Health Tips in Kannada: ದಿನಪೂರ್ತಿ ಆಕ್ಟೀವ್ ಆಗಿರ್ಬೇಕಾ? ಅರ್ಧ ಗಂಟೆ ವಾಕಿಂಗ್ ಮಾಡಿ

By Suvarna NewsFirst Published Sep 24, 2022, 11:47 AM IST
Highlights

Health benefits of walking: ವಾಕಿಂಗ್'ನಿಂದ ನಮ್ಮ ದೇಹಕ್ಕೆ ಅನೇಕ ಲಾಭ ಉಂಟಾಗುತ್ತದೆ. ದಿನದ 30 ನಿಮಿಷಗಳ ವಾಕಿಂಗ್ ನಮ್ಮ ದಿನಚರಿಯನ್ನು ಬದಲಿಸುತ್ತದೆ.

ಮನುಷ್ಯನಿಗೆ ಆರೋಗ್ಯ ತುಂಬಾ ಮುಖ್ಯವಾಗಿದ್ದು, ಫಿಟ್ನೆಸ್'ಗಾಗಿ ನಾವು ನಾನಾ ಕಸರತ್ತುಗಳನ್ನು ಮಾಡುತ್ತೇವೆ. ಅದರಲ್ಲಿ ವಾಕಿಂಗ್ ( Walking) ಅತಿ ಮಹತ್ವದಾಗಿದೆ.  ಪ್ರತಿನಿತ್ಯ ನಾವು ಮಾಡುವ ಅರ್ಧ ಗಂಟೆ ವಾಕಿಂಗ್ ದೇಹಕ್ಕೆ ಅನೇಕ ಪ್ರಯೋಜನಗಳನ್ನು ನೀಡುತ್ತದೆ. ಆರೊಗ್ಯಕರವಾದ ಜೀವನ ಸಾಗಿಸಲು ಸಹಕಾರಿಯಾಗುತ್ತೆ. ಸಂಧಿವಾತ ಸೇರಿ ಅನೇಕ ಸಮಸ್ಯೆಗಳಿಂದ ಬಳಲುತ್ತಿರುವವರು ದಿನಕ್ಕೆ 30 ನಿಮಿಷ ( Minute) ಅಥವಾ ಅದಕ್ಕಿಂತ ಹೆಚ್ಚು ಕಾಲ ವಾಕಿಂಗ್ ಮಾಡುವುದರಿಂದ ನೋವು ನಿವಾರಣೆಯ ಅನುಭವವನ್ನು ಪಡೆಯಬಹುದು. ವಾರದ ಹೆಚ್ಚಿನ ದಿನಗಳಲ್ಲಿ ದಿನಕ್ಕೆ 30 ನಿಮಿಷ ಅಥವಾ ಅದಕ್ಕಿಂತ ಹೆಚ್ಚು ಕಾಲ ನಡೆಯುವುದು ನಿಮ್ಮ ಒಟ್ಟಾರೆ ಆರೋಗ್ಯವನ್ನು ಸುಧಾರಿಸಲು ಅಥವಾ ಕಾಪಾಡಿಕೊಳ್ಳಲು ಉತ್ತಮ ಮಾರ್ಗವಾಗಿದೆ. ವ್ಯಕ್ತಿಯು  ದಿನಕ್ಕೆ ಕನಿಷ್ಠ 30 ನಿಮಿಷ ನಡೆಯುವುದರಿಂದ ಕೀಲುಗಳು, ಸ್ನಾಯುಗಳು ಮತ್ತು ಮೂಳೆಗಳನ್ನು ಬಲವಾಗುತ್ತದೆ. ಹಾಗೆ  ಚಯಾಪಚಯ ಕ್ರೀಯೆಯೂ ಸರಾಗವಾಗಿ ನಡೆಯುತ್ತದೆ.

