ಕೆಲವರು ಹತ್ತಿರ ಬಂದ್ರೆ ಗಬ್ಬು ವಾಸನೆ ಮೂಗಿಗೆ ಬಡಿಯುತ್ತೆ. ಅತಿಯಾದ ಬೆವರು ಅವರ ದೇಹದಲ್ಲಿ ವಾಸನೆಯುಂಟು ಮಾಡಿರುತ್ತದೆ. ಈ ವಾಸನೆಯಿಂದ ವ್ಯಕ್ತಿ ಆತ್ಮವಿಶ್ವಾಸ ಕಳೆದುಕೊಳ್ತಾನೆ. ಬೇಸಿಗೆ ಬಂತೆಂದ್ರೆ ಅವರ ಕಥೆ ಮುಗಿದಂತೆ.
ಇನ್ನೇನು ಬೇಸಿಗೆ ಸಮೀಪಿಸುತ್ತಿದೆ. ಬೇಸಿಗೆಯೆಂದರೆ ಕೇಳ್ಬೇಕಾ ವಿಪರೀತ ಬಿಸಿಲು, ಸೆಕೆಯಿಂದ ಜನ ಕಂಗಾಲಾಗುತ್ತಾರೆ. ಬೇಸಿಗೆಯಲ್ಲಿ ಬೆವರಿನ ಸಮಸ್ಯೆಯಂತೂ ಹೇಳತೀರದು. ಬೆವರಿನ ವಾಸನೆಯಿಂದ ದೂರವಾಗಲು ಜನ ಪೌಡರ್, ಡಿಯೋಡ್ರಂಟ್ ಗಳ ಮೊರೆಹೋಗ್ತಾರೆ. ಎಷ್ಟೇ ಪ್ರಯತ್ನಪಟ್ಟರೂ ಬೆವರಿನ ವಾಸನೆಯನ್ನು ಹೋಗಲಾಡಿಸುವುದು ಕಷ್ಟ. ಕೆಲವೊಮ್ಮೆ ಶರ್ಟ್, ಟಾಪ್, ಬ್ಲೌಸ್ ಧರಿಸಿದಾಗ ಕಂಕುಳಲ್ಲಿ ಕಾಣುವ ಬೆವರಿನ ಕಾರಣದಿಂದಾಗಿ ಇರುಸುಮುರುಸಿಗೆ ಒಳಗಾಗುವ ಸಂದರ್ಭವೂ ಬರುತ್ತದೆ. ಕೆಲವರಿಗೆ ಬೇಸಿಗೆಯೇ ಆಗಬೇಕೆಂದಿಲ್ಲ ಉಳಿದ ದಿನಗಳಲ್ಲಿಯೂ ಅವರು ಬೆವರುತ್ತಾರೆ. ವಾಕ್ ಮಾಡುವಾಗ, ಓಡುವಾಗ, ವ್ಯಾಯಾಮ ಮಾಡುವಾಗ ಕೂಡ ಮೈ ಬೆವರುತ್ತದೆ. ಸ್ವೆಟಿಂಗ್ ಸಮಸ್ಯೆ ಹೆಚ್ಚಿರುವವರಿಗೆ ಬೇಸಿಗೆಯ ಬೆವರು ದೊಡ್ಡ ತಲೆನೋವೇ ಸರಿ. ಬೆವರಿನಿಂದಾಗಿ ಎಷ್ಟೇ ಒಳ್ಳೆ ಬಟ್ಟೆ ಧರಿಸಿದರೂ ಕೂಡ ಕೈ ಎತ್ತಲು ಕೂಡ ಮುಜುಗರ ಎನಿಸುತ್ತದೆ. ಇಂತಹ ಬೆವರಿನ ಸಮಸ್ಯೆಗೆ ಕಾರಣ ಮತ್ತು ಪರಿಹಾರ ಎರಡೂ ಇಲ್ಲಿದೆ.
