Anushka Sharma: ಒಂದೇ ಆಹಾರ, ಅದ್ಭುತ ಪ್ರಯೋಜನ: ಅನುಷ್ಕಾ ಶರ್ಮಾಳ ಮೋನೋ ಡಯಟ್‌ನ ಗುಟ್ಟೇನು?

By Bhavani Bhat  |  First Published Aug 17, 2024, 11:04 PM IST

ಒಂದೇ ರೀತಿಯ ಆಹಾರ ಸೇವಿಸುವ ಮೂಲಕ ಆರೋಗ್ಯ ವೃದ್ಧಿಸಿಕೊಳ್ಳುವ ಮೊನೊಟ್ರೋಪಿಕ್ ಡಯಟ್ ಬಗ್ಗೆ ನಟಿ ಅನುಷ್ಕಾ ಶರ್ಮಾ ಮಾತನಾಡಿದ್ದಾರೆ. ಜೀರ್ಣಕ್ರಿಯೆ ಸುಧಾರಣೆ, ತೂಕ ನಿಯಂತ್ರಣ ಸೇರಿದಂತೆ ಹಲವು ಪ್ರಯೋಜನಗಳನ್ನು ಈ ಡಯಟ್ ಹೊಂದಿದೆ.


ನಾನು ಕೆಲವು ದಿನಗಳಲ್ಲಿ ಮೋನೋಟ್ರೋಪಿಕ್‌ ಡಯಟ್‌ ಮಾಡುತ್ತೇನೆ ಎಂದು ಅನುಷ್ಕಾ ಶರ್ಮಾ ಹೇಳಿಕೊಂಡಿದ್ದಾರೆ. ಈ ಅಭ್ಯಾಸವನ್ನು ಮೊನೊಟ್ರೋಪಿಕ್ ಡಯಟ್ ಅಥವಾ ಮೊನೊ ಡಯಟ್ ಎಂದು ಕರೆಯಲಾಗುತ್ತದೆ.‌ ಅಂದರೆ ಏಕರೂಪ ಡಯಟ್‌ ಅನ್ನಬಹುದು. ಹಾಗೆಂದರೆ ದಿನವಿಡೀ ಒಂದೇ ರೀತಿಯ ಆಹಾರವನ್ನು ಸೇವಿಸುವುದು ಎಂದರ್ಥ.

ಶರ್ಮಾ ಒಂದು ಸಂದರ್ಶನದಲ್ಲಿ ಹೇಳಿದ ಪ್ರಕಾರ ಆಕೆ ಒಂದು ಸಲ ಆರು ತಿಂಗಳವರೆಗೆ ಬೆಳಗಿನ ಉಪಾಹಾರಕ್ಕಾಗಿ ಇಡ್ಲಿ ಸಾಂಬಾರ್ ಮಾತ್ರ ಸೇವಿಸಿದಳಂತೆ. ಇಡ್ಲಿಯಲ್ಲಿನ ಹುದುಗುವಿಕೆ ಮತ್ತು ಸಾಂಬಾರ್‌ನಲ್ಲಿರುವ ಬೇಳೆಕಾಳುಗಳು ಕರುಳಿನ ಚರ್ಮವನ್ನು ಕಾಪಾಡುವ ಬ್ಯಾಕ್ಟೀರಿಯಾಗಳನ್ನು ರಕ್ಷಿಸುತ್ತವೆ. ಇದರಿಂದಾಗಿ ಜೀವಸತ್ವಗಳು, ಖನಿಜಗಳು ಮತ್ತು ರೋಗನಿರೋಧಕ ಸತ್ವಗಳನ್ನು ಚೆನ್ನಾಗಿ ಹೀರಿಕೊಳ್ಳುತ್ತದೆ. ಇದರಿಂದಾಗಿ ಅನುಷ್ಕಾಳ ಮುಖ ಹಾಗೂ ಚರ್ಮ ಹೊಳೆಯುವ ಕಾಂತಿಯಿಂದ ಕೂಡಿದೆಯಂತೆ.

