ಗರ್ಲ್‌ಫ್ರೆಂಡ್ ಸಿಗ್ತಿಲ್ವಂತೆ, ಭರ್ತಿ 1.35 ಕೋಟಿ ಖರ್ಚು ಮಾಡಿ ಹೈಟ್ ಹೆಚ್ಚಿಸಿಕೊಂಡ ಭೂಪ!

By Vinutha Perla  |  First Published Apr 15, 2023, 11:13 AM IST

ಗರ್ಲ್‌ಫ್ರೆಂಡ್ ಸಿಗ್ತಿಲ್ಲ ಅನ್ನೋದು ಹುಡುಗರ ಸಾಮಾನ್ಯ ಗೋಳು. ಹೀಗಾಗಿ ಹುಡುಗಿಯರನ್ನು ಇಂಪ್ರೆಸ್ ಮಾಡೋಕೆ ಏನೆಲ್ಲಾ ಸರ್ಕಸ್ ಮಾಡ್ತಿರ್ತಾರೆ. ಹಾಗೆಯೇ ಇಲ್ಲೊಬ್ಬ ಗರ್ಲ್‌ಫ್ರೆಂಡ್‌ನ್ನು ಪಡೆಯೋಕೆ ಬರೋಬ್ಬರಿ 1.35 ಕೋಟಿ ಖರ್ಚು ಮಾಡಿ ಹೈಟ್ ಹೆಚ್ಚಿಸಿಕೊಂಡಿದ್ದಾನೆ. ಆ ಬಗ್ಗೆ ಹೆಚ್ಚಿನ ಮಾಹಿತಿ  ಇಲ್ಲಿದೆ.


ಹೈಟ್, ವೈಟ್ ಚೆನ್ನಾಗಿದ್ದು ಪರ್ಸನಾಲಿಟಿ ಪರ್ಫೆಕ್ಟ್‌ ಅಗಿರಬೇಕೆಂದು ಪ್ರತಿಯೊಬ್ಬರೂ ಅಂದುಕೊಳ್ಳುತ್ತಾರೆ. ಅದಕ್ಕಾಗಿ ಜಿಮ್, ಯೋಗ ಅಂತ ನಾನಾ ರೀತಿಯ ವರ್ಕೌಟ್ ಮಾಡುತ್ತಾರೆ. ಆದರೆ ಹೈಟ್ ಹೆಚ್ಚಿಸಿಕೊಳ್ಳುವುದು ಅಷ್ಟು ಸುಲಭವಲ್ಲ. ಅದರಲ್ಲೂ ಹುಡುಗರು ಹೈಟ್ ಚೆನ್ನಾಗಿರಬೇಕೆಂದು ಅಂದುಕೊಳ್ಳುತ್ತಾರೆ. ಗರ್ಲ್‌ಫ್ರೆಂಡ್ ಸಿಗ್ತಿಲ್ಲ ಅನ್ನೋದು ಹುಡುಗರ ಸಾಮಾನ್ಯ ಗೋಳು. ಹೀಗಾಗಿ ಹುಡುಗಿಯರನ್ನು ಇಂಪ್ರೆಸ್ ಮಾಡೋಕೆ ಏನೆಲ್ಲಾ ಸರ್ಕಸ್ ಮಾಡ್ತಿರ್ತಾರೆ. ಸ್ಟೈಲಿಶ್‌ ಆಗಿ ಡ್ರೆಸ್ ಮಾಡುವುದು, ಬೈಕ್‌, ಕಾರ್‌ಗಳಲ್ಲಿ ಸುತ್ತಾಡುವುದನ್ನು ಮಾಡುತ್ತಾರೆ. ಹಾಗೆಯೇ ಹೆಚ್ಚು ಹೈಟ್ ಇದ್ದರೆ ಹುಡುಗಿಯರು ಇಷ್ಟಪಡುತ್ತಾರೆಂದು ಹೈಟ್ ಹೆಚ್ಚಿಸಿಕೊಳ್ಳಲು ಟ್ರೈ ಮಾಡ್ತಾರೆ. 

