ಮೊಬೈಲ್ ಫೋನ್ ಜೇಬಿನೊಳಗಿಟ್ಟುಕೊಂಡು ತಿರುಗುವ ಅಭ್ಯಾಸ ನಿಮಗಿದ್ಯಾ? ಅಥವಾ ದಿಂಬಿನಡಿ ಇಟ್ಕೊಂಡ್ ಮಲಗ್ತೀರಾ? ಖಂಡಿತಾ ಇಂಥ ತಪ್ಪುಗಳನ್ನು ಮಾಡಿ ಆರೋಗ್ಯ ಹಾಳು ಮಾಡಿಕೊಳ್ಳಬೇಡಿ.
ಈಗಂತೂ ಜನರಿಗೆ ಅವರ ದೇಹದ ಒಂದು ಅಂಗವೇ ಆಗಿ ಹೋಗಿದೆ ಮೊಬೈಲ್ ಫೋನ್(Mobile Phone). ಅದನ್ನು ದಿನದ ಒಂದು ಕ್ಷಣವೂ ಕೆಳಗಿಟ್ಟು ಎಲ್ಲೂ ಹೋಗಲಾರರು. ಟಾಯ್ಲೆಟ್‌ಗೆ ಹೋದರೂ ಫೋನ್ ಜೊತೆಗಿರಬೇಕು, ಊಟಕ್ಕೆ ಹೋದರೂ ಜೊತೆಗಿರಬೇಕು. ಮಲಗುವಾಗಲು ಕೈಗೆ ತಾಕುತ್ತಿರಬೇಕು. ಹೌದು, ಅದು ನಮ್ಮ ಬದುಕನ್ನು ಬಹಳ ಸುಲಭವಾಗಿಸಿದೆ. ಎಲ್ಲ ಕೆಲಸಗಳನ್ನೂ ಕುಳಿತಲ್ಲೇ ಫೋನ್ ಹಿಡಿದು ಮಾಡಿ ಮುಗಿಸಬಹುದು. ಮನರಂಜನೆ, ಮಾಹಿತಿ, ಉದ್ಯೋಗ, ಬಿಲ್ ಕಟ್ಟುವುದು ಸೇರಿದಂತೆ ಅದರ ಉಪಯೋಗದ ಪಟ್ಟಿ ಮಾಡುತ್ತಾ ಹೋದರೆ ಸಾವಿರ ಸಂಖ್ಯೆ ದಾಟಬಹುದು. ಅದೇ ಕಾರಣಕ್ಕೆ ಅದು ಬಹುತೇಕರಿಗೆ ಅಡಿಕ್ಷನ್ ಆಗಿಬಿಟ್ಟಿದೆ. ಆದರೆ, ಅದನ್ನು ಸದಾ ಜೊತೆಗಿಟ್ಟುಕೊಂಡೇ ತಿರುಗುವ ನಿಮ್ಮ ಈ ಅಭ್ಯಾಸ ನಿಮ್ಮ ಆರೋಗ್ಯ(health)ದ ಮೇಲೆ ಎಷ್ಟೆಲ್ಲ ದುಷ್ಪರಿಣಾಮ ಬೀರುತ್ತಿದೆ ಎಂಬ ಅಂದಾಜಾದರೂ ನಿಮಗಿದೆಯೇ? ಹೌದು, ಫೋನ್‌ನಿಂದ ಎಷ್ಟು ಲಾಭಗಳಿವೆಯೋ ಅಷ್ಟೇ ನಷ್ಟವೂ ಇದೆ.