Tap to resize

Latest Videos

undefined

ಆರೋಗ್ಯ ಮತ್ತು ಯೋಗಕ್ಷೇಮವನ್ನು ಹೆಚ್ಚಿಸುವ ಪರಿಣಾಮಕಾರಿ ಆಹಾರ ತಂತ್ರಗಳಲ್ಲಿ ಮೊನೊಟ್ರೋಪಿಕ್ ಡಯಟ್ ಒಂದು. ಈ ವಿಧಾನ ಅಸಾಂಪ್ರದಾಯಿಕ. ಆದರೆ ಇದರ ಪ್ರಯೋಜನಗಳು ಮತ್ತು ತಿನ್ನುವ ವಿಶಿಷ್ಟ ವಿಧಾನಕ್ಕಾಗಿ ಗಮನ ಸೆಳೆದಿದೆ. ಮೊನೊಟ್ರೋಪಿಕ್ ಡಯಟ್ ಎಂದರೇನು? ಮೊನೊ ಡಯಟ್ ಒಂದು ಥರದ ಪಥ್ಯದಂತೆ. ಇದರಲ್ಲಿ ಒಂದೇ ರೀತಿಯ ಆಹಾರ ಅಥವಾ ಬಹಳ ಸೀಮಿತ ಆಹಾರಗಳನ್ನು ಸೇವಿಸುವುದು ಮುಖ್ಯ. ವಿವಿಧ ಆಹಾರ ಗುಂಪುಗಳಿಂದ ಪೋಷಕಾಂಶಗಳ ವೈವಿಧ್ಯಮಯ ಸೇವನೆಯ ಬದಲು, ಮೊನೊ ಡಯಟ್ ಆಹಾರದ ಆಯ್ಕೆಯಲ್ಲಿ ಒಂದೇ ವಿಧವನ್ನು ಕೇಂದ್ರೀಕರಿಸುತ್ತದೆ.

ಈ ಬಗೆಯ ಆಹಾರಕ್ರಮದಲ್ಲಿ ಇರುವ ಕೆಲವು ಸಾಮಾನ್ಯ ಉದಾಹರಣೆಗಳೆಂದರೆ ಹಣ್ಣುಗಳು (ಬಾಳೆಹಣ್ಣುಗಳು ಅಥವಾ ಸೇಬು), ತರಕಾರಿಗಳು (ಆಲೂಗಡ್ಡೆ ಅಥವಾ ಗೆಣಸು) ಅಥವಾ ಧಾನ್ಯಗಳು.

ಮೊನೊಟ್ರೋಪಿಕ್ ಆಹಾರದ ಪ್ರಯೋಜನಗಳು 

1) ಸರಳೀಕೃತ ಜೀರ್ಣಕ್ರಿಯೆ ಮೊನೊ ಆಹಾರದ ಪ್ರಾಥಮಿಕ ಪ್ರಯೋಜನಗಳಲ್ಲಿ ಒಂದು. ಒಂದೇ ರೀತಿಯ ಆಹಾರ ಸೇವಿಸುವ ಮೂಲಕ ಜೀರ್ಣಾಂಗ ವ್ಯವಸ್ಥೆಯು ಸ್ಥಿರವಾದ ಪೋಷಕಾಂಶಗಳ ಪ್ರೊಫೈಲ್ ಅನ್ನು ರೂಪಿಸುತ್ತದೆ. ಇದು ಜೀರ್ಣಾಂಗ ವ್ಯವಸ್ಥೆಯ ಮೇಲಿನ ಹೊರೆಯನ್ನು ಕಡಿಮೆ ಮಾಡುತ್ತದೆ. ಗ್ಯಾಸ್‌ನಂತಹ ಸಮಸ್ಯೆಗಳನ್ನು ನಿವಾರಿಸಲು ಸಹಾಯ ಮಾಡುತ್ತದೆ. ದೇಹವು ಒಂದೇ ರೀತಿಯ ಆಹಾರಕ್ಕೆ ಒಡ್ಡಿಕೊಂಡಾಗ, ಆ ಆಹಾರದಿಂದ ಪೋಷಕಾಂಶಗಳನ್ನು ಜೀರ್ಣಿಸಿಕೊಳ್ಳಲು ಮತ್ತು ಹೀರಿಕೊಳ್ಳುವಲ್ಲಿ ಹೆಚ್ಚು ಪರಿಣಾಮಕಾರಿಯಾಗಿರಬಹುದು. 

2) ನಿರ್ದಿಷ್ಟ ಪೋಷಕಾಂಶಗಳ ಹೀರಿಕೊಳ್ಳುವಿಕೆಯನ್ನು ಹೆಚ್ಚಿಸಬಹುದು. ಉದಾಹರಣೆಗೆ, ಗೆಣಸು ಮಾತ್ರ ಸೇವಿಸುತ್ತಿದ್ದರೆ, ಆ ಆಹಾರದಲ್ಲಿರುವ ಜೀವಸತ್ವಗಳು ಮತ್ತು ಖನಿಜಗಳ ಸುಧಾರಿತ ಹೀರಿಕೊಳ್ಳುವಿಕೆಯನ್ನು ಅನುಭವಿಸಬಹುದು. ಇದು ಒಟ್ಟಾರೆ ಪೌಷ್ಟಿಕಾಂಶದ ಹೆಚ್ಚಳಕ್ಕೆ ಕಾರಣವಾಗುತ್ತದೆ. ಮತ್ತು ಶಾರೀರಿಕ ಕಾರ್ಯಗಳನ್ನು ಬೆಂಬಲಿಸುತ್ತದೆ. 


