Beauty Tips: ಇದ್ದಿಲಿನ ಮಾಸ್ಕ್ನಲ್ಲಿ ಅಡಗಿದೆ ತ್ವಚೆಯ ಸೌಂದರ್ಯ

By Suvarna NewsFirst Published Oct 28, 2022, 5:47 PM IST
Highlights

ಮುಖದ ಸೌಂದರ್ಯ ಹೆಚ್ಚಿಸಬೇಕು, ಮೊಡವೆಗಳು ನಿವಾರಣೆಯಾಗಬೇಕು, ಕಲೆಗಳು ದೂರಾಗಬೇಕು ಮುಂತಾದ ಕಾರಣಗಳಿಂದ ಮುಖಕ್ಕೆ(Face) ನಾನಾ ರೀತಿಯ ಫೇಸ್ ಮಾಸ್ಕ್(Face Mask) ಅನ್ನು ಹಚ್ಚುತ್ತಿದ್ದರೆ ನೈಸರ್ಗಿಕವಾದ ಚಾರ್ಕೋಲ್(Charcoal) ಬಳಸಿ ನೋಡಿ. ಈ ಇದ್ದಿಲಿನ ಫೇಸ್ ಮಾಸ್ಕ್ನಿಂದ ಹಲವು ಪ್ರಯೋಜನಗಳಿವೆ. ಈ ಬಗ್ಗೆ ಇಲ್ಲಿದೆ ಮಾಹಿತಿ.

ಇತ್ತೀಚೆಗೆ ಚಾರ್ಕೋಲ್(Charcoal) ಅಂದರೆ ಇದ್ದಲಿನ ಬಳಕೆ ಹೆಚ್ಚುತ್ತಿದೆ. ಶ್ಯಾಂಪೂವಿನಿAದ(Shampoo) ಹಿಡಿದು ಸ್ಕçಬ್‌ನ(Scrub) ವರೆಗೂ ಇದ್ದಲಿನ ಬಳಕೆ ಕಾಣಬಹುದು. ಮುಖದ ಮೇಲೆ ಇದ್ದಲನ್ನು ಫೇಸ್ ಮಾಸ್ಕ್, ಸಿಪ್ಪೆ ತೆಗೆಯುವ ಮಾಸ್ಕ್, ಫೇಸ್ ವಾಶ್(Face Wash), ಮುಂತಾದ ವಿಧಾನಗಳಲ್ಲಿ ಬಳಸಬಹುದು. ಮುಖಕ್ಕೆ ಇದ್ದಿಲು ಬಳಸುವುದಕ್ಕೆ ದೊಡ್ಡ ಕಾರಣವೆಂದರೆ ಅದು ಚರ್ಮದಲ್ಲಿನ ವಿಷವನ್ನು ತೆಗೆದುಹಾಕುತ್ತದೆ ಮತ್ತು ಚರ್ಮವನ್ನು ನಯವಾಗಿಸುತ್ತದೆ. 

ಮುಖಕ್ಕೆ ಇದ್ದಿಲನ್ನು ಬಳಸುವುದರಿಂದ ಚರ್ಮದ ಮೇಲಾಗುವ ಪ್ರಯೋಜನಗಳು
1. ಮಾಲಿನ್ಯ ತಡೆಯುತ್ತದೆ

ನಗರ ಪ್ರದೇಶದಲ್ಲಿ ವಾಸಿಸುತ್ತಿದ್ದರೆ, ಹೊರಗೆ ಧೂಳಿನಲ್ಲಿ(Dust) ಹೆಚ್ಚು ತೆರೆದುಕೊಳ್ಳುತ್ತೀರಿ ಎಂದರೆ ಮಾಲಿನ್ಯದಿಂದ ಮುಖದಲ್ಲಿ ವಿಷವು ಸಂಗ್ರಹವಾಗುತ್ತದೆ. ದಿನವೂ ಇದ್ದಿಲಿನ ಮಾಸ್ಕ್ ಅನ್ನು ಮುಖಕ್ಕೆ ಹಚ್ಚುವುದರಿಂದ ಚರ್ಮದಲ್ಲಿನ ವಿಷವನ್ನು ಹೀರಿಕೊಳ್ಳುತ್ತದೆ ಮತ್ತು ಮುಖವನ್ನು ಸಂಪೂರ್ಣವಾಗಿ ಸ್ವಚ್ಛಗೊಳಿಸುತ್ತದೆ. ಇದು ಜೀವಾಣುಗಳಿಗೆ ಅಯಸ್ಕಾಂತದAತೆ(Magnet) ಕಾರ್ಯನಿರ್ವಹಿಸುತ್ತದೆ. ಆದ್ದರಿಂದ ರಾತ್ರಿ ಮಲಗುವ ಮುನ್ನ ಇದ್ದಿಲಿನಿಂದ ಮುಖ ತೊಳೆದು ಮಲಗಿ. ಇದು ತ್ವಚೆಯನ್ನು ಸದಾ ಯೌವನ ಮತ್ತು ತಾಜಾತನದಿಂದ(Fresh) ಇಡುತ್ತದೆ.

