ಇತ್ತೀಚಿನ ವರ್ಷಗಳಲ್ಲಿ ಸೌಂದರ್ಯ ಹಾಗೂ ಫಿಟ್‌ನೆಸ್ ಕುರಿತಾದ ಕಾಳಜಿ ವಿಪರೀತ ಹೆಚ್ಚುತ್ತಿದೆ. ಈ ಬಗ್ಗೆ ಸೋಷಿಯಲ್ ಮೀಡಿಯಾಗಳಲ್ಲಿ ಜಾಗೃತಿ ಮೂಡಿಸುವ ಫಿಟ್‌ನೆಸ್ ಇನ್‌ಫ್ಲುಯೆನ್ಸರ್‌ಗಳೇ ಇದ್ದಾರೆ. ಹೀಗೆ ದೇಹದ ಹೆಚ್ಚುವರಿ ಕೊಬ್ಬು ತೆಗೆಸಲು ಸರ್ಜರಿಗೆ ಒಳಗಾದ ಯುವತಿ ಹೃದಯ ಸ್ತಂಭನದಿಂದ ಮೃತಪಟ್ಟಿದ್ದಾರೆ.
ಬ್ರೆಜಿಲಿಯನ್ ಇನ್‌ಫ್ಲುಯೆನ್ಸರ್, 29 ವರ್ಷದ ಲುವಾನಾ ಆಂಡ್ರೇಡ್, ತಮ್ಮ ಮೊಣಕಾಲಿನ ಲಿಪೊಸಕ್ಷನ್ ಶಸ್ತ್ರಚಿಕಿತ್ಸೆಯ ಒಂದು ದಿನದ ನಂತರ ಆಸ್ಪತ್ರೆಯಲ್ಲಿ ಮೃತಪಟಿದ್ದಾರೆ. ಸರ್ಜರಿಯ ಸಮಯದಲ್ಲಿ ಅವರು ನಾಲ್ಕು ಬಾರಿ ಹೃದಯ ಸ್ತಂಭನಕ್ಕೆ ಒಳಗಾದರು ಎಂದು ತಿಳಿದುಬಂದಿದೆ. ಮೊಣಕಾಲಿನ ಲಿಪೊಸಕ್ಷನ್ ಶಸ್ತ್ರಚಿಕಿತ್ಸೆಗೆ ಒಳಗಾದ ನಂತರ ದುರಂತವಾಗಿ ಸಾವನ್ನಪ್ಪಿದ್ದಾರೆ. ಶಸ್ತ್ರಚಿಕಿತ್ಸೆ ನಡೆಸುವಾಗಲೇ ಲುವಾನಾಗೆ ಕಾರ್ಡಿಯಾಕ್ ಅರೆಸ್ಟ್ ಆಗಿದ್ದು, ವೈದ್ಯರು ಕೊಬ್ಬು ತೆಗೆಯುವ ವಿಧಾನವನ್ನು ನಿಲ್ಲಿಸಿದರು. ತಕ್ಷಣ ಆಕೆಯನ್ನು ತೀವ್ರ ನಿಗಾ ಘಟಕಕ್ಕೆ ವರ್ಗಾಯಿಸಲಾಯಿತು. ಆದರೂ ಬದುಕುಳಿಯಲ್ಲಿಲ್ಲ.
ಲುವಾನಾ, ಪಲ್ಮನರಿ ಎಂಬಾಲಿಸಮ್‌ನಿಂದ ಬಳಲುತ್ತಿದ್ದರು, ಇದು ಥ್ರಂಬೋಸಿಸ್‌ಗೆ ಸಂಬಂಧಿಸಿದೆ ಎಂದು ವೈದ್ಯಕೀಯ ತನಿಖೆಯಿಂದ ತಿಳಿದುಬಂದಿದೆ ಆಕೆಯ ಗೆಳೆಯ ಜೋವೊ ಹದಾದ್ ಇನ್‌ಸ್ಟಾಗ್ರಾಂನಲ್ಲಿ, 'ನನ್ನ ಜೀವನದ ಅತಿ ದೊಡ್ಡ ಭಾಗವು ನನ್ನನ್ನು ಬಿಟ್ಟುಹೋಗಿದೆ. ಆದರೆ ನಾನು ನಮ್ಮಿಬ್ಬರ ಬಗ್ಗೆ ಸುಂದರವಾದ ಕನಸನ್ನು ಕಟ್ಟಿದ್ದೇನೆ. ಹೀಗಾಗಿ ನೀವು ಜೀವನದ ಆಚೆಗೂ ನನ್ನ ಸಂಗಾತಿಯಾಗಿರುತ್ತೀರಿ. ನಾನು ಯಾವಾಗಲೂ ನಿಮ್ಮನ್ನು ಪ್ರೀತಿಸುತ್ತೇನೆ' ಎಂದು ಬರೆದುಕೊಂಡಿದ್ದಾರೆ.
