ಚೀನಾದಲ್ಲಿ ಆತಂಕ ಹುಟ್ಟಿಸಿದ ಮತ್ತೊಂದು ಮಹಾಮಾರಿ; ಸಾಮಾಜಿಕ ಅಂತರ ಪಾಲನೆ, ಮಾಸ್ಕ್ ಕಡ್ಡಾಯ

By Vinutha PerlaFirst Published Nov 28, 2023, 12:28 PM IST
Highlights

ವರ್ಷಗಳ ಹಿಂದೆ ಚೀನಾದ ವುಹಾನ್‌ನಿಂದ ಆರಂಭವಾಗಿದ್ದ ಪುಟ್ಟ ವೈರಸ್ ಕೋವಿಡ್ ಸಂಪೂರ್ಣ ಜಗತ್ತನ್ನೇ ತಲ್ಲಣಗೊಳಿಸಿತ್ತು. ತಿಂಗಳುಗಟ್ಟಲೆ ಲಾಕ್‌ಡೌನ್‌, ಮಾಸ್ಕ್ ಕಡ್ಡಾಯ ಹೀಗೆ ಹಲವು ನಿಯಮಗಳ ಮೂಲಕ ಸಾಂಕ್ರಾಮಿಕದ ಹರಡುವಿಕೆಯನ್ನು ಕಡಿಮೆ ಮಾಡಲಾಗಿತ್ತು. ಈಗ ಮತ್ತೆ ಸಾಮಾಜಿಕ ಅಂತರ ಪಾಲನೆ, ಮಾಸ್ಕ್ ಧಾರಣೆ ನಿಯಮವನ್ನು ಕಡ್ಡಾಯಗೊಳಿಸಲಾಗಿದೆ.

ವರ್ಷಗಳ ಹಿಂದೆ ಚೀನಾದ ವುಹಾನ್‌ನಿಂದ ಆರಂಭವಾಗಿದ್ದ ಪುಟ್ಟ ವೈರಸ್ ಕೋವಿಡ್, ಸಂಪೂರ್ಣ ಜಗತ್ತನ್ನೇ ತಲ್ಲಣಗೊಳಿಸಿತ್ತು. ತಿಂಗಳುಗಟ್ಟಲೆ ಲಾಕ್‌ಡೌನ್‌, ಮಾಸ್ಕ್ ಕಡ್ಡಾಯ ಹೀಗೆ ಹಲವು ನಿಯಮಗಳ ಮೂಲಕ ಸಾಂಕ್ರಾಮಿಕದ ಹರಡುವಿಕೆಯನ್ನು ಕಡಿಮೆ ಮಾಡಲಾಗಿತ್ತು. ಈ ಸಾಂಕ್ರಾಮಿಕದಿಂದ ಉಂಟಾದ ಸಂಕಷ್ಟದಿಂದ ಇನ್ನೂ ಹೊರಬರದ ಚೀನಾ, ಈಗ ಹೊಸ ಸಾಂಕ್ರಾಮಿಕ ರೋಗದ ಭೀತಿಯಲ್ಲಿದೆ. ಚೀನಾದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ನ್ಯುಮೋನಿಯಾ ಪ್ರಕರಣಗಳು ವರದಿಯಾಗುತ್ತಿವೆ. ಬೀಜಿಂಗ್ ಸೇರಿದಂತೆ ದೇಶದಾದ್ಯಂತದ ನಗರಗಳಲ್ಲಿ ನ್ಯುಮೋನಿಯಾ ಪ್ರಕರಣಗಳು ಉಲ್ಬಣಗೊಳ್ಳುತ್ತಿದೆ. ಚೀನಾದ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯಲು ಹೆಚ್ಚಿನ ಸಂಖ್ಯೆಯಲ್ಲಿ ಮಕ್ಕಳು ಆಗಮಿಸುವುತ್ತಿರುವುದಾಗಿ ವರದಿಯಾಗಿದೆ. 

