ಬೆಂಗಳೂರಿನಲ್ಲಿ ಮೈ ಥರಗುಟ್ಟುವ ಚಳಿ, ಉಸಿರಾಟದ ಸಮಸ್ಯೆ ಕಾಡುತ್ತೆ ಎಚ್ಚರ

By Vinutha PerlaFirst Published Dec 13, 2022, 11:23 AM IST
Highlights

ಮಾಂಡೌಸ್​ ಚಂಡಮಾರುತದಿಂದಾಗಿ ಬೆಂಗಳೂರಿನ ವಾತಾವರಣ ಸಂಪೂರ್ಣ ಬದಲಾಗಿದೆ. ನಗರವಿಡೀ ಕೂಲ್‌ ಕೂಲ್ ಆಗಿದ್ದು, ಜನ್ರು ಥಂಡಿಯಲ್ಲಿ ಥರಗುಟ್ಟುತ್ತಿದ್ದಾರೆ. ಮೈ ಕೊರೆಯುವ ಚಳಿಯಲ್ಲಿ ಆರೋಗ್ಯದ ಬಗ್ಗೆ ಕಾಳಜಿ ವಹಿಸೋದು ಹೇಗೆ ? ಇಲ್ಲಿದೆ ಕೆಲವೊಂದು ಟಿಪ್ಸ್.

ಮಾಂಡೌಸ್​ ಚಂಡಮಾರುತದಿಂದಾಗಿ ಕಳೆದ ಕೆಲವು ದಿನಗಳಿಂದ ಬೆಂಗಳೂರಿನ ವಾತಾವರಣ ಸಂಪೂರ್ಣ ಬದಲಾಗಿದೆ. ಶೀತಗಾಳಿಯ ಜೊತೆಗೆ ಮಳೆಯ ಕಾಟ ಜನರನ್ನು ಕಂಗೆಡಿಸಿದೆ. ವಾತಾವರಣ (Weather) ಸಂಪೂರ್ಣ ಹದಗೆಟ್ಟಿದ್ದು, ಜನರು ಮನೆಯಿಂದ ಹೊರಬರಲು ಹಿಂಜರಿಯುವಂತಾಗಿದೆ. ಮಾತ್ರವಲ್ಲ ಹದಗೆಟ್ಟ ವಾತಾವರಣದಿಂದ ಆರೋಗ್ಯ ಸಮಸ್ಯೆ (Health problem)ಯೂ ಕಾಣಿಸಿಕೊಳ್ತಿದೆ. ಶೀತ, ಕೆಮ್ಮು, ನೆಗಡಿ, ವೈರಲ್ ಫೀವರ್​ ಮೊದಲಾದ ಕಾಯಿಲೆಗಳು (Disease) ವಕ್ಕರಿಸುತ್ತಿವೆ. ವೈರಲ್ ಜ್ವರದ ಹೆಚ್ಚಳಕ್ಕೆ ಪ್ರಮುಖ ಕಾರಣ ಬದಲಾಗುತ್ತಿರುವುದು ಶೀತ ವಾತಾವರಣ. ಆಗಾಗ ಬರುವ ಮಳೆ, ಮೋಡ ಕವಿದ ವಾತಾವರಣದಿಂದಾಗಿ ವೈರಾಣುಗಳ ಸಂಖ್ಯೆ ಹೆಚ್ಚುತ್ತದೆ. ಇದರ ಪರಿಣಾಮ ರೋಗ ನಿರೋಧಕ ಶಕ್ತಿ (Immunity power) ಕಡಿಮೆ ಹೊಂದಿರುವವರು ಕಾಯಿಲೆಗೆ ತುತ್ತಾಗುತ್ತಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ.