ನಯನತಾರಾ ತ್ವಚೆ ಮತ್ತು ಕೂದಲ ಆರೈಕೆಗೆ ಈ ಎಣ್ಣೆಯೇ ಬಳಸುವುದಂತೆ!

2. ಬ್ಲ್ಯಾಕ್‌ಹೆಡ್‌ಗಳನ್ನು ತೆಗೆದುಹಾಕುತ್ತದೆ(Blackheads)
ಬ್ಲ್ಯಾಕ್‌ಹೆಡ್‌ಗಳಿಂದ ತೊಂದರೆ ಅನುಭವಿಸುತ್ತಿದ್ದರೆ ಇದ್ದಿಲನ್ನು ಹೆಚ್ಚಿ. ಇದ್ದಿಲಿನ ಪುಡಿಯಿಂದ ಪೇಸ್ಟ್ ತಯಾರಿಸಿ ಹಚ್ಚುವುದರಿಂದ ಬ್ಲ್ಯಾಕ್‌ಹೆಡ್ ತೆಗೆಯುತ್ತದೆ. ಮುಖದ ಆಳವಾದ ಕಪ್ಪು ಕಲೆಗಳನ್ನು ಸಹ ನಿವಾರಿಸುತ್ತದೆ.

3. ಫೇಸ್ ಕ್ಲೆನ್ಸಿಂಗ್
ಮುಖವನ್ನು ಸರಿಯಾಗಿ ಸ್ವಚ್ಛಗೊಳಿಸಲು ಪ್ರತಿ ವಾರ ಇದ್ದಿಲಿನ ಫೇಸ್ ಮಾಸ್ಕ್ ಅನ್ನು ಸಕ್ರಿಯವಾಗಿ ಬಳಸಿ. ಎಣ್ಣೆ ತ್ವಚೆಯ(Oily Face) ಸಮಸ್ಯೆ ಇರುವವರು ಈ ಮಾಸ್ಕ್ ಅನ್ನು ವಾರಕ್ಕೆ ಎರಡು ಬಾರಿ ಬಳಸಿ. ಮತ್ತೊಂದೆಡೆ, ಒಣ ತ್ವಚೆಯಿರುವ(Dry Skin) ಜನರು ಈ ಫೇಸ್ ಪ್ಯಾಕ್ ಬಳಸಿದ ನಂತರ ಉತ್ತಮ ಮಾಯಿಶ್ಚರೈಸರ್(Moisturise) ಅನ್ನು ಅನ್ವಯಿಸಿ.

4. ಮೊಡವೆಗಳನ್ನು ತೆಗೆದುಹಾಕುತ್ತದೆ (Acne) 
ಇದ್ದಿಲಿನಲ್ಲಿರುವ ನಿರ್ವಿಶೀಕರಣ ಮತ್ತು ಅತ್ಯುತ್ತಮವಾದ ಶುದ್ಧೀಕರಣ ಗುಣಲಕ್ಷಣಗಳಿಂದಾಗಿ, ಪ್ರತೀ ದಿನ ಇದ್ದಿಲಿನ ಮಾಸ್ಕ್ ಹಚ್ಚುವುದರಿಂದ ಮುಖದಲ್ಲಿನ ಮೊಡವೆಗಳನ್ನು ತೆಗೆದುಹಾಕುತ್ತದೆ. ತ್ವಚೆಯನ್ನು ಸ್ವಚ್ಛಗೊಳಿಸುವುದರ ಜೊತೆಗೆ ರಂಧ್ರಗಳನ್ನೂ(Pores) ಸ್ವಚ್ಛಗೊಳಿಸಿ ದಿನವಿಡೀ ತ್ವಚೆಯ ಹೊಳಪನ್ನು ಕಾಪಾಡುತ್ತದೆ. ಜೊತೆಗೆ ವಿಷಕಾರಿ ಕಣಗಳು ಮತ್ತು ಹೆಚ್ಚುವರಿ ಎಣ್ಣೆಯನ್ನು ಮುಖದಿಂದ ತೆಗೆದುಹಾಕುತ್ತದೆ. ಈ ಸಮಯದಲ್ಲಿ ಇದ್ದಿಲಿನ ಪೇಸ್ಟ್ ಅನ್ನು ನೇರವಾಗಿ ಮೊಡವೆಗಳ ಮೇಲೆ ಬಳಸಬಹುದು. ಹೀಗೆ ಮಾಡುವುದರಿಂದ ಮೊಡವೆಗಳು ಸರಿಯಾಗುತ್ತವೆ.

