ಮಲವಿಸರ್ಜನೆ ಮಾಡುವ ಮೊದಲು ನೀರು ಕುಡಿದರೆ ಏನಾಗುತ್ತದೆ?

Published : May 01, 2025, 11:49 AM ISTUpdated : May 02, 2025, 12:20 PM IST
ಮಲವಿಸರ್ಜನೆ ಮಾಡುವ ಮೊದಲು ನೀರು ಕುಡಿದರೆ ಏನಾಗುತ್ತದೆ?

ಸಾರಾಂಶ

ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ನೀರು ಕುಡಿಯುವುದು ಜೀರ್ಣಕ್ರಿಯೆಗೆ ಒಳ್ಳೆಯದು. ಮಲಬದ್ಧತೆ ನಿವಾರಿಸುತ್ತದೆ, ಕರುಳಿನ ಚಲನೆ ಹೆಚ್ಚಿಸುತ್ತದೆ ಮತ್ತು ಚಯಾಪಚಯ ಕ್ರಿಯೆಯನ್ನು ವೇಗಗೊಳಿಸುತ್ತದೆ. ದೀರ್ಘಕಾಲದ ಮಲಬದ್ಧತೆಗೆ ವೈದ್ಯರನ್ನು ಸಂಪರ್ಕಿಸಿ.

Improve Digestion: ನೀರಿಲ್ಲದೆ ಜೀವನ ಊಹಿಸಿಕೊಳ್ಳಲು ಸಾಧ್ಯವಿಲ್ಲ ಬಿಡಿ. ಬಾಯಾರಿಕೆಯನ್ನು ನೀಗಿಸುವುದರ ಜೊತೆಗೆ ದೇಹದ ಹಲವು ಪ್ರಮುಖ ಕಾರ್ಯಗಳಲ್ಲಿ ನೀರು ಪ್ರಮುಖ ಪಾತ್ರ ವಹಿಸುತ್ತದೆ. ಉತ್ತಮ ಜೀರ್ಣಕ್ರಿಯೆಗೆ ನೀರು ವಿಶೇಷವಾಗಿ ಮುಖ್ಯವಾಗಿದೆ. ಇದು ನಮ್ಮ ಜೀರ್ಣಾಂಗ ವ್ಯವಸ್ಥೆಯನ್ನು ಆರೋಗ್ಯವಾಗಿಡಲು ಸಹಾಯ ಮಾಡುತ್ತದೆ. ಅನೇಕ ಜನರು ಬೆಳಗ್ಗೆ ಎದ್ದ ತಕ್ಷಣ ಒಂದು ಲೋಟ ನೀರು ಕುಡಿದು ನಂತರ ಶೌಚಾಲಯಕ್ಕೆ ಹೋಗುತ್ತಾರೆ. ಆದರೆ ಮಲವಿಸರ್ಜನೆಗೆ ಮುನ್ನ ನೀರು ಕುಡಿಯುವುದರಿಂದ ದೇಹದೊಳಗೆ ಏನಾಗುತ್ತದೆ ಎಂದು ನೀವು ಎಂದಾದರೂ ಯೋಚಿಸಿದ್ದೀರಾ?. ಹೌದು, ಇದು ಜೀರ್ಣಕ್ರಿಯೆಗೆ ಪ್ರಯೋಜನಕಾರಿಯೇ ಅಥವಾ ಹಾನಿಕಾರಕವೇ, ಇದು  ಜೀರ್ಣಕ್ರಿಯೆಯ ಮೇಲೆ ಯಾವ ರೀತಿ ಪರಿಣಾಮ ಬೀರುತ್ತದೆ ಎಂಬುದನ್ನು ನೋಡೋಣ ಬನ್ನಿ...  