undefined
ಫೇಮಸ್ ಬಾಡಿ ಬಿಲ್ಡರ್, ಫಿಟ್‌ನೆಸ್ ಪ್ರಭಾವಿಯಾಗಿದ್ದ ಮಹಿಳೆ ನಿಧನ; ಸಾವಿಗೆ ಕಾರಣ ನಿಗೂಢ
ಕೊಬ್ಬು ಕರಗಿಸಲು ಸರ್ಜರಿ ಮಾಡಿಕೊಂಡ ಯುವತಿ
ಪ್ಲಾಸ್ಟಿಕ್ ಸರ್ಜನ್ ಡಿಯೋವಾನೆ ರುವಾರೊ ಪ್ರಕಾರ, 'ಲುವಾನಾ ಆಂಡ್ರೇಡ್ ಆರೋಗ್ಯ ಸ್ಥಿತಿ ಉತ್ತಮವಾಗಿತ್ತು. ಸಾಕಷ್ಟು ಪೂರ್ವ ಶಸ್ತ್ರಚಿಕಿತ್ಸಾ ವಿಧಾನವನ್ನು ಸಹ ನಡೆಸಲಾಗಿತ್ತು. ಹೀಗಿದ್ದೂ ದುರದೃಷ್ಟವಶಾತ್, ಈ ಸಾವು ಸಂಭವಿಸಿದೆ, ಇದು ನಮಗೆ ದುಃಖ ತಂದಿದೆ' ಎಂದಿದ್ದಾರೆ. ಲಿಪೊಸಕ್ಷನ್ ಪ್ರಕ್ರಿಯೆಗಳು ಕೆಲವೊಮ್ಮೆ ಮಾರಣಾಂತಿಕ ತೊಡಕುಗಳನ್ನು ಉಂಟುಮಾಡಬಹುದು ಎಂದು ಅವರು ಹೇಳಿದರು.
ಲಿಪೊಸಕ್ಷನ್ ಕಾರ್ಯವಿಧಾನದ ಬಗ್ಗೆ ಮಾತನಾಡುತ್ತಾ, ಬ್ರೆಜಿಲಿಯನ್ ಕಾಲೇಜ್ ಆಫ್ ಪ್ಲಾಸ್ಟಿಕ್ ಸರ್ಜರಿಯ ಡಾ. ಎಡ್ವರ್ಡೊ ಟೀಕ್ಸೆರಾ, 'ಯಾವುದೇ ಅಪಾಯ ಮುಕ್ತ ಶಸ್ತ್ರಚಿಕಿತ್ಸೆ ಇಲ್ಲ, ಅಥವಾ ಅಪಾಯವನ್ನು ಒಳಗೊಂಡಿರದ ಯಾವುದೇ ವೈದ್ಯಕೀಯ ವಿಧಾನವಿಲ್ಲ' ಎಂದು ತಿಳಿಸಿದ್ದಾರೆ. ಇನ್‌ಸ್ಟಾಗ್ರಾಮ್‌ನಲ್ಲಿ ಇನ್‌ಫ್ಲುಯೆನ್ಸರ್ ಆಗಿದ್ದ ಲುವಾನಾ ಅತ್ಯಧಿಕ ಸಂಖ್ಯೆಯ ಫಾಲೋವರ್ಸ್‌ನ್ನು ಹೊಂದಿದ್ದಾರೆ. ಡೊಮಿಂಗೊ ಲೀಗಲ್‌ಗೆ ವೇದಿಕೆ ಸಹಾಯಕರಾಗಿ ಕೆಲಸ ಮಾಡಿದರು. ಮಾತ್ರವಲ್ಲ 2022 ರಲ್ಲಿ ಪ್ರಸಾರವಾದ ಪವರ್ ಕಪಲ್ ಬ್ರೆಸಿಲ್ 6 ಎಂಬ ರಿಯಾಲಿಟಿ ಶೋನ ಭಾಗವಾಗಿದ್ದರು.
