
ಉತ್ತರ ಕೊರಿಯಾದ ಸರ್ವೋಚ್ಚ ನಾಯಕ ಕಿಮ್ ಜಾಂಗ್ ಉನ್ ತಮ್ಮ ಜೀವನಶೈಲಿಗಾಗಿ ಆಗಾಗ್ಗೆ ಸುದ್ದಿಗೆ ಬರುತ್ತಾರೆ. ಈಗ ಕಿಮ್ ಜಾಂಗ್ ಉನ್ ಅವರ ಬದಲು ಉತ್ತರ ಕೊರಿಯಾ ದೇಶದ ಜನರು ಚರ್ಚೆಗೆ ಬಂದಿದ್ದಾರೆ. ಅಲ್ಲಿನ ಜನರು ದೊಡ್ಡ ಸಮಸ್ಯೆ ಎದುರಿಸುತ್ತಿದ್ದಾರೆ. ಅದೇನೆಂದ್ರೆ ಕೂದಲು ಉದುರುವುದು. ಉತ್ತರ ಕೊರಿಯಾದ ಜನರ ಕೂದಲು ವೇಗವಾಗಿ ಉದುರುತ್ತಿದೆ. ಆದ್ದರಿಂದ ಅವರ ತಲೆ ಬೇಗ ಬೋಲಾಗುವ ಅಪಯವಿದೆ.
ದಕ್ಷಿಣ ಕೊರಿಯಾ (South Korea ) ದ ತಜ್ಞರು, ಉತ್ತರ ಕೊರಿಯಾ ಜನರ ಈ ಸಮಸ್ಯೆಯನ್ನು ಎಲ್ಲರ ಮುಂದಿಟ್ಟಿದ್ದಾರೆ. ಉತ್ತರ ಕೊರಿಯಾದಲ್ಲಿ ತೆಳ್ಳನೆಯ ಕೂದಲು ಅಥವಾ ಸಂಪೂರ್ಣ ಬೋಳು (Bald) ಸಮಸ್ಯೆಯಿಂದ ಬಳಲುತ್ತಿರುವವರ ಸಂಖ್ಯೆಯಲ್ಲಿ ವಿಚಿತ್ರ ಏರಿಕೆ ಕಂಡುಬಂದಿದೆ ಎಂದು ದಕ್ಷಿಣ ಕೊರಿಯಾದ ತಜ್ಞರು ಹೇಳುತ್ತಾರೆ.
ಚೀನಾದಲ್ಲಿ ಒಂದೇ ದಿನದ ವ್ಯಾಲಿಡಿಟಿ ಇರೋ ಮದುವೆ : ಕಾರಣ ಕೇಳಿದ್ರೆ ಅಚ್ಚರಿ ಗ್ಯಾರಂಟಿ
ನ್ಯೂಯಾರ್ಕ್ ಪೋಸ್ಟ್ ವರದಿಯ ಪ್ರಕಾರ, ಉತ್ತರ ಕೊರಿಯಾ (North Korea) ದಲ್ಲಿ ಕೂದಲು ಉದುರುವಿಕೆ ಸೋಂಕು ವೇಗವಾಗಿ ಹರಡುತ್ತಿದೆ ಎಂದು ರೇಡಿಯೊ ಫ್ರೀ ಏಷ್ಯಾ ಜೊತೆಗಿನ ಸಂಭಾಷಣೆಯ ಸಮಯದಲ್ಲಿ ತಜ್ಞರು ಹೇಳಿದ್ದಾರೆ. ಉತ್ತರ ಕೊರಿಯಾದಲ್ಲಿ ಬಳಸುವ ಸಾಬೂನು ಮತ್ತು ಲಾಂಡ್ರಿ ಡಿಟರ್ಜೆಂಟ್ ಇದಕ್ಕೆ ಕಾರಣ ಎಂದು ಅವರು ಆರೋಪಿಸಿದ್ದಾರೆ. ಉತ್ತರ ಕೊರಿಯಾದ ಜನರು ಬಳಸುವ ಸೋಪ್ ಹಾಗೂ ಲಾಂಡ್ರಿ ಡಿಟರ್ಜೆಂಟ್ ನಲ್ಲಿ ಹೆಚ್ಚಿನ ಪ್ರಮಾಣದ ರಾಸಾಯನಿಕ ಅಂಶಗಳಿರುವುದು ಪತ್ತೆಯಾಗಿದೆ. ಇದೇ ಕೂದಲು ವೇಗವಾಗಿ ಉದುರಲು ಕಾರಣವಾಗ್ತಿದೆ.
ಮಾರಕ ನ್ಯುಮೋನಿಯಾಗಿಂತ ಈ ಸಮಸ್ಯೆ ಇನ್ನೂ ಹೆಚ್ಚಾಗುತ್ತೆ: ಚೀನಾ ಎಚ್ಚರಿಕೆ; ಭಾರತಕ್ಕೂ ಆತಂಕ!
ವೈದ್ಯ ಚೋಯ್ ಜಿಯಾಂಗ್ ಹೂನ್ ಈ ಗಂಭೀರ ವಿಷ್ಯದ ಬಗ್ಗೆ ಮಾತನಾಡಿದ್ದಾರೆ. ಚೋಯ್ ಜಿಯಾಂಗ್ ಹೂನ್ ಉತ್ತರ ಕೊರಿಯಾದ ವೈದ್ಯರಾಗಿದ್ದು, ಈಗ ದಕ್ಷಿಣಕ್ಕೆ ಓಡಿ ಹೋದಿದ್ದಾರೆ. ಅಲ್ಲದೆ ಸಿಯೋಲ್‌ನ ಕೊರಿಯಾ ವಿಶ್ವವಿದ್ಯಾಲಯದ ಸಾರ್ವಜನಿಕ ನೀತಿ ಸಂಶೋಧನಾ ಸಂಸ್ಥೆಯಲ್ಲಿ ಹಿರಿಯ ಸಂಶೋಧಕರಾಗಿ ಕೆಲಸ ಮಾಡುತ್ತಿದ್ದಾರೆ.
