
ಮಾನವನ ದೇಹ (Body) ರಚನೆಯೇ ಅಚ್ಚರಿ. ಎಲ್ಲಾ ಸಮಸ್ಯೆಗಳಿಗೂ ನಮ್ಮ ದೇಹದ ಅಂಗಾಂಗಗಳು ಶೀಘ್ರವಾಗಿ ಸ್ಪಂದಿಸುತ್ತವೆ. ದೊಡ್ಡ ಸದ್ದು ಕೇಳಿದಾಗ ಕಿವಿ ಮುಚ್ಚಿಕೊಳ್ಳುತ್ತೇವೆ, ಕೆಟ್ಟ ವಾಸನೆ ಬಂದಾಗ ಮೂಗು ಮುಚ್ಚುತ್ತೇವೆ, ಹೆಚ್ಚಿನ ಬೆಳಕು ಬಂದಾಗ ಕಣ್ಣು ತನ್ನಿಂದ ತಾನೇ ಮುಚ್ಚಿಕೊಳ್ಳುತ್ತದೆ. ಹೀಗೆಯೇ ನಮ್ಮ ದೇಹದ ಅಂಗಾಂಗಳಿಗೆ ಗಾಯವಾದಾಗ ನಾವದನ್ನು ಸರಿಪಡಿಸಿಕೊಳ್ಳಬೇಕು. ಕೆಲವೊಮ್ಮೆ ಗಾಯ ಗುಣವಾದಂತೆ ಕಂಡು ಬಂದರೂ ಮತ್ಯಾವತ್ತೋ ನೋವು (Pain) ಕಾಣಿಸಿಕೊಂಡು ಹಿಂಸೆ ಕೊಡಬಹುದು.
ದೇಹದ ಹೆಚ್ಚು ಕಾರ್ಯನಿರ್ವಹಿಸುವ ಭಾಗಕ್ಕೆ ಗಾಯ (Injury)ವಾದಾಗ ಯಾವಾಗಲೂ ಗಂಭೀರವಾಗಿ ತೆಗೆದುಕೊಳ್ಳಬೇಕು. ತಲೆಗೆ ಗಾಯವಾದರೆ ವೈದ್ಯಕೀಯ ಆರೈಕೆ ಅತ್ಯಗತ್ಯ. ವೈದ್ಯರ ಸಹಾಯವನ್ನು ಪಡೆಯುವಲ್ಲಿ ವಿಳಂಬವಾದರೆ ತಲೆಗೆ ಗಾಯವಾದ ನಂತರ ತೆಗೆದುಕೊಳ್ಳಬೇಕಾದ ತಕ್ಷಣದ ಕ್ರಮಗಳ ಬಗ್ಗೆ ತಿಳಿದಿರಬೇಕು. ತಲೆಗೆ ಪೆಟ್ಟಾದಾಗ ಯಾವತ್ತೂ ಕಾಲು ಉಳುಕು ಅಥವಾ ಕೈ ಗಾಯದಲ್ಲಿ ಕಂಡುಬರುವಂತಹ ಗೋಚರ ಲಕ್ಷಣಗಳನ್ನು ಹೊಂದಿರುವುದಿಲ್ಲ. ತಲೆಗೆ ಗಾಯವಾದಾಗ ಈ ಚಿಹ್ನೆಗಳು ದೇಹದೊಳಗೆ ಉಳಿಯುತ್ತವೆ ಮತ್ತು ಗಾಯ ಕಡಿಮೆಯಾದ ನಂತರವೂ ಸಹ ಕಾಣಿಸಿಕೊಳ್ಳಬಹುದು. ಆದ್ದರಿಂದ ವೈದ್ಯಕೀಯ ನೆರವು ತೆಗೆದುಕೊಳ್ಳುವುದು ಬಹಳ ಮುಖ್ಯ.
Health care: ಫೋನನ್ನು ಜೇಬಲ್ಲಿಟ್ಟುಕೊಂಡು ತಿರುಗುತ್ತೀರಾ? ಆರೋಗ್ಯ ಕೆಡುವುದು ಎಚ್ಚರ!
ತಲೆ ಗಾಯ ಎಂದರೇನು ?
ತಲೆ (Head)ಯ ಗಾಯವು ನೆತ್ತಿ, ತಲೆಬುರುಡೆ, ಮೆದುಳು ಮತ್ತು ಒಳಗಿನ ಅಂಗಾಂಶ ಮತ್ತು ತಲೆಯ ರಕ್ತನಾಳಗಳಿಗೆ ಸಂಭವಿಸುವ ಗಾಯಗಳನ್ನು ವಿವರಿಸುತ್ತದೆ. ತಲೆ ಗಾಯಗಳನ್ನು ಸಾಮಾನ್ಯವಾಗಿ ಮಿದುಳಿನ ಗಾಯ ಅಥವಾ ಆಘಾತಕಾರಿ ಮಿದುಳಿನ ಗಾಯ ಎಂದು ಕರೆಯಲಾಗುತ್ತದೆ. ತಲೆಗೆ ನೇರವಾದ ಪೆಟ್ಟು, ಅಪಘಾತ, ಆಂತರಿಕ ಅಂಗಾಂಶಗಳಿಗೆ ಹಾನಿಯು ಮಿದುಳಿನ ಗಾಯಗಳು ಉಂಟಾಗಲು ಕೆಲವು ಕಾರಣಗಳಾಗಿವೆ. ಜಾಗತಿಕವಾಗಿ, ಪ್ರತಿ ವರ್ಷ ಸುಮಾರು 69 ಮಿಲಿಯನ್ ರೋಗಿಗಳು ಆಘಾತಕಾರಿ ಮಿದುಳಿನ ಗಾಯದಿಂದ ಬಳಲುತ್ತಿದ್ದಾರೆ ಎಂದು ಅಂದಾಜಿಸಲಾಗಿದೆ ಎಂದು ಸಂಶೋಧನಾ ಅಧ್ಯಯನಗಳು ಹೇಳುತ್ತವೆ.
ತಲೆ ಗಾಯದ ಲಕ್ಷಣಗಳೇನು ?
ಸೌಮ್ಯವಾದ ತಲೆ ಗಾಯದ ಲಕ್ಷಣಗಳೆಂದರೆ ಉಬ್ಬು ಅಥವಾ ಮೂಗೇಟುಗಳು, ನೆತ್ತಿಯಲ್ಲಿ ಕಡಿತ, ತಲೆನೋವು, ಶಬ್ದ ಮತ್ತು ಬೆಳಕಿಗೆ ಸೂಕ್ಷ್ಮತೆ, ಕಿರಿಕಿರಿ, ಗೊಂದಲ, ತಲೆತಿರುಗುವಿಕೆ, ವಾಕರಿಕೆ, ಜ್ಞಾಪಕ ಅಥವಾ ಏಕಾಗ್ರತೆಯ ಸಮಸ್ಯೆಗಳು, ನಿದ್ರೆಯ ಕ್ರಮದಲ್ಲಿ ಬದಲಾವಣೆ, ದೃಷ್ಟಿ ಮಂದ, ಆಯಾಸ ಮೊದಲಾದ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ.
Health Tips : ನಾಚಿಕೆ ಬಿಟ್ಬಿಡಿ, ಪೈಲ್ಸ್ ಕಾಡಿದ್ರೆ ಈ ಆಹಾರದಿಂದ ದೂರವಿರಿ
ತಲೆಗೆ ಗಾಯವಾಗುವುದರ ಅಪಾಯಕಾರಿ ಅಂಶಗಳು ಯಾವುವು ?
