ಬೆಳೆಯುವ ಮಕ್ಕಳಿಗೆ ಮುಖ್ಯವಾಗಿ ಆಟ, ಪಾಠದ ಜೊತೆಗೆ ಉತ್ತಮ ಆಹಾರ ಬಹಳ ಮುಖ್ಯ. ಮಕ್ಕಳು ಸರಿಯಾಗಿ ತಿಂದರಷ್ಟೇ ಅವರ ಬೆಳವಣಿಗೆ ಚೆನ್ನಾಗಿರುತ್ತದೆ, ಆರೋಗ್ಯವೂ ಉತ್ತಮವಾಗಿರುತ್ತದೆ. ಅದೇ ನಿಮ್ಮ ಮಕ್ಕಳು ಬೆಳಗ್ಗೆ ಮನೆಯ ತಿಂಡಿ ಬೇಡವೆಂದೋ ಅಥವಾ ತಿಂಡಿಯನ್ನೇ ಸ್ಕಿಪ್ ಮಾಡ್ತಾರೆ ಎಂದರೆ ಅವರು ಮಾನಸಿಕ ಸಮಸ್ಯೆಗೆ ಒಳಗಾಗಬಹುದು. ಈ ಬಗ್ಗೆ ಮಾಹಿತಿ ಇಲ್ಲಿದೆ
ಬೆಳೆಯುವ ಮಕ್ಕಳಿಗೆ ಮುಖ್ಯವಾಗಿ ಆಟ, ಪಾಠದ ಜೊತೆಗೆ ಉತ್ತಮ ಆಹಾರ ಬಹಳ ಮುಖ್ಯ. ಮಕ್ಕಳು ಸರಿಯಾಗಿ ತಿಂದರಷ್ಟೇ ಅವರ ಬೆಳವಣಿಗೆ ಚೆನ್ನಾಗಿರುತ್ತದೆ, ಆರೋಗ್ಯವೂ ಉತ್ತಮವಾಗಿರುತ್ತದೆ. ಬೆಳಗ್ಗೆ ಶಾಲೆಗೆ ಹೊರಡಬೇಕು ಆದರೆ ತಿಂಡಿ ತಿನ್ನಬೇಕು, 10 ಸಾರಿ ಕರೆದರೂ ತಿಂಡಿ ಬೇಡವೆಂದೋ, ತಿನ್ನುವಾಗ ಉದಾಸೀನ, ಸ್ವಲ್ಪ ತಿಂದು ಉಳಿದದ್ದು ಹಾಗೆಯೇ ಬಿಡುವುದು ಈ ರೀತಿ ಮಾಡುವುದು ಸಾಮಾನ್ಯ. ಆದರೆ ಪೋಷಕರು ಒತ್ತಾಯ ಮಾಡಿ, ತುರುಕಿ ತಿನ್ನಿಸಬೇಕಾಗುತ್ತದೆ. ನನಗೆ ಬೆಳಗ್ಗೆ ತಿಂಡಿಯೇ ಬೇಡ ಎಂದು ಹೇಳುವ ಮಕ್ಕಳು ಅಥವಾ ತಿಂಡಿಯನ್ನೇ ಸ್ಕಿಪ್ ಮಾಡುವ ಮಕ್ಕಳು ನಿಮ್ಮನೆಯಲ್ಲಿದ್ದರೆ ಪೋಷಕರೆ ಈ ಬಗ್ಗೆ ಎಚ್ಚರವಹಿಸಬೇಕಾಗುತ್ತದೆ. ಏಕೆಂದರೆ ಇತ್ತೀಚೆಗೆ ಒಂದು ಅಧ್ಯಯನ ನಡೆದಿದ್ದು ಅದರ ಪ್ರಕಾರ ಯಾವ ಮಕ್ಕಳು ಬೆಳಗ್ಗೆ ಬ್ರೇಕ್‌ಫಾಸ್ಟ್ ಸ್ಕಿಪ್ ಮಾಡುತ್ತಾರೋ ಅವರಲ್ಲಿ ನಡವಳಿಕೆಯ ಸಮಸ್ಯೆ ಹೆಚ್ಚಾಗಿರುತ್ತವೆ ಎಂದು ತಿಳಿದುಬಂದಿದೆ.