ಉತ್ತರ ಕೊರಿಯಾ ಜನರ ಬಗ್ಗೆ ಮಾತನಾಡಿದ ಅವರು, ಉತ್ತರ ಕೊರಿಯಾದಲ್ಲಿ ಕಡಿಮೆ ರಾಸಾಯನಿಕ ಬಳಸಿದ ಉತ್ಪನ್ನಗಳು ಸಿಗೋದಿಲ್ಲ. ಅಲ್ಲಿನ ಜನರು ಸೌಮ್ಯ ಉತ್ಪನ್ನಗಳನ್ನು ಬಳಸುವುದು ಹೇಳಿದಷ್ಟು ಸುಲಭವಲ್ಲ. ಅಲ್ಲಿನ ಹೆಚ್ಚಿನ ಜನರು ಕೂದಲು ಉದುರುವಿಕೆಯ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಹಾಗಂತ ಅಲ್ಲಿನ ಜನರು ತಮ್ಮ ಕೂದಲು ಹೆಚ್ಚು ಉದುರುತ್ತಿದೆ ಎಂಬ ಬಗ್ಗೆ ಹೆಚ್ಚು ಚಿಂತಿಸೋದಿಲ್ಲ. ಮಾನಸಿಕವಾಗಿ ಅವರು ಕೂದಲು ಉದುರುವಿಕೆ ಮತ್ತು ಬೋಳು ತಲೆ ಸಮಸ್ಯೆಯನ್ನು ಎದುರಿಸಲು ಸಿದ್ಧರಾಗಿದ್ದಾರೆಂದು ವೈದ್ಯ ಚೋಯ್ ಜಿಯಾಂಗ್ ಹೂನ್ ಹೇಳಿದ್ದಾರೆ.
ಕೂದಲು ಉದುರುವಿಕೆಯನ್ನು ತಡೆಯಲು ಇಲ್ಲಿನ ಜನರು ಚಿಕಿತ್ಸೆಗೆ ಒಳಗಾಗುವುದು ಬಹಳ ಕಡಿಮೆ. ಯಾಕೆಂದ್ರೆ ಇಲ್ಲಿನ ಚಿಕಿತ್ಸಾ ವೆಚ್ಚ ಹೆಚ್ಚಿದೆ. ಇದು ಒಂದು ಕೂದಲು ತೆಳ್ಳಗಾಗಲು ಕಾರಣವಾದ್ರೆ ಮತ್ತೊಂದು ಉತ್ತರ ಕೊರಿಯಾದ ಮಿಲಿಟರಿ ಕ್ಯಾಪ್. ಮಿಲಿಟರಿ ಕ್ಯಾಪ್ ಸೂಕ್ತವಾಗಿಲ್ಲ. ಸರಿಯಾದ ಗಾಳಿ ಕೂದಲಿಗೆ ಸಿಗೋದಿಲ್ಲ. ಇದರಿಂದಾಗಿ ಬ್ಯಾಕ್ಟೀರಿಯಾಗಳು ಸಂಗ್ರಹವಾಗುತ್ತವೆ ಮತ್ತು ರಂಧ್ರಗಳು ಮುಚ್ಚಿಹೋಗುತ್ತವೆ. ಮಿಲಿಟರಿಯಲ್ಲಿ ಕೆಲಸ ಮಾಡುವ ಜನರ ಕೂದಲು ಹೆಚ್ಚಿನ ಪ್ರಮಾಣದಲ್ಲಿ ಉದುರುತ್ತಿದೆ ಎಂದು ತಜ್ಞರು ಹೇಳಿದ್ದಾರೆ.
ಉತ್ತರ ಕೋರಿಯಾದಲ್ಲಿ ಮಿಲಿಟರಿಗೆ ಸಂಬಂಧಿಸಿದಂತೆ ಒಂದು ಕಟ್ಟುನಿಟ್ಟಿನ ನಿಯಮವಿದೆ. ಎಲ್ಲಾ ಸಮರ್ಥ ಪುರುಷರು ಸಾಮಾನ್ಯವಾಗಿ ಸಶಸ್ತ್ರ ಪಡೆಗಳಲ್ಲಿ 10 ವರ್ಷ ಸೇವೆ ಸಲ್ಲಿಸಬೇಕಾಗುತ್ತದೆ. ಬಹುತೇಕ ಪುರುಷರು ಮಿಲಿಟರಿಯಲ್ಲಿ ಕೆಲಸ ಮಾಡಿ ಬರುವ ಕಾರಣ ಅವರಲ್ಲಿ ಕೂದಲು ಉದುರುವ ಸಮಸ್ಯೆ ಹೆಚ್ಚಾಗಿ ಕಾಣಿಸಿಕೊಳ್ತಿದೆ. ಕೂದಲು ಉದುರುವುದು ಉತ್ತರ ಕೊರಿಯಾದಲ್ಲಿ ಮಾತ್ರವಲ್ಲ, ದಕ್ಷಿಣ ಕೊರಿಯಾದಲ್ಲಿಯೂ ಈಗಿನ ದಿನಗಳಲ್ಲಿ ಹಠಾತ್ ಹೆಚ್ಚಾಗಿರುವುದು ಕಂಡು ಬಂದಿದೆ ಎಂದು ವರದಿಯಲ್ಲಿ ಹೇಳಲಾಗಿದೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.