ಉಸಿರಾಟದ ಸಮಸ್ಯೆ: ಬೆಂಗಳೂರಿನಲ್ಲಿ ಉಷ್ಣಾಂಶ ತೀವ್ರವಾಗಿ ಕುಸಿದಿದ್ದು, ಕಡಿಮೆಯಾಗಿರುವ ತಾಪಮಾನ ಹಲವರಲ್ಲಿ ಆರೋಗ್ಯ ಸಮಸ್ಯೆಯನ್ನುಂಟು ಮಾಡ್ತಿದೆ. ಥಂಡಿ ಗಾಳಿಯಿಂದ ಉಸಿರಾಡಲು ಸಹ ಕಷ್ಟಪಡುವಂತಾಗುತ್ತಿದೆ. ಹೀಗಿದ್ದಾಗ ಉಸಿರಾಟದ ಸಮಸ್ಯೆ ವಿಪರೀತ ಕಾಡಲು ಶುರುವಾಗಿತ್ತದೆ. ಬಿಸಿ ನೀರು, ಬಿಸಿ ಆಹಾರ (Food) ಸೇವನೆಯ ಮೂಲಕ ಆರೋಗ್ಯ ಕಾಪಾಡಿಕೊಳ್ಳಬೇಕು.

Winter Tips: ಚಳಿಗೆ ನೀರನ್ನೇ ಮುಟ್ಟೋಕಾಗಲ್ಲ, ಪಾತ್ರೆ ತೊಳೆಯೋದು ಹೇಗಪ್ಪಾ ?

ಸೋಂಕು ಹರಡುವಿಕೆ: ಚಳಿಗಾಲದ (Winter) ಸಮಯದಲ್ಲಿ ಮನೆಯೊಳಗೆ ಥಂಡಿ ಹರಡುವುದು ಬೇಡವೆಂದು ಹೆಚ್ಚಿನವರು ಮನೆಯ ಎಲ್ಲಾ ಕಿಟಿಕಿ, ಬಾಗಿಲುಗಳನ್ನು ಮುಚ್ಚುತ್ತಾರೆ. ಆದರೆ ಇದು ವೆಂಟಿಲೇಷನ್ ಕೊರತೆಗೆ ಕಾರಣವಾಗುತ್ತದೆ. ಇದು ಸುಲಭವಾಗಿ ಸೋಂಕು ಹರಡುವಂತೆ ಮಾಡುತ್ತದೆ. 

ಶೀತ, ಕೆಮ್ಮಿನ ಕಾಟ: ತಾಪಮಾನ ಕುಸಿತದಿಂದ ಸುಲಭವಾಗಿ ಶೀತ ಕಾಣಿಸಿಕೊಳ್ಳುತ್ತದೆ. ಕೆಮ್ಮಿನ ಕಾಟ ಸಾಮಾನ್ಯವಾಗಿಬಿಡುತ್ತದೆ. ಇಂಥಾ ಸಂದರ್ಭದಲ್ಲಿ ಕಷಾಯ, ಮನೆಮದ್ದು ಮೊದಲಾದವನ್ನು ಮಾಡಿ ಕುಡಿಯುವ ಬದಲು ವೈದ್ಯರನ್ನು ಸಂಪರ್ಕಿಸುವುದು ಸೂಕ್ತ. 

ಅಸ್ತಮಾ ಉಲ್ಬಣ: ಅಸ್ತಮಾ ಇರುವವರಿಗೆ ಶೀತ ವಾತಾವರಣ ಹೆಚ್ಚು ಕಿರಿಕಿರಿಯನ್ನುಂಟು ಮಾಡುತ್ತದೆ. ಜ್ವರ ಮಾತ್ರವಲ್ಲದೆ, ಶೀತಗಾಳಿಯಿಂದ ಹೆಚ್ಚಿನ ಜನರಲ್ಲಿ ಅಸ್ತಮಾ, ಅಲರ್ಜಿ ಕಾಣಿಸಿಕೊಳ್ಳುತ್ತಿದೆ. ಅಸ್ತಮಾ ಕಾಯಿಲೆ ಇರುವವರು ಹೆಚ್ಚು ಮುತುವರ್ಜಿ ವಹಿಸಬೇಕು. ಇಲ್ಲವಾದಲ್ಲಿ ಶೀತ ವಾತಾವರಣ ಅಸ್ತಮಾ ಸಮಸ್ಯೆಯನ್ನು ಉಲ್ಬಣಗೊಳಿಸುತ್ತದೆ ಎಂದು ವೈದ್ಯರು ಎಚ್ಚರಿಸಿದ್ದಾರೆ.