ಮೊಬೈಲ್ ಫೋನೆಂದ ಮೇಲೆ ಅದಕ್ಕೆ ನೆಟ್ವರ್ಕ್, ಇಂಟರ್ನೆಟ್ ಕನೆಕ್ಷನ್ ಎಂದು ರೇಡಿಯೇಶನ್(Radiation)ಗಳನ್ನು ಎಳೆಯುತ್ತಲೇ ಇರುತ್ತದೆ. ಈ ರೇಡಿಯೇಶನ್‌ಗಳು ನಮ್ಮ ಮಾನಸಿಕ ಆರೋಗ್ಯಕ್ಕಾಗಲೀ, ದೈಹಿಕ ಆರೋಗ್ಯಕ್ಕಾಗಲೀ ಒಳ್ಳೆಯದಲ್ಲ. ಇನ್ನು ಫೋನ್‌ನ ಪರದೆಯನ್ನು ಇಡೀ ದಿನ ನೋಡುವುದರಿಂದ ಕಣ್ಣು ಹಾಳಾಗುತ್ತದೆ. ಇದರಿಂದ ನಿದ್ರೆಯ ಸಮಸ್ಯೆಗಳು ಹೆಚ್ಚುತ್ತವೆ. ಹೀಗೆ ಫೋನ್ ಕಣ್ಣನ್ನು ಹಾನಿ ಮಾಡುವ ಜೊತೆಗೆ ಇತರೆ ದೈಹಿಕ ಸಮಸ್ಯೆಗಳಿಗೂ ಕಾರಣವಾಗುತ್ತದೆ. ಇದರ ರೇಡಿಯೇಶನ್ ಕಾರಣದಿಂದ ಫೋನನ್ನು ಎಲ್ಲಿಟ್ಟುಕೊಳ್ಳಬೇಕು, ಎಲ್ಲಿಟ್ಟುಕೊಳ್ಳಬಾರದು ಎಂಬ ಜಾಗ್ರತೆ ನಾವು ಮಾಡಬೇಕು. ಇಲ್ಲದಿದ್ದಲ್ಲಿ ಸಾಕಷ್ಟು ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ.
ದಿಂಬಿನಡಿಗೆ(under the pillow)
ಸಾಕಷ್ಟು ಜನರಿಗೆ ರಾತ್ರಿ ಮಲಗುವಾಗ ಫೋನನ್ನು ದಿಂಬಿನಡಿಗೆ ಇಟ್ಟುಕೊಳ್ಳುವ ಅಭ್ಯಾಸ. ತಮ್ಮ ಫೋನ್ ಯಾರ ಕೈಗೂ ಸಿಗಬಾರದು ಎಂಬ ಉದ್ದೇಶ ಒಂದೆಡೆಯಾದರೆ, ಅದರ ಅಡಿಕ್ಷನ್ ಮತ್ತೊಂದೆಡೆ. ರಾತ್ರಿ ಎಚ್ಚರಾದಾಗ ಸಮಯ ನೋಡಲು ಆಗುತ್ತದೆ, ಹಾಡು ಕೇಳಲಾಗುತ್ತದೆ.. ಹೀಗೆ ಹಲವು ನೆಪ ಹೇಳಿ ಫೋನನ್ನು ದಿಂಬಿನಡಿ ಇಟ್ಟುಕೊಳ್ಳುತ್ತಾರೆ. ಆದರೆ, ಹೀಗೆ ಮಾಡುವುದರಿಂದ ಮೊಬೈಲ್ ರೇಡಿಯೇಶನ್ ನಮ್ಮ ಮೆದುಳಿಗೆ ಅಪಾಯ ಉಂಟು ಮಾಡುತ್ತದೆ. ಹೀಗೆ ಯಾವಾಗಲೂ ದಿಂಬಿನಡಿ ಫೋನಿಟ್ಟು ಮಲಗುವವರಲ್ಲಿ ತಲೆನೋವು, ತಲೆ ಸುತ್ತುವುದು ಮುಂತಾದ ಸಮಸ್ಯೆಗಳು ಕಂಡು ಬರುತ್ತವೆ. ಅವರ ತಲೆ ಚುರುಕು ಕಡಿಮೆಯಾಗುತ್ತದೆ. ಚಂಚಲತೆಯ ಸಮಸ್ಯೆ ಹೆಚ್ಚುತ್ತದೆ.