ಮಕ್ಕಳಲ್ಲಿ ಮೈಕೋಪ್ಲಾಸ್ಮಾದಿಂದ ಉಂಟಾಗುವ ನ್ಯುಮೋನಿಯಾದ ಉಲ್ಬಣ ತೀವ್ರ ಹೆಚ್ಚಾಗಿದೆ. ವೈದ್ಯರ ಭೇಟಿ ಮಾಡಲು ಮಕ್ಕಳು ಗಂಟೆಗಟ್ಟಲೆ ಕಾಯಬೇಕಾಗಿದೆ. ಆಸ್ಪತ್ರೆಯಲ್ಲಿ ಒಂದು ಕೈಗೆ ಡ್ರಿಪ್ಸ್‌ ಹಾಕ್ಕೊಂಡು ಹೋಂ ವರ್ಕ್‌ ಮುಂತಾದ ಕೆಲಸಗಳನ್ನು ಮಕ್ಕಳು ಅಲ್ಲೇ ಮಾಡುತ್ತಿರುವ ವಿಡಿಯೋಗಳು ವೈರಲ್‌ ಆಗ್ತಿದೆ.  ಇದೆಲ್ಲದರ ಮಧ್ಯೆ ಚೀನಾದಲ್ಲಿ ಮಾಸ್ಕ್‌ ಕಡ್ಡಾಯ ನಿಯಮವನ್ನು ಸಹ ಮರಳಿ ತರಲಾಗಿದೆ. ಜನರು ಆಸ್ಪತ್ರೆಗಳಲ್ಲಿ ಮಾಸ್ಕ್‌ಗಳನ್ನು ಧರಿಸಿ ಓಡಾಡುತ್ತಿದ್ದಾರೆ. ಮಾತ್ರವಲ್ಲ ಸಾಮಾಜಿಕ ಅಂತರ ಪಾಲನೆ ಮಾಡುವುದು ಸಹ ಕಡ್ಡಾಯವಾಗಿದೆ.

ಚೀನಾದಲ್ಲಿ ಕೋವಿಡ್ ನಂತ್ರ ಮತ್ತೊಂದು ನಿಗೂಢ ಸಾಂಕ್ರಾಮಿಕ, ನಮ್ ದೇಶಕ್ಕೂ ಕಾಲಿಡುತ್ತಾ?

ರೋಗ ಪೀಡಿತ ಮಕ್ಕಳಿಂದ ತುಂಬಿದ ಬೀಜಿಂಗ್ ಆಸ್ಪತ್ರೆ
ಬೀಜಿಂಗ್‌ನಲ್ಲಿ ಆಸ್ಪತ್ರೆಗಳು (Hospitals) ಮಕ್ಕಳಿಂದ ತುಂಬಿವೆ. ಹೆಚ್ಚಿನ ಜ್ವರ, ಶ್ವಾಸಕೋಶದ ಉರಿಯೂತ ಮತ್ತು ಶೀತದ ಲಕ್ಷಣಗಳೊಂದಿಗೆ ಮಕ್ಕಳು ಸಂಕಷ್ಟ ಅನುಭವಿಸುತ್ತಿದ್ದಾರೆ. ಬೀಜಿಂಗ್ ಮಕ್ಕಳ ಆಸ್ಪತ್ರೆಗೆ ಪ್ರತಿದಿನ ಕನಿಷ್ಠ 7,000 ರೋಗಿಗಳು ದಾಖಲಾಗುತ್ತಿದ್ದಾರೆ. ಕಳೆದ ಡಿಸೆಂಬರ್‌ನಲ್ಲಿ ಕಟ್ಟುನಿಟ್ಟಾದ COVID-19 ನಿರ್ಬಂಧಗಳನ್ನು (Rules) ತೆಗೆದುಹಾಕಿದ ನಂತರ ರಾಷ್ಟ್ರವು ತನ್ನ ಮೊದಲ ಪೂರ್ಣ ಚಳಿಗಾಲವನ್ನು ಪ್ರವೇಶಿಸುತ್ತಿದ್ದಂತೆ ಅನಾರೋಗ್ಯದ ಹರಡುವಿಕೆಗೆ ಸಂಬಂಧಿಸಿದೆ ಎಂದು ವಿಜ್ಞಾನಿಗಳು ಹೇಳುತ್ತಾರೆ.

