ದೇಹದ ಚಿಕ್ಕ ಅಂಗಗಳಲ್ಲಿ ಒಂದಾದ ಲಿವರ್ ಕೆಲಸ ದೊಡ್ಡದು. ಅದು ಸುಮಾರು 500ಕ್ಕೂ ಹೆಚ್ಚು ಕಾರ್ಯಗಳನ್ನು ಮಾಡುತ್ತದೆ. ದೇಹದ ಯಾವುದೇ ಅಂಗ ಹದಗೆಡುವ ಮೊದಲು ನಮಗೆ ಸೂಚನೆ ನೀಡುತ್ತೆ. ಇದ್ರಲ್ಲಿ ಲಿವರ್ ಕೂಡ ಒಂದು. ಕೆಲ ಸಂಕೇತದ ಮೂಲಕ ಲಿವರ್ ಆರೋಗ್ಯ ಹದಗೆಡುತ್ತಿದೆ ಅಂತಾ ನಾವು ಪತ್ತೆ ಮಾಡಬಹುದು.
ಯಕೃತ್ತು ದೇಹದ ಪ್ರಮುಖ ಅಂಗಗಳಲ್ಲಿ ಒಂದು. ಇದರ ಆರೋಗ್ಯದಲ್ಲಿ ಸ್ವಲ್ಪ ಏರುಪೇರಾದರೂ ಇದು ಹಲವು ಬಗೆಯ ಸೂಚನೆಯನ್ನು ನೀಡುತ್ತದೆ. ಆರೋಗ್ಯಕರ ಪಿತ್ತಜನಕಾಂಗವು ನಿರ್ದಿಷ್ಟ ಪ್ರಮಾಣದ ಕೊಬ್ಬನ್ನು ಹೊಂದಿರುತ್ತದೆ. ಆದರೆ ಈಗಿನ ಕೆಲವು ಆಹಾರಗಳಿಂದ ಕೊಬ್ಬಿನ ಪ್ರಮಾಣವು ಯಕೃತ್ತಿನ ತೂಕದ ಪ್ರತಿಶತ 5 ರಿಂದ ಹತ್ತು ಭಾಗದಷ್ಟು ಮೀರಿದ್ರೆ ಫ್ಯಾಟಿ ಲಿವರ್ ಕಾರಣದಿಂದಾಗಿ ಅನೇಕ ಖಾಯಿಲೆ ಕಾಡುತ್ತದೆ.
ಲಿವರ್ (Liver) ಜೀರ್ಣಾಂಗ ವ್ಯವಸ್ಥೆಯ ಮುಖ್ಯ ಭಾಗವಾಗಿದೆ. ಕಲುಷಿತ ಆಹಾರವು ಪಿತ್ತಜನಕಾಂಗವನ್ನು ಹಾನಿಮಾಡುತ್ತದೆ. ಆದರೆ ಇದು ತಾನು ಹಾಳಾಗುವ ಮೊದಲು ಕೆಲವು ಸೂಚನೆಯನ್ನು ನಮಗೆ ನೀಡುತ್ತದೆ. ಅಂತಹ ಸೂಚನೆಯನ್ನು ನಾವು ಗಮನಿಸಿದಾಗ ಮಾತ್ರ ಯಕೃತ್ತಿನ ಆರೋಗ್ಯ (Health) ಕಾಪಾಡಿಕೊಳ್ಳಲು ಸಾಧ್ಯ. ಯಕೃತ್ತಿನಲ್ಲಿ ಎರಡು ವಿಧಗಳಿವೆ. ಒಂದು ಆಲ್ಕೋಹಾಲ್ಯುಕ್ತ ಕೊಬ್ಬಿನ ಯಕೃತ್ತು ಮತ್ತು ಆಲ್ಕೋಹಾಲ್ಯುಕ್ತವಲ್ಲದ ಕೊಬ್ಬಿನ ಯಕೃತ್ತು. ಕೊಬ್ಬಿನ ಯಕೃತ್ತು ಒಂದು ಗಂಭೀರ ಖಾಯಿಲೆ (Disease) ಯಾಗಿದೆ. ಮದ್ಯವ್ಯಸನಿಗಳಲ್ಲಿ ಇದು ಕಾಣಿಸಿಕೊಂಡರೆ ಅದನ್ನು ಆಲ್ಕೊಹಾಲ್ ಫ್ಯಾಟಿ ಲಿವರ್ ಎಂದು ಕರೆಯಲಾಗುತ್ತದೆ. ಮದ್ಯವ್ಯಸನಿಗಳಲ್ಲದವರಲ್ಲಿ ಇದು ಕಾಣಿಸಿಕೊಂಡರೆ ಆಲ್ಕೊಹಾಲ್ ರಹಿತ ಕೊಬ್ಬಿನ ಖಾಯಿಲೆ ಎನ್ನಲಾಗುತ್ತದೆ. ಈ ಖಾಯಿಲೆ ಲಕ್ಷಣಗಳು ಹಲ್ಲುಗಳು ಮತ್ತು ದೇಹದ ಇತರ ಭಾಗದಲ್ಲಿ ಕಾಣಿಸಿಕೊಳ್ಳುತ್ತದೆ.
