ಬೆಳಗಾವಿ ಸೇರಿದಂತೆ ಜಿಲ್ಲೆಯ ಹಲವೆಡೆ ಇರುವ ಚೀನಿ ರೆಸ್ಟೋರೆಂಟ್‌ಗಳಲ್ಲಿ ಮತ್ತು ಫಾಸ್ಟ್ ಫುಡ್‌ಗಳಲ್ಲಿ ಅನಾರೋಗ್ಯಕಕ್ಕೆ ಕಾರಣವಾಗಿರುವ ಮತ್ತು ಸುಪ್ರೀಂಕೋರ್ಟ್‌ನಿಂದ ನಿಷೇಧಕ್ಕೆ ಒಳಗಾಗಿರುವ ಅಜಿನೋಮೋಟೊ ಪದಾರ್ಥವನ್ನು ಬಳಸುತ್ತಿರುವುದು ಕಂಡುಬಂದಿದೆ.
ಬೆಳಗಾವಿ(ಸೆ.24): ಹೊರಗಡೆ ಆಹಾರ ಸೇವಿಸುವವರೆ ಸ್ವಲ್ಪ ಹುಷಾರಾಗಿರಿ. ನೀವು ತಿನ್ನುವ ಆಹಾರ ನಾಲಿಗೆಗೆ ರುಚಿ. ಆದರೆ, ದೇಹಕ್ಕೆ ಸತ್ವಯುತವಾಗಿದೆಯೇ, ಆರೋಗ್ಯಕರವಾಗಿದೆಯೇ ಎಂಬುವುದನ್ನು ತಿಳಿದುಕೊಳ್ಳಿ. ಆಹಾರ ರುಚಿಯಾಗಿದೆ ಎಂದು ಸೇವಿಸಲು ಮುಂದಾದರೆ ಮುಂದೆ ಅದು ನಿಮ್ಮ ಆರೋಗ್ಯದ ಮೇಲೆಯೂ ದಾಳಿ ಮಾಡಬಹುದು.
ಬೆಳಗಾವಿ ಸೇರಿದಂತೆ ಜಿಲ್ಲೆಯ ಹಲವೆಡೆ ಇರುವ ಚೀನಿ ರೆಸ್ಟೋರೆಂಟ್‌ಗಳಲ್ಲಿ ಮತ್ತು ಫಾಸ್ಟ್ ಫುಡ್‌ಗಳಲ್ಲಿ ಅನಾರೋಗ್ಯಕಕ್ಕೆ ಕಾರಣವಾಗಿರುವ ಮತ್ತು ಸುಪ್ರೀಂಕೋರ್ಟ್‌ನಿಂದ ನಿಷೇಧಕ್ಕೆ ಒಳಗಾಗಿರುವ ಅಜಿನೋಮೋಟೊ ಪದಾರ್ಥವನ್ನು ಬಳಸುತ್ತಿರುವುದು ಕಂಡುಬಂದಿದೆ. ಬೆಳಗಾವಿಯೊಂದರಲ್ಲೇ ಒಂದೇ ದಿನ 61 ಕೆಜಿ ಅಜಿನೋಮೋಟೊವನ್ನು ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರದ ಜಿಲ್ಲಾ ಅಂಕಿತ ಅಧಿಕಾರಿ ಡಾ.ಜಗದೀಶ ಜಿಂಗಿ ಅವರು ವಶಪಡಿಸಿಕೊಂಡಿದ್ದಾರೆ. ಅಜಿನೋಮೋಟೊ ಮಾರಾಟ ಮಾಡುತ್ತಿದ್ದ ಅಂಗಡಿಗಳು, ರೆಸ್ಟೊರೆಂಟ್‌ಗಳಲ್ಲಿ ದಾಳಿ ನಡೆಸಿರುವ ಡಾ.ಜಿಂಗಿ ಅವರು ಆರೋಗ್ಯಕ್ಕೆ ಮಾರಕವಾಗಿರುವ ಅಜಿನೋಮೋಟೊವನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಅಲ್ಲದೆ, ಇದರ ಬಳಕೆ ಪ್ರಮಾಣದ ಹೆಚ್ಚಳವಾಗಿರುವುದಕ್ಕೂ ಅವರು ಆತಂಕ ಕೂಡ ವ್ಯಕ್ತಪಡಿಸಿದ್ದಾರೆ.
ಬೆಂಗ್ಳೂರಲ್ಲಿ ಮಳೆ ಕಡಿಮೆಯಾಯ್ತು, ಡೆಂಘೀ ಕಾಟ ಹೆಚ್ಚಾಯ್ತು..!
