ದೇಶದಲ್ಲಿ ಕ್ಯಾನ್ಸರ್‌ ರೋಗದ ಕುರಿತು ದೊಡ್ಡ ಎಚ್ಚರಿಕೆ ನೀಡಿದ ಐಸಿಎಂಆರ್‌!

By Santosh Naik  |  First Published Mar 2, 2023, 5:23 PM IST

ಕಳೆದ ಕೆಲವು ವರ್ಷಗಳಿಂದ ದೇಶದಲ್ಲಿ ಕ್ಯಾನ್ಸರ್ ಪ್ರಕರಣಗಳಲ್ಲಿ ಸಾಕಷ್ಟು ಹೆಚ್ಚಳವಾಗಿದೆ. ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್ 2025 ರ ವೇಳೆಗೆ ಕ್ಯಾನ್ಸರ್ ಪ್ರಕರಣಗಳು 12.7% ರಷ್ಟು ಹೆಚ್ಚಾಗಬಹುದು ಎಂದು ಎಚ್ಚರಿಕೆ ನೀಡಿದೆ. ಧೂಮಪಾನ, ತಂಬಾಕು ಮತ್ತು ಆಲ್ಕೋಹಾಲ್ ಸೇವನೆ, ಬೊಜ್ಜು, ಪೋಷಕಾಂಶಗಳ ಕೊರತೆ ಮತ್ತು ಕಡಿಮೆ ದೈಹಿಕ ಚಟುವಟಿಕೆಗಳು ಕ್ಯಾನ್ಸರ್‌ಗೆ ದೊಡ್ಡ ಕಾರಣಗಳಾಗಿವೆ.


ನವದೆಹಲಿ (ಮಾ. 2): ದೇಶದಲ್ಲಿ ಮುಂದಿನ ಮೂರು ವರ್ಷಗಳಲ್ಲಿ ಕ್ಯಾನ್ಸರ್ ಪ್ರಕರಣಗಳು ವೇಗವಾಗಿ ಹೆಚ್ಚಾಗಲಿವೆ. ಈ ಕುರಿತು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ICMR) ದೊಡ್ಡ ಎಚ್ಚರಿಕೆಯನ್ನು ನೀಡಿದೆ. 2025 ರ ವೇಳೆಗೆ ಕ್ಯಾನ್ಸರ್ ಪ್ರಕರಣಗಳಲ್ಲಿ ಶೇಕಡಾ 12.7 ರಷ್ಟು ಹೆಚ್ಚಳವನ್ನು ಐಸಿಎಂಆರ್‌ ಊಹಿಸಿದೆ. ಕಳೆದ ಕೆಲವು ವರ್ಷಗಳಲ್ಲಿ, ಭಾರತದಲ್ಲಿ ಕ್ಯಾನ್ಸರ್ ರೋಗಿಗಳ ಸಂಖ್ಯೆಯು ವೇಗವಾಗಿ ಹೆಚ್ಚುತ್ತಿದೆ. ದೇಶದಲ್ಲಿ ಕ್ಯಾನ್ಸರ್‌ ವೇಗವಾಗಿ ಹೆಚ್ಚಳವಾಗುತ್ತಿರುವ ದೃಷ್ಟಿಯಿಂದ ತಜ್ಞರು ಈ ಎಚ್ಚರಿಕೆಯನ್ನು ನೀಡಿದ್ದಾರೆ. ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್ (ICMR) ಪ್ರಕಾರ, 2020 ರಲ್ಲಿ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ 2020 ರಲ್ಲಿ ಅಂದಾಜು ಕ್ಯಾನ್ಸರ್ ಪ್ರಕರಣಗಳು 13.92 ಲಕ್ಷ (ಸುಮಾರು 14 ಲಕ್ಷ) ಆಗಿತ್ತು, ಇದು 2021 ರಲ್ಲಿ 14.26 ಲಕ್ಷಕ್ಕೆ ಏರಿದ್ದರೆ. 2022 ರಲ್ಲಿ 14.61 ಲಕ್ಷ ಹೆಚ್ಚಾಗಿದೆ. ತಜ್ಞರ ಪ್ರಕಾರ, ದೇಶದಲ್ಲಿ ಹೃದ್ರೋಗ ಮತ್ತು ಉಸಿರಾಟದ ಕಾಯಿಲೆಗಳು ಮಾತ್ರವಲ್ಲದೆ ಕ್ಯಾನ್ಸರ್ ಪ್ರಕರಣಗಳೂ ಹೆಚ್ಚಾಗುತ್ತಿವೆ. ಹೆಚ್ಚುತ್ತಿರುವ ವಯಸ್ಸು, ಜೀವನಶೈಲಿಯ ಬದಲಾವಣೆ, ವ್ಯಾಯಾಮದ ಕೊರತೆ ಮತ್ತು ಪೌಷ್ಟಿಕ ಆಹಾರ ಸೇರಿದಂತೆ ಹಲವು ಅಂಶಗಳು ಕ್ಯಾನ್ಸರ್ ವ್ಯಾಪಕವಾಗಿ ಹರಡಲು ಕಾರಣವಾಗಿದೆ.

