ್ಮಿಗಳು ಕೂಡ ಇದ್ದರು. ಎರಡೂ ಕಿವಿಗಳಿಗೆ ಏಕಕಾಲಕ್ಕೆ ಯಂತ್ರ ಅಳವಡಿಸುವ ಈ ಚಿಕಿತ್ಸಾ ವಿಧಾನಕ್ಕೆ ಸದ್ಯ ಸರ್ಕಾರದಿಂದ ಸೌಲಭ್ಯವಿಲ್ಲ. ಆದರೆ, ಬಿಪಿಎಲ್‌ ಕಾರ್ಡ್‌ ಹೊಂದಿರುವವರಿಗೆ ಸರ್ಕಾರದಿಂದ ರಿಯಾಯಿತಿ ಸೌಲಭ್ಯ ಕೊಡಬೇಕೆಂದು ಯುನಿಟಿ ಸೂಪರ್‌ ಸ್ಪೆಷಾಲಿಟಿ ಆಸ್ಪತ್ರೆಯಿಂದ ಸರ್ಕಾರಕ್ಕೆ ಮನವಿ ಮಾಡಿಕೊಳ್ಳಲಾಗಿದೆ.

World Hearing Day: 115 ಮಕ್ಕಳಿಗೆ ಕಾಕ್ಲಿಯರ್‌ ಇಂಪ್ಲಾಂಟ್‌ ಶಸ್ತ್ರಚಿಕಿತ್ಸೆ: ಸುಧಾಕರ್‌

ಕೋಕ್ಲಿಯರ್‌ ಇಂಪ್ಲಾಂಟ್‌ ನಮಗೆ ಸವಾಲಿನ ಕೆಲಸವಾಗಿತ್ತು. ಆದರೆ ಯಶಸ್ವಿಯಾಗಿ ನಿರ್ವಹಿಸಿದ ಹೆಮ್ಮೆ ನಮ್ಮದಾಗಿದೆ. ಜನ್ಮತಃ ಶ್ರವಣ ಭಾಗ್ಯವನ್ನೇ ಹೊಂದಿರದ ಮಗುವಿಗೆ ಈ ಚಿಕಿತ್ಸಾ ಕ್ರಮ ಅಪರೂಪದ್ದು. ಇದಾದ ನಂತರ ಮಗುವಿಗೆ ಮಾತು ಬರಲು ಕೂಡ ಆಡಿಯೋ ವರ್ಬಲ್‌ ಥೆರಪಿ ಕೂಡ ಮಾಡಲಾಗುವುದು

ಡಾ. ನಿಕೇತ ಪಾಂಡುರಂಗಿ, ವೈದ್ಯರು

click me!