ಏನಿದು ಅಜಿನೋಮೋಟೊ?:
ಅಜಿನೋಮೋಟೊ ಎಂಬುವುದು ಒಂದು ಆಹಾರ ಪದಾರ್ಥ ರುಚಿಯಾಗಲೆಂದು ಬಳಸುವ ಪದಾರ್ಥ. ಮೊನೊಸೋಡಿಯಂ ಗ್ಲುಟಮೇಟ್ ಎಂಬುದು ಇದರ ಮೂಲ ಹೆಸರು. ಇದೊಂದು ಸೋಡಿಯಂ ಉಪ್ಪು. ಆಹಾರ ಪದಾರ್ಥ ರುಚಿಯಾಗುತ್ತದೆ ಎಂಬ ಕಾರಣಕ್ಕೆ ಚೀನಿ ಫಾಸ್ಟ್‌ಫುಡ್, ರೆಸ್ಟೋರೆಂಟ್‌ಗಳಲ್ಲಿ ಇದನ್ನು ಹೇರಳವಾಗಿ ಬಳಕೆ ಮಾಡುತ್ತಾರೆ. ವಾಸ್ತವವಾಗಿ ಇದರ ಬಳಕೆ ಆರೋಗ್ಯದ ಮೇಲೆ ಹೆಚ್ಚು ಪರಿಣಾಮ ಬೀರುತ್ತದೆ. ನಿಯಮದ ಪ್ರಕಾರ ಒಂದು ವರ್ಷದೊಳಗಿನ ಮಕ್ಕಳಿಗೆ ಇದನ್ನು ನೀಡುವಂತಿಲ್ಲ. ಚೀನಾದಲ್ಲಿ ಉತ್ಪಾದನೆಯಾಗುವ ಮೊನೊಸೋಡಿಯಂ ಗ್ಲುಟಮೇಟ್ (ಅಜಿನೋಮೋಟೊ) ಅನ್ನು ಭಾರತದಲ್ಲಿ ಮಾರಾಟ ಮಾಡುವುದಕ್ಕೆ ಸುಪ್ರೀಂಕೋರ್ಟ್ ನಿಷೇಧ ಹೇರಿದೆ. ಮಾತ್ರವಲ್ಲ, ಆಮದು ಮಾಡಿಕೊಳ್ಳಲು ಕೂಡ ಸುಪ್ರೀಂ ಕೋರ್ಟ್ ನಿಷೇಧ ಹೇರಿದೆ. ಆದರೂ ಕೂಡ ಈ ಅಜಿನೋಮೋಟೊ ಬೆಳಗಾವಿ ಮಾರುಕಟ್ಟೆಯನ್ನು ಆವರಿಸಿರುವುದು ತೀವ್ರ ಆತಂಕಕ್ಕೆ ಕಾರಣವಾಗಿದೆ.
ಯಾವ ಆಹಾರಕ್ಕೆ ಬಳಸುತ್ತಾರೆ?:
ಅಜಿನೋಮೋಟೊವನ್ನು ಆಹಾರ ಪದಾರ್ಥಕ್ಕೆ ಹಾಕುವುದರಿಂದ ರುಚಿಯಾಗುತ್ತದೆ. ಇದಕ್ಕಾಗಿಯೇ ಫ್ರೈಡ್ ರೈಸ್, ಚಿಕನ್ ರೈಸ್, ಚಿಲ್ಲಿ ಚಿಕನ್, ನೂಡಲ್ಸ್, ಚಿಕನ್ ಮಂಚೂರಿಯನ್, ಚಿಕನ್ ಸೂಪ್, ಚಿಲ್ಲಿ ರೈಸ್, ಚಿಲ್ಲಿ ಪನ್ನೀರ್ ಸೇರಿದಂತೆ ಹಲವಾರು ಆಹಾರ ಪದಾರ್ಥಕ್ಕೆ ಬಳಕೆ ಮಾಡುತ್ತಾರೆ.
ಇದರ ಬಳಕೆಯಿಂದ ಆರೋಗ್ಯಕ್ಕೆ ಹಾನಿಕಾರವಿದೆಯೇ?:
ಸೋಡಿಯಂ ಉಪ್ಪು ಎಂದೇ ಪರಿಗಣಿತವಾಗಿರುವ ಅಜಿನೋಮೋಟೊವನ್ನು ಸೇವನೆ ಮಾಡುವುದರಿಂದ ಸಹಜವಾಗಿ ಆರೋಗ್ಯ ತಂದುಕೊಡುವ ಬದಲು ಅನಾರೋಗ್ಯಕ್ಕೆ ಹೆಚ್ಚು ಕಾರಣವಾಗುತ್ತದೆ. ಹೀಗಾಗಿ ಸುಪ್ರೀಂಕೋರ್ಚ್, ಆಹಾರ ಸುರಕ್ಷತೆ ಮತ್ತು ಗುಣಮಟ್ಟದ ಪ್ರಾಧಿಕಾರ ಕೂಡ ಇದರ ಬಳಕೆಗೆ ಕಡಿವಾಣ ಹೇರಿದೆ. ಅಜಿನೋಮೋಟೊ ಸೇವನೆಯಿಂದ ಕ್ಯಾನ್ಸರ್‌ಗೂ ಕಾರಣವಾಗಬಹುದು. ಅಲ್ಲದೆ, ಅಧಿಕ ರಕ್ತದೊತ್ತಡ, ಮೆದುಳಿನ ಮೇಲೆ ಪರಿಣಾಮ, ನರಗಳ ಶಕ್ತಿಯ ಮೇಲೆ ಪರಿಣಾಮ ಬೀರುತ್ತದೆ. ಮಾತ್ರವಲ್ಲ, ನಿದ್ರಾಹೀನತೆ, ಉಸಿರಾಟದ ತೊಂದರೆಯಂತಹ ಹಲವಾರು ರೋಗಗಳಿಗೆ ಇದು ಕಾರಣವಾಗಬಹುದು. ಹೀಗಾಗಿ ಮೊನೊಸೋಡಿಯಿಂದ ಗ್ಲುಟಮೇಟ ಎಂಬ ಹೆಸರಿನಲ್ಲಿರುವ ಅಜಿನೋಮೋಟೊ ಬಳಕೆಯನ್ನು ಮಾಡುವ ರೆಸ್ಟೋರೆಂಟ್, ಫಾಸ್ಟ್‌ಫುಡ್ ಸೆಂಟರ್‌ಗಳಲ್ಲಿ ಆಹಾರ ಸೇವನೆ ತೀವ್ರ ಅಪಾಯಕಾರಿ ಎಂಬುವುದರಲ್ಲಿ ಎರಡು ಮಾತಿಲ್ಲ.
