ಕೇವಲ ತಿನ್ನೋಕೆ ಅನ್ಕೊಂಡ್ರಾ, ಊಟದ ಜೊತೆ ಹಸಿ ಈರುಳ್ಳಿಯನ್ನ ಬಳಸೋದು ಇದೇ ಕಾರಣಕ್ಕೆ!

Published : Sep 09, 2025, 04:09 PM IST
Raw Onions

ಸಾರಾಂಶ

ಈರುಳ್ಳಿ ಯಾವುದೇ ರೂಪದಲ್ಲಿ ಇದ್ದರೂ ರುಚಿ ಹೆಚ್ಚಿಸುತ್ತದೆ. ಆದರೆ ಭಾರತೀಯರು ಮಾತ್ರ ಹೆಚ್ಚಾಗಿ ಹಸಿ ಈರುಳ್ಳಿಯನ್ನೇ ಏಕೆ ಬಳಸ್ತಾರೆ ಅಂತ ನೋಡುವುದಾದರೆ...

ಬಹುತೇಕರ ಮನೆಗಳಲ್ಲಿ ತಿಂಡಿಗೆ, ಮಧ್ಯಾಹ್ನ ಮತ್ತು ರಾತ್ರಿ ಊಟಕ್ಕೆ ತಟ್ಟೆಯಲ್ಲಿ ಹಸಿ ಈರುಳ್ಳಿ ಇದ್ದರೇನೇ ಚೆನ್ನ. ಮೊಸರನ್ನ, ರೊಟ್ಟಿಯಿಂದ ಹಿಡಿದು ಬಜ್ಜಿ, ಕಬಾಬ್‌ ತನಕ ಜೊತೆಗೆ ಈರುಳ್ಳಿಯನ್ನ ನೆಂಚಿಕೊಂಡು ತಿನ್ನಬೇಕೆಂದರೆ ಅದೆಂಥದೋ ಸುಖ. ಇದನ್ನ ನಾವು ಕೇವಲ ಅಭ್ಯಾಸ ಅಂದುಕೊಂಡರೆ ಅದು ಸುಳ್ಳು. ಇದರ ರುಚಿ ಬಲ್ಲವನೇ ಬಲ್ಲ. ಅನೇಕರ ಮನೆಗಳಲ್ಲಿ ಇದೊಂದು ರೀತಿ ಸಂಪ್ರದಾಯ. ಈಗಂತೂ ಈರುಳ್ಳಿಯನ್ನ ವಿಭಿನ್ನ ಸ್ಟೈಲ್‌ಗಳಲ್ಲಿ ಬಳಸುತ್ತಾರೆ. ಕೆಲವರು ಅದನ್ನು ತೆಳುವಾಗಿ ಹೋಳು ಮಾಡಿ ಉಪ್ಪು ಮತ್ತು ನಿಂಬೆ ಸಿಂಪಡಿಸುತ್ತಾರೆ. ಮತ್ತೆ ಕೆಲವರು ಹಸಿರು ಮೆಣಸಿನಕಾಯಿ ಮತ್ತು ತಾಜಾ ಕೊತ್ತಂಬರಿ ಸೊಪ್ಪಿನೊಂದಿಗೆ ಕಟ್ ಮಾಡಿ ತಿಂತಾರೆ. ಹಾಗೆಯೇ ಒಂದು ಹೆಜ್ಜೆ ಮುಂದೆ ಹೋಗಿ ವಿನೆಗರ್‌ನಲ್ಲಿ ಅದ್ದಿದ ದಪ್ಪನೆಯ ಉಂಡೆ ಅಥವಾ ಪುದೀನ ಚಟ್ನಿಯೊಂದಿಗೆ ಕಾಂಬಿನೇಶನ್ ಮಾಡಿ ತಿಂತಾರೆ. ಒಟ್ಟಿನಲ್ಲಿ ಈರುಳ್ಳಿ ಯಾವುದೇ ರೂಪದಲ್ಲಿ ಇದ್ದರೂ ರುಚಿ ಹೆಚ್ಚಿಸುತ್ತದೆ. ಆದರೆ ಭಾರತೀಯರು ಮಾತ್ರ ಹೆಚ್ಚಾಗಿ ಹಸಿ ಈರುಳ್ಳಿಯನ್ನೇ ಏಕೆ ಬಳಸ್ತಾರೆ ಅಂತ ನೋಡುವುದಾದರೆ...

