ಖಾಸಗಿ ಆಸ್ಪತ್ರೆಯಲ್ಲಿ ಸರ್ಕಾರಿ ವೈದ್ಯರ ಸೇವೆ ಹಿನ್ನಲೆ; ಬಿಸಿ ಮುಟ್ಟಿಸಿದ ಬಳ್ಳಾರಿ ಜಿಲ್ಲಾಡಳಿತ

By Ravi Nayak  |  First Published Sep 3, 2022, 3:21 PM IST
  • ಖಾಸಗಿ ಆಸ್ಪತ್ರೆಗಳಲ್ಲಿ ಸರ್ಕಾರಿ ವೈದ್ಯರ ಸೇವೆ ಹಿನ್ನಲೆ
  • ಬಳ್ಳಾರಿಯ ಪ್ರತಿಷ್ಠಿತ ಖಾಸಗಿ ಆಸ್ಪತ್ರೆಗಳಿಗೆ ನೋಟಿಸ್ ಜಾರಿ.
  • ಸ್ವಂತ ವೈದ್ಯರ ಬದಲಿಗೆ ಸರ್ಕಾರಿ ವೈದ್ಯರ ಸೇವೆ ಪಡೆಯುತ್ತಿರುವುದಕ್ಕೆ ನೋಟಿಸ್
  • ಸರ್ಕಾರಿ ಆಸ್ಪತ್ರೆ ಅವಧಿಯಲ್ಲಿ ಖಾಸಗಿ ಸೇವೆ ಸಲ್ಲಿಸೋ ವೈದ್ಯರಿಗೆ ಶುರುವಾದ ಸಂಕಟ.

ವರದಿ  ; ನರಸಿಂಹ ಮೂರ್ತಿ ಕುಲಕರ್ಣಿ

ಬಳ್ಳಾರಿ (ಸೆ.3) : ಅವರೆಲ್ಲಾ ಸರ್ಕಾರಿ ವೈದ್ಯರು. ಆ ವೈದ್ಯರು ಸರ್ಕಾರಿ ಅಸ್ಪತ್ರೆ ಇಲ್ಲವೇ ವೈದ್ಯಕೀಯ ಕಾಲೇಜುಗಳಲ್ಲಿ ಸೇವೆ ಸಲ್ಲಿಸಬೇಕು. ಅದ್ರೆ ಲಕ್ಷ ಲಕ್ಷ ಸಂಬಳ ಪಡೆಯೋ ಆ ವೈದ್ಯರೆಲ್ಲರೂ ಸರ್ಕಾರಿ ಆಸ್ಪತ್ರೆಗಳಲ್ಲಿ ಸೇವೆ ಸಲ್ಲಿಸಿರೋದಕ್ಕಿಂತ ಖಾಸಗಿಯಾಗಿ ಸೇವೆ ಸಲ್ಲಿಸಿದ್ದೇ ಹೆಚ್ಚು ಎನ್ನುವ ಆರೋಪವಿದೆ. ಸರ್ಕಾರಿ ಸಂಬಳ ಪಡೆದು ಖಾಸಗಿ ಆಸ್ಪತ್ರೆ ಯಲ್ಲಿ ಸೇವೆ ಸಲ್ಲಿಸೋ ಆ ವೈದ್ಯರಿಗೆ ಜಿಲ್ಲಾಡಳಿತ ಅದೆಷ್ಟೊ ಬಾರಿ ಎಚ್ಚರಿಕೆ ಕೊಟ್ಟರೂ ದಾರಿಗೆ ಬಾರದ ಹಿನ್ನೆಲೆ ಇದೀಗ ಹೊಸದೊಂದು ಐಡಿಯಾದ ಮೂಲಕ ಬಿಸಿ ಮುಟ್ಟಿಸಲು ಮುಂದಾಗಿದೆ. ಹೌದು, ಯಾವೆಲ್ಲ ಸರ್ಕಾರಿ ವೈದ್ಯರು ಖಾಸಗಿ ಆಸ್ಪತ್ರೆಯಲ್ಲಿ ಸಲ್ಲಿಸುತ್ತಿದ್ದಾರೋ ಆ ಎಲ್ಲ ಖಾಸಗಿ ಆಸ್ಪತ್ರೆಗಳಿಗೀಗ ನೋಟಿಸ್ ನೀಡುವ ಮೂಲಕ ಹೊಸ ದಾಳವನ್ನು ಉರುಳಿಸಿದೆ.  