ಹಾಗೆಯೇ ಇಲ್ಲೊಬ್ಬ ಗರ್ಲ್‌ಫ್ರೆಂಡ್‌ನ್ನು ಪಡೆಯೋಕೆ ಬರೋಬ್ಬರಿ 1.35 ಕೋಟಿ ಖರ್ಚು ಮಾಡಿ ಹೈಟ್ ಹೆಚ್ಚಿಸಿಕೊಂಡಿದ್ದಾನೆ. ಅಮೇರಿಕಾದ ಮೋಸೆಸ್ ಗಿಬ್ಸನ್ ತನ್ನ 5 ಅಡಿ 5 ಇಂಚು ಎತ್ತರದಿಂದಾಗಿ (Height) ಯಾವಾಗಲೂ ಅಸುರಕ್ಷಿತ ಭಾವನೆ ಹೊಂದಿದ್ದ. ಹೈಟ್ ಕಡಿಮೆಯಾಗಿರುವ ಕಾರಣದಿಂದಲೇ ಹುಡುಗಿಯರು (Girls) ಯಾರೂ ತನ್ನನ್ನು ಇಷ್ಟಪಡುತ್ತಿಲ್ಲ ಎಂದು ಬೇಸರಪಟ್ಟಿದ್ದ. ಎತ್ತರವನ್ನು ಹೆಚ್ಚಿಸಿಕೊಳ್ಳಲು ಆತ ಎಲ್ಲಾ ರೀತಿಯ ವ್ಯಾಯಾಮವನ್ನು ಪ್ರಯತ್ನಿಸಿದ್ದ. ಆದರೂ ಯಾವುದೇ ಪ್ರಯೋಜನವಾಗಿರಲ್ಲಿಲ್ಲ. ಹೀಗಾಗಿ ಗಿಬ್ಸನ್ ಹೈಟ್ ಹೆಚ್ಚಿಸಿಕೊಳ್ಳಲು ಸರ್ಜರಿ (Operation) ಮಾಡಿಸಿಕೊಳ್ಳಲು ನಿರ್ಧರಿಸಿದ್ದಾನೆ. 

Latest Videos

undefined

ಕುಬ್ಜ ವಿವಾಹ, ಮೂರಡಿ ಬಾಡಿಬಿಲ್ಡರ್‌ಗೆ ಒಲಿದ 4 ಅಡಿಯ ಹುಡುಗಿ!

ಎತ್ತರ ಹೆಚ್ಚಿಸಿಕೊಳ್ಳಲು ಎರಡೆರಡು ಬಾರಿ ಸರ್ಜರಿ ಮಾಡಿಸಿಕೊಂಡ!
ಮಿನ್ನೇಸೋಟ ನಿವಾಸಿಯಾದ ಗಿಬ್ಸನ್ ಮೊದಲು 2016ರಲ್ಲಿ ತನ್ನ ಎತ್ತರಕ್ಕೆ 3 ಇಂಚುಗಳನ್ನು ಶಸ್ತ್ರಚಿಕಿತ್ಸೆಯ ಮೂಲಕ ಸೇರಿಸಿದನು ಮತ್ತು ಏಳು ವರ್ಷಗಳ ನಂತರ ಅವನು ಎರಡನೇ ಸುತ್ತಿನ ಶಸ್ತ್ರಚಿಕಿತ್ಸೆ ಮಾಡಿಸಿಕೊಳ್ಳಬೇಕಾಯಿತು. ಈ ಬಾರಿ ಗಿಬ್ಸನ್‌ ತನ್ನ ಎತ್ತರವನ್ನು 2 ಇಂಚುಗಳಷ್ಟು ಹೆಚ್ಚಿಸಿಕೊಂಡಿದ್ದಾನೆ. 

ಹೈಟ್ ಹೆಚ್ಚಿಸಿಕೊಳ್ಳಲು ಸರ್ಜರಿ ಮಾಡಿಸಿಕೊಂಡ ವಿಧಾನ ನನಗೆ ಸಾಕಷ್ಟು ನೋವನ್ನುಂಟು ಮಾಡಿತು. ಇದು ದೇಹದ (Bone) ಮೂಳೆಯನ್ನು ಮುರಿಯುವುದರ ಜೊತೆಗೆ ಅಸಹನೀಯ ನೋವಿಗೆ ಕಾರಣವಾಯಿತು ಎಂದು ಗಿಬ್ಸನ್ ಹೇಳಿದ್ದಾರೆ. ಎರಡು ಶಸ್ತ್ರಚಿಕಿತ್ಸೆಗಳ ಒಟ್ಟು ವೆಚ್ಚ ಸುಮಾರು 1.35 ಕೋಟಿ ರೂ. ಆಗಿದೆ. ಮೊದಲ ಶಸ್ತ್ರಚಿಕಿತ್ಸೆಗೆ ಅವರಿಗೆ 61.48 ಲಕ್ಷ ರೂಪಾಯಿ ವೆಚ್ಚವಾಯಿತು ಮತ್ತು ಎರಡನೆಯದು ಹಿಂದಿನದಕ್ಕಿಂತ ಸ್ವಲ್ಪ ದುಬಾರಿಯಾಗಿದೆ, ಅವರಿಗೆ ಸುಮಾರು 80.34 ಲಕ್ಷ ವೆಚ್ಚವಾಯಿತು ಎಂದಿದ್ದಾರೆ.

