ಮೆದುಳು ನಿಷ್ಕ್ರಿಯಗೊಂಡು ಸಾವನ್ನಪ್ಪಿದ ವ್ಯಕ್ತಿಯ ಜೀವಂತ ಹೃದಯವನ್ನು ತೆಗೆದ ಬೆಂಗಳೂರು ವೈದ್ಯರು ತಮಿಳುನಾಡು ಆಸ್ಪತ್ರೆಗೆ ರವಾನಿಸಿದ್ದಾರೆ.
ಬೆಂಗಳೂರು (ಸೆ.12): ಕರ್ನಾಟಕ ಹೈಕೋರ್ಟ್‌ನಲ್ಲಿ ಕೆಲಸ ಮಾಡುತ್ತಿದ್ದ ಇಂಜಿನಿಯರ್ ಮೆದುಳು ಸಂಬಂಧಿ ಖಾಯಿಲೆಯಿಂದ ಆಸ್ಪತ್ರೆಗೆ ದಾಖಲಾಗಿದ್ದು, ಈ ವೇಳೆ ಮೆದುಳು ನಿಷ್ಕ್ರಿಯಗೊಂಡು ಸಾವನ್ನಪ್ಪಿದ್ದಾರೆ. ಅವರ ಜೀವಂತ ಹೃದಯವನ್ನು ತೆಗೆದ ಬೆಂಗಳೂರು ವೈದ್ಯರು ಅದನ್ನು ತಮಿಳುನಾಡಿದ ಎಂಜಿಎಂ ಆಸ್ಪತ್ರೆಗೆ ರವಾನೆ ಮಾಡಿದ್ದಾರೆ.
ಆರೋಗ್ಯ ಕ್ಷೇತ್ರದಲ್ಲಿ ಏನೆಲ್ಲಾ ಪವಾಡಗಳು ನಡೆಯುತ್ತವೆ ಎಂಬುದನ್ನು ನೋಡಿದರೆ ನಮಗೆ ನಿಜಕ್ಕೂ ದಿಗ್ಭ್ರಾಂತಿ ಆಗುತ್ತದೆ. ಈಗಾಗಲೇ ಹಲವು ಬಾರಿ ಮೆದುಳು, ಹೃದಯ ಹಾಗೂ ಇತರೆ ದೇಹದ ಅಂಗಾಂಗಗಳನ್ನು ರವಾನೆ ಮಾಡಿದ ಘಟನೆಗಳು ನಡೆದಿವೆ. ಈಗಲೂ ಕೂಡ ಮೆದುಳು ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದ ವ್ಯಕ್ತಿ ಸಾವಿನ ಬಳಿಕ ಆತನ ಹೃದಯ, ಕಿಡ್ನಿ, ಲಿವರ್ ಹಾಗೂ ಎರಡೂ ಕಣ್ಣುಗಳನ್ನು ಅವರ ಕುಟುಂಬ ಸದಸ್ಯರು ದಾನ ಮಾಡಿದ್ದಾರೆ. ನಂತರ, ಮೃತ ವ್ಯಕ್ತಿ ದೇಹದಲ್ಲಿ ಜೀವಂತವಾಗಿದ್ದ ಹೃದಯವನ್ನು ತೆಗೆದ ಬೆಂಗಳೂರು ವೈದ್ಯರು, ಅದನ್ನು ನೇರವಾಗಿ ತಮಿಳುನಾಡಿನ ಆಸ್ಪತ್ರೆಗೆ ರವಾನಿಸಿದ್ದಾರೆ.