ಮಕ್ಕಳಲ್ಲಿ ವರದಿಯಾದ ಉಸಿರಾಟದ ಕಾಯಿಲೆಗಳ ಬಗ್ಗೆ ವಿವರವಾದ ಮಾಹಿತಿಯನ್ನು ನೀಡುವಂತೆ ವಿಶ್ವ ಆರೋಗ್ಯ ಸಂಸ್ಥೆ ಚೀನಾಕ್ಕೆ ಅಧಿಕೃತ ವಿನಂತಿಯನ್ನು ಮಾಡಿದೆ. ಇದಕ್ಕೂ ಮೊದಲು, ಚೀನಾ ಒದಗಿಸಿದ ಡೇಟಾದಲ್ಲಿ ಯಾವುದೇ ಅಸಾಮಾನ್ಯ ರೋಗಕಾರಕಗಳು ಪತ್ತೆಯಾಗಿಲ್ಲ ಎಂದು ಪ್ರಧಾನ ಆರೋಗ್ಯ ಸಂಸ್ಥೆ ಹೇಳಿದೆ.

ಮಾರಕ ನ್ಯುಮೋನಿಯಾಗಿಂತ ಈ ಸಮಸ್ಯೆ ಇನ್ನೂ ಹೆಚ್ಚಾಗುತ್ತೆ: ಚೀನಾ ಎಚ್ಚರಿಕೆ; ಭಾರತಕ್ಕೂ ಆತಂಕ!

ಕೋವಿಡ್ ನಿರ್ಬಂಧಗಳನ್ನು ತೆಗೆದ ನಂತರ ಚೀನಾದ ಮೇನ್‌ಲ್ಯಾಂಡ್‌ನಲ್ಲಿ ಮೊದಲ ಚಳಿಗಾಲದಲ್ಲಿ ಇತರ ಉಸಿರಾಟದ ಕಾಯಿಲೆಗಳು ವಿಶಾಲ ಜನಸಂಖ್ಯೆಯನ್ನು ತೀವ್ರವಾಗಿ ಅಪ್ಪಳಿಸುವ ಸಾಧ್ಯತೆಯಿದೆ ಎಂದು ಸರ್ಕಾರ ಎಚ್ಚರಿಸಿದೆ. ಫ್ಲೂ, ಅಡೆನೊವೈರಸ್ ಮತ್ತು ಉಸಿರಾಟದ ಸಿನ್ಸಿಟಿಯಲ್ ವೈರಸ್, ಮೈಕೋಪ್ಲಾಸ್ಮಾವನ್ನು ಮೀರಿಸಿದೆ. ಇದು ನಗರದ ಉನ್ನತ ಮಕ್ಕಳ ವೈದ್ಯಕೀಯ ಕೇಂದ್ರಗಳಲ್ಲಿ ರೋಗಿಗಳಲ್ಲಿ ಹೆಚ್ಚಾಗಿ ಪತ್ತೆಯಾದ ರೋಗಕಾರಕಗಳಾಗಿವೆ ಎಂದು ಬೀಜಿಂಗ್‌ನ ಆರೋಗ್ಯ ಅಧಿಕಾರಿಗಳು ಹೇಳಿದ್ದಾರೆ. 

ಮಕ್ಕಳಿಗೆ ಮೈಕೋಪ್ಲಾಸ್ಮಾ ಅಪಾಯ ಕಡಿಮೆಯಾದರೂ, ಹಲವಾರು ಉಸಿರಾಟದ ರೋಗಕಾರಕಗಳ ಹರಡುವಿಕೆಯು ಈಗ ಮತ್ತು ಮುಂದಿನ ವಸಂತಕಾಲದ ನಡುವೆ ದೊಡ್ಡ ಸಾಂಕ್ರಾಮಿಕವಾಗಿ ಹೊರಹೊಮ್ಮಬಹುದು ಎಂದೂ ಹೇಳಿದೆ.  

click me!