ಸಿಹಿ ಗೆಣಸು ಖಿನ್ನತೆಗೂ ದಿವ್ಯೌಷಧ, ಅನಾರೋಗ್ಯಕ್ಕೆ ಬೆಸ್ಟ್ ಮದ್ದು

By Suvarna News  |  First Published Sep 23, 2022, 5:00 PM IST

ಸಿಹಿ ಗೆಣಸು ಪೋಷಕಾಂಶಗಳಿಂದ ತುಂಬಿದ್ದು, ಇದರಲ್ಲಿನ ಪೌಷ್ಟಿಕ ಸತ್ವವು ದೇಹ ಹಾಗು ಚರ್ಮಕ್ಕೆ ಬೇಕಾಗುವ ತೇವಾಂಶವನ್ನು ನೀಡುತ್ತದೆ. ಇದು ಉತ್ತಮ ಆರೋಗ್ಯಕ್ಕೂ ಸಹಕಾರಿಯಾಗಿದ್ದು, ಅದರ ಡೀಟೇಲ್ಸ್ ಇಲ್ಲಿದೆ.


ಸಿಹಿಗೆಣಸು ಸಾಮಾನ್ಯವಾಗಿ ಎಲ್ಲಾ ವಯೋಮಾನದವರು ಇಷ್ಟ ಪಡುವಂತಹ ಪುಷ್ಟಿದಾಯಕ ಆಹಾರ. ಇದರಲ್ಲಿ ದೇಹಕ್ಕೆ ಬೇಕಾದ ಅತ್ಯಧಿಕ ಪ್ರಮಾಣದ ಕಬ್ಬಿಣದ ಅಂಶಗಳು (Iron Content) ಕ್ಯಾಲ್ಸಿಯಂ ದೊರೆಯುತ್ತವೆ. ಹಾಗೆಯೇ ವಿಟಮಿನ್ ಸಿ, ವಿಟಮಿನ್ ಎ ಮತ್ತು ವಿಟಮಿನ್ ಬಿ ಕೂಡ ಸಿಗುತ್ತದೆ. ಸಿಹಿ ಗೆಣಸಿನಲ್ಲಿ ವಿಟಾಮಿನ್, ಮಿನರಲ್ಸ್, ಪ್ರೊಟೀನ್ ಹೆಚ್ಚಿನ ಪ್ರಮಾಣದಲ್ಲಿರುವುದರಿಂದ ಆರೋಗ್ಯಕರವಾಗಿ ತೂಕ ಹೆಚ್ಚುತ್ತದೆ. ಅದಲ್ಲದೆ  ಶೀತ ಮತ್ತು ಸೊಂಕುಗಳನ್ನು ಹರಡುವಿಕೆ ತಡೆಗಟ್ಟುತ್ತದೆ. ಹಾಗೆ ಇದರಲ್ಲಿ ದೇಹಕ್ಕೆ ಬೇಕಾದಂತಹ ಅತ್ಯಗತ್ಯ ಖನಿಜಾಂಶಗಳು ಇದ್ದು, ನಮ್ಮ ದೇಹದ ವಿವಿಧ ಭಾಗಗಳಿಗೆ ಆಮ್ಲಜನಕವನ್ನು ಸಾಗಿಸಿ  ಜೀವಕೋಶದ ಸಾಮರ್ಥ್ಯವನ್ನು  ಹೆಚ್ಚಿಸುತ್ತದೆ.

ಖಿನ್ನತೆಗೆ ರಾಮಬಾಣ...
ಸಿಹಿ ಗೆಣಸಿನಲ್ಲಿ (Sweet Potato) ಮೆಗ್ನೀಶಿಯಂ ಅಂಶವಿದ್ದು, ಇದು ಖಿನ್ನತೆಯ (Depression) ಸೆಲ್ಸ್'ಗಳನ್ನು ನಿಯಂತ್ರಣದಲ್ಲಿಡಲು ಸಹಾಯ ಮಾಡುತ್ತದೆ. ಮೆಗ್ನೇಸಿಯಮ್ ಸೇವನೆಯು ಮೆದುಳನ್ನು (Mind) ರಕ್ಷಿಸುತ್ತದೆ.  ಹಾಗೆ ಸಿಹಿಗೆಣಸಿನಲ್ಲಿ  ಪೊಟ್ಯಾಸಿಯಂ (potassium)ಉನ್ನತ ಮಟ್ಟದಲ್ಲಿರುತ್ತದೆ. ಇದು ಹೃದಯ ಬಡಿತವನ್ನು(Heart beat) ನಿಯಂತ್ರಿಸುವಲ್ಲಿ ಸಹಾಯ ಮಾಡುತ್ತದೆ.

