ಆಕ್ಸಿಡೆಂಟ್ ಆಗಿ ಆಪರೇಷನ್ ಆದರೂ ಕುಗ್ಗದೆ, ಆಂಬ್ಯುಲೆನ್ಸ್‌ನಲ್ಲಿ ಮಲಗಿಕೊಂಡೇ ಎಕ್ಸಾಂ ಬರೆದ ವಿದ್ಯಾರ್ಥಿನಿ

By Vinutha Perla  |  First Published Mar 21, 2023, 2:21 PM IST

ಎಕ್ಸಾಂ ಅನ್ನೋದು ಜೀವನದ ಪ್ರಮುಖ ಘಟ್ಟ. ಇದು ಮುಂದಿನ ಭವಿಷ್ಯವನ್ನು ನಿರ್ಧರಿಸುತ್ತದೆ. ಹೀಗಾಗಿಯೇ ಯಾರೂ ಪರೀಕ್ಷೆಯನ್ನು ತಪ್ಪಿಸಿಕೊಳ್ಳಲು ಸಿದ್ಧರಿರುವುದಿಲ್ಲ. ಆರೋಗ್ಯ ಸರಿಯಿಲ್ಲದಿದ್ದರೂ, ಮದುವೆಯ ದಿನವಾದರೂ ಹೇಗಾದರೂ ಎಕ್ಸಾಂ ಅಟೆಂಡ್ ಮಾಡುತ್ತಾರೆ. ಹಾಗೆಯೇ ಇಲ್ಲೊಬ್ಬ ವಿದ್ಯಾರ್ಥಿನಿ ಸರ್ಜರಿ ಆದರೂ ಆಂಬ್ಯುಲೆನ್ಸ್‌ನಲ್ಲೇ ಬೋರ್ಡ್‌ ಎಕ್ಸಾಂ ಬರೆದಿದ್ದಾಳೆ. 


ಮುಂಬೈ: ವಿದ್ಯಾರ್ಥಿನಿಯೊಬ್ಬಳು ಆಂಬ್ಯುಲೆನ್ಸ್‌ನಲ್ಲಿ ಮಲಗಿಕೊಂಡು ಪರೀಕ್ಷೆ ಬರೆದಿರುವ ಘಟನೆ ಮುಂಬಯಿಯ ಬಾಂದ್ರಾದಲ್ಲಿ ನಡೆದಿದೆ. ಬಾಂದ್ರಾದ ಹುಡುಗಿಯೊಬ್ಬಳು ತನ್ನ 10 ನೇ ತರಗತಿಯ ಬೋರ್ಡ್ ಪರೀಕ್ಷೆಯ ಪತ್ರಿಕೆಯನ್ನು ಆಂಬ್ಯುಲೆನ್ಸ್‌ನಲ್ಲಿ ಬರೆದಿದ್ದಾಳೆ. ಶುಕ್ರವಾರ ವಿಜ್ಞಾನ 1 ಮುಗಿಸಿ ಅಂಜುಮನ್-ಐ-ಇಸ್ಲಾಂ ಶಾಲೆಯ ವಿದ್ಯಾರ್ಥಿನಿ ಮುಬಾಶಿರಾ ಸಾದಿಕ್ ಸಯ್ಯದ್ ರಸ್ತೆ ದಾಟುತ್ತಿದ್ದಾಗ ಹಿಲ್ ರೋಡ್‌ನ ಸೇಂಟ್ ಜೋಸೆಫ್ ಕಾನ್ವೆಂಟ್ ಬಳಿ ಮಧ್ಯಾಹ್ನ 1.30 ರ ಸುಮಾರಿಗೆ ಕಾರು ಅವರಿಗೆ ಡಿಕ್ಕಿ ಹೊಡೆದಿದೆ. ಆಕೆಯ ಎಡ ಪಾದಕ್ಕೆ ಗಂಭೀರವಾದ ಗಾಯಗಳಾಗಿದ್ದು, ಅದೇ ದಿನ ಆಕೆಗೆ ಶಸ್ತ್ರಚಿಕಿತ್ಸೆ (Operation) ಮಾಡಬೇಕಾಯಿತು. ಆದರೆ ಆಪರೇಷನ್ ಥಿಯೇಟರ್‌ಗೆ ಪ್ರವೇಶಿಸುವ ಮೊದಲು ಮುಬಾಶಿರಾ, ತನ್ನ ಶಾಲಾ ಶಿಕ್ಷಕರಿಗೆ ಪರೀಕ್ಷೆಗೆ ಹಾಜರಾಗಲು ಬಯಸುವುದಾಗಿ ಹೇಳಿದಳು.

