ಕೋವಿಡ್ ನಿರ್ಬಂಧಗಳನ್ನು ತೆಗೆದ ನಂತರ ಚೀನಾದ ಮೇನ್‌ಲ್ಯಾಂಡ್‌ನಲ್ಲಿ ಮೊದಲ ಚಳಿಗಾಲದಲ್ಲಿ ಇತರ ಉಸಿರಾಟದ ಕಾಯಿಲೆಗಳು ವಿಶಾಲ ಜನಸಂಖ್ಯೆಯನ್ನು ತೀವ್ರವಾಗಿ ಅಪ್ಪಳಿಸುವ ಸಾಧ್ಯತೆಯಿದೆ ಎಂದು ಸರ್ಕಾರ ಎಚ್ಚರಿಸಿದೆ.
ಬೀಜಿಂಗ್ (ನವೆಂಬರ್ 27, 2023): ಮಕ್ಕಳಲ್ಲಿ ಮೈಕೋಪ್ಲಾಸ್ಮಾದಿಂದ ಉಂಟಾಗುವ ನ್ಯುಮೋನಿಯಾದ ಉಲ್ಬಣ ತೀವ್ರ ಹೆಚ್ಚಾಗಿದೆ. ವೈದ್ಯರ ಭೇಟಿ ಮಾಡಲು ಮಕ್ಕಳು ಗಂಟೆಗಟ್ಟಲೆ ಕಾಯಬೇಕಾಗಿದೆ. ಆಸ್ಪತ್ರೆಯಲ್ಲಿ ಒಂದು ಕೈಗೆ ಡ್ರಿಪ್ಸ್ ಹಾಕ್ಕೊಂಡು ಹೋಂ ವರ್ಕ್ ಮುಂತಾದ ಕೆಲಸಗಳನ್ನು ಮಕ್ಕಳು ಅಲ್ಲೇ ಮಾಡುತ್ತಿರುವ ವಿಡಿಯೋಗಳು ವೈರಲ್ ಆಗ್ತಿದೆ. ಈ ಬಗ್ಗೆ ಚೀನಾ ಸಹ ಒಪ್ಪಿಕೊಂಡಿದೆ. ಆದರೆ, ಈ ಸಮಸ್ಯೆ ಕಡಿಮೆಯಾಗ್ತಿದ್ದು, ಇದರ ಜತೆಗೆ ಮತ್ತೊಂದು ಸಮಸ್ಯೆ ಹೆಚ್ಚಾಗ್ತಿದೆ ಎಂದು ಎಚ್ಚರಿಕೆ ನೀಡಿದೆ.
ಕೋವಿಡ್ ನಿರ್ಬಂಧಗಳನ್ನು ತೆಗೆದ ನಂತರ ಚೀನಾದ ಮೇನ್‌ಲ್ಯಾಂಡ್‌ನಲ್ಲಿ ಮೊದಲ ಚಳಿಗಾಲದಲ್ಲಿ ಇತರ ಉಸಿರಾಟದ ಕಾಯಿಲೆಗಳು ವಿಶಾಲ ಜನಸಂಖ್ಯೆಯನ್ನು ತೀವ್ರವಾಗಿ ಅಪ್ಪಳಿಸುವ ಸಾಧ್ಯತೆಯಿದೆ ಎಂದು ಸರ್ಕಾರ ಎಚ್ಚರಿಸಿದೆ. ಫ್ಲೂ, ಅಡೆನೊವೈರಸ್ ಮತ್ತು ಉಸಿರಾಟದ ಸಿನ್ಸಿಟಿಯಲ್ ವೈರಸ್, ಮೈಕೋಪ್ಲಾಸ್ಮಾವನ್ನು ಮೀರಿಸಿದೆ. ಇದು ನಗರದ ಉನ್ನತ ಮಕ್ಕಳ ವೈದ್ಯಕೀಯ ಕೇಂದ್ರಗಳಲ್ಲಿ ರೋಗಿಗಳಲ್ಲಿ ಹೆಚ್ಚಾಗಿ ಪತ್ತೆಯಾದ ರೋಗಕಾರಕಗಳಾಗಿವೆ ಎಂದು ಬೀಜಿಂಗ್‌ನ ಆರೋಗ್ಯ ಅಧಿಕಾರಿಗಳು ಹೇಳಿದ್ದಾರೆ.