Tap to resize

Latest Videos

ಜೀರ್ಣಕ್ರಿಯೆಗೆ ಸಹಾಯಕಾರಿ...
ಸಿಹಿ ಗೆಣಸಿನಿಂದ ಹೊಟ್ಟೆಗೆ ಸಂಬಂಧಪಟ್ಟ ಅಜೀರ್ಣತೆ, ಮಲಬದ್ಧತೆ (Constipation), ವಾಕರಿಕೆ, ವಾಂತಿ, ಭೇದಿ ಇತ್ಯಾದಿ ಸಮಸ್ಯೆಗಳು ಪರಿಹಾರಗೊಳ್ಳುತ್ತವೆ.  ಹಾಗೆ ಸಿಹಿಗೆಣಸಿನ ಜ್ಯೂಸ್ (Juice) ಸೇವನೆ ಮಾಡುವುದರಿಂದ ನಮ್ಮ ದೇಹದಲ್ಲಿ ಜೀರ್ಣಶಕ್ತಿ ಹೆಚ್ಚಾಗುತ್ತದೆ. ಹಲವು ಜೀರ್ಣಕ್ರಿಯೆಗೆ ಸಂಬಂಧಿಸಿದ ಸಮಸ್ಯೆಗೆ ಸಿಹಿಗೆಣಸಿನ ಜ್ಯೂಸ್ ತುಂಬಾ ಪ್ರಯೋಜನಕಾರಿ.

Sweet Potato for Children : ಚಳಿಗಾಲದಲ್ಲಿ ಮಕ್ಕಳಿಗೆ ಈ ಸೂಪರ್ ಫುಡ್ ನೀಡಿ ಆರೋಗ್ಯ ಹೆಚ್ಚಿಸಿ

ಕಣ್ಣಿನ ಆರೋಗ್ಯ ವೃದ್ಧಿ..
ಸಿಹಿಗೆಣಸಿನಲ್ಲಿ ಹೆಚ್ಚಿನ ಪ್ರಮಾಣದಲ್ಲಿ ವಿಟಮಿನ್ ಎ ಇದ್ದು, ಇದು ಕಣ್ಣುಗಳ ಆರೋಗ್ಯವನ್ನು ಸುಧಾರಿಸಲು ಸಹಾಯ ಮಾಡಿತ್ತದೆ. ವಿಟಮಿನ್ ಎ ಕೊರತೆಯಿಂದಾಗಿ ಕಣ್ಣಿನಲ್ಲಿ ಉಂಟಾಗುವ ತೊಂದರೆಗಳಿಗೆ ಸಿಹಿ ಗೆಣಸು ಶಮನಕಾರಿಯಾಗಿದೆ. ಹಾಗೆಯೇ ಸಾಮಾನ್ಯವಾಗಿ ಉರಿಯೂತವನ್ನು ಕಡಿಮೆ ಮಾಡಲು ಸಹಾಯ ಮಾಡುವ ಆಹಾರವೆಂದು ಸಿಹಿಗೆಣಸನ್ನು ಹೇಳಲಾಗುತ್ತದೆ.  ಸಿಹಿ ಗೆಣಸಿನಲ್ಲಿ ಹೆಚ್ಚಿನ ಸಾಂದ್ರತೆಯಲ್ಲಿ ಕೋಲೀನ್ ಎನ್ನುವ  ಪೋಷಕಾಂಶವಾಗಿದ್ದು,  ಇದು ಕೆಲವು ಜನರಲ್ಲಿ ವ್ಯವಸ್ಥಿತ ಉರಿಯೂತವನ್ನು ಕಡಿಮೆ ಮಾಡಲು ಪರಿಣಾಮಕಾರಿಯಾಗಿದೆ. ಅದಲ್ಲದೆ  ಸೈನಿಡಿನ್ ಎಂದು ಕರೆಯಲ್ಪಡುವ ಉತ್ಕರ್ಷಣ ನಿರೋಧಕ ಜೀರ್ಣಾಂಗ ವ್ಯವಸ್ಥೆಯಲ್ಲಿನ ವಿಷವನ್ನು ತೆಗೆದುಹಾಕಲು  ಇದು ಸಹಾಯ ಮಾಡುತ್ತದೆ.