ಹೃದಯ ಮತ್ತು ಶ್ವಾಸಕೋಶದ  ಫಿಟ್ನೆಸ್:

ವಾಕಿಂಗ್ ಹೃದ್ರೋಗವನ್ನು ನಿವಾರಿಸುತ್ತದೆ, ಅದಲ್ಲದೆ ಹೃದಯ ಬಡಿತವನ್ನು (Heart beat) ಹೆಚ್ಚಿಸುತ್ತದೆ. ಹಾಗೆ ರಕ್ತದೊತ್ತಡವನ್ನು (Blood Pressure)ಕಡಿಮೆ ಮಾಡುತ್ತದೆ  ಮತ್ತು ಹೃದಯವನ್ನು ಬಲಪಡಿಸುತ್ತದೆ. ದಿನಕ್ಕೆ 30 ನಿಮಿಷ ನಡೆಯುವ ಮಹಿಳೆಯರು ಪಾರ್ಶ್ವವಾಯು ಅಪಾಯವನ್ನು 20% ಮತ್ತು ವೇಗವನ್ನು ಹೆಚ್ಚಿಸಿದಾಗ 40% ರಷ್ಟು ಕಡಿಮೆ ಮಾಡಬಹುದು. ಅಧಿಕ ಕೊಲೆಸ್ಟ್ರಾಲ್, ಮಧುಮೇಹದಂತಹ ಸಮಸ್ಯೆಗಳು ಸುಧಾರಿಸುತ್ತವೆ.

ದೀರ್ಘ ಆಯಸ್ಸು:

ಕೇವಲ ವಾಕಿಂಗ್'ನಿಂದ ಕೀಲು ಮತ್ತು ಸ್ನಾಯು ನೋವುಗಳು ಮಾತ್ರ ಶಮನವಾಗುವುದಲ್ಲದೆ ಐವತ್ತು ಮತ್ತು ಅರವತ್ತರ ವಯಸ್ಸಿನಲ್ಲಿ ನಿಯಮಿತವಾಗಿ ವಾಕಿಂಗ್  ಮಾಡುವ ಜನರು ಮುಂದಿನ ಎಂಟು ವರ್ಷಗಳಲ್ಲಿ ಸಾಯುವ ಸಾಧ್ಯತೆ 35% ರಷ್ಟು ಕಡಿಮೆ. ಅದಲ್ಲದೆ ಉತ್ತಮ ಆರೋಗ್ಯ ಹೊಂದಿರುವುದರ ಜೊತೆ ದಿನವು ವಾಕಿಂಗ್ (Walking) ಮಾಡುವವರ ಸಾಯುವ ಸಾಧ್ಯತೆ  45% ರಷ್ಟು ಕಡಿಮೆ ಇರುತ್ತದೆ.

ಇದನ್ನೂ ಓದಿ: Health Tips : ಖಾಲಿ ಹೊಟ್ಟೇಲಿ ಏಲಕ್ಕಿ ನೀರು ಕುಡಿದ್ನೋಡಿ!

ತೂಕ ಇಳಿಕೆಗೆ ಸಹಾಯಕಾರಿ:

ದೇಹದ ಬೊಜ್ಜು(Cholesterol) ಹಲವು ರೋಗಗಳಿಗೆ ಎಡೆಮಾಡಿಕೊಡುತ್ತದೆ, ಅನೇಕ ಕಾಯಿಲೆಗಳು ಕೂಡ ಬರುತ್ತವೆ. ಹೀಗಾಗಿ ತೂಕ ನಷ್ಟಕ್ಕೆ(Weight Loss)ನಮ್ಮಲ್ಲಿ ಹೆಚ್ಚಿನ ಜನರು ಹಲವಾರು ರೀತಿಯಲ್ಲಿ ಪ್ರಯತ್ನ ಮಾಡುವುದನ್ನು ನಾವು ನೋಡಿದ್ದೇವೆ. ಹೀಗಾಗಿ  ದಿನನಿತ್ಯ ಚುರುಕಾದ 30 ನಿಮಿಷಗಳ ನಡಿಗೆಯುನ್ನು ಮಾಡುವುದರಿಂದ 200 ಕ್ಯಾಲೊರಿಗಳನ್ನು  ಕಳೆದುಕೊಳ್ಳಬಹುದು. ಇದರಿಂದ ದೇಹದಲ್ಲಿನ ಕೊಬ್ಬು ಕಡಿಮೆಯಾಗಿ ಸ್ನಾಯು ಶಕ್ತಿ ಹೆಚ್ಚುತ್ತದೆ.