ನಮ್ಮ ಜೀರ್ಣಾಂಗ ವ್ಯವಸ್ಥೆಯು ನೀರಿನ ಮೇಲೆ ಅವಲಂಬಿತವಾಗಿದೆ. ಇದು ಆಹಾರವನ್ನು ಒಡೆಯಲು, ಪೋಷಕಾಂಶಗಳನ್ನು ಹೀರಿಕೊಳ್ಳಲು ಮತ್ತು ಮಲವನ್ನು ಮೃದುಗೊಳಿಸಲು ಸಹಾಯ ಮಾಡುತ್ತದೆ. ಮಲವಿಸರ್ಜನೆ ಮಾಡುವ ಮೊದಲು ನೀವು ನೀರು ಕುಡಿದರೆ ಅದು ಹಲವು ವಿಧಗಳಲ್ಲಿ ಪ್ರಯೋಜನಕಾರಿಯಾಗಿದೆ.

ಕೊಬ್ಬರಿ ಎಣ್ಣೆಯ ಈ ಐದು ಉಪಯೋಗಗಳು ಬಹುತೇಕರಿಗೆ ತಿಳಿದಿರಲಿಕ್ಕಿಲ್ಲ

ಮಲಬದ್ಧತೆ ನಿವಾರಣೆ
ದೇಹದಲ್ಲಿ ನೀರಿನ ಕೊರತೆಯಿದ್ದರೆ ಕರುಳುಗಳು ಮಲದಿಂದ ಹೆಚ್ಚಿನ ನೀರನ್ನು ಹೀರಿಕೊಳ್ಳುತ್ತವೆ, ಇದು ಮಲವನ್ನು ಗಟ್ಟಿಯಾಗಿಸುತ್ತದೆ ಮತ್ತು ಮಲವಿಸರ್ಜನೆಯಲ್ಲಿ ತೊಂದರೆ ಉಂಟುಮಾಡುತ್ತದೆ. ಬೆಳಗ್ಗೆ ನೀರು ಕುಡಿಯುವುದರಿಂದ ಕರುಳುಗಳು ಹೈಡ್ರೇಟ್ ಆಗಿರುತ್ತವೆ, ಇದು ಮಲವನ್ನು ಮೃದುವಾಗಿಸುತ್ತದೆ ಮತ್ತು ಸುಲಭವಾಗಿ ಹೊರಹಾಕುತ್ತದೆ. 

ಸಕ್ರಿಯಗೊಳ್ಳುತ್ತದೆ ಕರುಳು  
ವಿಶೇಷವಾಗಿ ಬಿಸಿನೀರು ಕುಡಿಯುವುದರಿಂದ ಕರುಳಿನಲ್ಲಿ ಚಲನೆ ಹೆಚ್ಚಾಗುತ್ತದೆ. ಇದು ಜೀರ್ಣಾಂಗ ವ್ಯವಸ್ಥೆಗೆ ಕೆಲಸ ಮಾಡಲು ಪ್ರಾರಂಭಿಸಬೇಕು ಎಂದು ಸೂಚಿಸುತ್ತದೆ. ಮಲಬದ್ಧತೆ ಅಥವಾ ಅನಿಯಮಿತ ಕರುಳಿನ ಚಲನೆಯಿಂದ ಬಳಲುತ್ತಿರುವವರಿಗೆ ಇದು ವಿಶೇಷವಾಗಿ ಪ್ರಯೋಜನಕಾರಿಯಾಗಿದೆ. 

ದೇಹದಿಂದ ಟಾಕ್ಸಿನ್ ಹೊರಹಾಕಲು 
ರಾತ್ರಿಯಿಡೀ ದೇಹದಲ್ಲಿ ಟಾಕ್ಸಿನ್ ಸಂಗ್ರಹವಾಗುತ್ತವೆ. ಇವುಗಳನ್ನು ಹೊರಹಾಕಲು ನೀರು ಬಹಳ ಮುಖ್ಯ. ಬೆಳಗ್ಗೆ ಎದ್ದ ನಂತರ ನೀರು ಕುಡಿಯುವುದರಿಂದ ದೇಹವು ನಿರ್ವಿಷೀಕರಣಗೊಳ್ಳುತ್ತದೆ, ಇದು ನಿಮಗೆ ಹಗುರ ಮತ್ತು ಉಲ್ಲಾಸಕರ ಭಾವನೆಯನ್ನು ನೀಡುತ್ತದೆ.

