ನೀವೂ ವೀರ್ಯ ದಾನ ಮಾಡಬಹುದಾ?

By Suvarna NewsFirst Published Mar 8, 2020, 11:59 AM IST
Highlights

ವೀರ್ಯ ದಾನದ ಬಗ್ಗೆ ನೀವು ಎಲ್ಲೋ ಕತೆ ಕಾದಂಬರೀಲಿ ಓದಿರ್ತೀರಿ, ಅಥವಾ ವಿಕಿ ಡೋನರ್‌ನಂಥ ಫಿಲಂಗಳಲ್ಲಿ ನೋಡಿರ್ತೀರಿ. ಸ್ಪರ್ಮ್ ಕೊಟ್ರೆ ಕೈ ತುಂಬಾ ಕಾಸು ಸಿಗುತ್ತೆ ಅಂದುಕೊಂಡಿರ್ತೀರಿ ಅಲ್ವಾ. ಅದೇನೂ ಪೂರ್ತಿ ಸುಳ್ಳಲ್ಲ. ಆದರೆ ಇದು ಅಷ್ಟು ಸುಲಭದ ಕೆಲಸವೂ ಅಲ್ಲ. ಸ್ಪರ್ಮ್ ಡೊನೇಟ್ ಮಾಡೋರಿಗೆ ಹಲವು ಕಂಡಿಷನ್‌ಗಳು ಇರ್ತವೆ.

ವೀರ್ಯ ದಾನದ ಬಗ್ಗೆ ನೀವು ಎಲ್ಲೋ ಕತೆ ಕಾದಂಬರೀಲಿ ಓದಿರ್ತೀರಿ, ಅಥವಾ ವಿಕಿ ಡೋನರ್‌ನಂಥ ಫಿಲಂಗಳಲ್ಲಿ ನೋಡಿರ್ತೀರಿ. ಸ್ಪರ್ಮ್ ಕೊಟ್ರೆ ಕೈ ತುಂಬಾ ಕಾಸು ಸಿಗುತ್ತೆ ಅಂದುಕೊಂಡಿರ್ತೀರಿ ಅಲ್ವಾ. ಅದೇನೂ ಪೂರ್ತಿ ಸುಳ್ಳಲ್ಲ. ಆದರೆ ಇದು ಅಷ್ಟು ಸುಲಭದ ಕೆಲಸವೂ ಅಲ್ಲ. ಸ್ಪರ್ಮ್ ಡೊನೇಟ್ ಮಾಡೋರಿಗೆ ಹಲವು ಕಂಡಿಷನ್‌ಗಳು ಇರ್ತವೆ.

- ಆತ ,ಇಪ್ಪತ್ತರಿಂದ ನಲುವತ್ತು ವರ್ಷದ ಒಳಗಿನವ ಆಗಿರಬೇಕು. ವಯಸ್ಸು ಹೆಚ್ಚಾದಂತೆ ಸ್ಪರ್ಮ್ ಕೌಂಟ್ ಕಡಿಮೆಯಾಗುತ್ತೆ, ಫರ್ಟಿಲಿಟಿ ಸಾಮರ್ಥ್ಯ ಕಡಿಮೆಯಾಗುತ್ತದೆ. ಇಪ್ಪತ್ತಕ್ಕೆ ಮೊದಲು ಅಪ್ರಾಪ್ತ ಅಂತ ಪರಿಗಣಿಸ್ತಾರೆ.

- ಡೋನರ್‌ಗೆ ಅತಿ ಕುಡಿತ, ಡ್ರಗ್ಸ್ ಮುಂತಾದ ದುರಭ್ಯಾಸ ಇರಬಾರದು. ಕುಡಿತ ಇದ್ದರೆ. ಸ್ಪರ್ಮ್ ಡೊನೇಟ್ ಮಾಡುವ 24 ಗಂಟೆಗಳ ಅವಧಿಯಲ್ಲಿ ಆಲ್ಕೋಹಾಲ್ ಸೇವಿಸಿರಬಾರದು.

- ವೀರ್ಯ ಕೊಡುವ ಹಿಂದಿನ ಒಂದು ದಿನದ ಅವಧಿಯಲ್ಲಿ ಸೆಕ್ಸ್ ಮಾಡಿರಬಾರದು. ಹಸ್ತಮೈಥುನ ಮಾಡಿಕೊಂಡಿರಬಾರದು. ಸ್ವಪ್ನಸ್ಖಲನವೂ ಆಗಿರಬಾರದು.