ಉಸಿರಾಟ ಸುಧಾರಣೆ:

ನಡೆಯುವಾಗ ಉಸಿರಾಟದ (Breathing) ಪ್ರಮಾಣವು ಹೆಚ್ಚಾಗುತ್ತದೆ, ಇದರಿಂದ ಆಮ್ಲಜನಕವು ರಕ್ತದಲ್ಲಿ  ವೇಗವಾಗಿ ಚಲಿಸುತ್ತದೆ. ಹಾಗೇ ತ್ಯಾಜ್ಯ ಉತ್ಪನ್ನಗಳನ್ನು ಕಡಿಮೆ ಮಾಡುತ್ತದೆ ಮತ್ತು ನಿಮ್ಮ ಶಕ್ತಿಯ ಮಟ್ಟವನ್ನು ಸುಧಾರಿಸಲು ಸಹಾಯ ಮಾಡುತ್ತದೆ.

ಇದನ್ನೂ ಓದಿ: Health Tips: ಖಾಸಗಿ ಅಂಗದ ಕೂದಲು ಬಿಳಿಯಾಗಲು ಕಾರಣವೇನು?

ಮಾನಸಿಕ ಸ್ಥಿರತೆ:

ನಮಗೆ ದೇಹದ ಜೊತೆಗೆ ಮಾನಸಿಕ ಆರೋಗ್ಯವು ತುಂಬಾ ಮುಖ್ಯ. ಮಾನಸಿಕ ಸ್ಥಿರತೆಯು ವ್ಯಕ್ತಿಯ ನರಮಂಡಲ, ಪಾಲನೆ, ಅನುಭವ, ಅಭಿವೃದ್ಧಿಯ ಮಟ್ಟ ಇತ್ಯಾದಿಗಳಂತಹ ಅಂಶಗಳನ್ನು ಅವಲಂಬಿಸಿರುತ್ತದೆ. ನಿರಂತರ ನಡಿಗೆಯ ಮೂಲಕ ಮಾನಸಿಕ ಸ್ಥಿರತೆಯನ್ನು ಕಾಪಾಡಿಕೊಳ್ಳಲು ಸಹಾಯಕ. ನಿರಂತರವಾಗಿ ವಾಕಿಂಗ್ ಮಾಡುವ 65 ಮತ್ತು ಅದಕ್ಕಿಂತ ಹೆಚ್ಚಿನ ವಯಸ್ಸಿನ ಮಹಿಳೆಯರಲ್ಲಿ ವಯಸ್ಸಿಗೆ ಸಂಬಂಧಿಸಿದ ನೆನಪಿನ ಕ್ಷೀಣತೆ ಕಡಿಮೆಯಾಗಿದೆ.

ಇದನ್ನೂ ಓದಿ: ಯಾರಿಗೆ ಬೇಡ ಹೇಳಿ ಆರೋಗ್ಯ? ಖಾಲಿ ಹೊಟ್ಟೆಯಲ್ಲಿ ಲವಂಗ ತಿಂದು ನೋಡಿ!

ಇನ್ನು ಆರೋಗ್ಯ ಪ್ರಯೋಜನಗಳನ್ನು ಪಡೆಯಲು, ವಾರದ ಹೆಚ್ಚಿನ ದಿನಗಳಲ್ಲಿ  ಸಾಧ್ಯವಾದಷ್ಟು ಚುರುಕಾಗಿ ಕನಿಷ್ಠ 30 ನಿಮಿಷಗಳ ಕಾಲ ನಡೆಯಲು ಪ್ರಯತ್ನಿಸಬೇಕು. ಯಾವುದೇ ಅನಾರೋಗ್ಯದಿಂದ ಬಳಲುತ್ತಿದ್ದರೆ  ದೈಹಿಕ ಚಟುವಟಿಕೆಯಿಂದ ಕೂಡಿದ ಯಾವುದೇ ಹೊಸ ವ್ಯಾಯಾಮ  ಪ್ರಾರಂಭಿಸುವ ಮೊದಲು ನಿಮ್ಮ ವೈದ್ಯರನ್ನು ಸಂಪರ್ಕಿಸುವುದು ಉತ್ತಮ.

click me!