ಬುದ್ಧಿಗೆ ಕೆಲವೊಮ್ಮೆ ಮಂಕು ಕವಿಯುವುದು ಸಹಜ. ಮರೆವು, ಆಗಾಗ ಗೊಂದಲವಾಗುವುದು ಎಲ್ಲವೂ ಸಾಮಾನ್ಯ. ಆದರೆ, ಪದೇ ಪದೆ ಹೀಗಾಗುತ್ತಿದ್ದರೆ ಎಚ್ಚರ ವಹಿಸಿ. ಕೆಲವು ಪದ್ಧತಿಗಳನ್ನು ಅನುಸರಿಸುವ ಮೂಲಕ ಬುದ್ಧಿಗೆ ಕವಿಯುವ ಮಂಕನ್ನು ಓಡಿಸಿ.
ಏನೋ ಮರೆತಂತೆ ಆಗುವುದು, ಬುದ್ಧಿಗೆ ಮಂಕು ಕವಿದಂತೆ ಆಗುವುದು ಎಲ್ಲರಿಗೂ ಸಾಮಾನ್ಯ. ಹಾಗೆಯೇ ಗೊಂದಲ ಉಂಟಾಗುವುದು, ಆ ಕ್ಷಣದಲ್ಲಿ ನಿರ್ಧಾರ ಕೈಗೊಳ್ಳಲು ಸಾಧ್ಯವಾಗದಿರುವುದು, ಚುರುಕಾಗಿ ಯೋಚಿಸಲು ಕಷ್ಟವಾಗುವುದು, ಇನ್ನೊಬ್ಬರು ಹೇಳುವುದಕ್ಕೆ ತಲೆದೂಗುವ ಪರಿಸ್ಥಿತಿಯೂ ಕೆಲವೊಮ್ಮೆ ಬಂದೊದಗಬಹುದು. ಅನೇಕರಿಗೆ ದಿನದ ಕೆಲವು ಸಮಯದಲ್ಲಿ ಇಂತಹ ಅನುಭವ ಉಂಟಾಗಬಹುದು. ಇದನ್ನು ಬ್ರೇನ್ ಫಾಗ್ ಅಥವಾ ಮಂಕು ಕವಿದಂತೆ ಆಗುವುದು ಎಂದು ಹೇಳಲಾಗುತ್ತದೆ. ಮಧ್ಯಾಹ್ನದ ಕೆಲ ಸಮಯ, ಊಟವಾದ ಬಳಿಕ, ಮಿದುಳು ಸಾಮಾನ್ಯವಾಗಿ ಮಂಕಾಗುತ್ತದೆ. ಆದರೆ, ಇದನ್ನು ಹೊರತುಪಡಿಸಿಯೂ ಕೆಲವೊಮ್ಮೆ ಔಷಧಗಳ ಪ್ರಭಾವದಿಂದಲೂ ಹೀಗಾಗಬಹುದು. ಅಲ್ಲದೆ, ದೇಹಕ್ಕೆ ಅಗತ್ಯ ಚಟುವಟಿಕೆ ಇಲ್ಲದಿರುವಾಗಲೂ ಬ್ರೇನ್ ಫಾಗ್ ಅಥವಾ ಮಂಕು ಕವಿಯಬಹುದು. ಸೂಕ್ತ ಜೀವನಶೈಲಿಯನ್ನು ಅಳವಡಿಸಿಕೊಳ್ಳುವ ಮೂಲಕ ಈ ಸಮಸ್ಯೆಯನ್ನು ನಿವಾರಣೆ ಮಾಡಿಕೊಳ್ಳಬಹುದು. ಈ ಸಮಯದಲ್ಲಿ ತಲೆ ಭಾರವಾಗಬಹುದು, ನಿದ್ರೆ ಬಂದಂತೆ ಆಗಬಹುದು, ಏನೋ ತೋಚದಂತೆ ಆಗಬಹುದು. ಇದರ ಬಗ್ಗೆ ಭಾರೀ ಚಿಂತೆಗೀಡಾಗುವ ಅಗತ್ಯ ಇರುವುದಿಲ್ಲ. ಅಗತ್ಯವೆನಿಸಿದರೆ ಸೂಕ್ತ ತಪಾಸಣೆ ಮಾಡಿಸಿಕೊಳ್ಳಬಹುದು. ಇಲ್ಲವಾದಲ್ಲಿ ಕೆಲವು ಮಾರ್ಗಗಳನ್ನು ಅನುಸರಿಸುವ ಮೂಲಕ ಬ್ರೇನ್ ಫಾಗ್ ನಿವಾರಣೆ ಮಾಡಿಕೊಳ್ಳುವ ಜತೆಗೆ ನೆನಪಿನ ಶಕ್ತಿಯನ್ನು ಸಹ ಹೆಚ್ಚಿಸಿಕೊಳ್ಳಲು ಸಾಧ್ಯ.