- ಡೋನರ್‌ಗೆ ವೇಶ್ಯೆಯರ ಬಳಿ ಹೋಗುವ ಹವ್ಯಾಸ ಇರಬಾರದು. ಆತನಿಗೆ ಲೈಂಗಿಕ ರೋಗಗಳು ಇರಬಾರದು. ಶುಚಿತ್ವ ಕಾಪಾಡಿಕೊಂಡಿರಬೇಕು.

- ಆತ ಸಲಿಂಗಕಾಮಿ ಆಗಿರಬಾರದು. ಪ್ರಾಣಿಗಳ ಜೊತೆ ಸೆಕ್ಸ್ ಮೊದಲಾದ ಇನ್ಯಾವುದೇ ವಿಚಿತ್ರ ಲೈಂಗಿಕ ಹವ್ಯಾಸ ಇರಬಾರದು. 

 

ಪೋರ್ನ್ ಸೈಟ್‌ಗಳನ್ನೂ ಬಿಡದ ಕೊರೋನಾ, ಮಾಸ್ಕ್ ಧರಿಸಿಯೇ...!

 

- ಡೋನರ್‌ಗೆ ಏಡ್ಸ್, ಹೃದಯರೋಗ, ರಕ್ತದೊತ್ತಡ, ಹೃದಯರೋಗ, ಅಸ್ತಮಾ, ಮಧುಮೇಹ ಕಾಯಿಲೆ ಇರಬಾರದು.

- ಡೋನರ್‌‌ನ ಫ್ಯಾಮಿಲಿಯಲ್ಲಿ ಅವನ ಹಿಂದಿನ ಒಂದೆರಡು ತಲೆಮಾರಿನಲ್ಲಿ ಯಾರಿಗೂ ಬಿಪಿ, ಡಯಾಬಿಟಿಸ್, ಅಸ್ತಮಾ, ಇರಬಾರದು. ಇಡೀ ಕುಟುಂಬದ ವೈದ್ಯಕೀಯ ದಾಖಲೆಗಳನ್ನು ಸ್ಪರ್ಮ್ ಬ್ಯಾಂಕ್‌ನವರು ಕೇಳಬಹುದು.

- ಸ್ಪರ್ಮ್ ಬ್ಯಾಂಕ್‌ನಲ್ಲಿ ನಿಗದಿಪಡಿಸಿದ ಖಾಸಗಿ ಕೋಣೆಯಲ್ಲಿ, ಹಸ್ತಮೈಥುನದ ಮೂಲಕ ವೀರ್ಯ ಸಂಗ್ರಹಿಸಿ ನೀಡಬೇಕು. ಇದಕ್ಕೆ ಪ್ರಚೋದಕ ಸಾಹಿತ್ಯ, ಚಿತ್ರ, ವಿಡಿಯೋವನ್ನು ಅವರು ಒದಗಿಸುತ್ತಾರೆ. ಯಾರೋ ಮಾದಕ ಸುಂದರಿ ಬಂದು ನಿಮಗೆ ಇದಕ್ಕೆ ಸಹಾಯ ನೀಡುತ್ತಾಳೆ ಎಂದೆಲ್ಲ ನಿರೀಕ್ಷಿಸಬೇಡಿ!

 

ಫಸ್ಟ್ ಕಾಂಡೋಮ್ ಧರಿಸಿದ್ದು ಹೆಣ್ಣು! ಆಕೆ ಧರಿಸಿದ ಕಾಂಡೋಮ್ ಹೇಗಿತ್ತು ..

 

- ಡೋನರ್ ವಾರಕ್ಕೆರಡು ಬಾರಿಯಂತೆ ಒಂದು ವರ್ಷ ವೀರ್ಯ ನೀಡಲು ಸಾಧ್ಯವಾಗಬೇಕು. ಈ ಸ್ಯಾಂಪಲ್‌ಗಳನ್ನು ಅವರು ಕೂಡಲೇ ಉಪಯೋಗಿಸುವುದಿಲ್ಲ. ಸುಮಾರು ಆರು ತಿಂಗಳ ಕಾಲ ಸಂಗ್ರಹದಲ್ಲಿ ಇಟ್ಟು ಅದಕ್ಕೆ ನಾನಾ ಪರೀಕ್ಷೆಗಳನ್ನು ನಡೆಸಿ, ಯಾವುದೇ ರೋಗದ ಅಂಶಗಳು ಇಲ್ಲದಿರುವುದು ಖಚಿತವಾದ ಬಳಿಕವೇ ಬಳಸುತ್ತಾರೆ.