ಯಾವ ಮಕ್ಕಳು ಬೆಳಗ್ಗೆ ಮನೆಯಲ್ಲಿ ತಿಂಡಿ ತಿನ್ನುವುದಿಲ್ಲವೋ ಅಥವಾ ಬ್ರೇಕ್‌ಫಾಸ್ಟ್ ಅನ್ನು ಸ್ಕಿಪ್ ಮಾಡುತ್ತಾರೋ ಅವರಲ್ಲಿ ನಡವಳಿಕೆಯ ಸಮಸ್ಯೆ ಕಾಣಿಸಿಕೊಳ್ಳುತ್ತದೆ ಎಂದು ಅಧ್ಯಯನ ತಿಳಿಸಿದೆ. ಈ ಅಧ್ಯಯನದ ವರದಿಯು ಜರ್ನಲ್ ಫ್ರಾಂಟೈರಿಸ್ ಇನ್ ನ್ಯೂಟ್ರೀಷನ್‌ನಲ್ಲಿ ಪ್ರಕಟವಾಗಿದೆ. ಮನೆಯಲ್ಲಿ ಬೆಳಗ್ಗೆ ತಿಂಡಿ (Breakfast) ತಿನ್ನುವ ಮಕ್ಕಳಲ್ಲಿ ಮಾನಸಿಕ ಯೋಗಕ್ಷೇಮ ಉತ್ತಮವಾಗಿರುತ್ತದೆ. ತಿಂಡಿ ತಿನ್ನದ ಮಕ್ಕಳಲ್ಲಿ ನಡವಳಿಕೆಯಲ್ಲಿ ಸಮಸ್ಯೆಯನ್ನು ಎದುರಿಸುತ್ತಾರೆ ಎಂದು ತಿಳಿಸಿದೆ. ಬೆಳಗಿನ ಉಪಾಹಾರದಲ್ಲಿ ಮೊಟ್ಟೆ ಮತ್ತು ಸಂಸ್ಕರಿಸಿದ ಮಾಂಸವನ್ನು ಬೇಕನ್ ಅಥವಾ ಸಾಸೇಜ್‌ಗಳನ್ನು ತಿನ್ನುವ ಮಕ್ಕಳು ಮತ್ತು ಹದಿಹರೆಯದವರು ಏಕದಳವನ್ನು ತಿನ್ನುವವರಿಗಿಂತ ವರ್ತನೆಯ ಸಮಸ್ಯೆಗಳನ್ನು ಅನುಭವಿಸುವ ಸಾಧ್ಯತೆಯಿದೆ ಎಂದು ಹೇಳಲಾಗಿದೆ.
ಗಂಟೆಗಟ್ಟಲೆ ಅಡುಗೆ ಮಾಡೋಕೆ ಬೇಜಾರಾ ? ಐದೇ ನಿಮಿಷದಲ್ಲಿ ಮಾಡಿ ಪಾಪಡ್ ದೋಸೆ
ದಿನವನ್ನು ಪ್ರಾರಂಬಿಸಲು ಪೌಷ್ಠಿಕಾಂಶದ ಮಾರ್ಗದ ಪ್ರಮುಖ ಪಾತ್ರಗಳ ಬಗ್ಗೆ ಹಿಂದಿನ ವರದಿಯಲ್ಲಿ ಹೇಳಲಾಗಿತ್ತು. ಈ ಹೊಸ ಅಧ್ಯಯನವು ಮಕ್ಕಳು ಉಪಹಾರವನ್ನು ತಿನ್ನುತ್ತಾರೆಯೇ ಮತ್ತು ಅವರು ಎಲ್ಲಿ ಮತ್ತು ಏನು ತಿನ್ನುತ್ತಾರೆ ಎಂಬ ವರದಿಗಾಗಿ ಪರೀಕ್ಷಿಸಲಾಗಿದೆ. ಬ್ರೇಕ್‌ಫಾಸ್ಟ್ ತಿನ್ನುವುದು ಮಾತ್ರ ಮುಖ್ಯವಲ್ಲ, ಆದರೆ ಮಕ್ಕಳು ತಿಂಡಿಯನ್ನು ಎಲ್ಲಿ ತಿನ್ನುತ್ತಾರೆ ಮತ್ತು ಏನು ತಿನ್ನುತ್ತಾರೆ ಎಂಬುದು ಸಹ ಮುಖ್ಯವಾಗಿದೆ ಎಂದು ವರದಿಯಲ್ಲಿ ಸೂಚಿಸಿದೆ. ಬೆಳಗಿನ ತಿಂಡಿಯನ್ನು ಬಿಟ್ಟುಬಿಡುವುದು ಅಥವಾ ಮನೆ ಹೊರತು ಪಡಿಸಿ ಹೊರಗಡೆ ತಿಂಡಿ ತಿನ್ನುವ ಮಕ್ಕಳು ಮತ್ತು ಹದಿಹರೆಯದವರಲ್ಲಿ ಮಾನಸಿಕ, ಸಾಮಾಜಿಕ ನಡವಳಿಕೆಯ ಸಮಸ್ಯೆಗಳ ಸಂಭವನೀಯತೆ ಹೆಚ್ಚಾಗಿರುತ್ತದೆ. ಅಂತೆಯೇ, ಕೆಲ ಆಹಾರಗಳು ಅಥವಾ ಪಾನೀಯಗಳ ಸೇವನೆಯು ಹೆಚ್ಚಿನ ಅಂದರೆ ಸಂಸ್ಕರಿಸಿದ ಮಾಂಸ ಅಥವಾ ಕಡಿಮೆನಂದರೆ ಡೈರಿ ಪದಾರ್ಥಗಳು, ಧಾನ್ಯಗಳು ಮಾನಸಿಕ ವರ್ತನೆಯ ಸಮಸ್ಯೆಗಳನ್ನು ಹೊಂದಿದೆ.
ಉಪಾಹಾರ
ಈ ಅಧ್ಯಯನದಲ್ಲಿ 2017ರ ಸ್ಪ್ಯಾನಿಷ್ ರಾಷ್ಟ್ರೀಯ ಆರೋಗ್ಯ ಸಮೀಕ್ಷೆಯಿಂದ ಡೇಟಾವನ್ನು ವಿಶ್ಲೇಷಿಸಲಾಗಿದೆ. ಈ ಸಮೀಕ್ಷೆಯು ಉಪಾಹಾರದ ಅಭ್ಯಾಸಗಳು ಮತ್ತು ಮಕ್ಕಳ ಮಾನಸಿಕ ಆರೋಗ್ಯದ ಬಗ್ಗೆ ಪ್ರಶ್ನೆಗಳು ಒಳಗೊಂಡಿತ್ತು. ಇದು ಸ್ವಾಭಿಮಾನ, ಮನಸ್ಥಿತಿ ಮತ್ತು ಆತಂಕದAಹ ಗುಣಲಕ್ಷಣಗಳನ್ನು ಒಳಗೊಂಡಿವೆ. ಈ ಪ್ರಶ್ನೆಗಳನ್ನು ಮಕ್ಕಳ ಪೋಷಕರು ಹಾಗೂ ಪಾಲಕರಿಂದ ಪೂರ್ಣಗೊಳಿಸಿದ್ದಾರೆ. ಈ ಸಮೀಕ್ಷೆಯಲ್ಲಿ ಒಟ್ಟು 3,772 ಸ್ಪಾö್ಯನಿಷ್ ನಿವಾಸಿಗಳು ಪಾಲ್ಗೊಂಡಿದ್ದರು. ನಾಲ್ಕು ಮತ್ತು ೧೪ ವರ್ಷದ ಮಕ್ಕಳ ಪೋಷಕರು ಮತ್ತು ಪಾಲಕರಲ್ಲಿ ಈ ಪ್ರಶ್ನೆಗಳನ್ನು ಕೇಳಲಾಗಿತ್ತು. ಈ ಸಮೀಕ್ಷೆಯಲ್ಲಿ ಅಧ್ಯಯನ ತಂಡವು ಆತಂಕಕಾರಿ ಫಲಿತಾಂಶ ಕಂಡುಕೊAಡಿತು. ಅದು ಮನೆಯಿಂದ ಹೊರಗಿರುವ ತಿಂಡಿ ಸೇವನೆಗೆ ಮಕ್ಕಳು ಹೆಚ್ಚು ಒಲವು ತೋರಿಸಿದ್ದು, ಮನೆಯ ಊಟವನ್ನು ಸಂಪೂರ್ಣವಾಗಿ ತ್ಯಜಿಸಿದ್ದಾರೆ ಎಂದು. ಮನೆಯಲ್ಲಿ ತಯಾರಿಸಿದ ಆಹಾರಕ್ಕಿಂತ ಹೊರಗಿನ ಉಪಾಹಾರವು ಕಡಿಮೆ ಪೌಷ್ಠಿಕಾಂಶವನ್ನು ಹೊಂದಿರುವುದೇ ಇದಕ್ಕೆ ಕಾರಣ.