ಅಬ್ಬಬ್ಬಾ..3 ಇಂಚು ಎತ್ತರವಾಗಲು ಭರ್ತಿ 60 ಲಕ್ಷ ರೂ. ಖರ್ಚು ಮಾಡಿದ ಭೂಪ !

ಎತ್ತರ ಹೆಚ್ಚಿರುವುದರಿಂದ ಗರ್ಲ್‌ಫ್ರೆಂಡ್ ಸಿಕ್ಕಳು ಎಂದ ಗಿಬ್ಸನ್
ಈ ವರ್ಷದ ಜೂನ್ ವೇಳೆಗೆ ತನ್ನ ಗುರಿಯ 5 ಅಡಿ 10 ಇಂಚು ಎತ್ತರವನ್ನು ತಲುಪುವ ಮೂಲಕ ಮೋಸೆಸ್ ಹೈಟ್ ಸರ್ಜರಿ ಮಾಡಿಸಿಕೊಳ್ಳುವುದನ್ನು ನಿಲ್ಲಿಸುವುದಾಗಿ ಗಿಬ್ಸನ್ ಹೇಳಿದ್ದಾರೆ. ಹೈಟ್ ಹೆಚ್ಚಿಸಿಕೊಂಡಿರುವುದರಿಂದ  ಆತ್ಮವಿಶ್ವಾಸ ಹೆಚ್ಚಿದೆ. ಗರ್ಲ್‌ಫ್ರೆಂಡ್‌ ಸಹ ಸಿಕ್ಕಿರುವುದಾಗಿ ಗಿಬ್ಸನ್ ಖುಷಿಯಿಂದ ಹೇಳುತ್ತಾರೆ.

ಗಿಬ್ಸನ್ ಹೈಟ್ ಹೆಚ್ಚಿಸಿಕೊಂಡಿರುವ ಬಗ್ಗೆ ಮಾತನಾಡಿದ ಸ್ಥಳೀಯರು, ಹೈಟ್ ಕಡಿಮೆಯಿರುವ ಬಗ್ಗೆ ಗಿಬ್ಸನ್ ಯಾವಾಗಲೂ ಅಸಮಾಧಾನ ಹೊಂದಿದ್ದ. ಶಾಲೆಯಲ್ಲಿದ್ದಾಗಲೂ ಆತ ತನ್ನ ಎತ್ತರದ ಬಗ್ಗೆ ಕೀಳರಿಮೆ ಬೆಳೆಸಿಕೊಂಡಿದ್ದ. ಕಡಿಮೆ ಆತ್ಮ ವಿಶ್ವಾಸ ಹೊಂದಿರುವಂತಹ ವ್ಯಕ್ತಿತ್ವ ಸಮಸ್ಯೆಗಳೊಂದಿಗೆ ಹೇಗೆ ಹೋರಾಡುತ್ತಿದ್ದ ಎಂಬುದನ್ನು ಬಹಿರಂಗಪಡಿಸಿದರು. ಮಾತ್ರವಲ್ಲ 'ಗಿಬ್ಸನ್ ಡೇಟಿಂಗ್ ಜೀವನವು ಎತ್ತರದಿಂದ ಪ್ರಭಾವಿತವಾಗಿದೆ ಎಂದು ಅವರು ಭಾವಿಸಿದರು. ಸ್ವಲ್ಪ ಎತ್ತರವನ್ನು ಪಡೆಯಲು ತಮ್ಮ ಬೂಟುಗಳಲ್ಲಿ ವಸ್ತುಗಳನ್ನು ಹಾಕುತ್ತಿದ್ದರು' ಎಂದು ತಿಳಿಸಿದರು.

ಹುಡುಗಿಯರಿಗೆ ಹೆಚ್ಚು ಹೈಟ್ ಇರೋ ಹುಡುಗರು ಇಷ್ಟವಾಗೋದು ಯಾಕೆ ?

click me!