ಮಕ್ಕಳು, ವಯಸ್ಸಾದವರು, ತೆಳ್ಳಗಿನ ರಕ್ತನಾಳಗಳು ಮತ್ತು ಸಣ್ಣ ಮೆದುಳು ಹೊಂದಿರುವವರು ಮಿದುಳಿನ ಗಾಯದ ಅಪಾಯವನ್ನು ಹೊಂದಿರುತ್ತಾರೆ ಎಂದು ತಜ್ಞರು ಹೇಳುತ್ತಾರೆ. ಆಸ್ಪಿರಿನ್‌ನಂತಹ ರಕ್ತ ತೆಳುವಾಗಿಸುವ ಔಷಧಿಯನ್ನು ತೆಗೆದುಕೊಳ್ಳುವ ಜನರು ತಲೆಗೆ ಗಾಯದಿಂದಾಗಿ ತೀವ್ರ ತೊಡಕುಗಳ ಅಪಾಯವನ್ನು ಹೊಂದಿರುತ್ತಾರೆ. ಈ ಜನರಲ್ಲಿ ರಕ್ತವು ಸುಲಭವಾಗಿ ಹೆಪ್ಪುಗಟ್ಟುವುದಿಲ್ಲ ಮತ್ತು ಸಣ್ಣ ಕಡಿತದಿಂದಲೂ ಸಾಕಷ್ಟು ರಕ್ತಸ್ರಾವವಾಗುತ್ತದೆ.
ಮುನ್ನೆಚ್ಚರಿಕಾ ಕ್ರಮಗಳು
ತಲೆಗೆ ಗಾಯವಾದ ಕೂಡಲೇ, ಅದು ಸಣ್ಣ ಗಾಯವಾಗಿರಲಿ ಅಥವಾ ದೊಡ್ಡ ಗಾಯವಾಗಿರಲಿ. ಅದನ್ನು ಯಾರಿಗಾದರೂ ಹೇಳಿ. ನೀವು ಯಾವುದೇ ತೊಂದರೆಯನ್ನು ಅನುಭವಿಸದಿದ್ದರೆ ಗಾಯವು ನಿಮಗೆ ಯಾವುದೇ ಹಾನಿ ಮಾಡಿಲ್ಲ ಎಂದು ಅರ್ಥವಲ್ಲ. ಹಲವಾರು ಬಾರಿ ತಲೆ ಗಾಯಗಳು ಆಂತರಿಕವಾಗಿರುತ್ತವೆ ಮತ್ತು ತಡವಾಗಿ ಕಾಣಿಸಿಕೊಳ್ಳುತ್ತದೆ. ಒಬ್ಬ ವ್ಯಕ್ತಿಯ ತಲೆಗೆ ಗಾಯವಾಗಿದ್ದರೆ, ಅವನನ್ನು ಅಥವಾ ಅವಳನ್ನು ಶಾಂತವಾಗಿ ಇರಿಸಿ, ಶುದ್ಧವಾದ ಬಟ್ಟೆಯನ್ನು ಬಳಸಿ ಗಾಯದ ಮೇಲೆ ಸ್ವಲ್ಪ ಒತ್ತಡವನ್ನು ಹಾಕಿ. ನಂತರ ತಕ್ಷಣವೇ ವೈದ್ಯರನ್ನು ಭೇಟಿ ಮಾಡಿ.
ಯಾವತ್ತೂ ತಲೆಗೆ ಗಾಯವಾದಾಗ, ಅದು ಸಣ್ಣ ಗಾಯವಾಗಿರಲಿ. ದೊಡ್ಡ ಗಾಯವಾಗಿರಲಿ ನಿರ್ಲಕ್ಷ್ಯ ಮಾಡಬೇಡಿ. ಮುಂದೊಂದು ದಿನ ಇದು ಜೀವಕ್ಕೇ ಅಪಾಯವನ್ನುಂಟು ಮಾಡಬಹುದು. ತಲೆಯ ಗಾಯವಾದಾಗ ತಕ್ಷಣವೇ ತೆಗೆದುಕೊಳ್ಳಬೇಕಾದ ಮುಂಜಾಗ್ರತಾ ಕ್ರಮಗಳು ತಿಳಿದುಕೊಂಡಿರಿ ಅಥವಾ ತಕ್ಷಣ ವೈದ್ಯರನ್ನು ಸಂಪರ್ಕಿಸಿ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.