ಶಾಲೆಯ ಬಳಿ ಅಪಘಾತವಾಗಿ ಗಾಯಗೊಂಡಿದ್ದ ವಿದ್ಯಾರ್ಥಿನಿ
'ಅಪಘಾತ ಆಕೆಯ ಪರೀಕ್ಷಾ ಕೇಂದ್ರವಾದ ಸೇಂಟ್ ಸ್ಟಾನಿಸ್ಲಾಸ್ ಹೈಸ್ಕೂಲ್ ಬಳಿ ಸಂಭವಿಸಿದೆ. ನಾವು ಶಾಲೆಯ ಪ್ರಾಂಶುಪಾಲರನ್ನು ಸಂಪರ್ಕಿಸಿದ್ದೇವೆ ಮತ್ತು ಅವರು ಅವಳನ್ನು ಹತ್ತಿರದ ಆಸ್ಪತ್ರೆಗೆ (Hospital) ಕರೆದೊಯ್ದರು' ಎಂದು ಪರೀಕ್ಷಾ ಕೇಂದ್ರದ ಪಾಲಕ ಸಂದೀಪ್ ಕರ್ಮಾಲೆ ಹೇಳಿದರು.  ಪ್ರಾಂಶುಪಾಲರಾದ ಸಾಬಾ ಪಟೇಲ್ ಅವರು ಆಸ್ಪತ್ರೆಯಲ್ಲಿ ಮುಬಾಶಿರಾ ಮತ್ತು ಅವರ ಕುಟುಂಬ ಸದಸ್ಯರೊಂದಿಗೆ ಮಾತುಕತೆ ನಡೆಸಿದರು. ಮುಬಾಶಿರಾ ಬ್ರೈಟ್ ಸ್ಟೂಡೆಂಟ್ ಆಗಿರುವ ಕಾರಣ ಆಕೆ ಎಲ್ಲಾ ಎಕ್ಸಾಂ ಅಟೆಂಡ್ ಆಗಬೇಕೆಂದು ಎಲ್ಲಾ ಶಿಕ್ಷಕರು (Teachers) ಆಶಿಸಿದರು. ಆ ನಂತರ ಹೇಗೆ ಎಕ್ಸಾಂ ಬರೆಯಬಹುದು ಎಂಬ ಬಗ್ಗೆ ಕ್ರಮ ತೆಗೆದುಕೊಳ್ಳಲಾಯಿತು.

Latest Videos

undefined

ದೃಷ್ಟಿ ವಿಕಲಚೇತನರಿಗೆ ಪರೀಕ್ಷೆ ಬರೆದು ಬದುಕು ರೂಪಿಸಿ ರಾಷ್ಟ್ರಪತಿ ಪುರಸ್ಕಾರ ಪಡೆದ ಬೆಂಗಳೂರಿನ ಲೇಖಕಿ!

ಶಾಲಾ ಮಂಡಳಿಯ ಕಾರ್ಯದರ್ಶಿ ಸುಭಾಷ್ ಬೊರಸೆ, ಆಂಬ್ಯುಲೆನ್ಸ್‌ನಲ್ಲಿ ಎಕ್ಸಾಂ ಬರೆಯಲು ವಿದ್ಯಾರ್ಥಿನಿಗೆ (Student) ಅವಕಾಶ ನೀಡಲು ಅನುಮತಿ ನೀಡಿದರು. ಆ ಪ್ರಕಾರ ಎಲ್ಲಾ ಅಗತ್ಯ ವ್ಯವಸ್ಥೆಗಳನ್ನು ಮಾಡಲಾಯಿತು ಎಂದು ತಿಳಿದುಬಂದಿದೆ. ಮುಬಾಶಿರಾ ಅವರ ಕುಟುಂಬ ಆರ್ಥಿಕ ಸಂಕಷ್ಟ ಎದುರಿಸುತ್ತಿದ್ದು, ಶಾಲಾ ಶಿಕ್ಷಕರು ತಕ್ಷಣ ನೆರವು (Help) ನೀಡಿದ್ದಾರೆ ಎಂದು ಪ್ರಾಂಶುಪಾಲರು ತಿಳಿಸಿದ್ದಾರೆ. ಇದರ ನಂತರ, ನಮ್ಮ ಹೆಚ್ ವಾರ್ಡ್‌ನ ಎಲ್ಲಾ ಶಾಲೆಗಳು ಉಪಕ್ರಮವನ್ನು ತೆಗೆದುಕೊಂಡವು ಮತ್ತು ಅವಳಿಗೆ ಆರ್ಥಿಕ ಸಹಾಯವನ್ನು ನೀಡಿತು ಎಂದಿದ್ದಾರೆ.