21 ದಿನದಲ್ಲಿ 7 ಕೆಜಿ ತೂಕ ಇಳಿಸುವ ಸೀಕ್ರೆಟ್ ಡಯಟ್!
 

3) ತೂಕ ನಿರ್ವಹಣೆ ಸಾಧ್ಯ. ಸರಳ ಮತ್ತು ಸೀಮಿತ ಆಹಾರದಿಂದಾಗಿ ತೂಕ ನಿರ್ವಹಣೆ ಸಮರ್ಥವಾಗಿ ಆಗುತ್ತದೆ. ಒಂದೇ ರೀತಿಯ ಆಹಾರದ ಮೂಲಕ ಕಡಿಮೆ ಕ್ಯಾಲೋರಿ ಸೇವನೆ ಆಗುತ್ತದೆ. ತಮ್ಮ ತೂಕವನ್ನು ನಿರ್ವಹಿಸಲು ಅಥವಾ ನಿರ್ದಿಷ್ಟ ತೂಕ ನಷ್ಟ ಮಾಡಿಕೊಳ್ಳಲು ಬಯಸುವವರಿಗೆ ಇದು ವಿಶೇಷವಾಗಿ ಪ್ರಯೋಜನಕಾರಿಯಾಗಿದೆ. ಜೊತೆಗೆ ಅನಾರೋಗ್ಯಕರ ಆಹಾರ ಮತ್ತು ತಿಂಡಿಗಳ ಕಡುಬಯಕೆಗಳನ್ನು ಕಡಿಮೆ ಮಾಡುತ್ತದೆ. 

4) ಆಹಾರದ ಅಲರ್ಜಿಯನ್ನು ಹೊಂದಿರುವ ವ್ಯಕ್ತಿಗಳಿಗೆ ಅಂಥ ಆಹಾರಗಳನ್ನು ಗುರುತಿಸಲು ಮೊನೊ ಡಯಟ್ ಒಂದು ಸಾಧ್ಯತೆ. ಒಂದೇ ರೀತಿಯ ಆಹಾರವನ್ನು ಸೇವಿಸುವ ಮೂಲಕ, ತಮ್ಮ ದೇಹ ಆ ಆಹಾರಕ್ಕೆ ಹೇಗೆ ಪ್ರತಿಕ್ರಿಯಿಸುತ್ತದೆ ಎಂಬುದನ್ನು ಗಮನಿಸಬಹುದು. ಯಾವುದೇ ಪ್ರತಿಕೂಲ ಪ್ರತಿಕ್ರಿಯೆ ಉಂಟಾದರೆ ಗಮನಿಸಬಹುದು. ಭವಿಷ್ಯದಲ್ಲಿ ಅಲರ್ಜಿಕರ ಆಹಾರಗಳನ್ನು ತಪ್ಪಿಸಬಹುದು.

5) ಡಿಟಾಕ್ಸಿಫಿಕೇಶನ್‌ ಸಾಧ್ಯ. ಒಂದೇ ರೀತಿಯ ಆಹಾರ ಸೇವಿಸುತ್ತಿರುವಾಗ ಜೀರ್ಣಾಂಗ ವ್ಯವಸ್ಥೆ ಸಂಭಾವ್ಯ ಹಾನಿಕಾರಕ ಪದಾರ್ಥಗಳಿಂದ ಪಾರಾಗುತ್ತದೆ. 

6) ಕಾಸ್ಟ್‌ ಎಫೆಕ್ಟಿವ್. ಅಂದರೆ ಖರ್ಚುವೆಚ್ಚದ ಮೇಲೆ ನಿಗಾ ಸಾಧ್ಯ. ದಿನಸಿ ವೆಚ್ಚವನ್ನು ಕಡಿಮೆ ಮಾಡಬಹುದು ಮತ್ತು ಊಟ ತಯಾರಿಕೆಯನ್ನು ಸರಳಗೊಳಿಸಬಹುದು. ಪೌಷ್ಟಿಕಾಂಶದ ಆಹಾರವನ್ನು ಉಳಿಸಿಕೊಂಡು ಆಹಾರದ ವೆಚ್ಚದಲ್ಲಿ ಹಣವನ್ನು ಉಳಿಸಲು ಬಯಸುವವರಿಗೆ ಇದು ವಿಶೇಷವಾಗಿ ಅನುಕೂಲಕರ.
 

ಒಂದು ವಾರ ಉಪ್ಪು ಸೇವನೆ ಮಾಡದಿದ್ದರೆ ಏನಾಗುತ್ತೆ?

 

click me!