STRESSನಲ್ಲಿದ್ದಾಗ ಈ ಫುಡ್ ಅಪ್ಪಿ ತಪ್ಪಿಯೂ ತಿನ್ನಬೇಡಿ!
ಹಲ್ಲಿನಲ್ಲಿ ಈ ಸಮಸ್ಯೆ ಕಂಡ್ರೆ ಲಿವರ್ ಹಾಳಾಗ್ತಿದೆ ಎಂದರ್ಥ :
ಹಲ್ಲುಜ್ಜುವಾಗ ಬರುತ್ತಾ ರಕ್ತ ? : ಬ್ರಶ್ ಮಾಡುವಾಗ ವಸಡಿನಲ್ಲಿ ರಕ್ತಬರುವುದು ಫ್ಯಾಟಿ ಲಿವರ್ ನ ಖಾಯಿಲೆಯ ಲಕ್ಷಣವಾಗಿದೆ. ಇದೇ ರೀತಿ ಮೂಗಿನಲ್ಲಿ ಕೂಡ ರಕ್ತಸ್ರಾವವಾಗಬಹುದು. ಎನ್ ಎ ಎಫ್ ಎಲ್ ಡಿ (Non Alcoholic Fatty Liver Disease) ಹಲ್ಲಿನ ನಷ್ಟ ಮತ್ತು ಪೀರಿಯಾಂಟೈಟಿಸ್ ಗೆ ಸಂಬಂಧಪಟ್ಟ ಖಾಯಿಲೆಯಾಗಿದೆ. ಇದು ಹಲ್ಲುಗಳ ಸುತ್ತಲಿನ ಅಂಗಾಂಶಕ್ಕೆ ಸಾಕಷ್ಟು ಹಾನಿ ಮಾಡುತ್ತದೆ. ಹಾಗಾಗಿ ಈ ಸಮಸ್ಯೆ ಹೊಂದಿರುವವರು ಬ್ರಶ್ ಮಾಡುವಾಗ ರಕ್ತಸ್ರಾವವಾಗುತ್ತದೆ.
ಇಂತಹ ಲಕ್ಷಣಗಳೂ ಕಾಣಿಸಬಹುದು : ಲಿವರ್ ಒಂದು ಕೆಟ್ಟರೆ ಸಾಕು ಅದರಿಂದ ಹತ್ತಾರು ಸಮಸ್ಯೆಗಳು ಬಂದೆರಗುತ್ತವೆ. ಅಂತಹ ಸಮಸ್ಯೆಗಳಲ್ಲಿ ಹಸಿವಿನ ಕೊರತೆ, ವಾಕರಿಕೆ, ಚರ್ಮದ ತುರಿಕೆ, ಕಾಮಾಲೆ, ರಕ್ತ ವಾಂತಿ, ಮೂತ್ರ ಹಳದಿಯಾಗುವುದು, ಆಯಾಸ, ದೌರ್ಬಲ್ಯ, ಸ್ನಾಯುಗಳಲ್ಲಿ ನೋವು, ಕೂದಲು ಉದುರುವಿಕೆ, ಜ್ವರ ನಡುಕ ಮುಂತಾದವು ಮುಖ್ಯವಾದವು.