undefined
ಜೆಡಿಎಸ್-ಬಿಜೆಪಿ ಮೈತ್ರಿ ಬೆನ್ನಲ್ಲೇ ದೊಡ್ಡಗೌಡರ ಮುಂದೆ ಮಂಡಿಯೂರಿ ನಮಸ್ಕರಿಸಿದ ಸಂಸದ ಪ್ರತಾಪ್ ಸಿಂಹ
ಬೆಂಗಳೂರಿನಿಂದ ತಮಿಳುನಾಡಿಗೆ ಜೀವಂತ ಹೃದಯ ರವಾನೆ ಮಾಡಿರುವ ವೈದ್ಯ ಲೋಕದಲ್ಲಿ ಮತ್ತೊಂದು ಜೀವವನ್ನು ಉಳಿಸಲಾಗಿದೆ. ಇನ್ನು ಈ ಘಟನೆಯಲ್ಲಿ ವ್ಯಕ್ತಿಯ ಸಾವಿನ ಬಳಿಕವು ಆತನ ಕುಟುಂಬ ಸದಸ್ಯರು ಮಾನವೀಯತೆ ಮೆರೆದಿದ್ದಾರೆ. ಬೆಂಗಳೂರಿನ ಖಾಸಗಿ ಆಸ್ಪತ್ರೆ ಟ್ರಸ್ಟ್ ವೆಲ್ ನಿಂದ ತಮಿಳುನಾಡಿನ ಚೆನ್ನೈ ಆಸ್ಪತ್ರೆಗೆ ಆಂಬ್ಯುಲೆನ್ಸ್ ಮೂಲಕ ಜೀವಂತ ಹೃದಯ ರವಾನೆ ಮಾಡಲಾಗಿದೆ. 54 ವರ್ಷದ ವಿಷ್ಣು ತೀರ್ಥ ವಡಾಯಿ ಮೃತ ದುರ್ದೈವಿಯ ಹೃದಯ ರವಾನೆ ಮಾಡಲಾಗಿದೆ. ಈ ಮೂಲಕ ತಮಿಳುನಾಡಿನಲ್ಲಿ ವ್ಯಕ್ತಿಯೊಬ್ಬರ ಜೀವವನ್ನು ಉಳಿಸಲಾಗಿದೆ.
ಓದಿದ್ದು ಬಿಟೆಕ್ ಮಾಡ್ತಿದ್ದ ಕೆಲಸ ಮಾತ್ರ ಸೈಬರ್ ಹ್ಯಾಕ್: ಗಿಪ್ಟ್ ವೋಚರ್‌ಗೆ ಕನ್ನ ಹಾಕುವುದೇ ಕಾಯಕ
2001ರಲ್ಲಿ ಕರ್ನಾಟಕ ಹೈ ಕೋರ್ಟ್‌ನ ಮೊದಲ ಹೈಟಿ ಇಂಜಿನಿಯರ್ ಆಗಿ ನೇಮಕವಾಗಿದ್ದ ವಿಷ್ಣುತೀರ್ಥ ಎನ್ನುವವರು ಕಳೆದ ಸೆಪ್ಟೆಂಬರ್ 7ರಂದು ಮೆದುಳು ಸಂಬಂಧಿ ಖಾಯಿಲೆಯಿಂದ ಆಸ್ಪತ್ರೆಗೆ ದಾಖಲಾಗಿದ್ದರು. ಆದರೆ, ಈ ನಿನ್ನೆ ರಾತ್ರಿ ವೇಳೆ ಮೆದುಳು ನಿಷ್ಕ್ರಿಯಗೊಂಡು ಸಾವನ್ನಪ್ಪಿದ್ದಾರೆ. ಬಳಿಕ ಅಂಗಾಂಗ ದಾನಕ್ಕೆ ಮುಂದಾದ ಕುಟುಂಬವು ಎರಡು ಕಣ್ಣು, ಎರಡು ಕಿಡ್ನಿ, ಒಂದು ಹೃದಯ, ಒಂದು ಲಿವರ್ ದಾನ ಮಾಡಿದ್ದಾರೆ. ಈ ವೇಳೆ ಜೀವಂತ ಹೃದಯ ಸೇರಿದಂತೆ ಎಲ್ಲ ಅಂಗಾಂಗಳನ್ನು ಚೆನ್ನೈ ನ ಎಂಜಿಎಂ ಆಸ್ಪತ್ರೆಗೆ ಆಂಬುಲೆನ್ಸ್ ಮೂಲಕ ಬೆಳಗ್ಗೆ ರವಾನೆ ಮಾಡಲಾಗಿದೆ.