ಆರೋಗ್ಯಕರ ರಕ್ತದಲ್ಲಿನ ಸಕ್ಕರೆ ಮಟ್ಟ ಬೆಂಬಲಿಸುತ್ತದೆ.
ಸಿಹಿ ಗೆಣಸಿನಲ್ಲಿ ಅಧಿಕ ಪ್ರಮಾಣದ ಕ್ಯಾರೋಟಿನ್, ವಿಟಮಿನ್  ಬಿ6   ಅಂಶ ಇದೆ. ಇದು  ನಮ್ಮ ದೇಹದಲ್ಲಿ ಏರುಪೇರಾಗುವ ಇನ್ಸುಲಿನ್ ಸಮಸ್ಯೆಯನ್ನು ಸರಿಪಡಿಸಿ ಮಧುಮೇಹಕ್ಕೆ ಸಂಬಂಧಪಟ್ಟ ಹೃದಯದ (Heart) ಮತ್ತು ಹೃದಯ ರಕ್ತ ನಾಳದ ಆರೋಗ್ಯ ಸಮಸ್ಯೆಗಳಿಗೆ ಪರಿಹಾರ ನೀಡುತ್ತದೆ. ಇದರಲ್ಲಿ ಸ್ವಾಭಾವಿಕ ಸಕ್ಕರೆ ಅಂಶ ಇರುವುದರಿಂದ ಮಧಮೇಹವನ್ನು (Diabetic) ಕಡಿಮೆ ಮಾಡಿ, ಇನ್ಸುಲಿನ್ (Insulin) ಪ್ರಮಾಣವನ್ನು ಸ್ಥಿರವಾಗಿಡುತ್ತದೆ. ಮತ್ತು ರಕ್ತದಲ್ಲಿ ಸಕ್ಕರೆ ಮಟ್ಟವನ್ನು ಕಾಯ್ದುಕೊಳ್ಳುತ್ತದೆ. ಒಟ್ಟಾರೆಯಾಗಿ ಸಿಹಿ ಗೆಣಸು ಆರೋಗ್ಯಕ್ಕೆ ತುಂಬಾ ಸಹಕಾರಿಯಾಗಿದ್ದು, ದೇಹದ ವಿವಿಧ ಸಮಸ್ಯೆಗಳು ಪರಿಹಾರಗೊಳ್ಳುತ್ತದೆ. 

ಸಿಹಿಗೆಣಸಿನಲ್ಲಿದೆ ದೇಹಕ್ಕೆ ಬೇಕಾಗೋ ಪೌಷ್ಟಿಕಾಂಶ, ಬಳಸ್ತೀರಿ ತಾನೇ?

ಸಿಹಿ ಗೆಣಸಿನ ಹಪ್ಪಳ, ಜೊತೆಗೆ ಸಾಸಿವೆಯಂಥ ಕೆಲವು ಅಡುಗೆ ಮಾಡಿ ಸವಿಯಬಹುದು. ಅಲ್ಲದೇ ಬೇಯಿಸಿ, ತುಸು ಉಪ್ಪು, ಬೆಲ್ಲ ಹಾಕಿಕೊಂಡೂ ತಿನ್ನಲೂ ರುಚಿಯಾಗಿರುತ್ತದೆ. ಬೇಯಿಸಿ ಹಾಲಿನೊಂದಿಗೆ ಸಹ ಇದನ್ನೂ ಸವಿಯುತ್ತಾರೆ. ಜೊತೆಗೆ ಬೆಲ್ಲ ಹಾಗೂ ಏಲಕ್ಕಿ ಹಾಕಿಕೊಂಡರೆ ರುಚಿ ಹೆಚ್ಚಾಗುತ್ತದೆ. ಸಂಕ್ರಾಂತಿಯಲ್ಲಿ ಈ ಗೆಣಸನ್ನು ಕೆಲೆವೆಡೆ ಬೇಯಿಸಿ ತಿನ್ನುವ ಸಂಪ್ರದಾಯವೂ ಇದೆ. ಆರೋಗ್ಯಕ್ಕೆ ಒಳ್ಳೆಯದು ಎಂಬ ಕಾರಣಕ್ಕೆ ನಮ್ಮ ಪೂರ್ವಿಕರು ಈ ಗೆಣಸನ್ನು ತಿನ್ನುವ ಪದ್ಧತಿಯನ್ನು ಆರಂಭಿಸಿದರು ಎನಿಸುತ್ತದೆ. ಒಟ್ಟಿನಲ್ಲಿ ಹೇಗಾದರೂ ನಿಮ್ಮ ದೇಹಕ್ಕೆ ಸಾಕಷ್ಟು ಗೆಣಸು ಹೋಗುವಂತೆ ನೋಡಿಕೊಳ್ಳಿ. 

click me!