ಈ ಪುಟ್ಟ ಮಶಿನ್ ದೊಡ್ಡ ಕೆಲಸ ಮಾಡುತ್ತೆ : ನಮ್ಮ ಜೀವಿತಾವಧಿಯನ್ನು ಹೆಚ್ಚಿಸುವ ಪುಟ್ಟ ಲಿವರ್ ನ ಕೆಲಸ ಬಹಳ ದೊಡ್ಡದು. ಇದು ನಮ್ಮ ದೇಹದಿಂದ ವಿಷಕಾರಿ ಅಂಶಗಳನ್ನು ಹೊರಹಾಕುತ್ತದೆ. ಯಕೃತ್ತು 500 ಕ್ಕಿಂತಲೂ ಹೆಚ್ಚಿನ ಕೆಲಸದ ಜವಾಬ್ದಾರಿಯನ್ನು ಹೊಂದಿದೆ. ಅಡಿಪಾಯ ಚೆನ್ನಾಗಿದ್ದರೆ ತಾನೇ ಅದರ ಮೇಲೆ ನಿಲ್ಲುವ ಕಟ್ಟಡ ಚೆನ್ನಾಗಿರುವುದು. ಹಾಗೇ ಈ ಲಿವರ್ ಕೂಡ ನಮ್ಮ ದೇಹಕ್ಕೆ ಒಂದು ಅಡಿಪಾಯವಿದ್ದಂತೆ. ಇದು ಅಸಮರ್ಪಕವಾಗಿ ಕೆಲಸ ನಿರ್ವಹಿಸಿದರೆ ಅದರಿಂದ ದೇಹದ ಅನೇಕ ಕಾರ್ಯಗಳು ಸ್ಥಗಿತವಾಗುತ್ತದೆ. ದೀರ್ಘಕಾಲದವರೆಗೆ ಅತಿಯಾದ ಆಲ್ಕೋಹಾಲ್ ಸೇವನೆ ಲಿವರ್ ಸಿರೋಸಿಸ್ ಗೆ ಕಾರಣವಾಗುತ್ತೆ. ಸಿರೋಸಿಸ್ ಯಕೃತ್ತಿನ ಗಂಭೀರ ಖಾಯಿಲೆಯ ಪ್ರಾಥಮಿಕ ಹಂತವಾಗಿದೆ. ಇದರಿಂದ ಪಿತ್ತಜನಕಾಂಗವು ಉಂಡೆಯಂತೆ ಚಿಕ್ಕದಾಗುತ್ತದೆ. ಹಾಗಾಗಿ ಯಕೃತ್ತಿನ ಆರೋಗ್ಯ ಕಾಪಾಡಿಕೊಳ್ಳುವುದು ಬಹಳ ಮುಖ್ಯ.
ಆಹಾರ ನೋಡಿದ್ರೆ ವಾಂತಿ ಬರೋ ತರ ಆಗ್ತಿದ್ಯಾ? ಹೆಪಟೈಟಿಸ್ ಲಕ್ಷಣವಿರಬಹುದು ಜೋಕೆ
ಲಿವರ್ ಅನ್ನು ಹೀಗೆ ಕಾಪಾಡಿಕೊಳ್ಳಿ : ಹೆಚ್ಚಿನ ಪ್ರಮಾಣದ ಸೋಡಿಯಂ, ಸಲ್ಫರ್, ನಯಾಸಿನ್ ಅಂಶವಿರುವ ಎಲೆಕೋಸು, ಈರುಳ್ಳಿ, ಕ್ಯಾರೆಟ್, ಬೆಳ್ಳುಳ್ಳಿ ಮುಂತಾದ ತರಕಾರಿಗಳನ್ನು ತಿನ್ನಿ. ಹೆಚ್ಚಿನ ಪ್ರಮಾಣದ ನಾರಿನ ಅಂಶ ಮತ್ತು ಒಮೆಗಾ 3 ಫ್ಯಾಟಿ ಎಸಿಡ್ ಅಂಶದ ಪ್ರಭಾವವನ್ನು ಒದಗಿಸುವ ಬಾದಾಮಿ, ಗೋಡಂಬಿ, ಒಣದ್ರಾಕ್ಷಿ, ಪಿಸ್ತಾ ಮುಂತಾದ ಡ್ರೈ ಫ್ರುಟ್ಸ್ ಗಳನ್ನು ಸೇವಿಸಿ. ಅತಿಯಾದ ಧೂಮಪಾನ, ಮದ್ಯಪಾನ ಲಿವರ್ ಕ್ಯಾನ್ಸರ್ ಮುಂತಾದ ಸಮಸ್ಯೆಗಳು ಕಾಡುತ್ತವೆ. ಹಾಗಾಗಿ ಕೆಟ್ಟ ಚಟಗಳಿಂದ ದೂರವಿರಿ.