Tap to resize

Latest Videos

undefined

ಮಳೆ ಹಾನಿ; ರೈತರಿಗೆ .1.38 ಕೋಟಿ ಪರಿಹಾರ - ಸಚಿವೆ ಶಶಿಕಲಾ ಜೊಲ್ಲೆ

  ಮೂವತ್ತಕ್ಕೂ ‌ಹೆಚ್ಚು ಖಾಸಗಿ ಆಸ್ಪತ್ರೆಗಳಿಗೆ ನೋಟಿಸ್:

ಸರ್ಕಾರಿ ವೈದ್ಯರಿಗೆ ದಾರಿಗೆ ತರಲು ಮುಂದಾದ ಬಳ್ಳಾರಿ(Ballari) ಜಿಲ್ಲಾಡಳಿತ  ಬಳ್ಳಾರಿಯ ಖಾಸಗಿ ಆಸ್ಪತ್ರೆ(Private Hospitals) ಗಳಿಗೆ ನೋಟಿಸ್(Notice) ಜಾರಿ ಮಾಡಿದೆ. ಬಳ್ಳಾರಿಯ ಪ್ರತಿಷ್ಠಿತ 30 ಆಸ್ಪತ್ರೆಗಳಿಗೆ ನೋಟಿಸ್ ಜಾರಿ ಮಾಡೋ ಮೂಲಕ  ಸರ್ಕಾರಿ ವೈದ್ಯರ ಸೇವೆ ತಗೆದುಕೊಳ್ಳುತ್ತಿರುವ ವಿವರ ನೀಡುವಂತೆ ಎಚ್ಚರಿಕೆ ನೀಡಿದೆ. 

ಹೌದು, ಬಳ್ಳಾರಿ ಜಿಲ್ಲಾಡಳಿತ ಕೊನೆಗೂ ಎಚ್ಚತ್ತುಕೊಂಡಿದೆ. ಸರ್ಕಾರದ ಸಂಬಳ ಪಡೆದು ಸರ್ಕಾರಿ ಆಸ್ಪತ್ರೆ ಸೇವೆ ಅವಧಿ ವೇಳೆಯೇ ಖಾಸಗಿ ಆಸ್ಪತ್ರೆ ಗಳಲ್ಲಿ ಸೇವೆ ಸಲ್ಲಿಸೋ ನೂರಾರು ವೈದ್ಯರ ವಿರುದ್ದ ಜಿಲ್ಲಾಡಳಿತ ಕ್ರಮಕ್ಕೆ ಮುಂದಾಗಿದೆ. ಸರ್ಕಾರಿ ಕಚೇರಿಯ ಅವಧಿ ವೇಳೆ ಖಾಸಗಿ ಆಸ್ಪತ್ರೆಗಳಲ್ಲಿ ಸೇವೆ ಸಲ್ಲಿಸೋ ವಿಮ್ಸ್ ಆಸ್ಪತ್ರೆಯ ವೈದ್ಯರಿಗೆ ಕಳೆದ ವಾರವಷ್ಠೆ ವಿಮ್ಸ್ ಆಡಳಿತ ಮಂಡಳಿ ನೋಟಿಸ್ ಜಾರಿ ಮಾಡಿತ್ತು. ಆದ್ರೇ ಅದರಿಂದ ಮಹತ್ತರವಾದ ಯಾವುದೇ ಬದಲಾವಣೆ ಕಾಣದ ಹಿನ್ನೆಲೆ ಇದೀಗ ಜಿಲ್ಲಾಡಳಿತ ಬಳ್ಳಾರಿಯ ಖಾಸಗಿ ಆಸ್ಪತ್ರೆಯಲ್ಲಿ ಸೇವೆ ಸಲ್ಲಿಸುವ ಸರ್ಕಾರಿ ವೈದ್ಯರ ವಿವರ ನೀಡುವಂತೆ ಖಾಸಗಿ ಆಸ್ಪತ್ರೆಗಳಿಗೆ ನೋಟಿಸ್ ಜಾರಿ ಮಾಡಿದೆ. ಇದರಿಂದ ಸರ್ಕಾರಿ ವೈದ್ಯರ ಕಳ್ಳಾಟ ಗೊತ್ತಾಗುತ್ತದೆ ಅನ್ನೋದು ಜಿಲ್ಲಾಡಳಿತದ ಲೆಕ್ಕಾಚಾರವಾಗಿದೆ ಎಂದು ಜಿಲ್ಲಾ ಆರೋಗ್ಯಾಧಿಕಾರಿ ಜನಾರ್ಧನ  ಮಾಹಿತಿ ನೀಡಿದ್ದಾರೆ..

ಬಹುತೇಕ ಖಾಸಗಿ ಆಸ್ಪತ್ರೆಗಳಲ್ಲಿದ್ದಾರೆ ಸರ್ಕಾರಿ ವೈದ್ಯರು!
 