ಬ್ರೇಕ್‌ಫಾಸ್ಟ್ ಸ್ಕಿಪ್ ಮಾಡೋ ಮಕ್ಕಳ ಅಭ್ಯಾಸ ಖಿನ್ನತೆಗೆ ಕಾರಣವಾಗ್ಬೋದು!
ಕಾಫಿ (Coffee(, ಹಾಲು (Milk), ಚಹಾ, ಚಾಕೊಲೇಟ್, ಕೋಕೋ (Coco), ಮೊಸರು (Curd), ಬ್ರೆಡ್, ಟೋಸ್ಟ್, ಧಾನ್ಯಗಳು ಮತ್ತು ಪೇಸ್ಟ್ರಿಗಳು ನಡವಳಿಕೆಯ ಸಮಸ್ಯೆಗಳ ಸಾಧ್ಯತೆ ಕಡಿಮೆ ಹೊಂದಿರುತ್ತವೆ. ಅದೇ ಮೊಟ್ಟೆ, ಚೀಸ್ ಮತ್ತು ಹ್ಯಾಮ್‌ನಂತಹ ಆಹಾರಗಳ ಸೇವಿಸುವ ಮಕ್ಕಳಲ್ಲಿ ನಡವಳಿಕೆಯ ಸಮಸ್ಯೆಗಳು ಹೆಚ್ಚಿದ್ದು ಇದು ಅಪಾಯಕಾರಿ ಎಂದು ತಿಳಿಸಿದೆ. ಮನೆ ಬಿಟ್ಟು ಹೊರಗಡೆ ಉಪಾಹಾರ ಸೇವಿಸುವುದು ಹೆಚ್ಚಿನ ಮಾನಸಿಕ ಆರೋಗ್ಯ ಸಮಸ್ಯೆಗೆ ಕಾರಣವಾಗಬಹುದು ಎಂದು ಅಧ್ಯಯನದಿಂದ ಹೊಸ ಅಂಶವು ತಿಳಿಸಿದೆ. ಏಕೆಂದರೆ ಬೆಳಗ್ಗಿನ ಬ್ರೇಕ್‌ಫಾಸ್ಟ್ ಆರೋಗ್ಯಕರ ಜೀವನಶೈಲಿಯ ದದಿನಚರಿಯ ಭಾಗವಾಗಿದ್ದು, ಬ್ರೇಕ್‌ಫಾಸ್ಟ್ ಸೇವಿಸುವ ಬಗ್ಗೆ ಉತ್ತೇಜಿಸುತ್ತದೆ ಅಲ್ಲದೆ ಅದನ್ನು ಮನೆಯಲ್ಲಿಯೇ ತಿನ್ನಬೇಕು ಎಂದು ತಜ್ಞರು ಹೇಳುತ್ತಾರೆ.
ಮನೋಸಾಮಾಜಿಕ ಆರೋಗ್ಯ ಸಮಸ್ಯೆಗಳನ್ನು ತಡೆಗಟ್ಟಲು ಡೈರಿ ಅಥವಾ ಸಿರಿಧಾನ್ಯಗಳನ್ನು ಒಳಗೊಂಡಿರುವ ಉಪಹಾರ ಸೇವಿಸುವುದು ಹಾಗೂ ಮಾಂಸ, ಮೊಟ್ಟೆಯಂತಹ ಸ್ಯಾಚುರೇಟೆಡ್ ಆಹಾರದಲ್ಲಿ ಕೊಬ್ಬು ಮತ್ತು ಕೊಲೆಸ್ಟಾçಲ್ ಇರುವ ಆಹಾರಗಳು ಕಡಿಮೆ ಮಾಡುತ್ತದೆ. ಇದು ಯುವ ಜನರಲ್ಲಿ ಹಾಗೂ ಮಕ್ಕಳಲ್ಲಿ ಮಾನಸಿಕ ಸಾಮಾಜಿಕ ಆರೋಗ್ಯ ಸಮಸ್ಯೆಗಳನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.