undefined
ಇದನ್ನು ಓದಿ: ಚಳಿ ಶುರುವಾಗಿದೆ, ಶೀತ ಕೆಮ್ಮಿದ್ದರೆ ಇವನ್ನೆಲ್ಲಾ ತಿನ್ನಲೇ ಬೇಡಿ, ಆರೋಗ್ಯ ಜೋಪಾನ
ಮಕ್ಕಳಿಗೆ ಮೈಕೋಪ್ಲಾಸ್ಮಾ ಅಪಾಯ ಕಡಿಮೆಯಾದರೂ, ಹಲವಾರು ಉಸಿರಾಟದ ರೋಗಕಾರಕಗಳ ಹರಡುವಿಕೆಯು ಈಗ ಮತ್ತು ಮುಂದಿನ ವಸಂತಕಾಲದ ನಡುವೆ ದೊಡ್ಡ ಸಾಂಕ್ರಾಮಿಕವಾಗಿ ಹೊರಹೊಮ್ಮಬಹುದು ಎಂದೂ ಹೇಳಿದೆ.
ಶಿಶುವಿಹಾರಗಳು ಮತ್ತು ಪ್ರಾಥಮಿಕ ಶಾಲೆಗಳಲ್ಲಿನ ಮಕ್ಕಳಲ್ಲಿ ನ್ಯುಮೋನಿಯಾದ ಸ್ಥಿರವಾದ ಏರಿಕೆಯು ಈ ತಿಂಗಳು ಆಸ್ಪತ್ರೆಗಳನ್ನು ಫುಲ್‌ಹೌಸ್ ಮಾಡಿತು. ಬಳಿಕ, ವಿಶ್ವ ಆರೋಗ್ಯ ಸಂಸ್ಥೆ ಚೀನಾವನ್ನು ಈ ಬಗ್ಗೆ ವಿಚಾರಣೆ ಮಾಡುವಂತೆ ಪ್ರೇರೇಪಿಸಿತು. ಆದರೆ, ಇದು ಹೊಸ ವೈರಸ್ ಅಲ್ಲ, ಬ್ಯಾಕ್ಟೀರಿಯಾದ ಸೋಂಕು ಹೆಚ್ಚಾಗಿ ಮೈಕೋಪ್ಲಾಸ್ಮಾ ನ್ಯುಮೋನಿಯಾ ಸಾಮಾನ್ಯವಾಗಿ ಹಿರಿಯ ಮಕ್ಕಳು ಮತ್ತು ವಯಸ್ಕರಲ್ಲಿ ಸೌಮ್ಯವಾದ ಶೀತಗಳಿಗೆ ಕಾರಣವಾಗುತ್ತದೆ. ಆದರೆ ಕಿರಿಯ ಮಕ್ಕಳಲ್ಲಿ ಹೆಚ್ಚು ಗಂಭೀರವಾದ ಅನಾರೋಗ್ಯವನ್ನು ಉಂಟುಮಾಡಬಹುದು ಎಂದಿದ್ದಾರೆ.
ಇದನ್ನು ಓದಿ: ಕೊರೊನಾ ಮಾದರಿಯಲ್ಲೇ ಮತ್ತೊಂದು ಮಾರಕ ಚೀನಾ ವೈರಸ್ ಪತ್ತೆ: ದಿಢೀರ್ ತಜ್ಞರ ಸಭೆ ಕರೆದ ಸರ್ಕಾರ
ಆದರೆ, ಈ ದೃಶ್ಯಗಳು ಭಾರತೀಯರಿಗೆ ಹಾಗೂ ಚೀನಾದ ಹೊರಗಿನವರಿಗೆ ಕೋವಿಡ್‌ನ ಆರಂಭಿಕ ದಿನಗಳ ನೆನಪುಗಳನ್ನು ಮರಳಿ ತಂದಿದೆ. ಇನ್ನು, ಉಸಿರಾಟ ಸಮಸ್ಯೆ ಭಾರತದಲ್ಲೂ ಇದ್ದು, ಚಳಿಗಾಲದಲ್ಲಿ ಹೃದಯ ಸಮಸ್ಯೆಯಿಂದ, ಹೃದಯಾಘಾತಕ್ಕೆ ಒಳಗಾಗುವವರ ಸಂಖ್ಯೆ ಹೆಚ್ಚು. ಈ ಹಿನ್ನೆಲೆ ಉಸಿರಾಟ ಸಮಸ್ಯೆ ಇರುವವರು ಎಚ್ಚರಿಕೆ ವಹಿಸಿ.