ಅನೇಕ ಬಾರಿ ಜನರಿಗೆ ಕ್ಯಾನ್ಸರ್ ರೋಗಲಕ್ಷಣಗಳ ಬಗ್ಗೆ ಸಂಪೂರ್ಣ ಮಾಹಿತಿ ಇರುವುದಿಲ್ಲ, ಇದರಿಂದಾಗಿ ರೋಗವು ಸಕಾಲದಲ್ಲಿ ಪತ್ತೆಯಾಗುವುದಿಲ್ಲ ಮತ್ತು ಚಿಕಿತ್ಸೆ ಕೂಡ ವಿಳಂಬವಾಗುತ್ತದೆ. ಆರಂಭದಲ್ಲಿಯೇ ಕ್ಯಾನ್ಸರ್‌ ಪತ್ತೆಯಾದರೆ ಚಿಕಿತ್ಸೆ ಕೂಡ ಸುಲಭ. ಆರಂಭದಲ್ಲಿ ಕ್ಯಾನ್ಸರ್‌ ಪತ್ತೆಯಾಗುವ ಚಿಕಿತ್ಸೆಯ ಕೊರತೆಯಿಂದಾಗಿ ಕ್ಯಾನ್ಸರ್‌ ಕೂಡ ಹೆಚ್ಚಾಗುತ್ತದೆ. ಅದಕ್ಕಾಗಿಯೇ ಜನರಲ್ಲಿ ಕ್ಯಾನ್ಸರ್ ಬಗ್ಗೆ ಜಾಗೃತಿ ಮೂಡಿಸುವುದು ಬಹಳ ಮುಖ್ಯ ಎಂದಿದೆ.