ದೇಹವನ್ನು ಹೈಡ್ರೇಟ್ ಮಾಡುತ್ತೆ
ಈರುಳ್ಳಿಗೆ ತಂಪಾಗಿಸುವ ಗುಣಗಳಿವೆ. ಹಸಿ ಈರುಳ್ಳಿ ಕೇವಲ ಅಲಂಕಾರಕ್ಕೆ ಮಾತ್ರವಿಲ್ಲ. ಇದು ದೇಹದ ಉಷ್ಣತೆಯನ್ನು ನಿಯಂತ್ರಿಸಲು ಮತ್ತು ಶಾಖದ ಹೊಡೆತವನ್ನು ತಡೆಯಲು ಸಹಾಯ ಮಾಡುತ್ತದೆ ಎಂದು ನಂಬಲಾಗಿದೆ. ಅದಕ್ಕಾಗಿಯೇ ಜನರು ಹಸಿ ಈರುಳ್ಳಿಯನ್ನು ರೊಟ್ಟಿಗಳೊಂದಿಗೆ ಕಚ್ಚಿ ತಿನ್ನೋದನ್ನ ಅಥವಾ ಹೊರಗೆ ಊಟದ ಬಾಕ್ಸ್‌ಗೆ ಒಯ್ಯುವುದನ್ನ ಕಾಣಬಹುದು. ಈರುಳ್ಳಿ ದೇಹವನ್ನ ಹೈಡ್ರೇಟ್ ಕೂಡ ಮಾಡುತ್ತದೆ. ಈರುಳ್ಳಿಯಲ್ಲಿ ಹೆಚ್ಚಿನ ನೀರಿನ ಅಂಶವೂ ಇದೆ.

ಜೀರ್ಣಕ್ರಿಯೆಗೂ ಒಳ್ಳೇದು
ಇನ್ನು ಜೀರ್ಣಕ್ರಿಯೆ ವಿಚಾರಕ್ಕೆ ಬರುವುದಾದರೆ ಹಸಿ ಈರುಳ್ಳಿಯಲ್ಲಿ ಪ್ರಿಬಯಾಟಿಕ್‌ಗಳಿವೆ. ಅಂದರೆ ಅವು ನಿಮ್ಮ ಕರುಳಿನಲ್ಲಿರುವ ಉತ್ತಮ ಬ್ಯಾಕ್ಟೀರಿಯಾಗಳು ಸಂತೋಷವಾಗಿರಲು ಸಹಾಯ ಮಾಡುತ್ತವೆ. ಆದ್ದರಿಂದ ನೀವು ಹೆವಿ ಅಥವಾ ಖಾರದ ಏನನ್ನಾದರೂ ತಿನ್ನುತ್ತಿದ್ದರೆ, ಹಸಿ ಈರುಳ್ಳಿಯನ್ನ ತಿನ್ನುವುದು ನಿಮ್ಮ ಹೊಟ್ಟೆಗೆ ಬಹಳ ಒಳ್ಳೇದು. ಅದು ಸದ್ದಿಲ್ಲದೆ ತನ್ನ ಕೆಲಸವನ್ನು ಮಾಡುತ್ತದೆ.

ರಕ್ತದಲ್ಲಿನ ಸಕ್ಕರೆಯನ್ನ ಸಮತೋಲನದಲ್ಲಿಡಲು
ಇನ್ನೊಂದು ಮುಖ್ಯ ಕಾರಣವಿದೆ. ಅದೇನೆಂದರೆ ರಕ್ತದಲ್ಲಿನ ಸಕ್ಕರೆಯನ್ನ ಬ್ಯಾಲೆನ್ಸ್‌ನಲ್ಲಿಡುವುದು. ಹಸಿ ಈರುಳ್ಳಿಯಲ್ಲಿ ನಿಮ್ಮ ದೇಹವು ಇನ್ಸುಲಿನ್ ಅನ್ನು ಹೇಗೆ ಬಳಸುತ್ತದೆ ಎಂಬುದನ್ನು ಬೆಂಬಲಿಸುವ ಸಂಯುಕ್ತಗಳಿವೆ. ಆದ್ದರಿಂದ ನೀವು ಪರಾಠಾ, ಅನ್ನ ಅಥವಾ ಬಿರಿಯಾನಿಯಂತಹ ಕಾರ್ಬೋಹೈಡ್ರೇಟ್ ಭರಿತ ಏನನ್ನಾದರೂ ತಿನ್ನುತ್ತಿದ್ದರೆ ಈರುಳ್ಳಿ ಬಳಸುವುದು ಒಳಿತು. ಇದು ನಿಮ್ಮ ದೇಹವು ಊಟದಿಂದ ಉಂಟಾಗುವ ಸಕ್ಕರೆಯನ್ನು ಸ್ವಲ್ಪ ಉತ್ತಮವಾಗಿ ನಿರ್ವಹಿಸಲು ಸಹಾಯ ಮಾಡುತ್ತದೆ.