ಮನುಷ್ಯ ಅತಿಯಾಗಿ ಬೆವರುವುದನ್ನೇ ಹೈಪರ್ ಹೈಡ್ರೋಸಿಸ್ ಎನ್ನಲಾಗುತ್ತೆ. ಇದು ಶರೀರದ ಯಾವ ಭಾಗದಲ್ಲಿ ಹೆಚ್ಚು ಪ್ರಭಾವ ಬೀರುತ್ತದೆಯೋ ಆ ಭಾಗ ಹೆಚ್ಚು ಬೆವರುತ್ತದೆ. ಸಾಮಾನ್ಯವಾಗಿ ಕಂಕುಳು ಹೈಪರ್ ಹೈಡ್ರೊಸಿಸ್ ಗೆ ಹೆಚ್ಚಿನ ಪ್ರಮಾಣದಲ್ಲಿ ಒಳಗಾಗುತ್ತೆ. ಇದರ ಹೊರತಾಗಿ ಕೆಲವೊಬ್ಬರಿಗೆ ಕೈ ಮತ್ತು ಕಾಲುಗಳು ಕೂಡ ಬೆವರುತ್ತದೆ.
undefined
ಕಂಕುಳಿನ ಬೆವರನ್ನು ಹೋಗಲಾಡಿಸಲು ಈ ಡಿಯೋಡ್ರಂಟ್ ಬಳಸಿ : ಕೆಲವೊಮ್ಮೆ ಬೆವರಿನಿಂದಾಗಿ ನಮ್ಮ ಆತ್ಮವಿಶ್ವಾಸಕ್ಕೂ ಧಕ್ಕೆ ಬರುತ್ತದೆ. ಮುಜುಗರದಿಂದ ವ್ಯಕ್ತಿ ಗುಂಪಿನಲ್ಲಿ ಕೆಲಸ ಮಾಡಲು ಹಿಂಜರಿಯಬಹುದು. ಇಂತಹ ಬೆವರಿಗೆ ಖನಿಜ ಆಧಾರಿತ ಆರಾರೂಟ್ ಪುಡಿ ಉತ್ತಮ ಡಿಯೋಡ್ರಂಟ್ ರೀತಿ ಕೆಲಸ ಮಾಡುತ್ತದೆ. ಇದು ಪ್ರತಿಶತ ನೂರರಷ್ಟು ಪ್ರಾಕೃತಿಕವಾಗಿದ್ದು ಇದರಲ್ಲಿ ಯಾವುದೇ ರೀತಿಯ ಕೃತಕ ಬಣ್ಣವನ್ನು ಸೇರಿಸಲಾಗುವುದಿಲ್ಲ. ಇದನ್ನು ದಿನಕ್ಕೆ ಎರಡು ಬಾರಿ ಬಳಸಬಹುದಾಗಿದೆ.
Beauty News: ಈ ನೇಲ್ ಪಾಲಿಶ್ ಬೆಲೆಯಲ್ಲಿ ನೀವು ಮನೆ ಖರೀದಿಸಬಹುದು!
ಬೆವರಿಗೊಂದು ಸಣ್ಣ ಟ್ರೀಟ್ಮೆಂಟ್ : ಕಚೇರಿಗೆ ತೆರಳುವ ಮಂದಿಯಾಗಿರಬಹುದು ಅಥವಾ ದಿನವಿಡೀ ಪ್ರಯಾಣಿಸುವವರಾಗಿರಬಹುದು ಬೇಸಿಗೆಯಲ್ಲಿ ಅವರ ಪರಿಸ್ಥಿತಿ ತೀರ ಕೆಟ್ಟದ್ದಾಗಿರುತ್ತೆ. ವಿಪರೀತ ಸೆಕೆಯಿಂದ ಅರ್ಧದಷ್ಟು ಸುಸ್ತಾದರೆ ಇನ್ನರ್ಧ ಈ ಬೆವರಿನಿಂದ ಕಂಗಾಲಾಗಿರುತ್ತಾರೆ. ಹೀಗೆ ಹೈಪರ್ ಹೈಡ್ರೊಸಿಸ್ ನಿಂದ ಬಳಲುತ್ತಿರುವವರು ಈ ಚಿಕಿತ್ಸೆಯನ್ನು ಪಡೆಯಬಹುದು.
• ಆಂಟಿಪಸ್ಪರನ್ಸ್ (Antiperspirants) ಚಿಕಿತ್ಸೆಯನ್ನು ಹೈಪರ್ ಹೈಡ್ರೋಸಿಸ್ ಲಕ್ಷಣ ಇರುವವರಿಗೆ ನೀಡಲಾಗುವುದು.
