ಬೆಳ್ಳಿಯ ಕಾಲ್ಗೆಜ್ಜೆ ಧರಿಸುವುದರಿಂದ ಆರೋಗ್ಯ ವೃದ್ಧಿಸುತ್ತಾ?!

By Suvarna News  |  First Published Mar 8, 2022, 9:44 AM IST

ಕಾಲಿನ ಪಾದ ಬೆಟ್ಟ ಗೆಜ್ಜೆ ಧರಿಸುವ ಅಭ್ಯಾಸವನ್ನು ಎಷ್ಟೋ ಜನ ಬಿಟ್ಟಿದ್ದಾರೆ. ಆದರೆ ನಿಮ್ಮ ಪಾದಗಳಿಗೆ ಬೆಳ್ಳಿಯ ಕಾಲ್ಗೆಜ್ಜೆ  ಧರಿಸುವುದರಿಂದ ಪಾದಗಳ ಅಂದ ಹೆಚ್ಚುವುದು ಮಾತ್ರವಲ್ಲದೆ, ಆರೋಗ್ಯದಲ್ಲಿ ಕೂಡ ಹಲವಾರು ಉತ್ತಮ ಬದಲಾವಣೆಗಳು ಉಂಟಾಗುತ್ತದೆ.


ಇತ್ತೀಚಿನ ದಿನಗಳಲ್ಲಿ ಹೆಚ್ಚಿನ ಹೆಣ್ಣು ಮಕ್ಕಳು ಕಾಲ್ಗೆಜ್ಜೆ (Anklet) ಧರಿಸುವ ಅಭ್ಯಾಸವನ್ನೇ ರೂಢಿಸಿಕೊಂಡಿರುವುದಿಲ್ಲ. ಆದರೆ, ಇನ್ನೂ ಕೆಲವು ಹೆಣ್ಣು ಮಕ್ಕಳಿಗೆ ಕಾಲುಗೆಜ್ಜೆ ಧರಿಸುವುದೆಂದರೆ ಒಂದು ರೀತಿಯ ಸಂಭ್ರಮ. ಇದು ಪಾದಗಳಿಗೆ ಮೆರಗು ನೀಡುತ್ತದೆ, ಜೊತೆಗೆ ಹಬ್ಬ ಹರಿದಿನಗಳಲ್ಲಿ ಬೆಳ್ಳಿಯ (Silver) ಕಲ್ಗೆಜ್ಜೆ  ಧರಿಸಿಕೊಂಡು ಓಡಾಡುತ್ತಿದ್ದರೆ, ನಿಮಗೆ ಮಾತ್ರವಲ್ಲದೆ ಮನೆಯವರ ಸಂಭ್ರಮ ಕೂಡ ಹೆಚ್ಚುತ್ತದೆ. ಇಷ್ಟೊಂದು ವಿಶೇಷತೆ ಇರುವ ಬೆಳ್ಳಿಯ ಕಾಲ್ಗೆಜ್ಜೆಗಳಿಂದ ಆರೋಗ್ಯ ವೃದ್ಧಿಸುವ ಸಾಮರ್ಥ್ಯ ಕೂಡ ಅಡಗಿದೆ ಎಂಬ ವಿಷಯ ನಿಮಗೆ ತಿಳಿದಿದೆಯಾ?

ಜ್ಯೋತಿಷ್ಯ ಶಾಸ್ತ್ರದ (astrology) ಪ್ರಕಾರ ಬೆಳ್ಳಿಯು ಚಂದ್ರನ (Moon) ಸಂಕೇತವಾಗಿರುತ್ತದೆ. ಅಷ್ಟೇ ಅಲ್ಲದೆ ಬೆಳ್ಳಿಯು ಈಶ್ವರನ ಕಣ್ಣುಗಳಿಂದ ಸೃಷ್ಟಿಯಾಗಿದೆ ಎಂದು ನಂಬಲಾಗುತ್ತದೆ. ಈ ಎಲ್ಲ ಕಾರಣಗಳಿಂದ ಬೆಳ್ಳಿಯನ್ನು ಸಂವೃದ್ಧಿಯ (Prosperity) ಸಂಕೇತ ಎಂದು ಹಿರಿಯರು ನಂಬುತ್ತಾರೆ. ಬೆಳ್ಳಿಯ ಧಾರಣೆಯಿಂದ ಈ ಎಲ್ಲ ಉಪಯೋಗಗಳಿವೆ..