Winter Tips: ಚಳಿಗಾಲದಲ್ಲಿ ಕಿವಿನೋವಿನ ಕಾಟನಾ ? ಇಲ್ಲಿದೆ ಪರಿಹಾರ

ಕಿವಿನೋವಿನ ಸಮಸ್ಯೆ: ಚಳಿಗಾಲದಲ್ಲಿ ಕಿವಿ ನೋವಿನ ಸಮಸ್ಯೆ (Ear Problem) ಸಾಮಾನ್ಯವಾಗಿದೆ. ಈ ನೋವು ಸಾಮಾನ್ಯವಾಗಿ ಕಿವಿ ಮತ್ತು ಅದರ ಸುತ್ತಮುತ್ತಲಿನ ಪ್ರದೇಶದಲ್ಲಿ ತೀವ್ರವಾಗಿರುತ್ತದೆ, ಮತ್ತು ಅಸ್ವಸ್ಥತೆಗೆ ಕಾರಣವಾಗುತ್ತದೆ. ಅಂತಿಮವಾಗಿ ಇದು ಮೆದುಳಿಗೆ  ಹರಡಬಹುದು. ಚಳಿಗಾಲದಲ್ಲಿ ಕಿವಿಗಳು ನೋಯುತ್ತಿರುವುದಕ್ಕೆ ಹಲವಾರು ಕಾರಣಗಳಿರಬಹುದು. ನಮ್ಮ ಕಿವಿಗಳ ಆಂತರಿಕ ರಚನೆಯು ಸೂಕ್ಷ್ಮವಾದ ಅಂಗಾಂಶಗಳು, ನರ ತುದಿಗಳು ಮತ್ತು ಮೆದುಳು ಮತ್ತು ಗಂಟಲಿಗೆ ಸಂಪರ್ಕಿಸುವ ಸಿರೆಗಳಿಂದ ಮಾಡಲ್ಪಟ್ಟಿದೆ. ಈ ಪ್ರದೇಶವು ಹೊರಗಿನ ಪರಿಸರಕ್ಕೆ ಭಾಗಶಃ ತೆರೆದುಕೊಳ್ಳುತ್ತದೆ. ಆದ್ದರಿಂದ ಕಿವಿ ಶೀತ ಮತ್ತು ತಂಪಾದ ಗಾಳಿಯಿಂದ ಪ್ರಭಾವಿತವಾಗುತ್ತದೆ. ಇದು ಕೆಲವೊಮ್ಮ ಸೋಂಕಿಗೂ ಕಾರಣವಾಗಬಹುದು.

ಬೆಂಗಳೂರಿನಲ್ಲಿ ಉಷ್ಣಾಂಶ ತೀವ್ರವಾಗಿ ಕುಸಿದಿದ್ದು, ತಾಪಮಾನವು 16 ಡಿಗ್ರಿ ಸೆಲ್ಸಿಯಸ್‌ ದಾಖಲಾಗಿದೆ. ರಾಜ್ಯದ ಉತ್ತರ ಒಳನಾಡು, ದಕ್ಷಿಣ ಒಳನಾಡು, ಕರಾವಳಿ ಮತ್ತು ಬೆಂಗಳೂರು ಭಾಗಗಳಲ್ಲಿ ಇನ್ನು ಮೂರು ದಿನಗಳ ಕಾಲ ಮಳೆ ಮುಂದುವರೆಯಬಹುದು ಎಂದು ಹವಾಮಾನ ಇಲಾಖೆ ಎಚ್ಚರಿಸಿದೆ. ಮುಂದಿನ ಕೆಲದಿನಗಳವರೆಗೂ ಚಂಡಮಾರುತದ ಪ್ರಭಾವ ದಕ್ಷಿಣ ಭಾರತದಲ್ಲಿ ಇರಲಿದೆ ಎಂದು ಹವಾಮಾನ ಇಲಾಖೆ ಎಚ್ಚರಿಸಿದೆ.

click me!