• ಅಯಾಂಟೊಪರಿಸೆಸ್ (Lontophoresis) ಚಿಕಿತ್ಸೆಯಲ್ಲಿ ಬೆವರಿನ ಗ್ರಂಥಿಗಳನ್ನು ಬ್ಲಾಕ್ ಮಾಡುವ ಮೂಲಕ ಬೆವರಿನ ಸಮಸ್ಯೆ ಕಡಿಮೆ ಮಾಡಲಾಗುತ್ತದೆ.
• ಆಂಟಿಕೋಲನರ್ಜಿಕ್ ಡ್ರಗ್ಸ್ ( Anticholinergic Drugs) ಬೆವರು ಗ್ರಂಥಿಗಳಿಗೆ ಸಂದೇಶ ನೀಡುವ ಮೂಲಕ Acetylcholine ಎಂಬ ಟ್ರಾನ್ಮಿಟರ್ ಅನ್ನು ಬ್ಲಾಕ್ ಮಾಡಿ ಬೆವರು ಕಡಿಮೆಯಾಗುವಂತೆ ಮಾಡುತ್ತಾರೆ.
• ಬೊಟೊಕ್ಸ್ (Botox) ಚಿಕಿತ್ಸೆಯಲ್ಲಿ ಹೆಚ್ಚು ಬೆವರು ಉಂಟುಮಾಡುವ ಗ್ರಂಥಿಗಳನ್ನು ತೆಗೆಯುವ ಮೂಲಕ ಬೆವರಿನ ಸಮಸ್ಯೆಯನ್ನು ಪರಿಹರಿಸಲಾಗುತ್ತದೆ.
HEALTH TIPS : ಹಲ್ಲಲ್ಲಿ ಈ ಸಮಸ್ಯೆ ಕಾಣಿಸಿಕೊಂಡ್ರೆ ಲಿವರ್ ಕೈಕೊಡ್ತಿದೆ ಎಂದರ್ಥ..
ಬೆವರನ್ನು ಕಡಿಮೆ ಮಾಡಲು ಹೀಗೂ ಮಾಡಬಹುದು :
• ಸ್ವಲ್ಪ ಸಡಿಲವಾದ ಕಾಟನ್ ಬಟ್ಟೆಗಳನ್ನು ಧರಿಸಿ.
• ಶೂ ಹಾಕುವವರು ಕಾಲನ್ನು ಚೆನ್ನಾಗಿ ತೊಳೆದು ಕಾಟನ್ ಸಾಕ್ಸ ಹಾಕಿ. ಪ್ರತಿನಿತ್ಯ ಸಾಕ್ಸ್ ಬದಲಾಯಿಸಿ.
• ಅಧಿಕ ಮಸಾಲೆಯುಕ್ತ ಆಹಾರ ಸೇವಿಸಬೇಡಿ. ಇದರಿಂದ ಬೆವರಿನ ವಾಸನೆ ಹೆಚ್ಚಾಗುತ್ತದೆ.
• ರೋಸ್ ವಾಟರ್ ಹಚ್ಚುವುದರಿಂದಲೂ ಬೆವರಿನ ಸಮಸ್ಯೆಯಿಂದ ದೂರವಿರಬಹುದು.
• ಕೈ ಕಾಲುಗಳು ಬೆವರುವವರು ಒಣಗಿದ ನಿಂಬೆ ಮತ್ತು ಕಿತ್ತಳೆಯ ಸಿಪ್ಪೆಯ ಪೌಡರ್ ಅನ್ನು ಹಚ್ಚಿಕೊಳ್ಳಿ
• ಶ್ರೀಗಂಧದ ಪುಡಿಯನ್ನು ನೀರು, ನಿಂಬೆ ರಸ ಅಥವಾ ರೋಸ್ ವಾಟರ್ ನೊಂದಿಗೆ ಬೆರೆಸಿ ಹಚ್ಚಿಕೊಳ್ಳಿ. ಅದು ಒಣಗಿದ ನಂತರ ತೊಳೆಯಿರಿ.
• ಸೋಡಿಯಂ ಅಂಶವನ್ನು ಹೊಂದಿರುವ ಟೊಮೆಟೊ ಸೇವನೆ ದೇಹವನ್ನು ತಂಪು ಮಾಡಿ ಬೆವರನ್ನು ಕಡಿಮೆ ಮಾಡುತ್ತದೆ.