ಎಣ್ಣೆ ಅಥವಾ ಬೆಣ್ಣೆ: ಹಾರ್ಟ್ ಪೇಷೆಂಟ್ಸ್‌ಗೆ ಯಾವುದು ಉತ್ತಮ?
ಪೋಷಕರೇ ಎಚ್ಚರ....ಮಕ್ಕಳಿಗೆ ಮನೆಯ ಆಹಾರವೇ ಉತ್ತಮ
ವೀಕೆಂಡ್ ಬಂದರೆ ಸಾಕು. ಸಾಮಾನ್ಯವಾಗಿ ಮಕ್ಕಳನ್ನು ಪೋಷಕರು ಹೊರಗಡೆ ಹೋಟೆಲ್, ರೆಸ್ಟೋರೆಂಟ್, ಫಾಸ್ಟ್‌ಫುಡ್ ಕೇಂದ್ರಗಳಿಗೆ ಕರೆದುಕೊಂಡು ಹೋಗುತ್ತಾರೆ. ಬಹುತೇಕ ಕಡೆ ರುಚಿಕಟ್ಟಾದ ಆಹಾರ ತಯಾರಿಕೆಗೆ ಅಜಿನೋಮೋಟೊ ಎಂಬ ಪದಾರ್ಥ ಬಳಸುತ್ತಾರೆ. ಒಂದೇ ಮಾತಿನಲ್ಲಿ ಹೇಳುವುದಾದರೆ ಇದೊಂದು ಬಿಳಿ ವಿಷವಿದ್ದಂತೆ. ಹೀಗಾಗಿ ಮಕ್ಕಳ ಮೇಲೂ ಇದು ಹೆಚ್ಚು ಪರಿಣಾಮ ಬೀರುತ್ತದೆ. ಇದರ ಬದಲಾಗಿ ಮಕ್ಕಳಿಗೆ ಕಾಳುಗಳು, ಪೌಷ್ಟಿಕ ಆಹಾರಗಳು, ಹಣ್ಣು, ಡ್ರೈಫ್ರೂಟ್ಸ್‌ಗಳು ಉತ್ತಮ ಎಂಬುವುದು ಆಹಾರ ತಜ್ಞರ ಅಭಿಪ್ರಾಯ.
ಅಜಿನೋಮೋಟೊನಲ್ಲಿ ಯಾವುದೇ ಪೌಷ್ಟಿಕಾಂಶ ಇರುವುದಿಲ್ಲ. ಕೇವಲ ಆಹಾರ ಪದಾರ್ಥ ರುಚಿಗಾಗಿ ಇದನ್ನು ಅಡುಗೆಗೆ ಬಳಸುತ್ತಾರೆ. ಇದು ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ತಲೆನೋವು, ನರಗಳ ದೌರ್ಬಲ್ಯ, ನಿದ್ರಾಹೀನತೆ, ಚರ್ಮಕಾಯಿಲೆಗಳು, ಅತಿಯಾದ ಬಳಕೆ ಮಾಡಿದರೆ ಕೆಲವೊಮ್ಮೆ ಕ್ಯಾನ್ಸರ್‌ಗೂ ಕಾರಣವಾಗಬಹುದು. ಹೀಗಾಗಿ ಇದನ್ನು ಬಳಕೆ ಮಾಡುವಂತಿಲ್ಲ ಅಂತ ಬೆಳಗಾವಿ ಜಿಲ್ಲಾ ಅಂಕಿತ ಅಧಿಕಾರಿ ಡಾ.ಜಗದೀಶ ಜಿಂಗಿ ತಿಳಿಸಿದ್ದಾರೆ.