ಹೃದಯದ ಆರೋಗ್ಯಕ್ಕೆ
ಹೃದಯದ ಆರೋಗ್ಯಕ್ಕೂ ಇದು ಅನ್ವಯಿಸುತ್ತದೆ. ಹಸಿ ಈರುಳ್ಳಿ ನೈಸರ್ಗಿಕ ಉತ್ಕರ್ಷಣ ನಿರೋಧಕಗಳನ್ನು ಹೊಂದಿದ್ದು, ಅದು ರಕ್ತವನ್ನು ತೆಳುಗೊಳಿಸಲು ಮತ್ತು ರಕ್ತ ಪರಿಚಲನೆ ಸುಧಾರಿಸಲು ಸಹಾಯ ಮಾಡುತ್ತದೆ.

ಊಟದ ರುಚಿ ಹೆಚ್ಚಿಸಲು
ಎಲ್ಲಾ ಆರೋಗ್ಯ ಕಾರಣಗಳನ್ನು ಬದಿಗಿಟ್ಟು ನೋಡಿದರೆ, ಭಾರತೀಯರು ಆಹಾರದೊಂದಿಗೆ ಹಸಿ ಈರುಳ್ಳಿಯನ್ನು ಇಷ್ಟಪಡಲು ದೊಡ್ಡ ಕಾರಣವೆಂದರೆ ಅದು ಆಹಾರದ ರುಚಿಯನ್ನು ಮತ್ತಷ್ಟು ಹೆಚ್ಚಿಸುತ್ತದೆ. ಈಗಾಗಲೇ ನೀವು ಟ್ರೈ ಮಾಡಿರುವ ಖಾರದ ರಾಜ್ಮಾ ಚಾವಲ್, ಉಪ್ಪು ಮತ್ತು ನಿಂಬೆಹಣ್ಣಿನಲ್ಲಿ ಅದ್ದಿದ ಹಸಿ ಈರುಳ್ಳಿಯ ತುಂಡು, ತುಪ್ಪ ಸವರಿದ ಉಳಿದ ರೊಟ್ಟಿಯೊಂದಿಗೆ, ಕೆಲವು ಈರುಳ್ಳಿ ಚೂರುಗಳು ಹಸಿರು ಚಟ್ನಿಯೊಂದಿಗೂ ಚೆನ್ನ.

ಒಂದು ರೀತಿಯಲ್ಲಿ ಹಸಿ ಈರುಳ್ಳಿಗೂ ನಮಗೂ ಭಾವನಾತ್ಮಕ ನಂಟಿದೆ.ಹಾಗಾಗಿ ಮುಂದಿನ ಬಾರಿ ಯಾರಾದರೂ ನಿಮ್ಮ ಆಹಾರದೊಂದಿಗೆ ಹಸಿ ಈರುಳ್ಳಿಯನ್ನು ಏಕೆ ತಿನ್ನುತ್ತಿದ್ದೀರಿ ಎಂದು ಕೇಳಿದಾಗ, ಅದು ಕೇವಲ ತಿನ್ನುವದಕ್ಕಲ್ಲ ಎಂದು ಹೇಳಿ. ಇದು ಯಾವಾಗಲೂ ನಮ್ಮ ಊಟದ ಭಾಗವಾಗಿದೆ.

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಚಳಿಗಾಲದಲ್ಲಿಯೇ ಕಿವಿ ನೋವು, ತುರಿಕೆ, ಸೋಂಕಿನ ಸಮಸ್ಯೆ ಕಾಡುವುದೇಕೆ.. ಈ ಸಮಯದಲ್ಲಿ ನಾವೇನು ಮಾಡಬೇಕು?
World Idli Day: ಇಡ್ಲಿ ದಿನದಂದೇ ದೋಸೆ ತಿಂದ ಕಥೆ ನಿಮಗೆ ಗೊತ್ತಾ? ದೀಪಿಕಾ ಪಡುಕೋಣೆ ಈ ಯಡವಟ್ಟು ಮಾಡಿದ್ಯಾಕೆ?