• ಮಿದುಳಿಗೆ (Brain) ತರಬೇತಿ (Training) ಅಗತ್ಯ
ಮಿದುಳಿಗೆ ಉತ್ತೇಜನ (Boost) ನೀಡುವಂತಹ ಆಟೋಟಗಳಲ್ಲಿ (Games) ತೊಡಗಿಸಿಕೊಳ್ಳುವುದು ಉತ್ತಮ ಅಭ್ಯಾಸ. ಇದರಿಂದ ನೆನಪಿನ ಶಕ್ತಿ (Memory) ಇಮ್ಮಡಿಯಾಗುತ್ತದೆ. ಮಕ್ಕಳೊಂದಿಗೆ ಆಟವಾಡುವುದು ಉತ್ತಮ. ದೈಹಿಕ ಶ್ರಮ ಬೇಡುವ ಕೆಲಸ, ಆಟಗಳಲ್ಲಿ ಭಾಗಿಯಾಗುವುದು ಸಹ ಅಗತ್ಯ. ಸಂಜೆಯ (Evening) ಸಮಯದಲ್ಲಿ ಯಾವುದೇ ಕಾರಣಕ್ಕೂ ಸೋಮಾರಿಯಾಗಿ ಇರಬಾರದು. ಹಿಂದಿನ ಜನರನ್ನು ನೋಡಿ. ಹಳೆಯ ಜಾನಪದ ಹಾಡು ಮತ್ತು ಇತರೆ ಸಾಂಪ್ರದಾಯಿಕ ಹಾಡುಗಳನ್ನು ಹೇಳುತ್ತ ಸಂಜೆಯ ಸಮಯದಲ್ಲಿ ಎಂಗೇಜ್ ಆಗಿರುತ್ತಿದ್ದರು. ಇದು ಸಹ ಸ್ಮರಣೆ ಶಕ್ತಿಯನ್ನು ಉದ್ದೀಪಿಸಿಕೊಳ್ಳಲು ಅನುಕೂಲ. ಹಾಗೆಯೇ, ಹೊಸ ಕೆಲಸವನ್ನು (New Things) ಕಲಿಯಲು ಯತ್ನಿಸುವುದು ಮಿದುಳಿನ ಆರೋಗ್ಯಕ್ಕೆ ಸಹಕಾರಿ. ಇದರಿಂದ ಮಿದುಳಿನ ಚಿಂತನಾ ಸಾಮರ್ಥ್ಯ ಹೆಚ್ಚುತ್ತದೆ. ಸುಡೊಕು, ಜಿಗ್ ಜಾ ಪಜಲ್ (Puzzle), ಅಂತ್ಯಾಕ್ಷರಿ ಮುಂತಾದ ಆಟಗಳನ್ನು ಸಹ ಆಡಬೇಕು.
• ಆಹಾರಶೈಲಿಯಲ್ಲಿ ಬದಲಾವಣೆ (Change Diet) ಮಾಡಿಕೊಳ್ಳಿ
ಆರೋಗ್ಯಕ್ಕೆ (Health) ನಮ್ಮ ಆಹಾರಶೈಲಿ ಪ್ರಮುಖ ಕಾರಣ. ಕರುಳಿನ (Gut) ಆರೋಗ್ಯ ಸರಿಯಾಗಿ ಇಲ್ಲದಿದ್ದರೆ ಬ್ರೇನ್ ಫಾಗ್ (Brain Fog) ಉಂಟಾಗುತ್ತದೆ. ಮಿದುಳಿನ ಸ್ಮರಣೆ ಶಕ್ತಿ ನಾಶವಾಗುತ್ತದೆ. ಹೀಗಾಗಿ, ಕರುಳಿಗೆ ಪೂರಕವಾಗುವ ಆಹಾರಶೈಲಿಯನ್ನು ನಮ್ಮದಾಗಿಸಿಕೊಳ್ಳಬೇಕು. ಕರುಳು ಚೆನ್ನಾಗಿದ್ದಾಗ ಮಿದುಳಿನ ಸಾಮರ್ಥ್ಯ ವೃದ್ಧಿಸುತ್ತದೆ. ಏಕಾಗ್ರತೆ (Concentration) ಮತ್ತು ನೆನಪು ಚುರುಕಾಗಿರುತ್ತದೆ. ಅರಿಶಿಣ, ಬ್ಲೂಬೆರಿ, ಕಾಫಿ, ಫ್ಯಾಟಿ ಫಿಶ್ ಸೇರಿದಂತೆ ಹಲವಾರು ಆಹಾರಗಳು ಮಿದುಳಿಗೆ ಪೂರಕವಾಗಿವೆ. ಹಾಗೆಯೇ, ಕರುಳಿನ ಆರೋಗ್ಯಕ್ಕೆ ಸೋರೆಕಾಯಿ ಬಳಕೆ ಅತ್ಯುತ್ತಮ. ಅದರಿಂದ ಕರುಳು ಶುದ್ಧವಾಗಿ ಮಿದುಳಿನ ಕಾರ್ಯಕ್ಷಮತೆ ಹೆಚ್ಚುತ್ತದೆ.