ವೇಗವಾಗುತ್ತದೆ ಚಯಾಪಚಯ ಕ್ರಿಯೆ
ನೀರು ಕುಡಿಯುವುದರಿಂದ ದೇಹದ ಚಯಾಪಚಯ ಕ್ರಿಯೆಯ ದರ ಹೆಚ್ಚಾಗುತ್ತದೆ. ಇದು ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ ಮತ್ತು ತೂಕ ಇಳಿಸಿಕೊಳ್ಳಲು ಸಹ ಸಹಾಯ ಮಾಡುತ್ತದೆ.

ಅಜೀರ್ಣ ಮತ್ತು ಗ್ಯಾಸ್ ತಡೆಯಲು
ನೀವು ಆಗಾಗ್ಗೆ ಉಬ್ಬುವಿಕೆ ಅಥವಾ ಗ್ಯಾಸ್ ಸಮಸ್ಯೆಗಳನ್ನು ಹೊಂದಿದ್ದರೆ, ಮಲವಿಸರ್ಜನೆಗೆ ಮೊದಲು ನೀರು ಕುಡಿಯುವುದು ಪ್ರಯೋಜನಕಾರಿಯಾಗಿದೆ. ಇದು ಹೊಟ್ಟೆಯಲ್ಲಿ ಆಸಿಡ್ ಅನ್ನು ನಿಯಂತ್ರಣದಲ್ಲಿಡುತ್ತದೆ ಮತ್ತು ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ.

ಈಗಿನ ಮಧ್ಯವಯಸ್ಕರು ಮುಂಚಿನಂತೆ ಖುಷಿಯಾಗಿರೋಲ್ಲ ಏಕೆ?

ಮಲವಿಸರ್ಜನೆಗೆ ಮುನ್ನ ನೀರು ಕುಡಿಯಲು ಸರಿಯಾದ ಮಾರ್ಗ

ಉಗುರು ಬೆಚ್ಚಗಿನ ನೀರು ಕುಡಿಯಿರಿ: ಉಗುರು ಬೆಚ್ಚಗಿನ ಅಥವಾ ಸ್ವಲ್ಪ ಬೆಚ್ಚಗಿನ ನೀರು ಕರುಳನ್ನು ಉತ್ತಮವಾಗಿ ಸಕ್ರಿಯಗೊಳಿಸುತ್ತದೆ ಮತ್ತು ಜೀರ್ಣಕ್ರಿಯೆಗೆ ಸಹಾಯ ಮಾಡುತ್ತದೆ.

ನಿಂಬೆ ಅಥವಾ ಜೇನುತುಪ್ಪ ಸೇರಿಸಿ: ಒಂದು ಲೋಟ ಉಗುರು ಬೆಚ್ಚಗಿನ ನೀರಿಗೆ ನಿಂಬೆ ಅಥವಾ ಜೇನುತುಪ್ಪ ಸೇರಿಸಿ ಕುಡಿದರೆ ನಿರ್ವಿಶೀಕರಣ ವೇಗಗೊಳ್ಳುತ್ತದೆ.

ಹೆಚ್ಚು ನೀರು ಕುಡಿಯಬೇಡಿ: ಅಗತ್ಯಕ್ಕಿಂತ ಹೆಚ್ಚು ನೀರು ಕುಡಿಯುವುದರಿಂದ ಹೊಟ್ಟೆಯಲ್ಲಿ ಭಾರ ಉಂಟಾಗುತ್ತದೆ. ಒಂದು ಅಥವಾ ಎರಡು ಲೋಟ ನೀರು ಸಾಕು.