ಊಟದಲ್ಲಿ ಇಲಿ ಪಾಷಾಣ ಹಾಕಿ ಹೆಂಡತಿ, ಮಕ್ಕಳನ್ನು ಕೊಂದ ಪಾಪಿ ತಂದೆ: ತಾನೂ ಆತ್ಮಹತ್ಯೆಗೆ ಯತ್ನ

ಕಳೆದ ಕೆಲವು ವರ್ಷಗಳ ಅಂಕಿಅಂಶಗಳ ಪ್ರಕಾರ, ಭಾರತದಲ್ಲಿ ಹೆಚ್ಚಿನ ಸಂಖ್ಯೆಯ ಬಾಯಿ ಮತ್ತು ಶ್ವಾಸಕೋಶದ ಕ್ಯಾನ್ಸರ್ ಪ್ರಕರಣಗಳು ವರದಿಯಾಗಿವೆ. ಅದೇ ಸಮಯದಲ್ಲಿ, ಮಹಿಳೆಯರಲ್ಲಿ ಗರಿಷ್ಠ ಸಂಖ್ಯೆಯ ಪ್ರಕರಣಗಳು ಸ್ತನ ಮತ್ತು ಗರ್ಭಾಶಯದ ಕ್ಯಾನ್ಸರ್ ಆಗಿದೆ.   ಬೆಂಗಳೂರು ಮೂಲದ ಐಸಿಎಂಆರ್ ನ್ಯಾಷನಲ್ ಸೆಂಟರ್ ಫಾರ್ ಡಿಸೀಸ್ ಇನ್ಫರ್ಮ್ಯಾಟಿಕ್ಸ್ ಅಂಡ್ ರಿಸರ್ಚ್ (ಎನ್‌ಸಿಡಿಐಆರ್) ಪ್ರಕಾರ, 2015 ರಿಂದ 2022 ರವರೆಗೆ ಎಲ್ಲಾ ರೀತಿಯ ಕ್ಯಾನ್ಸರ್ ಅಂಕಿಅಂಶಗಳಲ್ಲಿ ಸುಮಾರು 24.7 ಶೇಕಡಾ ಹೆಚ್ಚಳವಾಗಿದೆ. 14 ವರ್ಷದ ಒಳಗಿನ ಮಕ್ಕಳಲ್ಲಿ ರಕ್ತ ಸಂಬಂಧಿತ ಕ್ಯಾನ್ಸರ್‌ ಆದ ಲಿಂಫಾಯಿಡ್‌ ಲಕಮೇನಿಯಾ ಹೆಚ್ಚಾಗಿ ಕಾಣೀಸಿಕೊಳ್ಳಲಿದೆ. ಈ ಕ್ಯಾನ್ಸರ್‌ಅನ್ನು ತಡೆಗಟ್ಟಲು  ಜಾಗೃತಿ ಮೂಡಿಸುವುದು ಅವಶ್ಯಕವಾಗಿದೆ.

Tap to resize

Latest Videos

ತಂಬಾಕು ಬಳಕೆಯಿಂದಾಗುವ ದುಷ್ಪರಿಣಾಮ: ಫೆ.28ರಂದು ಬೆಂಗಳೂರಲ್ಲಿ ಮಾಧ್ಯಮ ಸಂವಾದ

ಕನ್ಸಲ್ಟೆಂಟ್ ಮೆಡಿಕಲ್ ಆಂಕೊಲಾಜಿಸ್ಟ್ ಮತ್ತು ಹೆಮಟೊನ್ಕೊಲೊಜಿಸ್ಟ್ ಡಾ. ಸುಹಾಸ್ ಅಗ್ರೆ ಪ್ರಕಾರ, “ವಯಸ್ಸು, ಕುಟುಂಬದ ಇತಿಹಾಸ, ಜೆನೆಟಿಕ್ಸ್, ಬೊಜ್ಜು, ತಂಬಾಕು ಸೇವನೆ, ಮದ್ಯಪಾನ, ಹ್ಯೂಮನ್ ಪ್ಯಾಪಿಲೋಮವೈರಸ್ (HPV) ನಂತಹ ವೈರಲ್ ಸೋಂಕುಗಳು, ಪರಿಸರದಲ್ಲಿನ ರಾಸಾಯನಿಕಗಳು, ಮಾಲಿನ್ಯ, ಹಾನಿಕಾರಕ ಯುವಿ ಕಿರಣಗಳಿಗೆ ಒಡ್ಡಿಕೊಳ್ಳುವುದು ಸೂರ್ಯನ ಸಂಪರ್ಕ, ಕಳಪೆ ಆಹಾರ, ದೈಹಿಕ ಚಟುವಟಿಕೆಯ ಕೊರತೆ ಮತ್ತು ಕೆಲವು ಹಾರ್ಮೋನುಗಳು ಮತ್ತು ಬ್ಯಾಕ್ಟೀರಿಯಾಗಳು ಈ ಭಯಾನಕ ಕಾಯಿಲೆಯ ಹರಡುವಿಕೆಗೆ ಕಾರಣಗಳಾಗಿವೆ. ಈ ರೋಗವನ್ನು ತಪ್ಪಿಸಲು, ಕ್ಯಾನ್ಸರ್‌ನ ಲಕ್ಷಣಗಳು ಕಾಣಿಸಿಕೊಂಡ ತಕ್ಷಣ ವೈದ್ಯರನ್ನು ಸಂಪರ್ಕಿಸುವುದು ಅವಶ್ಯಕ ಎಂದಿದ್ದಾರೆ.

click me!