  •  ಬೆಳ್ಳಿಯ ಕಾಲ್ಗೆಜ್ಜೆ ಧರಿಸುವುದರಿಂದ ನಿಮ್ಮ ದೇಹದಿಂದ ಅನಾವಶ್ಯಕವಾಗಿ ಹೊರ ಹೋಗುವ ಶಕ್ತಿಯು (Energy) ದೇಹದಲ್ಲಿಯೇ ಉಳಿದುಕೊಳ್ಳುತ್ತದೆ. ನಮ್ಮ ದೇಹದಲ್ಲಿರುವ ಎನರ್ಜಿ ಹೆಚ್ಚಾಗಿ ಕೈ ಮತ್ತು ಕಾಲುಗಳಿಂದಲೇ (Legs) ಹೊರ ಹೋಗಲ್ಪಡುತ್ತವೆ, ಇಂತಹ ಎನರ್ಜಿ ಕಾಪಾಡಿಕೊಳ್ಳಲು ಬೆಳ್ಳಿಯ ಕಾಲ್ಗೆಜ್ಜೆಗಳು ಸಹಕಾರಿ (Helpful).

Tap to resize

Latest Videos

ನೆಚ್ಚಿನ ನೇಲ್ ಪಾಲಿಶ್ ಡೇಟ್ expiry ಆಗಬಹುದು ನೋಡಿಕೊಳ್ಳಿ

  •  ಬೆಳ್ಳಿಯಲ್ಲಿ ಬ್ಯಾಕ್ಟೀರಿಯಾಗಳನ್ನು (Bacteria) ನಾಶಪಡಿಸುವ ಗುಣವಿದೆ. ಇದಕ್ಕೆ ಐತಿಹಾಸಿಕ (Historical) ಉದಾಹರಣೆಗಳಿವೆ. ಸಾವಿರ ವರ್ಷಗಳ ಹಿಂದೆ ನಾವಿಕರು ದೂರದ ಪ್ರಯಾಣ ಬೆಳೆಸುವಾಗ ಬೆಳ್ಳಿಯ ನಾಣ್ಯಗಳನ್ನು (Coins) ನೀರಿನ ಬಾಟಲಿಯಲ್ಲಿ ಹಾಕಿರುತ್ತಿದ್ದರಂತೆ ಇದರಿಂದಾಗಿ, ಬ್ಯಾಕ್ಟೀರಿಯಾಗಳು ನಾಶ ಹೊಂದುತ್ತವೆ ಎಂಬ ಉದ್ದೇಶ ಹೊಂದಿದ್ದರು. ಇದೇ ಕಾರಣದಿಂದಾಗಿ ಮಹಿಳೆಯರಿಗೆ ಬೆಳ್ಳಿಯ ಕಾಲ್ಗೆಜ್ಜೆಗಳನ್ನು ಧರಿಸಬೇಕು ಎಂಬ ಸಲಹೆಯನ್ನು ನೀಡಲಾಗುತ್ತದೆ.
  •  ಇನ್ನು, ಮಹಿಳೆಯರು ತಮ್ಮ ಪ್ರತಿ ದಿನದ ಹೆಚ್ಚಿನ ಸಮಯವನ್ನು ಅಡುಗೆ ಮನೆಯಲ್ಲಿಯೇ (Kitchen) ಕಳೆಯುತ್ತಾರೆ , ಅಥವಾ ಮನೆಯನ್ನು ಸ್ವಚ್ಛಗೊಳಿಸುವ (Cleaning) ಇತರ ಕೆಲಸಗಳಲ್ಲಿ ನಿರತರಾಗಿರುತ್ತಾರೆ. ಬೆಳಗ್ಗಿನಿಂದ ಸಂಜೆಯ ತನಕ ನಿಂತುಕೊಂಡು (Standing) ಹೆಚ್ಚಿನ ಕೆಲಸ ಮಾಡುವುದರಿಂದ ಪಾದಗಳಲ್ಲಿ ನೋವು ಕಾಣಿಸಿಕೊಳ್ಳುವ ಸಾಧ್ಯತೆ ಇರುತ್ತದೆ. ಪಾದಗಳಲ್ಲಿ ಪ್ರಾರಂಭವಾಗುವ ಈ ನೋವುಗಳು ಕ್ರಮೇಣ ಬೆನ್ನು ಹಾಗೂ ಸೊಂಟಗಳಿಗೂ ಹೆಬ್ಬಿಕೊಳ್ಳುವ ಸಂಭವ ಇರುತ್ತದೆ. ಆದರೆ, ಬೆಳ್ಳಿಯ ಕಾಲ್ಗೆಜ್ಜೆಯನ್ನು ಧರಿಸುವುದರಿಂದ ಪಾದಗಳಲ್ಲಿ ಉಂಟಾಗುವ ನೋವನ್ನು (Pain) ಅಲ್ಲಿಯೇ ತಡೆಗಟ್ಟಬಹುದು. ಬೆಳ್ಳಿಯು ರಕ್ತ ಸಂಚಾರವನ್ನು ಸುಗಮಗೊಳಿಸುತ್ತದೆ. ನಿಮ್ಮ ನೋವಿನ ಮೂಲವು ಪಾದಗಳೇ ಆಗಿದ್ದಾಗ ಬೆಳ್ಳಿಯ ಕಾಲ್ಗೆಜ್ಜೆಗಳು ಈ ನೋವನ್ನು ಮೂಲದಿಂದಲೇ ಹೊರ ಹಾಕುತ್ತವೆ.
  •  ಬೆಳ್ಳಿಯ ಆಭರಣಗಳ ಧಾರಣೆಯಿಂದಾಗಿ ದೇಹದಲ್ಲಿ ರೋಗನಿರೋಧಕ (Immunity) ಶಕ್ತಿ ಹೆಚ್ಚುತ್ತದೆ. ಇದರಿಂದಾಗಿ ಪದೇ ಪದೇ ಆರೋಗ್ಯ ಸಮಸ್ಯೆಗಳನ್ನು ಎದುರಿಸುವ ಸಾಧ್ಯತೆಗಳು ಕಡಿಮೆ ಇರುತ್ತದೆ. ಮಹಿಳೆಯರ ಆರೋಗ್ಯ ಕಾಪಾಡುವ ದೃಷ್ಟಿಯಿಂದ ಕೂಡ ಬೆಳ್ಳಿಯ ಕಾಲ್ಗೆಜ್ಜೆಗಳನ್ನು ಧರಿಸಬೇಕು ಎಂದು ಹೇಳಲಾಗುತ್ತದೆ.