'ನನ್ನ ಶಿಕ್ಷಕರು ನನ್ನನ್ನು ಪರೀಕ್ಷೆಗೆ ಬರುವಂತೆ ಪ್ರೋತ್ಸಾಹಿಸಿದರು. ಅಲ್ಲದೆ, ನನ್ನ ಹೆತ್ತವರು ನನ್ನ ಹಿಂದೆ ಬೆಂಬಲವಾಗಿ ನಿಂತರು. ಇಂಥಾ ಸಂದರ್ಭದಲ್ಲಿ ನನಗೆ ಸಹಾಯ ಮಾಡಿದ ನನ್ನ ಎಲ್ಲಾ ಶಿಕ್ಷಕರಿಗೆ ಮತ್ತು ನನಗೆ ಆಂಬ್ಯುಲೆನ್ಸ್ ಒದಗಿಸಿದ್ದಕ್ಕಾಗಿ ಕ್ಯಾನ್ಸರ್ ನೆರವು ಮತ್ತು ಸಂಶೋಧನಾ ಪ್ರತಿಷ್ಠಾನಕ್ಕೆ ನಾನು ಧನ್ಯವಾದ ಹೇಳುತ್ತೇನೆ. ಈಗ ಅದೇ ರೀತಿ ಮುಂದಿನ ಎಕ್ಸಾಂ ಬರೆಯಲಿದ್ದೇನೆ' ಎಂದು ಮುಬಾಶಿರಾ ಹೇಳಿದರು.

ಎಲ್ಲೋ ಪರೀಕ್ಷೆ ಇನ್ನೆಲ್ಲೋ ಬಿಟ್ಟ ಅಪ್ಪ: ವಿದ್ಯಾರ್ಥಿನಿ ಪಾಲಿಗೆ ಆಪತ್ಭಾಂದವನಾದ ಪೊಲೀಸ್ ಅಧಿಕಾರಿ

ಹೆರಿಗೆಯಾದ ಕೆಲವೇ ಗಂಟೆಯಲ್ಲಿ 10ನೇ ತರಗತಿ ಪರೀಕ್ಷೆ ಬರೆದ ಯುವತಿ
ಹೆರಿಗೆಯಾಗಿ ಕೆಲವೇ ಗಂಟೆಗಳಲ್ಲಿ 22 ವರ್ಷದ ಯುವತಿಯೊಬ್ಬಳು 10ನೇ ತರಗತಿ ಬೋರ್ಡ್‌ ಎಕ್ಸಾಂ ಬರೆದ ಘಟನೆ ಬಿಹಾರದ ಬಂಕಾ ಜಿಲ್ಲೆಯಲ್ಲಿ ಇತ್ತೀಚೆಗೆ ನಡೆದಿದೆ. ಸರ್ಕಾರಿ ಶಾಲೆಯಲ್ಲಿ ಓದುತ್ತಿರುವ ರುಕ್ಮಿಣಿ ಕುಮಾರಿ, ಗಣಿತ ಪರೀಕ್ಷೆ (Exam) ಬರೆದ ಬಳಿಕ, ತನ್ನ ಮೆಚ್ಚಿನ ವಿಜ್ಞಾನ ಪರೀಕ್ಷೆಯನ್ನು ಬರೆಯಲು ಉತ್ಸಾಹವನ್ನಿಟ್ಟುಕೊಂಡಿದ್ದರು.

ಹೊಟ್ಟೆಯಲ್ಲಿ ಮಗುವನ್ನಿಟ್ಟುಕೊಂಡು ಪರೀಕ್ಷೆಗೆ ಓದುತ್ತಿದ್ದ ಯುವತಿಗೆ, ಬುಧವಾರ ಮುಂಜಾನೆ ಹೆರಿಗೆ ನೋವು (Pregnancy pain) ಕಾಣಿಸಿಕೊಂಡಿದೆ. ಕೂಡಲೇ ಆಸ್ಪತ್ರೆಗೆ ರುಕ್ಮಿಣಿ ಅವರನ್ನು ಕರೆದೊಯ್ಯಲಾಗಿತ್ತು. ಆಸ್ಪತ್ರೆಯಲ್ಲಿ ಗಂಡು ಮಗುವಿಗೆ ರುಕ್ಮಿಣೆ ಜನ್ಮ ನೀಡಿದ್ದಾರೆ. ಒಂದು ಕಡೆ ಮಗ ಬಂದ ಸಂತಸದಲ್ಲಿದ್ದ ರುಕ್ಮಿಣಿಗೆ ವಿಶ್ರಾಂತಿ ಮಾಡಿ ಎಂದು ವೈದ್ಯರು ಹೇಳಿದ್ದಾರೆ ಆದರೆ ರುಕ್ಮಿಣಿ ಇದನ್ನುನಿರಾಕರಿಸಿ, ತನಗೆ ವಿಜ್ಞಾನ ಪರೀಕ್ಷೆಗೆ ಹಾಜರಾಗಬೇಕು ಎಂದು ಹೇಳಿದ್ದಾರೆ. ಆಂಬ್ಯುಲೆನ್ಸ್‌ ನಲ್ಲಿ ತೆರೆಳಿ ಪರೀಕ್ಷೆ ಬರೆದಿದ್ದಾರೆ. 

click me!