ನಿಯಮಿತವಾಗಿ ನೀರು ಕುಡಿಯಿರಿ: ದೈನಂದಿನ ಅಭ್ಯಾಸವನ್ನು ಮಾಡಿಕೊಂಡರೆ ಅದು ನಿಮ್ಮ ಜೀರ್ಣಕ್ರಿಯೆಯ ಪ್ರಕ್ರಿಯೆಯನ್ನು ನಿಯಂತ್ರಿಸುತ್ತದೆ.

ಯಾವುದೇ ಅನಾನುಕೂಲಗಳಿವೆಯೇ?
ಮಲವಿಸರ್ಜನೆಗೆ ಮುನ್ನ ನೀರು ಕುಡಿಯುವುದು ಹೆಚ್ಚಿನ ಜನರಿಗೆ ಪ್ರಯೋಜನಕಾರಿಯಾದರೂ , ಕೆಲವರು ಸ್ವಲ್ಪ ಸ್ವಲ್ಪ ಪ್ರಮಾಣದಲ್ಲಿ ಅಸ್ವಸ್ಥತೆಯನ್ನು ಅನುಭವಿಸಬಹುದು. 

ಪದೇ ಪದೇ ಮೂತ್ರ ವಿಸರ್ಜನೆ : ನೀರು ಕುಡಿಯುವುದರಿಂದ ದೇಹವು ವೇಗವಾಗಿ ಶುದ್ಧವಾಗುತ್ತದೆ. ಆದರೆ ಇದು ನಿಮ್ಮನ್ನು ಪದೇ ಪದೇ ಮೂತ್ರ ವಿಸರ್ಜಿಸುವಂತೆ ಮಾಡುತ್ತದೆ.

ಹೊಟ್ಟೆ ಉಬ್ಬರ: ನೀವು ಹೆಚ್ಚು ಅಥವಾ ಬೇಗನೆ ಕುಡಿದರೆ ನಿಮ್ಮ ಹೊಟ್ಟೆ ಉಬ್ಬಿಕೊಳ್ಳಬಹುದು. ವಿಶೇಷವಾಗಿ ಇರಿಟೇಬಲ್ ಬವೆಲ್ ಸಿಂಡ್ರೋಮ್ (ಐಬಿಎಸ್) ನಂತಹ ಸಮಸ್ಯೆಗಳಿರುವ ಜನರು ನೀರನ್ನು ನಿಧಾನವಾಗಿ ಕುಡಿಯಬೇಕು.

ಕೇವಲ ನೀರಿನಿಂದ ಗುಣವಾಗುವುದಿಲ್ಲ ಮಲಬದ್ಧತೆ: ನೀವು ದೀರ್ಘಕಾಲದವರೆಗೆ ಮಲಬದ್ಧತೆಯಿಂದ ಬಳಲುತ್ತಿದ್ದರೆ ಕೇವಲ ನೀರು ಕುಡಿಯುವುದು ಸಾಕಾಗುವುದಿಲ್ಲ. ನಿಮ್ಮ ಆಹಾರದಲ್ಲಿ ಫೈಬರ್ ಮತ್ತು ವ್ಯಾಯಾಮವನ್ನು ಸಹ ಸೇರಿಸಿಕೊಳ್ಳಬೇಕು. 

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಕೊಲೊನ್ ಕ್ಯಾನ್ಸರ್.. 30 ವರ್ಷದ ನಂತ್ರ ಈ ಲಕ್ಷಣ ಕಾಣಿಸಿಕೊಂಡರೆ ನಿರ್ಲಕ್ಷಿಸಬೇಡಿ
ನೆಗಡಿ, ಕೆಮ್ಮು ಇದ್ದಾಗ ಮಕ್ಕಳಿಗೆ ಬಾಳೆಹಣ್ಣು, ಮೊಸರು ಕೊಡಬಹುದಾ? ಕೊಟ್ಟರೆ ಏನಾಗುತ್ತೆ?