5. ರಂಧ್ರಗಳನ್ನು ಕಡಿಮೆ ಮಾಡುತ್ತದೆ(Pores)
ಕೆಲವೊಮ್ಮೆ ಮುಖದ ರಂಧ್ರಗಳು ತುಂಬಾ ತೆರೆದುಕೊಳ್ಳುತ್ತವೆ. ಹೀಗೆ ತೆರೆದುಕೊಂಡಾಗ ಮುಖವು ಚೆನ್ನಾಗಿ ಕಾಣುವುದಿಲ್ಲ. ಈ ಸಮಯದಲ್ಲಿ ಇದ್ದಿಲಿನ ಮಾಸ್ಕ್ ಅನ್ನು ಮುಖಕ್ಕೆ ಹಚ್ಚುವುದರಿಂದ ತೆರೆದ ಮುಖದ ರಂಧ್ರಗಳನ್ನು ಮರು ಬಂಧಿಸಲು ಸಹಾಯ ಮಾಡುತ್ತದೆ. ಜೊತೆಗೆ ಒಳಗಿನಿಂದ ಸ್ವಚ್ಛಗೊಳಿಸುವ ಮೂಲಕ ತೆರೆದ ರಂಧ್ರಗಳನ್ನು ಕಡಿಮೆ ಮಾಡುತ್ತದೆ.

6. ಕೀಟಗಳ ಕಡಿತ ನಿವಾರಣೆ(Insect bites)
ಕೀಟಗಳ ಕಡಿತ ಮತ್ತು ಕುಟುಕುವಿಕೆಯಿಂದ ಚರ್ಮವನ್ನು ತುರಿಕೆ ಮತ್ತು ಊತಕ್ಕೆ ಕಾರಣವಾಗಬಹುದು. ಈ ಕಡಿತ, ತುರಿಕೆಯ ಜಾಗದಲ್ಲಿ ಇದ್ದಿಲಿನ ಪೇಸ್ಟ್ ಹಚ್ಚುವುದರಿಂದ ಕೀಟಗಳ ವಿಷದಲ್ಲಿನ ವಿಷವನ್ನು ತಟಸ್ಥಗೊಳಿಸುತ್ತದೆ. ಜೊತೆಗೆ ಕಡಿತದಿಂದ ಕುಟುಕನ್ನು ತೆಗೆದುಹಾಕಲು ಸಹಾಯ ಮಾಡುತ್ತದೆ.

ಸೆಲಬ್ರಿಟಿ ಪ್ರಿಯಾಂಕ ಚೋಪ್ರಾ ತ್ವಚೆಗೆ ಬಳಸೋದು ಅಜ್ಜಿಕಾಲದ ಸಿಂಪಲ್ ಟಿಪ್ಸ್‌

ಇದ್ದಿಲಿನ ಮಾಸ್ಕ್ ಹೀಗೆ ಹಚ್ಚಿ
1. ಇದ್ದಿಲಿನ ಮಾಸ್ಕ್ ಅನ್ನು ಹಚ್ಚುವ ಮೊದಲು ಚರ್ಮ ಅಥವಾ ಮುಖವನ್ನು ಚೆನ್ನಾಗಿ ತೊಳೆಯಿರಿ. ಏಕೆಂದರೆ ಮಾಸ್ಕ್ ಹಚ್ಚಿದಾಗ ರಂಧ್ರಗಳನ್ನು ಭೇದಿಸಲು ಸಹಾಯ ಮಾಡುತ್ತದೆ. 
2. ಹಣೆ, ಕೆನ್ನೆ, ಮೂಗು ಮತ್ತು ಗಲ್ಲವನ್ನು ಒಳಗೊಂಡAತೆ ಮುಖದ ಮೇಲೆ ಮಾಸ್ಕ್ ಅನ್ನು ಸಮವಾಗಿ ಅನ್ವಯಿಸಿ. ಬೆರಳ ತುದಿಯಿಂದ ಚರ್ಮಕ್ಕೆ ನಿಧಾನವಾಗಿ ಮಸಾಜ್ ಮಾಡಿ. ಹಾಗೂ ಕಣ್ಣಿಗೆ ಬೀಳದಂತೆ ಎಚ್ಚರ ವಹಿಸಿ.
3. ಮಾಸ್ಕ್ ಹಚ್ಚಿದ ನಂತರ ಚರ್ಮದ ಮೇಲೆ ೧೫ ನಿಮಿಷಗಳ ಕಾಲ ಒಣಗಲು ಬಿಡಿ, ನಂತರ ಬೆಚ್ಚಗಿನ ನೀರಿನಿಂದ ತೊಳೆಯಿರಿ.
4. ಮುಖವನ್ನು ನಿಧಾನವಾಗಿ ಒಣಗಿಸಿ, ನಂತರ ಮುಖಕ್ಕೆ ಮಾಯಿಶ್ಚರೈಸರ್ ಅನ್ನು ಹಚ್ಚಿ.

click me!