- ನೀವು ನೀಡಿದ ವೀರ್ಯ ಯಾರಿಗೆ ಬಳಕೆಯಾಯಿತು ಎಂಬ ಮಾಹಿತಿ ಗುಪ್ತ. ಅದನ್ನು ನೀವು ಕೇಳುವಂತಿಲ್ಲ. ಅದರ ಮೇಲೆ ನಿಮ್ಮ ಹಕ್ಕೂ ಇರುವುದಿಲ್ಲ.

- ಭಾರತದಲ್ಲಿ ಸಾಮಾನ್ಯವಾಗಿ ದಂಪತಿಗಳಲ್ಲಿ ಗಂಡನಿಗೆ ಮಗು ಪಡೆಯಲು ಅಗತ್ಯವಾದಷ್ಟು ಸ್ಪರ್ಮ್ ಕೌಂಟ್ ಇಲ್ಲದಿದ್ದರೆ, ಸಿಂಗಲ್ ಮದರ್ ಮಗು ಆಗಿ ಪಡೆಯಲು ಬಯಸಿದ್ದರೆ, ಸ್ಪರ್ಮ್ ಪಡೆಯುತ್ತಾರೆ. ಇದಕ್ಕೆ ನೂರಾರು ಕಾನೂನು ಕಟ್ಟಲೆ ಇದೆ. ಪಡೆಯಲು ಬಯಸುವವರು ಆರೋಗ್ಯಕರವಾದ ವೀರ್ಯ ಪಡೆಯಲು ಬಯಸುವುದು ಸಹಜ. ಆದರೆ ಭಾರತದಲ್ಲಿ ಸ್ಪರ್ಮ್ ದಾನಿಯ ಜಾತಿ, ಧರ್ಮ, ವಯಸ್ಸು, ಕುಟುಂಬ ಹಿನ್ನೆಲೆಗಳನ್ನೂ ವಿಚಾರಿಸುತ್ತಾರೆ. ಇಂಥ ವಿವರಗಳನ್ನು ಕೇಳಬಾರದು ಹಾಗೂ ನೀಡಬಾರದು ಎಂಬ ನಿಯಮವಿದೆ. ಆದರೆ, ಜಾತೀಯತೆ ಹಾಗೂ ಸ್ವಧರ್ಮ ಪ್ರೀತಿ ಹೆಚ್ಚಾಗಿರುವ ನಮ್ಮ ದೇಶದಲ್ಲಿ ಕುಟುಂಬ ಮುಂದುವರಿಸುವಂಥ ಮಹತ್ವದ ವಿಷಯಗಳಲ್ಲಿ ಇಂಥ ವಿಚಾರ ತಿಳಿದುಕೊಳ್ಳಬೇಕು ಅಂತ ಜನ ಬಯಸುವುದು ಸಹಜ. ಆದರೆ ದಾನಿಗಳ ಹೆಸರು ಇತ್ಯಾದಿ ವಿವರಗಳನ್ನು ಯಾರೂ ಬಹಿರಂಗಪಡಿಸುವುದಿಲ್ಲ.

- ಒಂದು ಸಲ ವೀರ್ಯ ನೀಡಿದರೆ ಸುಮಾರು ಎರಡು ಸಾವಿರ ರೂಪಾಯಿಯಿಂದ ಐದು ಸಾವಿರ ರೂಪಾಯಿಯವರೆಗೂ ಗಳಿಸಬಹುದು. ಒಂದು ಸಲ ನೀವು ಆರೋಗ್ಯವಂತ ವೀರ್ಯದಾನಿ ಎಂದು ದೃಢಪಟ್ಟರೆ, ಒಂದು ವರ್ಷ ಕಾಲ ವೀರ್ಯ ನೀಡಬಹುದು. ಅದಕ್ಕಿಂತ ಹೆಚ್ಚು ವೀರ್ಯದ ಸ್ಯಾಂಪಲ್‌ಗಳನ್ನು ಪಡೆಯುವಂತಿಲ್ಲ, ಕೊಡುವಂತಿಲ್ಲ.

- ಒಂದು ಸ್ಪರ್ಮ್ ಬ್ಯಾಂಕ್‌ನಲ್ಲಿ ನೀವು ನೋಂದಣಿ ಹೊಂದಿದ ವೀರ್ಯದಾನಿಯಾಗಿದ್ದರೆ ಇನ್ನೊಂದು ಕಡೆ ವೀರ್ಯ ಕೊಡುವ ಏರ್ಪಾಡು ಮಾಡಿಕೊಳ್ಳುವಂತಿಲ್ಲ.

click me!