Health Tips: ನಿಮ್ಮ ಕಾಸ್ಮೆಟಿಕ್‌ಗಳನ್ನು ಯಾವುದೇ ಕಾರಣಕ್ಕೂ ಹಂಚಿಕೊಳ್ಳಬೇಡಿ

  • ದೇಹದ ಹಾರ್ಮೋನ್ಗಳನ್ನು ಸಮತೋಲನದಲ್ಲಿ (Harmone balance) ಇಡಲು ಸಹಾಯ ಮಾಡುತ್ತದೆ. ಇದರಿಂದಾಗಿ ಮಹಿಳೆಯರು ಮುಟ್ಟಿಗೆ ಸಂಬಂಧಪಟ್ಟ ಸಮಸ್ಯೆಗಳನ್ನು ಎದುರಿಸಲು ಸಹಾಯವಾಗುತ್ತದೆ. ಮದುವೆಯ ನಂತರ ಹೆಣ್ಣು ಮಕ್ಕಳು ಬೆಳ್ಳಿಯ ಕಾಲುಂಗುರವನ್ನು ಕೂಡಾ ಇದೇ ಕಾರಣಕ್ಕೆ ಧರಿಸುತ್ತಾರೆ. 

 ಬೆಳ್ಳಿಯ ಕಾಲು ಗೆಜ್ಜೆಯನ್ನು ಧಾರಣೆ ಮಾಡುವುದರಿಂದ ಕಾಲಿನ ಸೌಂದರ್ಯ (Beauty) ಹೆಚ್ಚುವುದರ ಜೊತೆಗೆ ಆರೋಗ್ಯ ಕೂಡ ವೃದ್ಧಿಯಾಗುತ್ತದೆ. ಬೆಳ್ಳಿಯು ನಿಮ್ಮ ದೇಹವನ್ನು ರೋಗಗಳಿಂದ ದೂರ ಇರುವಂತೆ ನೋಡಿಕೊಳ್ಳುತ್ತದೆ. ಬೆಳ್ಳಿಯ ಈ ಎಲ್ಲಾ ವೈಜ್ಞಾನಿಕ (Scientific) ಉಪಯೋಗದ ಕಾರಣದಿಂದಾಗಿ ಹಿರಿಯರು ಬೆಳ್ಳಿ ಆಭರಣಗಳನ್ನು ಧರಿಸುವ ಸೂಚನೆಯನ್ನು ನೀಡುತ್ತಿದ್ದರು..

 

click me!