ಬಳ್ಳಾರಿಯ ಬಹುತೇಕ ಪ್ರತಿಷ್ಠಿತ ಖಾಸಗಿ ಆಸ್ಪತ್ರೆಗಳಲ್ಲಿ ಸರ್ಕಾರಿ ವೈದ್ಯರೇ ಸೇವೆ ಸಲ್ಲಿಸುತ್ತಿದ್ದಾರೆ. ಅಲ್ಲದೇ ಸರ್ಕಾರಿ ಕಚೇರಿ ಅವಧಿಯಲ್ಲಿಯೇ ವೈದ್ಯರು ಖಾಸಗಿ ಆಸ್ಪತ್ರೆಯಲ್ಲಿ ಸೇವೆ ಸಲ್ಲಿಸುತ್ತಿರುವುದರಿಂದ ಸರ್ಕಾರಿ ಆಸ್ಪತ್ರೆಗೆ ಬರೋ ಬಡ ರೋಗಿಗಳಿಗೆ ಚಿಕಿತ್ಸೆ ದೊರೆಯದಾಗಿದೆ. ಹೀಗಾಗಿ ಸರ್ಕಾರಿ ವೈದ್ಯರ ಖಾಸಗಿ ಸೇವೆಯ ವಿರುದ್ದ ಅಪರಿಚಿತ ವ್ಯಕ್ತಿಯೊಬ್ಬರು ಕರಪತ್ರಗಳನ್ನ ಹಂಚಿದ ಹಿನ್ನಲೆ ಯಲ್ಲಿ ತನಿಖೆಗೆ ಮುಂದಾಗಿರುವ ಜಿಲ್ಲಾಡಳಿತ ಕಟ್ಟುನಿಟ್ಟಿನ ಕ್ರಮಕ್ಕೆ ಮುಂದಾಗಿದೆ. ಖಾಸಗಿ ಆಸ್ಪತ್ರೆಗಳು ತಮ್ಮದೇ ಆದ ವೈದ್ಯರನ್ನ ನೇಮಿಸಿಕೊಳ್ಳದೇ ಸರ್ಕಾರಿ ವೈದ್ಯರಿಂದ ಆಸ್ಪತ್ರೆ ನಡೆಸುತ್ತಿರುವುದಕ್ಕೆ ಎಲ್ಲ ಖಾಸಗಿ ಆಸ್ಪತ್ರೆಗಳಿಗೆ ನೋಟಿಸ್ ಜಾರಿ ಮಾಡಿದೆ. ಬಳ್ಳಾರಿಯ ಪ್ರತಿಷ್ಠಿತ ಖಾಸಗಿ ಆಸ್ಪತ್ರೆಗಳು ವೈದ್ಯರ ವಿವರ ನೀಡಬೇಕು. ಅಲ್ಲದೇ ಸರ್ಕಾರಿ ವೈದ್ಯರಿಂದ ಸರ್ಕಾರಿ  ಆಸ್ಪತ್ರೆಯ ಸೇವಾವಧಿಯ ವೇಳೆ  ಖಾಸಗಿಯಲ್ಲಿ ಸೇವೆ ತಗೆದುಕೊಳ್ಳದಂತೆ ನೋಟಿಸ್ ಜಾರಿ ಮಾಡಿದೆ.

 ವ್ಯವಸ್ಥೆ ಬದಲಾಗುತ್ತದೆಯೇ?

ಸರ್ಕಾರಿ ಸಂಬಳ ಮತ್ತು ಖಾಸಗಿ ಸೇವೆಯಿಂದ ಬರೋ ಹಣ ಪಡೆಯೋ ಮೂಲಕ ಬಡವರಿಗೆ ಪಾಲಿಗೆ ಮಾರಕವಾಗಿದ್ದ ವೈದ್ಯರಿಗೆ ಇದೀಗ ಜಿಲ್ಲಾಡಳಿತ ಬಿಸಿ ಮುಟ್ಟಿಸಿದೆ. ಇದರಿಂದಾದ್ರೂ ಖಾಸಗಿ ಸೇವೆ ನಿಲ್ಲಿಸುತ್ತಾರೋ ಅನ್ನೋದನ್ನು ಕಾದುನೋಡಬೇಕಿದೆ.  ಬಳ್ಳಾರಿ: ಆಂಧ್ರ ಗಡಿಭಾಗದಲ್ಲಿ ಭಾರೀ ಮಳೆ, ನದಿಯಲ್ಲಿ ಕೊಚ್ಚಿಹೋದ ಎತ್ತು

click me!