ಯೋಗದಿಂದ ನಿಮ್ಮ ಮೆದುಳಿಗೆ ಎಷ್ಟೆಲ್ಲಾ ಪ್ರಯೋಜನಗಳಿವೆ ಎಂದು ತಿಳಿದಿದ್ದೀರಾ?
• ದೈಹಿಕ ಚಟುವಟಿಕೆ, ಯೋಗ (Yoga) ಅಗತ್ಯ
ದೈಹಿಕ ಚಟುವಟಿಕೆ, ಯೋಗಾಭ್ಯಾಸಗಳಿಂದ ಮಿದುಳಿನ ಕಾರ್ಯಕ್ಷಮತೆ ಹೆಚ್ಚುತ್ತದೆ. ನಿಯಮಿತ ಉಸಿರಾಟದಿಂದ ಮಿದುಳಿಗೆ ಪೂರಕ ಆಮ್ಲಜನಕ ದೊರೆಯುತ್ತದೆ. ನೆನಪಿನ ಶಕ್ತಿ ಹೆಚ್ಚುತ್ತದೆ. ಪ್ರಾಣಾಯಾಮ, ಯೋಗಾಭ್ಯಾಸದಿಂದ ವಯಸ್ಸಾದಂತೆ ಕಂಡುಬರುವ ಮರೆವಿನ ಕಾಯಿಲೆಯನ್ನೂ ದೂರವಿಡಬಹುದು ಎನ್ನುವುದು ಅಧ್ಯಯನಗಳಿಂದ ಸಾಬೀತಾಗಿದೆ.
• ವಾಕಿಂಗ್ (Walking)
ವಾಕಿಂಗ್ ನಿಂದ ಅತ್ಯಧಿಕ ಲಾಭವಿದೆ. ಮಾನಸಿಕ ಆರೋಗ್ಯಕ್ಕೂ ವಾಕಿಂಗ್ ಅತ್ಯುಪಯುಕ್ತ. ಒತ್ತಡ (Stress) ನಿವಾರಿಸಿ, ಮಿದುಳಿಗೆ ಮಂಕು ಕವಿಯದಂತೆ ಮಾಡುತ್ತದೆ. ಮಿದುಳಿಗೆ ರಕ್ತ (Blood) ಪೂರೈಕೆ ಚೆನ್ನಾಗಿ ಆಗುತ್ತದೆ.
ಸ್ಮರಣ ಶಕ್ತಿ ಹೆಚ್ಚಿಸಿಕೊಳ್ಳಲು ಈ ಆಸನಗಳನ್ನು ಮಾಡಿ!
• ಚೆನ್ನಾಗಿ ನಿದ್ರೆ (Good Sleep) ಮಾಡಿ
ರಾತ್ರಿ ಸಮಯದಲ್ಲಿ ಚೆನ್ನಾಗಿ ನಿದ್ರೆ ಮಾಡುವುದು ಮಿದುಳಿನ ಆರೋಗ್ಯಕ್ಕೆ ಅಗತ್ಯ. ಒತ್ತಡ ಹೆಚ್ಚಾಗಿದ್ದರೆ ಸರಿಯಾಗಿ ನಿದ್ರೆ ಬರುವುದಿಲ್ಲ. ಈ ಸಮಯದಲ್ಲಿ ಮಿದುಳು ಹೊಸ ಕೋಶಗಳನ್ನು ಸಹ ಉತ್ಪಾದಿಸುವುದಿಲ್ಲ. ಇದರಿಂದ ಮಿದುಳಿನ ಶಕ್ತಿ ಕುಂಠಿತವಾಗುತ್ತ ಸಾಗುತ್ತದೆ. ಹೀಗಾಗದಿರಲು ರಾತ್ರಿ ಚೆನ್ನಾಗಿ ನಿದ್ರೆ ಮಾಡಬೇಕು. ಯಾವುದೇ ಕಾರಣಕ್ಕೂ ಹಗಲು ನಿದ್ರೆ ಮಾಡಬಾರದು.