ಒಂದೇ ವರ್ಷದಲ್ಲಿ 45 ಕೆಜಿ ಕಳೆದುಕೊಂಡಿದ್ದ ಫಿಟ್‌ನೆಸ್ ಇನ್‌ಫ್ಲುಯೆನ್ಸರ್ ವಿಚಿತ್ರ ರೋಗದಿಂದ ಸಾವು!
ಲಿಪೊಸೆಕ್ಷನ್ ಸರ್ಜರಿ ಎಂದರೇನು?
ಲಿಪೊಸೆಕ್ಷನ್ ಎಂದರೆ ಒಟ್ಟಾರೆ ತೂಕ ನಷ್ಟಕ್ಕೆ ಮಾಡುವ ಸರ್ಜರಿಯಾಗಿದೆ. ದೇಹದ ನಿರ್ದಿಷ್ಟ ಸ್ಥಳಗಳಲ್ಲಿ ಹೆಚ್ಚುವರಿ ದೇಹದ ಕೊಬ್ಬನ್ನು ಹೊಂದಿದ್ದರೆ ಲಿಪೊಸಕ್ಷನ್ ಶಸ್ತ್ರಚಿಕಿತ್ಸೆ ಮಾಡುತ್ತಾರೆ. ಲಿಪೊಸಕ್ಷನ್ ಆಹಾರ ಮತ್ತು ವ್ಯಾಯಾಮಕ್ಕೆ ಪ್ರತಿಕ್ರಿಯಿಸದ ದೇಹದ ಪ್ರದೇಶಗಳಿಂದ ಕೊಬ್ಬನ್ನು ತೆಗೆದುಹಾಕುತ್ತದೆ. ದೇಹದ ಹೊಟ್ಟೆ, ಮೇಲಿನ ತೋಳುಗಳು, ಪೃಷ್ಠ, ತೊಡೆ, ಎದೆ, ಬೆನ್ನು, ಗಲ್ಲ, ಕುತ್ತಿಗೆ ಮೊದಲಾದ ಜಾಗದಲ್ಲಿರುವ ಹೆಚ್ಚುವರಿ ಕೊಬ್ಬನ್ನು ತೆಗೆದು ಹಾಕುತ್ತದೆ. ಇದರ ಜೊತೆಗೆ, ಪುರುಷರಲ್ಲಿ ಹೆಚ್ಚುವರಿ ಸ್ತನ ಅಂಗಾಂಶವನ್ನು ಕಡಿಮೆ ಮಾಡಲು ಲಿಪೊಸಕ್ಷನ್ ಅನ್ನು ಕೆಲವೊಮ್ಮೆ ಬಳಸಬಹುದು.
ತೂಕವನ್ನು ಪಡೆದಾಗ, ಕೊಬ್ಬಿನ ಕೋಶಗಳು ದೊಡ್ಡದಾಗುತ್ತವೆ. ಲಿಪೊಸಕ್ಷನ್ ನಿರ್ದಿಷ್ಟ ಪ್ರದೇಶದಲ್ಲಿ ಕೊಬ್ಬಿನ ಕೋಶಗಳ ಸಂಖ್ಯೆಯನ್ನು ಕಡಿಮೆ ಮಾಡುತ್ತದೆ. ತೆಗೆದುಹಾಕಲಾದ ಕೊಬ್ಬಿನ ಪ್ರಮಾಣವು ಪ್ರದೇಶವು ಹೇಗೆ ಕಾಣುತ್ತದೆ ಮತ್ತು ಕೊಬ್ಬಿನ ಪ್ರಮಾಣವನ್ನು ಅವಲಂಬಿಸಿರುತ್ತದೆ. ತೂಕವು ಒಂದೇ ಆಗಿರುವ ವರೆಗೆ ಪರಿಣಾಮವಾಗಿ ಆಕಾರ ಬದಲಾವಣೆಗಳು ಸಾಮಾನ್ಯವಾಗಿ ಶಾಶ್ವತವಾಗಿರುತ್ತವೆ. ಪರಿಧಮನಿಯ ಕಾಯಿಲೆ, ಮಧುಮೇಹ ಅಥವಾ ದುರ್ಬಲ ಪ್ರತಿರಕ್ಷಣಾ ವ್ಯವಸ್ಥೆಯನ್ನು ಒಳಗೊಂಡಿರುವವರು ಈ ಸರ್ಜರಿಯನ್ನು ಮಾಡಿಕೊಳ್ಳುವಂತಿಲ್ಲ.