Nykaa ಸ್ಥಾಪಕಿ ಫಲ್ಗುಣಿ ನಾಯರ್: ಬಿಲಿಯನೇರ್ ಉದ್ಯಮಿಯ ಯಶೋಗಾಥೆ
ಹಿಂಬದಿ ಜೇಬಿನಲ್ಲಿ(in back pocket)
ಬಹಳಷ್ಟು ಜನರಿಗೆ ತಮ್ಮ ಪ್ಯಾಂಟ್ ಜೇಬಿನಲ್ಲಿ ಮೊಬೈಲ್ ಪೋನಿಟ್ಟು ತಿರುಗುವ ಅಭ್ಯಾಸ. ಅದರಲ್ಲೂ ಯುವಕರು ತಮ್ಮ ಪ್ಯಾಂಟಿನ ಹಿಂಬದಿ ಜೇಬಿನಲ್ಲಿ ಫೋನಿಟ್ಟುಕೊಳ್ಳುವುದನ್ನು ಫ್ಯಾಶನ್ ಎಂದುಕೊಂಡಿದ್ದಾರೆ. ಹೀಗೆ ಮಾಡುವುದರಿಂದಲೂ ದೈಹಿಕ ಸಮಸ್ಯೆಗಳಾಗುತ್ತವೆ. ಇದರಿಂದ ಹೊಟ್ಟೆನೋವು(abdominal pain), ಕಾಲುನೋವಿನಂತ ಸಮಸ್ಯೆಗಳು ಕಂಡುಬರುತ್ತಿವೆ ಎನ್ನುತ್ತಾರೆ ತಜ್ಞರು. ಅದೂ ಅಲ್ಲದೆ, ಈ ಅಭ್ಯಾಸದಿಂದ ನಿಮ್ಮ ದುಬಾರಿ ಫೋನ್ ಒಡೆದು ಹೋಗುವ ಸಂಭವಗಳೂ ಹೆಚ್ಚಿವೆ.
Mood Swings: ಪದೇ ಪದೇ ಮೂಡ್ ಕೆಡ್ತಿದ್ಯಾ? ಇಲ್ಲಿದೆ ಮದ್ದು
ಶರ್ಟ್ ಜೇಬಿನಲ್ಲಿ(in shirt pocket)
ಬಹಳಷ್ಟು ಬಾರಿ ಜನರು ತಮ್ಮ ಶರ್ಟ್ ಜೇಬಿನಲ್ಲಿ ಪೋನಿಟ್ಟುಕೊಳ್ಳುತ್ತಾರೆ. ಅದರಲ್ಲೂ ಹಿರಿಯ ಪುರುಷರಿಗೆ ಈ ಅಭ್ಯಾಸ ಜಾಸ್ತಿ. ಹೀಗೆ ಮಾಡುವುದರಿಂದ ತಕ್ಷಣ ಫೋನ್ ಎತ್ತಲು ಸಹಾಯಕವಾಗುತ್ತದೆ ಎಂಬುದು ಅವರ ನಿಲುವು. ಆದರೆ, ಹೀಗೆ ಶರ್ಟ್ ಜೇಬಿನಲ್ಲಿ ಫೋನಿಟ್ಟುಕೊಳ್ಳುವುದರಿಂದ ಹೃದಯ ಸಂಬಂಧಿ ಕಾಯಿಲೆಗಳು(heart-related diseases) ಶುರುವಾಗುತ್ತವೆ ಎನ್ನುತ್ತಾರೆ ಆರೋಗ್ಯ ತಜ್ಞರು. ಹೃದಯ ಸ್ಥಂಭನ, ಹೃದಯಾಘಾತ ಸೇರಿದಂತೆ ಹೃದಯಕ್ಕೆ ಸಂಬಂಧಿಸಿದ ಕಾಯಿಲೆಗಳಿಂದ ದೂರವಿರಬೇಕೆಂದರೆ ಮೊದಲು ಶರ್ಟ್ ಜೇಬಿನಲ್ಲಿ ಫೋನಿಟ್ಟುಕೊಳ್ಳುವ ಅಭ್ಯಾಸ ಬಿಡಿ. ಫೋನ್‌ನ ರೇಡಿಯೇಶನ್ ಹೃದಯವನ್ನು ವೀಕ್ ಆಗಿಸುತ್ತದೆ.